Asianet Suvarna News Asianet Suvarna News

Coconut Milk: ಮನೆಯಲ್ಲೇ ತಯಾರಿಸಿ ರುಚಿಯಾದ ತೆಂಗಿನಕಾಯಿ ಹಾಲು

How To Make Fresh Coconut Milk: ಈಗ ಮಾರುಕಟ್ಟೆಯಲ್ಲಿ ಏನು ಸಿಗಲ್ಲ ಹೇಳಿ? ತೆಂಗಿನಕಾಯಿ ಹಾಲನ್ನು ಕೂಡ ನಾವು ಮಾರುಕಟ್ಟೆಯಲ್ಲಿ ಖರೀದಿ ಮಾಡಬಹುದು. ಆದ್ರೆ ಇದನ್ನು ನೀವು ಮನೆಯಲ್ಲಿ ಸುಲಭವಾಗಿ, ಕೆಲವೇ ನಿಮಿಷದಲ್ಲಿ ತಯಾರಿಸಬಹುದು ಗೊತ್ತಾ?

Ways To Extract Milk From Coconut
Author
First Published Nov 8, 2022, 2:39 PM IST

ತೆಂಗಿನಕಾಯಿ ಇಲ್ಲದೆ ಊಟವಿಲ್ಲ ಎನ್ನುತ್ತಾರೆ ದಕ್ಷಿಣ ಭಾರತದ ಜನರು. ಸಾಂಬಾರ್ ನಿಂದ ಹಿಡಿದು ಸಿಹಿ ತಿಂಡಿಯವರೆಗೆ ಎಲ್ಲದಕ್ಕೂ ತೆಂಗಿನಕಾಯಿ ಬೇಕು. ತೆಂಗಿನ ಕಾಯಿಯಿಂದ ನಾನಾ ರೀತಿಯ ಆಹಾರವನ್ನು ತಯಾರಿಸಬಹುದು. ತೆಂಗಿನ ಕಾಯಿ ಚಟ್ನಿ ಇಲ್ಲವೆಂದ್ರೆ ದೋಸೆ ಸೇರಲ್ಲ, ನೀರ್ ದೋಸೆ ಮಾಡಿದ್ರೆ ತೆಂಗಿನ ಹಾಲು ಬೇಕೇ ಬೇಕು. ತೆಂಗಿನ ಕಾಯಿ ಬರೀ ಆಹಾರಕ್ಕೆ ಮಾತ್ರವಲ್ಲ ಎಣ್ಣೆ ರೂಪದಲ್ಲಿಯೂ ಬಳಕೆಯಾಗುತ್ತದೆ. ತೆಂಗಿನ ಎಣ್ಣೆ ಆರೋಗ್ಯಕ್ಕೆ ಮಾತ್ರವಲ್ಲ ಚರ್ಮ ಹಾಗೂ ಕೂದಲಿಗೂ ಒಳ್ಳೆಯದು. ಅನೇಕ ರೀತಿಯಲ್ಲಿ ಬಳಕೆಯಾಗುವ ತೆಂಗಿನ ಗಿಡವನ್ನು ಅದೇ ಕಾರಣಕ್ಕೆ ಕಲ್ಪವೃಕ್ಷ ಎಂದು ಕರೆಯುತ್ತಾರೆ.

ತೆಂಗಿನಕಾಯಿ (Coconut) ಹಾಲ (Milk) ನ್ನು ಖೀರ್ ಗೆ ಹಾಕಿದ್ರೆ ಅದ್ರ ರುಚಿಯೇ ಬೇರೆ. ಇದನ್ನ ಅನೇಕ ಆಹಾರಕ್ಕೆ ಬಳಕೆ ಮಾಡ್ತಾರೆ. ಮಾರುಕಟ್ಟೆಯಲ್ಲೂ ತೆಂಗಿನ ಕಾಯಿ ಹಾಲು ಸಿಗುತ್ತದೆ. ಆದ್ರೆ ಶುದ್ಧವಾದ ಹಾಗೂ ರುಚಿ (Taste) ಯಾದ, ಕಲಬೆರಕೆಯಿಲ್ಲದ ಹಾಲು ಬೇಕೆಂದ್ರೆ ನೀವು ಮನೆಯಲ್ಲಿಯೇ ಸುಲಭವಾಗಿ ತೆಂಗಿನಕಾಯಿ ಹಾಲನ್ನು ತಯಾರಿಸಬಹುದು. ನಾವಿಂದು ಅದನ್ನು ಹೇಗೆ ತಯಾರಿಸೋದು ಎನ್ನುವ ಬಗ್ಗೆ ಮಾಹಿತಿ ನೀಡ್ತೇವೆ.

ತೆಂಗಿನ ಕಾಯಿ ಹಾಲು ತಯಾರಿಸಲು ಬೇಕಾಗುವ ಪದಾರ್ಥ : 
ತೆಂಗಿನಕಾಯಿ -1 
ಬ್ಲೆಂಡರ್
ಬಿಸಿ ನೀರು
ಶುದ್ಧವಾದ ಬಿಳಿ ಪಂಚೆ

ಚಿಕನ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟಾನ? ಹಾಗಿದ್ರೆ ಮಾರ್ಕೆಟ್‌ನಿಂದ ಖರೀದಿಸುವಾಗ ಈ ವಿಚಾರ ಗಮನಿಸಿ

ತೆಂಗಿನ ಕಾಯಿ ಹಾಲು ತಯಾರಿಸುವ ವಿಧಾನ : ಮೊದಲು ನೀರಿರುವ ಒಳ್ಳೆಯ ತೆಂಗಿನ ಕಾಯಿಯನ್ನು ಒಡೆಯಿರಿ. ನಂತ್ರ ಅದನ್ನು ತುರಿಯಿರಿ. ತುರಿದ ತೆಂಗಿನ ಕಾಯಿಯನ್ನು ಬ್ಲಂಡರ್ ಗೆ ಹಾಕಿ, ಬಿಸಿ ನೀರನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಅದು ನುಣ್ಣಗಾಗುವವರೆಗೂ ರುಬ್ಬಬೇಕು. ನಂತ್ರ ಈ ಮಿಶ್ರಣವನ್ನು ಶುದ್ಧವಾದ ಬಟ್ಟೆಯಲ್ಲಿ ಹಾಕಿ ಫಿಲ್ಟರ್ ಮಾಡಿ. ಕನಿಷ್ಟ 2 ರಿಂದ 3 ಬಾರಿ ನೀವು ಶೋಧಿಸಿಕೊಳ್ಳಬೇಕು. ಈಗ ನಿಮಗೆ ತೆಂಗಿನ ಕಾಯಿ ಹಾಲು ಸಿಗುತ್ತದೆ. ಇದನ್ನು ನೀವು ಆಹಾರಕ್ಕೆ ಬಳಕೆ ಮಾಡಬಹುದು. 

ತೆಂಗಿನ ಕಾಯಿ ಹಾಲನ್ನು ಇತ್ತೀಚಿನ ದಿನಗಳಲ್ಲಿ ಹಾಲಿನ ಬದಲಿಗೆ ಬಳಕೆ ಮಾಡಲಾಗ್ತಿದೆ. ಆದ್ರೆ ತೆಂಗಿನ ಕಾಯಿ ಹಾಲನ್ನು ಬಿಸಿ ಮಾಡಬಾರದು. ಬಿಸಿ ಮಾಡಿದ್ರೆ ಅದ್ರಲ್ಲಿರುವ ಕೊಲೆಸ್ಟ್ರಾಲ್ (Cholesterol) ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಹಾಗೆಯೇ ಟೀ ಅಥವಾ ಕಾಫಿಗೆ ನೀವು ಇದನ್ನು ಬಳಸಲು ಸಾಧ್ಯವಿಲ್ಲ.  

Kitchen Tips: ಕರಿದ ಆಹಾರವನ್ನು ಮತ್ತೆ ಬಿಸಿಮಾಡಲು ಈ ಈಸಿ ಟಿಪ್ಸ್ ಟ್ರೈ ಮಾಡಿ

ಕೊಬ್ಬರಿ ಪುಡಿ ಮಾಡುವ ವಿಧಾನ : ಮಾರುಕಟ್ಟೆ (Market) ಯಲ್ಲಿ ಕೊಬ್ಬರಿ ಪುಡಿ ಕೂಡ ಸಿಗುತ್ತೆ. ಅನೇಕರಿಗೆ ಪ್ರತಿ ದಿನ ಕೊಬ್ಬರಿ ತುರಿದು ಅಡುಗೆ ಮಾಡಲು ಸಮಯವಿರುವುದಿಲ್ಲ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಸಿಗುವ ಕೊಬ್ಬರಿ ಪುಡಿ ತರ್ತಾರೆ. ಆದ್ರೆ ಅದನ್ನು ನೀವು ಬಿಡುವಿದ್ದಾಗ ಮನೆಯಲ್ಲಿಯೇ ಮಾಡಿಟ್ಟುಕೊಳ್ಳಬಹುದು. ಅದನ್ನು ಮಾಡುವುದು ಸುಲಭ.  ಮೊದಲು ನೀವು ತೆಂಗಿನ ಕಾಯಿಯನ್ನು ಕತ್ತರಿಸಿಕೊಳ್ಳಬೇಕು. ನಂತ್ರ ಅದನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಬೇಕು. ಅದ್ರ ಮೇಲೆ ಕಂದು ಅಥವಾ ಕಪ್ಪು ಬಣ್ಣದ ಸಿಪ್ಪೆಯಿದ್ದರೆ ಅದನ್ನು ತೆಗೆಯಿರಿ. ನಂತ್ರ ಸಣ್ಣ ತುಂಡುಗಳನ್ನು ಮಿಕ್ಸಿಗೆ ಹಾಕಿ, ರುಬ್ಬಿಕೊಳ್ಳಿ. ಇದಕ್ಕೆ ಯಾವುದೇ ಕಾರಣಕ್ಕೂ ನೀವು ನೀರು ಹಾಕಬಾರದು. ತೆಂಗಿನ ಕಾಯಿ ಹೋಳುಗಳನ್ನು ರುಬ್ಬಿದ ನಂತ್ರ ಅದನ್ನು ಇನ್ನೊಂದು ಬಾಣಲೆಗೆ ಹಾಕಿ. ಮೀಡಿಯಮ್ ಫ್ಲೇಮ್ ನಲ್ಲಿ ಬಿಸಿ ಮಾಡಿ. ಬಿಸಿ ಮಾಡುವಾಗ ಕೈಯಾಡಿಸುತ್ತಿರಿ. ಅದ್ರಲ್ಲಿರುವ ನೀರಿನಾಂಶ ಹೋಗಿ ಎಣ್ಣೆಯಂಶ ಹೊರ ಬರ್ತಿರುವಾಗ ಗ್ಯಾಸ್ ಬಂದ್ ಮಾಡಿ. ಸ್ವಲ್ಪ ಸಮಯ ತೆಂಗಿನ ತುರಿ ತಣ್ಣಗಾಗಲು ಬಿಡಿ. ನಂತ್ರ ಗಾಳಿಯಾಡದ ಬಾಕ್ಸ್ ನಲ್ಲಿ ಅದನ್ನಿಟ್ಟರೆ ತುಂಬಾ ದಿನ ಬಳಕೆ ಮಾಡಬಹುದು. 

Follow Us:
Download App:
  • android
  • ios