ಪ್ರತಿ ಹೆಣ್ಣಿಗೂ ತಾಯ್ತನ ಜೀವನದ  ಸಂಭ್ರಮ ಹಾಗೂ ಸಾರ್ಥಕ ಕ್ಷಣ. ಎಲ್ಲರೂ ಅಂತದ್ದೊಂದು ಸಮುಧುರ ಕ್ಷಣಕ್ಕಾಗಿ ಕಾಯುತ್ತಿರುತ್ತಾರೆ. 

ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಪತ್ನಿ ನೀತೂ ಅಂಬಾನಿ ತಮ್ಮ ತಾಯ್ತನದ ಅನುಭವವನ್ನು ಹಂಚಿಕೊಂಡಿದ್ದಾರೆ. ಇವರಿಗೆ ಮಕ್ಕಳಾಗುವುದಿಲ್ಲ ಎಂದು ಡಾಕ್ಟರ್ ಹೇಳಿದ್ದರಂತೆ! 

ನನಗೆ ಮದುವೆಯಾಗಿ ಕೆಲ ವರ್ಷಗಳವರೆಗೂ ಮಕ್ಕಳಾಗಿರಲಿಲ್ಲ. ಡಾಕ್ಟರನ್ನು ಸಂಪರ್ಕಿಸಿದಾಗ ನನಗೆ ಮಕ್ಕಳಾಗುವುದಿಲ್ಲ ಎಂದು ವೈದ್ಯರು ಹೇಳಿದಾಗ ಶಾಕ್ ಆಗಿತ್ತು. ನಾನು ಶಾಲೆಯಲ್ಲಿ ಓದುತ್ತಿದ್ದಾಗ, ನಾನು ಅಮ್ಮನಾದಾಗ ಎಂದು ಪ್ರಬಂಧವನ್ನು ಬರೆಯುತ್ತಿದ್ದೆ. ಆದರೆ ನನ್ನ ಬದುಕಿನಲ್ಲಿ.... ಎಂದು ಒಂದು ಕ್ಷಣ ಭಾವುಕರಾದರು. 

ಕೊನೆಗೆ ಡಾ. ಫಿರುಜಾ ಪರಿಕ್ ರನ್ನು ಭೇಟಿ ಮಾಡಿದೆವು. ಅವರ ಟ್ರೀಟ್ ಮೆಂಟ್ ನಿಂದ ನಾನು ಮೊದಲ ಬಾರಿ ಗರ್ಭಿಣಿಯಾದೆ. ಇಶಾ, ಆಕಾಶ್ ಎಂಬ ಅವಳಿ ಮಕ್ಕಳಿಗೆ ಜನ್ಮ ನೀಡಿದೆ. ಅದಾದ ಮೂರು ವರ್ಷಕ್ಕೆ ಅನಂತ್ ಅಂಬಾನಿಗೆ ಜನ್ಮ ನೀಡಿದೆ ಎಂದು ನೀತಾ ಅಂಬಾನಿ ತಾಯ್ತನದ ಬಗ್ಗೆ ಹೇಳಿದ್ದಾರೆ. 

ಇತ್ತೀಚಿಗೆ ಮದುವೆಯಾದ ಇಶಾ ಅಂಬಾನಿ, ಸಂದರ್ಶನವೊಂದರಲ್ಲಿ ಅಮ್ಮನ ಬಗ್ಗೆ ಮಾತನಾಡುತ್ತಾ, ನನ್ನ ಅಮ್ಮ ಟೈಗರ್ ಎಂದಿದ್ದಾರೆ.