Asianet Suvarna News Asianet Suvarna News

ಚರ್ಮದ ತ್ವಚೆಗೆ ಜೇನುತುಪ್ಪದ ಮದ್ದು, ಹೇಗೆ ಹಚ್ಚಿದರಾಗುತ್ತೆ ಹೊಳೆಯುವ ತ್ವಚೆ?

ಚರ್ಮ ಹಾಗೂ ತ್ವಚೆಯ ವಿಷಯ ಬಂದ ಮೇಲೆ ಹಲವು ನೈಸರ್ಗಿಕ ಔಷಧಗಳು ಉಪಯುಕ್ತವಾಗಿವೆ. ಹೊಳೆಯುವ ಚರ್ಮ ಹೊಂದುವುದು ಎಲ್ಲರಿಗೂ ಇಷ್ಟ. ಆದರೆ ಚರ್ಮಕ್ಕೆ ಹೊಂದುವ ಸರಿಯಾದ ಆಯ್ಕೆ ಬಹಳ ಮುಖ್ಯ. ಅದಕ್ಕಾಗಿಯೇ ಜೇನುತುಪ್ಪ ಬಳಸಿ ಹೊಳೆಯುವ ತ್ವಚೆಯನ್ನು ಹೊಂದುವ ಬಗ್ಗೆ ಸಲಹೆಗಳು ಇಲ್ಲಿವೆ.

Beauty Tips: Uses Of Honey for Glowing Skin
Author
First Published Nov 22, 2022, 3:31 PM IST

ಹೊಳೆಯುವ ಚರ್ಮ ಹೊಂದುವುದು ಎಂದರೆ ಪ್ರತೀ ಮಹಿಳೆಯ ಬಯಕೆ ಎಂದರೆ ತಪ್ಪೇನಿಲ್ಲ. ಅದಾಗ್ಯೂ, ಈ ದಿನಗಳಲ್ಲಿ ಹೊಳೆಯುವ ಚರ್ಮ ಸಾಧಿಸುವುದು ಅಸಾಧ್ಯವೆಂದು ತೋರುತ್ತದೆ. ಏಕೆಂದರೆ ಮಾಲಿನ್ಯ, ರಾಸಾಯನಿಕಗಳಿಗೆ ಅತಿಯಾದ ಒಡ್ಡುವಿಕೆ, ಕಳಪೆ ಆಹಾರ ಪದ್ಧತಿ, ಹಾನಿಕಾರಕ ಸೂರ್ಯನ ಕಿರಣಗಳು, ಅತಿಯಾದ ಧೂಮಪಾನ ಅಥವಾ ಅಸಮರ್ಪಕ ನಿದ್ರೆಯಂತಹ ಅಂಶಗಳು ಚರ್ಮದ ಮೇಲೆ ಪರಿಣಾಮ ಬೀರುತ್ತವೆ. ಹೊಳೆಯುವ ಚರ್ಮವನ್ನು ಪಡೆಯಲು ಅಲೋವೆರಾ, ಆಲಿವ್ ಎಣ್ಣೆ ಅಥವಾ ಜೇನುತುಪ್ಪದಂತಹ ಕೆಲವು ನೈಸರ್ಗಿಕ ಪರಿಹಾರಗಳನ್ನು ಬಳಸಬಹುದು.

ಚರ್ಮ ಹೊಳೆಯಲು ಜೇನುತುಪ್ಪದ ಪ್ರಯೋಜನಗಳು
ತ್ವಚೆಗೆ ಜೇನುತುಪ್ಪ ಹಚ್ಚುವುದರಿಂದ ಹಲವು ಪ್ರಯೋಜನಗಳಿವೆ. 2013ರ ಅಧ್ಯಯನದ ಪ್ರಕಾರ, ಜೇನುತುಪ್ಪವು ಪ್ರೋಟೀನ್(Protein), ವಿಟಮಿನ್(Vitamin), ಖನಿಜ(Minerals), ಕಿಣ್ವ, ಅಮೈನೋ ಆಮ್ಲ(Amino Acid) ಮತ್ತು ಇತರೆ ಸಣ್ಣ ಘಟಕಗಳನ್ನು ಒಳಗೊಂಡಿರುತ್ತದೆ. ಇದು ಚರ್ಮದ ಆರೈಕೆಗೆ ಬಹಳ ಒಳ್ಳೆಯದು. ಇದು ಶಕ್ತಿಯುತವಾದ ಬ್ಯಾಕ್ಟೀರಿಯಾ(Bacteria) ವಿರೋಧಿ ಅಂಶವಾಗಿದೆ. ಇದು ಸೋಂಕು ಮತ್ತು ಮೊಡವೆಗಳಂತಹ ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ. ಅಲ್ಲದೆ, ಜೇನುತುಪ್ಪದಲ್ಲಿರುವ ಉತ್ಕರ್ಷಣ ನಿರೋಧಕಗಳು ವಯಸ್ಸಾಗುವಿಕೆಯನ್ನು(Aging) ನಿಧಾನಗೊಳಿಸಲು ಮತ್ತು ಚರ್ಮದ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ. ಜೊತೆಗೆ, ಅದರಲ್ಲಿನ ಬ್ಲೀಚಿಂಗ್(Bleaching) ಗುಣಲಕ್ಷಣಗಳಿಂದಾಗಿ, ಪಿಗ್ಮೆಂಟೇಶನ್(Pigmentation) ಮತ್ತು ಚರ್ಮವು ಮಸುಕಾಗಲು ಸಹಾಯ ಮಾಡುತ್ತದೆ. ಜೇನುತುಪ್ಪ ಹಚ್ಚುವುದರಿಂದ ಚರ್ಮಕ್ಕೆ ತೇವಾಂಶ ಹಿಡಿದಿಡುವಂತೆ ಮಾಡುತ್ತದೆ. ಏಕೆಂದರೆ ಇದು ಎಮೋಲಿಯಂಟ್(Emollient) ಆಗಿದೆ. ಈ ತೇವಾಂಶ ಧಾರಣ ಸಾಮರ್ಥ್ಯವು ಚರ್ಮವು ಹೊಳೆಯುವಂತೆ ಮಾಡುತ್ತದೆ. ತ್ವಚೆಯ ಆರೈಕೆಯಲ್ಲಿ ಜೇನುತುಪ್ಪ ಹೇಗೆ ಸೇರಿಸಬೇಕು ಎಂದು ಇಲ್ಲಿ ತಿಳಿಸಲಾಗಿದೆ.

ಈ ಅದ್ಭುತ ಹ್ಯಾಕ್ ಟ್ರೈ ಮಾಡಿ ಜೇನು ತುಪ್ಪವನ್ನು ಇರುವೆಗಳಿಂದ ರಕ್ಷಿಸಿ

ತ್ವಚೆಗೆ ಜೇನುತುಪ್ಪಪ ಹೀಗೆ ಬಳಸಿ 
1. ರೋಸ್ ವಾಟರ್ ಮತ್ತು ಜೇನುತುಪ್ಪ(Rose Water And Honey)

ಮುಖದಲ್ಲಿ ಕೆಂಪು ಬಣ್ಣವನ್ನು ಕಡಿಮೆ ಮಾಡುವ ಮತ್ತು ಉರಿಯೂತದ ತ್ವಚೆಯನ್ನು ನಿವಾರಿಸುವ ಸಾಮರ್ಥ್ಯ ಜೇನುತುಪ್ಪಕ್ಕಿದೆ. ಏಕೆಂದರೆ ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಎಸ್ಜಿಮಾ, ಮೊಡವೆ(Acne) ಮತ್ತು ಡರ್ಮಟೈಟಿಸ್‌ನಂತಹ(Dermatitis) ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ. ಜೊತೆಗೆ ಇದು ರಂಧ್ರಗಳನ್ನು ಶುದ್ಧೀಕರಿಸಿ ಬಿಗಿಗೊಳಿಸುತ್ತದೆ. ಚರ್ಮವನ್ನು ಟೋನ್ ಮಾಡಿ, ನಯವಾಗಿಸುತ್ತದೆ.
ಬಳಸುವ ವಿಧಾನ: ಒಂದು ಚಮಚ ಜೇನುತುಪ್ಪ, 2 ಚಮಚ ರೋಸ್ ವಾಟರ್.
ಮಾಡುವ ವಿಧಾನ: ಒಂದು ಸಣ್ಣ ಬೌಲ್‌ಗೆ ಜೇನುತುಪ್ಪ ಮತ್ತು ರೋಸ್ ವಾಟರ್ ಅನ್ನು ಹಾಕಿ ಮೃದುವಾದ ಮಿಶ್ರಣವು ರೂಪುಗೊಳ್ಳುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ. ಹಚ್ಚುವ ಮೊದಲು ಮುಖವನ್ನು ಚೆನ್ನಾಗಿ ತೊಳೆದು ಒಣಗಿಸಿ. ನಂತರ ಈ ಮಿಶ್ರಣವನ್ನು ಮುಖದ ಮೇಲೆ ಹಚ್ಚಿ ಹಾಗೂ ಕಣ್ಣಿನ ಪ್ರದೇಶವನ್ನು ತಪ್ಪಿಸಿ. ಹಚ್ಚಿದ 15 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಹೀಗೆ ವಾರದಲ್ಲಿ ಎರಡು ಬಾರಿ ಮಾಡಿದರೆ ಹೊಳೆಯುವ ತ್ವಚೆಯನ್ನು ಪಡೆಯಬಹುದು.

2. ಮೊಸರು ಮತ್ತು ಜೇನುತುಪ್ಪ(Curd And Honey)
ಮೊಸರು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿರುವುದರಿAದ ಚರ್ಮವನ್ನು ಎಫ್ಫೋಲಿಯೇಟ್(Exfoliate) ಮಾಡಲು ಸಹಾಯ ಮಾಡುತ್ತದೆ. ಇದರ ಜೊತೆಗೆ, ಕೊಬ್ಬು, ಪ್ರೋಟೀನ್, ಖನಿಜ ಮತ್ತು ವಿಟಮಿನ್‌ಗಳಿಂದ ಸಮೃದ್ಧವಾಗಿದೆ. ಇದು ಚರ್ಮವನ್ನು ಪೋಷಿಸುತ್ತದೆ. ಇದರಲ್ಲಿರುವ ಸಮೃದ್ಧ ಕೊಬ್ಬಿನಂಶವು ದೀರ್ಘಕಾಲದ ಚರ್ಮದ ತೇವಾಂಶವನ್ನು ಹಿಡಿದಿಡಲು ಸಹಾಯ ಮಾಡುತ್ತದೆ. ಇದರೊಂದಿಗೆ ಮೊಸರಿನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಮೊಡವೆಗಳನ್ನು ತಡೆಯುತ್ತದೆ. 
ಬಳಸುವ ವಿಧಾನ: ಒಂದು ಚಮಚ ಜೇನುತುಪ್ಪ, ೨ ಚಮಚ ಮೊಸರು.
ಹಚ್ಚುವ ವಿಧಾನ: ಮೊದಲು ಒಂದು ಸಣ್ಣ ಬೌಲ್‌ಗೆ ಜೇನುತುಪ್ಪ ಮತ್ತು ಮೊಸರನ್ನು ಹಾಕಿ ಚೆನ್ನಾಗಿ ಕಲಸಿ. ಹಚ್ಚುವ ಮೊದಲು ಮುಖ ತೊಳೆದು ಒಣಗಿದ ನಂತರ ಮಿಶ್ರಣವನ್ನು ಹಚ್ಚಿ. ಹಚ್ಚಿದ 15 ನಿಮಿಷಗಳ ನಂತರ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ. ಹೀಗೆ ವಾರಕ್ಕೆ ಎರಡು ಬಾರಿ ಮಾಡಿದರೆ ಹೊಳೆಯುವ ತ್ವಚೆಯನ್ನು ಪಡೆಯಬಹುದು.

ಜೇನು ಆರೋಗ್ಯಕ್ಕೆ ಒಳ್ಳೇದು ನಿಜ, ಹಾಗಂತ ಬೇಕಾಬಿಟ್ಟಿ ತಿನ್ಬೇಡಿ !

3. ಆಲಿವ್ ಎಣ್ಣೆ ಮತ್ತು ಜೇನುತುಪ್ಪ(Oilve Oil And Honey)
ಸಾಮಾನ್ಯವಾಗಿ ಆಲಿವ್ ಎಣ್ಣೆ ಅತ್ಯುತ್ತಮವಾದ ಮಾಯಿಶ್ವರೈಸರ್(Moisture) ಆಗಿ ಕೆಲಸ ಮಾಡುತ್ತದೆ. ಇದು ರಂಧ್ರಗಳಿAದ ಕೊಳೆ, ಎಣ್ಣೆ ಮತ್ತು ಕೊಳೆಯನ್ನು ಕರಗಿಸಲು ಮತ್ತು ಹೊರಹಾಕಲು ಸಹಾಯ ಮಾಡುತ್ತದೆ. ಮೊಡವೆಗಳನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ ಈ ಎಣ್ಣೆಯು ಫ್ಲೇವನಾಯ್ಡ್ಗಳು ಮತ್ತು ಪಾಲಿಫಿನಾಲ್‌ಗಳನ್ನು ಹೊಂದಿರುತ್ತದೆ. ಇದು ಫ್ರೀ ರಾಡಿಕಲ್‌ಗಳಿಂದ(Free Radicles) ಚರ್ಮವನ್ನು ರಕ್ಷಿಸುತ್ತದೆ ಮತ್ತು ಹಾನಿಯನ್ನು ತಡೆಯುತ್ತದೆ. ಜೇನುತುಪ್ಪ ಮತ್ತು ಆಲಿವ್ ಎಣ್ಣೆಯ ಸಂಯೋಜನೆಯು ತ್ವಚೆಯನ್ನು ಸಮಗೊಳಿಸುತ್ತದೆ ಮತ್ತು ಅದನ್ನು ಹೈಡ್ರೀಕರಿಸುತ್ತದೆ.

ಬಳಸುವ ವಿಧಾನ: ಎರಡು ಚಮಚ ಜೇನುತುಪ್ಪ (honeY), ಒಂದು ಚಮಚ ಆಲಿವ್ ಆಯಿಲ್ (Olive Oil).
ಹಚ್ಚುವ ವಿಧಾನ: ಒಂದು ಬೌಲ್‌ನಲ್ಲಿ ಜೇನುತುಪ್ಪ ಮತ್ತು ಆಲಿವ್ ಆಯಿಲ್ ಅನ್ನು ಹಾಕಿ ಚೆನ್ನಾಗಿ ಕಲಸಿ. ನಂತರ ಈ ಮಿಶ್ರಣವನ್ನು ಬೆಚ್ಚಗಾಗುವವರೆಗೂ 20 ನಿಮಿಷಗಳ ಕಾಲ ಕಾಯಿಸಿ. ಹಚ್ಚುವ ಮೊದಲು ಮುಖವನ್ನು ತೊಳೆದು ಒಣಗಿಸಿಕೊಳ್ಳಿ. ಒಣಗಿದ ನಂತರ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸುಮಾರು 5 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ಮುಖವನ್ನು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಬಾರಿ ಹೀಗೆ ಮಾಡಿ ನೋಡಿ.

Follow Us:
Download App:
  • android
  • ios