Asianet Suvarna News Asianet Suvarna News

ಆಸ್ಪತ್ರೆ ಬೆಡ್ಡಲ್ಲೇ ಕೊಳೆಯುತ್ತಿದ್ದಾರೆ ಅದೆಷ್ಟೋ ಅತ್ಯಾಚಾರ ಸಂತ್ರಸ್ತೆಯರು!

ಭಾರತದಲ್ಲಿ ಅತ್ಯಾಚಾರ ಪ್ರಕರಣ ದಿನ ದಿನಕ್ಕೂ ಹೆಚ್ಚಾಗ್ತಿದೆ. ಬಹುತೇಕ ಅತ್ಯಾಚಾರಿಗಳ ಬಗ್ಗೆ ಜನರಿಗೆ ಮಾಹಿತಿಯೇ ಸಿಗ್ತಿಲ್ಲ. ಹಸುಗೂಸಿನಿಂದ ಹಿಡಿದು ವೃದ್ಧರವರೆಗೆ ನಡೆಯುವ ಅತ್ಯಾಚಾರ ಪ್ರಕರಣ ಮನಕಲಕುತ್ತೆ. ಆಸ್ಪತ್ರೆಯಲ್ಲಿ, ಪೊಲೀಸ್ ಠಾಣೆಯಲ್ಲಿ ಎಷ್ಟೋ ಪ್ರಕರಣ ಕೊಳೆಯುತ್ತಿರುತ್ತೆ.

What Yogita Bhayana Said About The Ongoing Rape Case In India roo
Author
First Published Oct 5, 2023, 12:28 PM IST

ನಿರ್ಭಯಾ ಪ್ರಕರಣ ಎಲ್ಲರಿಗೂ ಗೊತ್ತು. ಇಡೀ ದೇಶವನ್ನೆ ಬೆಚ್ಚಿ ಬೀಳಿಸಿದ ಪ್ರಕರಣ. ನಿರ್ಭಯಾ ಪ್ರಕರಣದ ನಂತ್ರ ದೇಶದಲ್ಲಿ ಸಾಕಷ್ಟು ಬದಲಾವಣೆ ಆಗುತ್ತೆ, ಅತ್ಯಾಚಾರಿಗಳಿಗೆ ತಕ್ಕ ಶಿಕ್ಷೆಯಾಗುತ್ತೆ, ಅತ್ಯಾಚಾರ ನಿಲ್ಲುತ್ತೆ ಎಂಬೆಲ್ಲ ನಂಬಿಕೆಯಲ್ಲಿ ಜನರಿದ್ರು. ಆದ್ರೆ ಎಲ್ಲ ಭ್ರಮೆ ಎಂಬುದು ಈಗ ಅರಿವಿಗೆ ಬಂದಿದೆ. ದಿನೇ ದಿನೇ ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇವೆ. ಕೆಲವೊಂದು ಬೆಳಕಿಗೆ ಬಂದ್ರೆ ಮತ್ತೆ ಕೆಲವು ಸದ್ದಿಲ್ಲದೆ ಮುಚ್ಚಿ ಹೋಗುತ್ತೆ. 

ನಿರ್ಭಯಾ (Nirbhaya) ಪ್ರಕರಣದ ಸಂದರ್ಭದಲ್ಲಿ ಮತ್ತೇನೆ ಆಯ್ತು ಎಂಬುದನ್ನು ಕಾರ್ಯಕರ್ತೆ (Activist) ಯೋಗಿತಾ ಭಯಾನಾ ಬಿಚ್ಚಿಟ್ಟಿದ್ದಾರೆ. ಆ ಅನುಭವವನ್ನು ಅವರ ಮಾತಿನಲ್ಲೇ ನಾವು ಹೇಳೋದಾದ್ರೆ.. 

OMG..! 13,500 ಅಡಿ ಎತ್ತರದಿಂದ ಜಿಗಿದ 104ರ ಸಾಹಸಿ

ನಾನು ನಿರ್ಭಯಾ ಪ್ರಕರಣವನ್ನು ಕೈಗೆತ್ತಿಕೊಂಡಾಗ, ಎಂಟು ಅಥವಾ ಒಂಬತ್ತು ಅತ್ಯಾಚಾರ ಮತ್ತು ಕ್ರೂರ ಪ್ರಕರಣಗಳು ನಡೆದಿದ್ದವು. ನಾನು ನನ್ನ ಎಲ್ಲಾ ದಿನಗಳನ್ನು ನ್ಯಾಯಾಲಯದಲ್ಲಿ ಕಳೆಯುತ್ತಿದ್ದೆ. ಒಂದು ವಿಚಾರಣೆಯಿಂದ ಇನ್ನೊಂದು ವಿಚಾರಣೆಗೆ ಹೋಗುತ್ತಿದ್ದೆ ಎನ್ನುತ್ತಾರೆ  ಯೋಗಿತಾ ಭಯಾನಾ (Yogita Bhayana).

ನಿರ್ಭಯಾಳ ತಾಯಿ ಪರಿಚಯ ಇಡೀ ಪ್ರಪಂಚಕ್ಕೆ ಆಗಿತ್ತು. ಪ್ರಪಂಚದ ಜನರು ಆಕೆ ಸಹಾಯಕ್ಕೆ ನಿಂತಿದ್ದರು. ಆದ್ರೆ ಇಲ್ಲಿ, ಯಾರ ಪರಿಚಯವೂ ಇಲ್ಲದ, ನೊಂದ ಜನರು ಅನೇಕರಿದ್ದರು. ಅವರಿಗೆ ಜನರ ಬೆಂಬಲ ಸಿಕ್ಕಿರಲಿಲ್ಲ. ಜನರಿಗೆ ಅವರ್ಯಾರು, ಅವರ ನೋವೇನು ಎಂಬುದು ಗೊತ್ತೇ ಇರಲಿಲ್ಲ. ಅವರು ಕೂಡ ತಮ್ಮ ಬೆಂಬಲಕ್ಕೆ ಜನ ನಿಲ್ಲಲಿ, ತಮಗೆ ನ್ಯಾಯ ಸಿಗಲಿ ಎಂದು ಹಂಬಲಿಸ್ತಾ ಇದ್ರು ಎನ್ನುತ್ತಾರೆ ಯೋಗಿತಾ ಭಯಾನಾ.  

ವಿವಾಹಿತ ಮಹಿಳೆ ಕಡೆ ಕೆಲವು ಪುರುಷರಿಗೇಕೆ ವಿಪರೀತ ಆಕರ್ಷಣೆ?

ನ್ಯಾಯ ನನ್ನ ಕೈನಲ್ಲಿಲ್ಲ… ಭರವಸೆ ಮಾತ್ರ ನೀಡಬಲ್ಲೆ : ಇನ್ನು ಅವರ ಬಗ್ಗೆ ಮತ್ತಷ್ಟು ಹೇಳಿಕೊಂಡ ಯೋಗಿತಾ ಭಯಾನಾ, ನೀವು ಅವರಿಗೆ ನ್ಯಾಯದ ಭರವಸೆ ನೀಡಲು ಸಾಧ್ಯವಿಲ್ಲ, ಆದರೆ ನೀವು ಅವರೊಂದಿಗೆ ಇರುತ್ತೀರಿ ಎಂದು ನೀವು ಭರವಸೆ ನೀಡಬಹುದು ಎನ್ನುತ್ತಾರೆ.

ಯೋಗಿತಾ ಭಯಾನಾ ಯಾರು? : ನಿರ್ಭಯಾ ಪ್ರಕರಣವು ಬೆಳಕಿಗೆ ಬಂದ ನಂತರ, ಯೋಗಿತಾ ಪೀಪಲ್ ಅಗೇನ್ಸ್ಟ್ ರೇಪ್ ಇನ್ ಇಂಡಿಯಾ (PARI) ಅನ್ನು ಪ್ರಾರಂಭಿಸಿದರು. ಇದು ಅತ್ಯಾಚಾರದ ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಪುನರ್ವಸತಿ (Rehabilitation), ನ್ಯಾಯ (Justice) ಮತ್ತು ಸುರಕ್ಷತೆಯನ್ನು(Security) ಒದಗಿಸುವ ಗುರಿಯನ್ನು ಹೊಂದಿದೆ.

ಅತ್ಯಾಚಾರಕ್ಕೊಳಗಾದ ಮಕ್ಕಳನ್ನು ನೋಡಿ ಬೆಚ್ಚಿಬಿದ್ದೆ:  ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಅನೇಕ ಸಂತ್ರಸ್ತರು ಮತ್ತು ಅವರ ಕುಟುಂಬಸ್ಥರಿಂದ ಯೋಗಿತಾ ಭಯಾನಾಗೆ ಕರೆಗಳು ಬರ್ತಿದ್ದವಂತೆ.  ಒಂದು ಬಾರಿ, ಸುಮಾರು 4-5 ವರ್ಷ ವಯಸ್ಸಿನ ಒಬ್ಬ ಪೀಡಿತೆಯನ್ನು ಯೋಗಿತಾ ಭಯಾನಾ ಭೇಟಿಯಾಗಿದ್ದರು. ಆಸ್ಪತ್ರೆಯಲ್ಲಿ ಆಕೆ ಸ್ಥಿತಿ ನೋಡಿ ದಂಗಾಗಿದ್ದರು. 

ಬರೀ ಒಬ್ಬಳನ್ನು ಮಾತ್ರವಲ್ಲ, ಆಸ್ಪತ್ರೆಯಲ್ಲಿ ಇಂಥ ಅನೇಕ ಮಕ್ಕಳು ನನ್ನ ಕಣ್ಣಿಗೆ ಬಿದ್ರು ಎನ್ನುತ್ತಾರೆ ಯೋಗಿತಾ ಭಯಾನಾ. ಇದು ನನ್ನ ಕಣ್ಣು ತೆರೆಸಿತು. ಇಂಥಹ ಎಷ್ಟೋ ಹುಡುಗಿಯರು ಆಸ್ಪತ್ರೆಯಲ್ಲಿದ್ದಾರೆ, ಆಸ್ಪತ್ರೆ ಬೆಡ್ ನಲ್ಲಿ ಕೊಳೆಯುತ್ತಿದ್ದಾರೆ. ಕೆಲವರು ಸಾವನ್ನಪ್ಪಿದ್ದಾರೆ ಎನ್ನುವ ಯೋಗಿತಾ, ಸಂತ್ರಸ್ತರಿಗೆ ನೆರವಾಗುವ ಕೆಲಸ ಮುಂದುವರೆಸಿದ್ದಾರೆ.

ನೂರಾರು ಅತ್ಯಾಚಾರ ಸಂತ್ರಸ್ತರು, ಬದುಕುಳಿದವರು ಮತ್ತು ಅವರ ಕುಟುಂಬಗಳಿಗೆ ಕಾನೂನು ನೆರವು, ಪರಿಹಾರ, ಪುನರ್ವಸತಿ ಮತ್ತು ನ್ಯಾಯ ನೀಡುವ ಕೆಲಸ ಮಾಡ್ತಿರುವ ಯೋಗಿತಾ ಭಯಾನಾ ಕೆಲಸ ಶ್ಲಾಘನೀಯ. ಬದುಕುಳಿದವರಿಗೆ ಸಹಾಯ ಮಾಡುವುದು ಮುಖ್ಯ. ಅತ್ಯಾಚಾರ ಪ್ರಕರಣ ತಡೆಗಟ್ಟುವ ಕೆಲಸ ಮಾಡುವುದು ಅಷ್ಟೇ ಕಡ್ಡಾಯ. ನೀವು ಇದನ್ನು ತಡೆಯಲು ಸೂಕ್ತ ಕ್ರಮಕೈಗೊಳ್ಳದೇ ಹೋದ್ರೆ ಸಮಾಜದಲ್ಲಿ ಇದು ಕೊನೆಯಾಗಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಯೋಗಿತಾ ಭಯಾನಾ. 

Follow Us:
Download App:
  • android
  • ios