Asianet Suvarna News Asianet Suvarna News

Breasts ಗಾತ್ರ ದೊಡ್ಡದಿದ್ರೆ ಈ ಭಂಗಿಯಲ್ಲಿ ನಿದ್ರೆ ಮಾಡೋಕೆ ಬೆಸ್ಟ್

ದೇಹದ ಆಕಾರ ಆರೋಗ್ಯದ ಮೇಲೆ ಮಾತ್ರವಲ್ಲ ನಿದ್ರೆ ಮೇಲೂ ಪರಿಣಾಮ ಬೀರುತ್ತದೆ. ದೊಡ್ಡ ಹೊಟ್ಟೆ ಹೊಂದಿರುವ ಜನರಿಗೆ ಮಗ್ಗಲು ಬದಲಿಸುವುದು ಕಷ್ಟ. ನಿದ್ರೆ ಸಮಸ್ಯೆ ಕಾಡುತ್ತದೆ. ಹಾಗೆಯೇ ದೊಡ್ಡ ಗಾತ್ರದ ಸ್ತನ ಹೊಂದಿರುವ ಮಹಿಳೆಯರು ಕೂಡ ಈ ಸಮಸ್ಯೆ ಎದುರಿಸುತ್ತಾರೆ. 
 

What Is The Best Way To Sleep For Your Breasts
Author
First Published Dec 16, 2022, 4:26 PM IST

ರಾತ್ರಿ ಸರಿಯಾಗಿ ನಿದ್ರೆ ಬಂದಿಲ್ಲ ಅಂದ್ರೆ ಬೆಳಿಗ್ಗಿನ ಕೆಲಸ ಹಾಳಾದಂತೆ. ಇಡೀ ದಿನ ಮೂಡ್ ಆಫ್ ಆಗಿರುವ ಜೊತೆಗೆ ನಿದ್ರೆ ಮಂಪರು ಕೆಲಸಕ್ಕೆ ಅಡ್ಡಿ ಮಾಡುತ್ತದೆ. ಒಂದಲ್ಲ ಎರಡಲ್ಲ ಪ್ರತಿ ದಿನ ನಿದ್ರಾಭಂಗ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಪ್ರತಿ ದಿನ 7 -8 ಗಂಟೆ ನಿದ್ರೆ ಮಾಡುವುದು ಬಹಳ ಮುಖ್ಯ. ಆದ್ರೆ ಕೆಲ ಕಾರಣಕ್ಕೆ ರಾತ್ರಿ ಮಗ್ಗಲು ಬದಲಿಸುತ್ತಿರುತ್ತೇವೆಯೇ ವಿನಃ ನಿದ್ರೆ ಮಾಡುವುದಿಲ್ಲ. ಕೆಲವರಿಗೆ ಮಗ್ಗಲು ಬದಲಿಸಲು ಕೂಡ ಸಮಸ್ಯೆಯಾಗುತ್ತದೆ. ಬೆನ್ನು ನೋವು ಕಾಡುತ್ತದೆ. ಕೆಲ ಮಹಿಳೆಯರಿಗೆ ಸ್ತನದ ಕಾರಣಕ್ಕೆ ಸರಿಯಾಗಿ ಮಗ್ಗಲು ಬದಲಿಸಲಾಗದೆ ನಿದ್ರೆ ಹಾಳಾಗುತ್ತದೆ. 

ದೊಡ್ಡ ಸ್ತನ (Breast) ದಿಂದ ಕೆಲ ಸಮಸ್ಯೆಗಳನ್ನು ಮಹಿಳೆಯರು ಎದುರಿಸಬೇಕಾಗುತ್ತದೆ. ಸ್ತನದ ಗಾತ್ರ ದೊಡ್ಡದಿದ್ದರೆ ಸ್ತನ ನೋವು (Pain) ಮಾಮೂಲಿ. ಬೆನ್ನು ನೋವನ್ನು ಕೂಡ ಈ ಮಹಿಳೆಯರು ಎದುರಿಸುತ್ತಾರೆ. ಸ್ತನದ ಕಾರಣ ನಿದ್ರೆ (Sleep) ಬರ್ತಿಲ್ಲ ಎನ್ನುವವರು ಮೊದಲು ಮಲಗುವ ಭಂಗಿ ಬದಲಿಸಿಕೊಳ್ಳಬೇಕು. ನಾವಿಂದು ದೊಡ್ಡ ಸ್ತನ ಹೊಂದಿರುವವರು ಯಾವ ಭಂಗಿಯಲ್ಲಿ ನಿದ್ರೆ ಮಾಡ್ಬೇಕು ಎಂಬುದನ್ನು ಹೇಳ್ತೆವೆ.
ದೊಡ್ಡ ಸ್ತನ ನಿದ್ರೆ ಕೆಡಿಸುತ್ತದೆ. ಬೆನ್ನು ನೋವು (Back) ಕಾಡುತ್ತದೆ. ಹಾಗೆಯೇ ದೇಹದ ಆಕಾರ ಬದಲಾಗುತ್ತದೆ. ನಿದ್ರೆ ಮಾಡುವ ಭಂಗಿ ಸ್ತನದ ಸ್ನಾಯುಗಳು ಮತ್ತು ದೇಹದ ಭಂಗಿ ಎರಡರ ಮೇಲೂ ಪರಿಣಾಮ ಬೀರುತ್ತದೆ. ನೀವು ಸರಿಯಾದ ಭಂಗಿಯಲ್ಲಿ ನಿದ್ರಿಸದಿದ್ದರೆ ನಿಮ್ಮ ನಿದ್ರೆ ಹಾಳಾಗುತ್ತದೆ. ಸ್ತನ ಕುಗ್ಗುವ ಸಮಸ್ಯೆ ಕಾಡುತ್ತದೆ. 

ಇದು ಸ್ತನಗಳ ವಿಷ್ಯ… ಈ ತಪ್ಪೆಲ್ಲಾ ಆಗದಂತೆ ಇರಲಿ ಎಚ್ಚರ!

ಮಲಗುವ ಭಂಗಿ ಸರಿಯಿಲ್ಲವೆಂದ್ರೆ ಕಾಡುತ್ತೆ ಈ ಸಮಸ್ಯೆ : ನೀವು ಮಲಗುವ ಭಂಗಿ ಸರಿಯಾಗಿಲ್ಲವೆಂದ್ರೆ ನಿಮಗೆ ನಿದ್ರೆ ಸರಿಯಾಗಿ ಬರೋದಿಲ್ಲ. ಕುತ್ತಿಗೆ ರಕ್ತನಾಳಗಳು ಉಬ್ಬಿರುತ್ತವೆ. ಸ್ತನ ನೋವು ಕಾಣಿಸುತ್ತದೆ. ಮರುದಿನ ದಣಿವನ್ನು ನೀವು ಅನುಭವಿಸುತ್ತಿರಿ. 

ಸುಖ ನಿದ್ರೆಗೆ ಮಲಗುವ ಭಂಗಿ : ನೀವು ಉತ್ತಮ ಫಿಗರ್ ಮೆಂಟೇನ್ ಮಾಡಿದ್ದರೆ ಯಾವುದೇ ಭಂಗಿಯಲ್ಲಿ ನಿದ್ರೆ ಮಾಡಿದ್ರೂ ಸಮಸ್ಯೆ ಕಾಡುವುದಿಲ್ಲ. ಆದ್ರೆ ನಿಮ್ಮ ಸ್ತನ ದೊಡ್ಡದಿದ್ದರೆ ಅಥವಾ ಹೊಟ್ಟೆ, ಬ್ಯಾಕ್ ನಲ್ಲಿ ಕೊಬ್ಬು ಜಾಸ್ತಿಯಿದ್ದರೆ ಮಲಗುವ ಭಂಗಿ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. 

ಬೆನ್ನಿನ ಮೇಲೆ ಮಲಗಿ : ಸ್ತನದ ಗಾತ್ರ ದೊಡ್ಡದಿದ್ದರೆ ನೀವು ಬೆನ್ನಿನ ಮೇಲೆ ಮಲಗುವುದು ಉತ್ತಮ ಭಂಗಿಯಾಗಿದೆ. ಮಲಗುವ ವೇಳೆ ಮೊಣಕಾಲಿನ ಕೆಳಗೆ ತೆಳುವಾದ ದಿಂಬು ಅಥವಾ ದುಂಡಗಿನ ದಿಂಬನ್ನು ಹಾಕಿ ಕಾಲನ್ನು ಸ್ವಲ್ಪ ಎತ್ತರದಲ್ಲಿ ಇರಿಸಬಹುದು. ಇದರಿಂದ ನಿಮ್ಮ ರಕ್ತ ಪರಿಚಲನೆಯು ಉತ್ತಮವಾಗಿರುತ್ತದೆ. ಇದು ಸುಖ ನಿದ್ರೆ ಬರಲು ನೆರವಾಗುತ್ತದೆ. ಬೆನ್ನಿನ ಮೇಲೆ ನೀವು ಮಲಗುವುದ್ರಿಂದ ಸ್ತನದ ತೂಕ ನಿಮಗೆ ಕಿರಿಕಿರಿ ಎನ್ನಿಸುವುದಿಲ್ಲ. ಕೈಗಳು, ಅಂಡರ್ಆರ್ಮ್ಸ್ ಮತ್ತು ಸ್ತನ ಸ್ನಾಯುಗಳಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಇದ್ರಿಂದ ನಿಮ್ಮ ದೇಹದ ಆಕಾರದಲ್ಲೂ ಯಾವುದೇ ಬದಲಾಣೆಯಾಗುವುದಿಲ್ಲ. ಇದಲ್ಲದೆ ಪ್ರತಿ ದಿನ ನೀವು ಇದೇ ಭಂಗಿಯಲ್ಲಿ ಮಲಗಿದ್ರೆ ಬೆನ್ನಿನ ಕೆಳಭಾಗದ ನೋವಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ.

Breast Pain: ಹಾಲುಣಿಸುವ ತಾಯಂದಿರಲ್ಲಿ ಚಳಿಗಾಲದಲ್ಲಿ ಸ್ತನಗಳಲ್ಲಿ ನೋವುಂಟಾಗುವುದೇಕೆ?

ಸ್ತನ ನೋವು : ಮಹಿಳೆಯರಿಗೆ ಕಾಡುವ ಸ್ತನ ನೋವಿನ ಬಗ್ಗೆ ಅನೇಕ ಅಧ್ಯಯನಗಳು ನಡೆದಿವೆ. ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ ಅಧ್ಯಯನದ ವರದಿ ಪ್ರಕಾರ, ಸುಮಾರು ಶೇಕಡಾ 70ರಷ್ಟು ಮಹಿಳೆಯರು ತಮ್ಮ ಜೀವನದಲ್ಲಿ ಒಮ್ಮೆಯಾದ್ರೂ ಸ್ತನ ನೋವನ್ನು ಅನುಭವಿಸುತ್ತಾರಂತೆ. ಮುಟ್ಟಿನ ಸಮಯದಲ್ಲಿ ಕೆಲ ಮಹಿಳೆಯರಿಗೆ ನೋವು ಕಾಣಿಸಿಕೊಳ್ಳುತ್ತದೆ. ಮತ್ತೆ ಕೆಲವರಿಗೆ ಮುಟ್ಟಲ್ಲದ ಸಮಯದಲ್ಲೂ ನೋವಿರುತ್ತದೆ. ಸ್ತನದಲ್ಲಿ ನೋವು ಕಾಣಿಸಬಾರದು ಅಂದ್ರೆ ನೀವು ಹೊಟ್ಟೆಯ ಮೇಲೆ ಮಲಗಬಾರದು. ಇದು ಎದೆಯ ಮೇಲೆ ಅನಗತ್ಯ ಒತ್ತಡ ಉಂಟಾಗುತ್ತದೆ. ಇದ್ರಿಂದ ನೋವು ಹೆಚ್ಚಾಗುತ್ತದೆ.  ಬಲ ಅಥವಾ ಎಡ ಮಗ್ಗಲಿನಲ್ಲಿ ಮಲಗುವುದು ಕೂಡ ಒಳ್ಳೆಯದಲ್ಲ. ಇದರಿಂದ ಸ್ತನ ಕುಗ್ಗುವ ಸಮಸ್ಯೆ ಕಾಡುತ್ತದೆ. 
 

Follow Us:
Download App:
  • android
  • ios