Asianet Suvarna News Asianet Suvarna News

Omg..! 13,500 ಅಡಿ ಎತ್ತರದಿಂದ ಜಿಗಿದ 104ರ ಸಾಹಸಿ

ವಯಸ್ಸು ಬರಿ ಲೆಕ್ಕ. ಆಸೆ, ಕನಸು, ಪ್ರಯತ್ನ, ಗುರಿ ಇವೆಲ್ಲವೂ ಇದ್ರೆ ಯಾವ ವಯಸ್ಸಿನಲ್ಲಿ ಬೇಕಾದ್ರೂ ಸಾಹಸ ಮಾಡ್ಬಹುದು. ಇದಕ್ಕೆ ಈ ಅಜ್ಜಿ ಉತ್ತಮ ಉದಾಹರಣೆ. ತನ್ನ 104ನೇ ವಯಸ್ಸಿನಲ್ಲೂ ವಿಶ್ವದಾಖಲೆ ಬರೆಯಹೊರಟ ಈಕೆಯನ್ನು ಮೆಚ್ಚಲೇಬೇಕು.
 

Omg Hundred Four Year Old Woman Jumped From A Height Of Thirteen Thousand Five Hundred Feet roo
Author
First Published Oct 4, 2023, 4:43 PM IST

ವಯಸ್ಸಾಗ್ತಿದ್ದಂತೆ ಅವರ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವಂತೆ ನಾವು ಸಲಹೆ ನೀಡ್ತೇವೆ. ನಿಧಾನವಾಗಿ ನಡೆಯುವಂತೆ, ಸರಿಯಾದ ಸಮಯಕ್ಕೆ ಮಾತ್ರೆ ಸೇವನೆ ಮಾಡುವಂತೆ ಅವರಿಗೆ ಸೂಚನೆ ನೀಡ್ತೇವೆ. ಪ್ರವಾಸಕ್ಕೆ ಅವರನ್ನು ಕರೆದೊಯ್ಯಲು ಹಿಂದೇಟು ಹಾಕುವುದಲ್ಲದೆ ಪ್ರವಾಸಕ್ಕೆ ಬಂದಾಗ ಕೂಡ ಅವರ ಬಗ್ಗೆ ವಿಶೇಷ ಕಾಳಜಿವಹಿಸಿರುತ್ತೇವೆ. ಅದೂ ವಯಸ್ಸು 90ರ ಗಡಿದಾಟಿದ್ರೆ ಅವರನ್ನು ಮನೆಯಿಂದ ಹೊರಗೆ ಬಿಡೋರ ಸಂಖ್ಯೆ ಬಹಳ ಅಪರೂಪ. ಬಹುತೇಕ ವೃದ್ಧರು ಕೂಡ ಹೀಗೆ ಇರ್ತಾರೆ. ಅವರ ಆರೋಗ್ಯ ಸೂಕ್ಷ್ಮವಾಗಿರುವ ಕಾರಣ ಅವರು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಹೋಗೋದಿಲ್ಲ. ಆದ್ರೆ ಮತ್ತೆ ಕೆಲವರು ಇದಕ್ಕೆ ತದ್ವಿರುದ್ದವಾಗಿರ್ತಾರೆ. ಅವರಿಗೆ ವಯಸ್ಸು ಬರೀ ಲೆಕ್ಕಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಜೀವನದಲ್ಲಿ ಎಂದೂ ಮಾಡದ ಸಾಹಸವನ್ನು ಅವರು ತಮ್ಮ ಕೊನೆ ವಯಸ್ಸಿನಲ್ಲಿ ಮಾಡಲು ಬಯಸ್ತಾರೆ. ಇದಕ್ಕೆ ಚಿಕಾಗೋದ 104 ವರ್ಷದ ಮಹಿಳೆ ಉತ್ತಮ ನಿದರ್ಶನ. ಅವರು ಮಾಡಿದ ಕೆಲಸ ಯುವಕರಲ್ಲಿ ಅಚ್ಚರಿ ಹುಟ್ಟಿಸಿದೆ.

ಸ್ಕೈಡೈವಿಂಗ್ (Skydiving) ನಲ್ಲಿ ಸಾಧನೆ ಮಾಡಿದ ಅಜ್ಜಿ :  ಚಿಕಾಗೋ (Chicago ) ದ 104 ವರ್ಷದ ಮಹಿಳೆಯೊಬ್ಬರು 13 ಸಾವಿರದ 500 ಅಡಿ ಎತ್ತರದಿಂದ ಜಿಗಿದಿದ್ದಾರೆ. ಸ್ಕೈಡೈವಿಂಗ್‌ನಲ್ಲಿ ವಿಶ್ವ ದಾಖಲೆ (World record) ಮಾಡುವುದು ಅವರ ಅಂತಿಮ ಗುರಿಯಾಗಿತ್ತು. 104 ವರ್ಷದ ಅಜ್ಜಿ ಹೆಸರು ಡೊರೊಥಿ ಹಾಫ್ನರ್. ಅವರ ಕೆಲ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋದಲ್ಲಿ ಡೊರೊಥಿ ವಾಕರ್ ಸಹಾಯದಿಂದ ನಡೆಯುತ್ತಿರುವುದನ್ನು ನಾವು ನೋಡ್ಬಹುದು. ಕೆಲವು ಫೋಟೋಗಳಲ್ಲಿ  ಅವರು ಸ್ಕೈಡೈವಿಂಗ್ ಮಾಡ್ತಿದ್ದಾರೆ. ಡೊರೊಥಿ ಅಂತಿಂತ ಅಜ್ಜಿ ಅಲ್ಲ.  
ಚಿಕಾಗೋದ ನೈಋತ್ಯಕ್ಕೆ ಸುಮಾರು 85 ಮೈಲಿ ದೂರದಲ್ಲಿರುವ ಒಟ್ಟಾವಾದ  ಸ್ಕೈಡೈವ್ ಚಿಕಾಗೋ ದಲ್ಲಿ ಡೊರೊಥಿ ಹಾಫ್ನರ್  13 ಸಾವಿರ ಅಡಿಗಳಿಗಿಂತ ಹೆಚ್ಚು ಎತ್ತರದಿಂದ ಜಿಗಿದಿದ್ದಾರೆ ಎಂದು ಚಿಕಾಗೋ ಟ್ರಿಬ್ಯೂನ್ ವರದಿ ಮಾಡಿದೆ.  ಡೊರೊಥಿ ಹಾಫ್ನರ್ ಅವರು ಪ್ರಸ್ತುತ ಸ್ಕೈಡೈವ್ ಮಾಡಿದ ಅತ್ಯಂತ ಹಿರಿಯ ಮಹಿಳೆ ಎಂಬ ಪಟ್ಟಪಡೆಯಲು ಕಾಯ್ತಿದ್ದಾರೆ. 

ವಿವಾಹಿತ ಮಹಿಳೆ ಕಡೆ ಕೆಲವು ಪುರುಷರಿಗೇಕೆ ವಿಪರೀತ ಆಕರ್ಷಣೆ?

ಡೊರೊಥಿ ಹಾಫ್ನರ್, 4 ವರ್ಷಗಳ ಹಿಂದೆ ತನಗೆ 100 ವರ್ಷ ವಯಸ್ಸಾಗಿದ್ದಾಗ 100 ಅಡಿ ಎತ್ತರದಿಂದ ಜಿಗಿದಿದ್ದರು. ವರದಿಗಳ ಪ್ರಕಾರ, ಹಾಫ್ನರ್ ಮೊದಲ ಬಾರಿಗೆ ಸ್ಕೈಡೈವಿಂಗ್‌ಗೆ ಹೋದಾಗ, ಅವರನ್ನು ವಿಮಾನದಿಂದ ಹೊರಗೆ ತಳ್ಳಬೇಕಾಯಿತು. ಆದರೆ ಮೊನ್ನೆ ಯುಎಸ್ ಪ್ಯಾರಾಚೂಟ್ ಅಸೋಸಿಯೇಷನ್ ಪ್ರಮಾಣಿತ ತರಬೇತುದಾರರು ಹಾಪ್ನರ್ ಜಿಗಿಯುವಾಗ ಸಹಾಯ ಮಾಡಲಿಲ್ಲ. ಹಾಫ್ನರ್ ಅವರನ್ನು ಬರೀ ಪ್ರೋತ್ಸಾಹಿಸಿದ್ದರು. ಹಾಪ್ನರ್ ತಾವೇ 13,500 ಅಡಿಯಿಂದ ಜಿಗಿದಿದ್ದಾರೆ ಎಂದು ವರದಿ ಮಾಡಲಾಗಿದೆ.

ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿರೋ ಅನುಷ್ಕಾ ಶರ್ಮಾ ಬ್ಯೂಟಿ ಸೀಕ್ರೇಟ್ ಬೇವು!

ಡಿಸೆಂಬರ್ ನಲ್ಲಿ 105ನೇ ವರ್ಷಕ್ಕೆ ಕಾಲಿಡುವ ಅಜ್ಜಿ : ಸುಮಾರು 4 ನಿಮಿಷಗಳ ಕಾಲ ಸ್ಕೈಡೈವಿಂಗ್ ಮಾಡಿದ ನಂತರ ಹಾಫ್ನರ್ ಕೆಳಗೆ ಬಂದಿದ್ದಾರೆ. ಮಾಧ್ಯಮದ ಮುಂದೆ ಹಾಫ್ನರ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಸ್ಕೈಡೈವಿಂಗ್‌ ಅದ್ಭುತವಾಗಿದೆ.  ಇದಕ್ಕಿಂತ ಉತ್ತಮವಾಗಿದ್ದು ಯಾವುದು ಇರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಡಿಸೆಂಬರ್‌ನಲ್ಲಿ ತನ್ನ 105 ನೇ ಹುಟ್ಟುಹಬ್ಬವನ್ನು ಆಚರಿಸಲಿರುವ ಹಾಫ್ನರ್, ಹಾಟ್ ಏರ್ ಬಲೂನ್ ರೈಡ್ ಮಾಡುವ ಆಸೆ ಹೊಂದಿದ್ದಾರೆ. 

ಹಾಪ್ನರ್ ಗಿಂತ ಮೊದಲು ಮೇ 2022 ರಲ್ಲಿ ಸ್ವೀಡನ್‌ನ 103 ವರ್ಷದ ಲಿನ್ನಿಯಾ ಇಂಗೆಗಾರ್ಡ್ ಲಾರ್ಸನ್, ಸ್ಕೈ ಡೈವಿಂಗ್ ಮಾಡಿದ ಅತ್ಯಂತ ಹಿರಿಯ ವ್ಯಕ್ತಿ ಎನ್ನಿಸಿಕೊಂಡಿದ್ದರು. ಈಗ ಹಾಪ್ನರ್ ಗಿನ್ನಿಸ್ ದಾಖಲೆ ಸೇರುವ ದಿನ ಸಮೀಪವಾಗಿದೆ. ಈ ಬಗ್ಗೆ ಪ್ರಯತ್ನ ನಡೆಯುತ್ತಿದೆ. 
 

Follow Us:
Download App:
  • android
  • ios