Weird News: ಹೆರಿಗೆ ನಂತ್ರ 15 ದಿನ ಟೆಂಟಿನಲ್ಲಿರ್ಬೇಕು ತಾಯಿ - ಮಗು
ಭಾರತ ಸೇರಿದಂತೆ ಎಲ್ಲ ದೇಶಗಳೂ ತಮ್ಮದೆ ಆದ ಸಂಪ್ರದಾಯ, ಪದ್ಧತಿ, ನಿಯಮಗಳನ್ನು ಪಾಲಿಸಿಕೊಂಡು ಬರ್ತಿವೆ. ಈಗ್ಲೂ ಕೆಲ ವಿಚಿತ್ರ ಪದ್ಧತಿಗಳು ಜಾರಿಯಲ್ಲಿವೆ. ಮಗು ಜನಿಸಿದ ನಂತ್ರ ಕೆಲ ಪ್ರದೇಶಗಳಲ್ಲಿ ತಾಯಿ – ಮಗುವನ್ನು ದೂರವಿಡಲಾಗುತ್ತದೆ. ಮಗುವನ್ನು ನೆಲಕ್ಕೆ ಸ್ಪರ್ಶಿಸದ ದೇಶವೂ ಇದೆ.
ಮನೆಗೊಂದು ಮಗು ಬಂದ್ರೆ ಇಡೀ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಪ್ರತಿಯೊಬ್ಬರೂ ಮಗುವನ್ನು ಎತ್ತಿ ಆಡಿಸುವ ತರಾತುರಿಯಲ್ಲಿರುತ್ತಾರೆ. ನವಜಾತ ಶಿಶು ದೇಹ ಬಹಳ ಸೂಕ್ಷ್ಮವಾಗಿರುತ್ತದೆ. ಮೂರು ತಿಂಗಳಿನವರೆಗೆ ಮಗುವನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳಬೇಕಾಗುತ್ತದೆ. ನವಜಾತ ಶಿಶುವಿಗೆ ಸಂಬಂಧಿಸಿದಂತೆ ಪ್ರದೇಶ, ಧರ್ಮ, ಸಮುದಾಯದಲ್ಲಿ ಭಿನ್ನ ನಿಯಮಗಳಿವೆ. ಬಹುತೇಕ ದೇಶಗಳಲ್ಲಿ ಮಗು ಜನಿಸ್ತಿದ್ದಂತೆ ಅದನ್ನು ಎಲ್ಲರೂ ಸ್ಪರ್ಶಿಸಲು ಹೋಗುವುದಿಲ್ಲ. ಮಗುವಿನ ಆರೋಗ್ಯದ ದೃಷ್ಟಿಯಿಂದ ಹಾಗೂ ಕೆಲ ಸಂಪ್ರದಾಯ ಪಾಲನೆ ಮಾಡುವ ಜನರು ನಿಯಮ ಪಾಲನೆ ಮಾಡ್ತಾರೆ.
ಭಾರತ (India)ದಲ್ಲಿಯೂ ನವಜಾತ (Newborn) ಶಿಶುವಿಗೆ ಸಂಬಂಧಿಸಿದಂತೆ ಕೆಲ ಪದ್ಧತಿಯಿದೆ. ಕೆಲ ಜಾತಿಯಲ್ಲಿ ಮಗುವನ್ನು 15 ದಿನಗಳ ಕಾಲ ಬೇರೆಯವರು ಮುಟ್ಟುವುದಿಲ್ಲ. ಮತ್ತೆ ಕೆಲ ಪ್ರದೇಶದಲ್ಲಿ ತಾಯಿ ಹಾಗೂ ಮಗು 40 ದಿನಗಳವರೆಗೆ ಮನೆಯಿಂದ ಹೊರಗೆ ಬರುವಂತಿಲ್ಲ. ಹಾಗೆ ಬೇರೆ ದೇಶಗಳಲ್ಲಿಯೂ ಅವರದೆ ಆದ ರೂಲ್ಸ್ ಇದೆ. ನಾವಿಂದು ಕೆಲ ದೇಶಗಳ ನಿಯಮಗಳ ಬಗ್ಗೆ ನಿಮಗೆ ಹೇಳ್ತೇವೆ.
ಚರ್ಮದ ತ್ವಚೆಗೆ ಜೇನುತುಪ್ಪದ ಮದ್ದು, ಹೇಗೆ ಹಚ್ಚಿದರಾಗುತ್ತೆ ಹೊಳೆಯುವ ತ್ವಚೆ?
ಹಿಮಾಚಲ ಪ್ರದೇಶ (Himachal Pradesh) ದಲ್ಲಿದೆ ವಿಚಿತ್ರ ಪದ್ಧತಿ : ದೇವಭೂಮಿ ಎಂದೇ ಕರೆಯಲ್ಪಡುವ ಹಿಮಾಚಲ ಪ್ರದೇಶದಲ್ಲಿ ಈಗ್ಲೂ ಅನೇಕ ಪದ್ಧತಿಗಳನ್ನು ಆಚರಿಸಲಾಗುತ್ತಿದೆ. ಹಿಮಾಚಲ ಪ್ರದೇಶದ ಕೆಲ ಗ್ರಾಮಗಳಲ್ಲಿ ಮಗು ಹುಟ್ಟಿದ ತಕ್ಷಣ ತಾಯಿ ಹಾಗೂ ಮಗುವನ್ನು 15 ದಿನಗಳ ಕಾಲ ಬೇರೆ ಇಡಲಾಗುತ್ತದೆ. ತಾಯಿ – ಮಗು ಇಬ್ಬರನ್ನು ಮನೆಯಿಂದ ದೂರ ಒಂದು ಟೆಂಟ್ (Tent) ನಲ್ಲಿ ಇಡಲಾಗುತ್ತದೆ. ಮಗುವನ್ನು ಯಾರೂ ಸ್ಪರ್ಶಿಸುವುದಿಲ್ಲ. ಆಹಾರವನ್ನು ಗ್ರಾಮಸ್ಥರು ನೀಡ್ತಾರೆ. ಮಗು ಮನೆಗೆ ಬರುವ ದಿನ ಮನೆಯನ್ನು ಸ್ವಚ್ಛಗೊಳಿಸಿ, ಶುದ್ಧಮಾಡಿ ಮಗುವನ್ನು ಸ್ವಾಗತಿಸಲಾಗುತ್ತದೆ. ಇಲ್ಲಿನ ಕೆಲ ಗ್ರಾಮ (Village) ಗಳಲ್ಲಿ ಹೆರಿಗೆಗೆ ನಾಲ್ಕೈದು ದಿನವಿರುವಾಗ್ಲೇ ಗರ್ಭಿಣಿಯನ್ನು ದನದ ಕೊಟ್ಟಿಗೆಯಲ್ಲಿ ಮಲಗಿಸಲಾಗುತ್ತದೆ.
ಕುಟುಂಬದಿಂದ ದೂರವಿರಬೇಕು ತಾಯಿ : ನೆರೆ ರಾಷ್ಟ್ರ ಚೀನಾದಲ್ಲಿ ಮಗು ಜನಿಸಿದ ನಂತ್ರ 30 ದಿನಗಳವರೆಗೆ ಕುಟುಂಬದಿಂದ ತಾಯಿಯನ್ನು ಬೇರೆ ಇಡಲಾಗುತ್ತದೆ. ಯಾರೂ ತಾಯಿ ಮತ್ತು ಮಗುವನ್ನು ಮಾತನಾಡಿಸುವುದಿಲ್ಲ. ಮಗುವಿಗೆ ಸ್ನಾನ ಕೂಡ ಮಾಡಿಸುವುದಿಲ್ಲ. ಮಗು ಹಾಗೂ ತಾಯಿ ಆರೋಗ್ಯದ ದೃಷ್ಟಿಯಿಂದ ಅವರನ್ನು ದೂರವಿಡಲಾಗುತ್ತದೆ.
ಹೊಕ್ಕುಳ ಬಳ್ಳಿಯ ರಕ್ಷಣೆ : ಚೀನಾದ ನೆರೆ ರಾಷ್ಟ್ರ ಜಪಾನಿನಲ್ಲಿ ನವಜಾತ ಶಿಶುವಿನ ಹೊಕ್ಕುಳ ಬಳ್ಳಿಯನ್ನು ರಕ್ಷಿಸಲಾಗುತ್ತದೆ. ಮಕ್ಕಳ ಹೊಕ್ಕುಳ ಬಳ್ಳಿಯನ್ನು ಕತ್ತರಿಸಿ ಅದನ್ನು ಮರದ ಪೆಟ್ಟಿಗೆಯಲ್ಲಿ ಇಡಲಾಗುತ್ತದೆ. ಮಗು ಹಾಗೂ ತಾಯಿಯನ್ನು ಇದು ಸಂಪರ್ಕಿಸುತ್ತದೆ ಎನ್ನುವ ಕಾರಣಕ್ಕೆ ಅದನ್ನು ರಕ್ಷಿಸಲಾಗುತ್ತದೆ. ಭಾರತದಲ್ಲಿಯೂ ಹೊಕ್ಕುಳ ಬಳ್ಳಿಗೆ ಸಂಬಂಧಿಸಿದಂತೆ ವಿಚಿತ್ರ ನಂಬಿಕೆಯಿದೆ. ಹೊಕ್ಕುಳ ಬಳ್ಳಿಯನ್ನು ನೆಲದಲ್ಲಿ ಹೂಳಲಾಗುತ್ತದೆ. ಅದನ್ನು ಎಂದಿಗೂ ಕಳೆಯಬಾರದು ಎನ್ನಲಾಗುತ್ತದೆ. ಹೊಕ್ಕುಳ ಬಳ್ಳಿ ಕಳೆದ್ರೆ ನೆನಪಿನ ಶಕ್ತಿ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ.
ಮೂರು ತಿಂಗಳು ಮಕ್ಕಳನ್ನು ನೆಲಕ್ಕಿಡಲ್ಲ ಇಲ್ಲಿ : ಇಂಡೋನೇಷ್ಯಾದಲ್ಲಿ ಮೂರು ತಿಂಗಳವರೆಗೆ ಮಗುವನ್ನು ನೆಲಕ್ಕೆ ಮಲಗಿಸುವುದಾಗ್ಲಿ, ನೆಲವನ್ನು ಸ್ಪರ್ಶಿಸುವುದಾಗ್ಲಿ ಮಾಡುವುದಿಲ್ಲ. ಸದಾ ಒಬ್ಬರಲ್ಲ ಒಬ್ಬರು ಮಗುವನ್ನು ಎತ್ತಿಕೊಳ್ತಾರೆ. ಮಗುವನ್ನು ನೆಲಕ್ಕೆ ಸ್ಪರ್ಶಿಸಿದ್ರೆ ಅದು ಬೇರೆ ಪ್ರಪಂಚದೊಂದಿಗೆ ಸಂಬಂಧ ಹೊಂದುತ್ತದೆ ಎಂಬ ನಂಬಿಕೆ ಇಲ್ಲಿನವರದ್ದು.
ಹೃದಯಾಘಾತದ ಬಗ್ಗೆ ಬೇಡ ಭಯ, ತಿಂಗಳ ಮುಂಚೆಯೇ ಸಿಕ್ಕಿರುತ್ತೆ ಸೂಚನೆ
ಮಗುವಿನ ಹೊಕ್ಕುಳ ಬಳ್ಳಿ (Umbilical Cord) ಅಶುಭ ಎನ್ನುತ್ತದೆ ಈ ದೇಶ : ಜಪಾನಿನಲ್ಲಿ ಹೊಕ್ಕುಳ ಬಳ್ಳಿಯನ್ನು ರಕ್ಷಿಸಿಟ್ಟರೆ ನೈಜೀರಿಯಾದಲ್ಲಿ ಅದನ್ನು ಅಶುಭ ಎನ್ನಲಾಗುತ್ತದೆ. ಆಫ್ರಿಕನ್ ದೇಶಗಳಲ್ಲಿ ಹೊಕ್ಕುಳ ಬಳ್ಳಿಯನ್ನು ಮಗುವಿನ ಅವಳಿ ಸಹೋದರ ಎಂದು ಪರಿಗಣಿಸಲಾಗುತ್ತದೆ. ಅದನ್ನು ಮರದ ಕೆಳಗೆ ಹೂತಿಡಲಾಗುತ್ತದೆ. ಹೂತಿಡುವ ವೇಳೆ ಜನರು ಶೋಕ ವ್ಯಕ್ತಪಡಿಸುತ್ತಾರೆ.