Talcum Powder Side Effects: ಮುಖಕ್ಕೆ ಹಚ್ಚೋ ಮುನ್ನ ತಿಳಿದುಕೊಳ್ಳಿ
ಸುಗಂಧಭರಿತವಾದ ಟಾಲ್ಕಮ್ ಪೌಡರ್ (Talcum Powder) ಹುಡುಗಿಯರ ಫೇವರಿಟ್. ಹೆವಿ ಮೇಕಪ್ (Makeup) ಇಷ್ಟವಿಲ್ಲದವರು ಸಿಂಪಲ್ ಆಗಿ ಪೌಡರ್ ಅಪ್ಲೈ ಮಾಡಿ ಹೊರಟು ಬಿಡುತ್ತಾರೆ. ಆದ್ರೆ ನಿಮ್ಗೆ ಗೊತ್ತಾ, ವಾವ್ಹ್ ಅನಿಸೋ ಪರಿಮಳವಿದ್ರೂ ಟಾಲ್ಕ್ ಪೌಡರ್ ಚರ್ಮ (Skin)ಕ್ಕೆ ಸುರಕ್ಷಿತವಲ್ಲ.
ಹುಡುಗಿಯರು ಊಟ, ನಿದ್ದೆ ಬಿಟ್ಟು ಬೇಕಾದ್ರೂ ಇರ್ತಾರೆ. ಆದ್ರೆ ಮೇಕಪ್ ಇಲ್ದೆ ಇರೋದು ಕಷ್ಟ. ಅಷ್ಟರಮಟ್ಟಿಗೆ ಹುಡುಗಿಯರಿಗೆ ಸೌಂದರ್ಯ ಸಾಧನಗಳು ಪ್ರಿಯವಾಗುತ್ತವೆ. ಈಗಂತೂ ಹುಡುಗಿಯರಿಗೆ ಮೇಕಪ್ ಮಾಡಿಕೊಳ್ಳಲು ತರಹೇವಾರಿ ಬ್ಯೂಟಿ ಪ್ರಾಡಕ್ಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ವೈಟನಿಂಗ್ ಕ್ರೀಮ್, ಫೌಂಡೇಶನ್, ಹೈಲೈಟರ್ ಎಂದು ವಿವಿಧ ರೀತಿಯ ಸಾಧನಗಳು ಲಭ್ಯವಾಗುತ್ತವೆ. ಆದರೆ ಹಿಂದೆಲ್ಲಾ ಹುಡುಗಿಯರು ಮೇಕಪ್ ಎಂದರೆ ಟಾಲ್ಕಂ ಪೌಡರ್‌ನ್ನು ಹೆಚ್ಚಾಗಿ ಬಳಸುತ್ತಿದ್ದರು. ಇವತ್ತಿಗೂ ಕೆಮಿಕಲ್ ಮಿಕ್ಸಡ್ ಮೇಕಪ್ ಐಟಂಗಳನ್ನು ಇಷ್ಟಪಡದವರು ಟಾಲ್ಕಮ್ ಪೌಡರನ್ನೇ ಬಳಸುತ್ತಾರೆ. ಸ್ಯಾಂಡಲ್, ರೋಸ್, ಜಾಸ್ಮಿನ್ ಎಂದು ಹಲವು ಪರಿಮಳದ ಪೌಡರ್‌ಗಳು ಲಭ್ಯವಿರುವ ಕಾರಣ ಎಲ್ಲರಿಗೂ ಇದು ಪ್ರಿಯವಾಗುತ್ತದೆ. ಹೀಗಾಗಿ ಅದೆಷ್ಟು ಹೊಸ ಹೊಸ ಮೇಕಪ್ ಐಟಂಗಳು ಬಂದರೂ ಪೌಡರ್‌ಗೆ ಅದರದ್ದೇ ಆದ ಮಹತ್ವವಿದೆ.
ಟಾಲ್ಕಮ್ ಪೌಡರ್ ಎಂದರೇನು ?
ಟಾಲ್ಕ್ ಅನ್ನು ಭೂಮಿಯ ಮೇಲೆ ಲಭ್ಯವಿರುವ ಮೃದುವಾದ ಖನಿಜವೆಂದು ಪರಿಗಣಿಸಲಾಗಿದೆ. ಟಾಲ್ಕ್ ಅನ್ನು ಸಾಮಾನ್ಯವಾಗಿ ಕಾಸ್ಮೆಟಿಕ್ಸ್ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಟಾಲ್ಕ್ ಒಂದು ತೇವಾಂಶ ಹೀರಿಕೊಳ್ಳುವ ವಸ್ತುವಾಗಿದ್ದು, ಚರ್ಮ ದೀರ್ಘಕಾಲದ ವರೆಗೆ ನಯವಾಗಿರುವಂತೆ ನೋಡಿಕೊಳ್ಳುತ್ತದೆ. ಅದಲ್ಲದೆ, ಸಾಮಾನ್ಯವಾಗಿ ಜನರು ಬೇಸಿಗೆಯಲ್ಲಿ ಬೆವರುವಿಕೆಯನ್ನು ತಪ್ಪಿಸಲು ಟಾಲ್ಕಮ್ ಪೌಡರ್ ಅನ್ನು ಬಳಸುತ್ತಾರೆ. ಟಾಲ್ಕ್ ಪೌಡರ್ ಸಾಮಾನ್ಯವಾಗಿ ಎಲ್ಲರಿಗೂ ಉತ್ತಮ ಆಯ್ಕೆಯಾಗಿದೆ. ಚರ್ಮದ ಆರೈಕೆಗೆ ಇದು ಹೆಚ್ಚು ಅನುಕೂಲಕರ ಉತ್ಪನ್ನವಾಗಿದೆ.
Make UP tips : ನಿಮ್ಮ ಬಣ್ಣಕ್ಕೆ ತಕ್ಕಂತೆ ಫೌಂಡೇಶನ್ ಆಯ್ಕೆ ಮಾಡೋದು ಹೇಗೆ?
ಮಹಿಳೆಯರು ಮತ್ತು ಪುರುಷರು, ಮಕ್ಕಳು ಎಲ್ಲರೂ ಇದನ್ನು ಬಳಸಬಹುದು. ಟಾಲ್ಕಮ್ ಅನ್ನು ದಿನನಿತ್ಯದ ಜೀವನದಲ್ಲಿ ದದ್ದುಗಳನ್ನು ತಡೆಗಟ್ಟಲು ಬಳಸಲಾಗುತ್ತದೆ. ಪೌಡರ್ ಬಳಕ ಬೇಸಿಗೆಯ ಶಾಖದಿಂದ ಉಂಟಾಗುವ ಕಿರಿಕಿರಿಯನ್ನು ತಡೆಯುತ್ತದೆ. ಚರ್ಮ ಶುಷ್ಕವಾಗುವುದಕ್ಕೆ ಪರಿಹಾರವಾಗಿಯೂ ಟಾಲ್ಕಮ್ ಪೌಡರ್‌ನ್ನು ಬಳಸುತ್ತಾರೆ. ಆದರೆ, ನಿಮಗೆ ಗೊತ್ತಾ, ನೋಡಲು ಸಾದಾ ಸೀದಾ ಆಗಿರುವ ಟಾಲ್ಕಮ್ ಪೌಡರ್ ಸಹ ಚರ್ಮಕ್ಕೆ ಹಾನಿಯನ್ನುಂಟು ಮಾಡಬಹುದು.
ಟಾಲ್ಕಮ್ ಪೌಡರ್ (Talcum Powder) ನಲ್ಲಿರುವ ಡರ್ಮಟೈಟಿಸ್ ಅಂಶಗಳು ಚರ್ಮ (Skin)ಕ್ಕೆ ಕಿರಿಕಿರಿಯನ್ನು ಉಂಟುಮಾಡಬಹುದು. ಟಾಲ್ಕಮ್ ಪೌಡರ್ ಚರ್ಮದ ರಂಧ್ರಗಳನ್ನು ನಿರ್ಬಂಧಿಸುತ್ತದೆ. ಹೀಗಾಗಿ ಇದು ಮುಖದಲ್ಲಿ ಮೊಡವೆ (Pimples)ಗಳುಂಟಾಗಲು ಕಾರಣವಾಗುತ್ತದೆ ಅಲ್ಲದೆ ಟಾಲ್ಕಮ್ ಪೌಡರ್ ಬಳಕೆ ದೇಹದ ಉಷ್ಣತೆಯನ್ನು ಹೆಚ್ಚಿಸುವ ಮೂಲಕ ಬೆವರುವಿಕೆಯನ್ನು ದುರ್ಬಲಗೊಳಿಸುತ್ತದೆ.
ಕ್ಯಾನ್ಸರ್ ಮತ್ತು ಟಾಲ್ಕ್ ನಡುವಿನ ಲಿಂಕ್ ಏನು?
ಟಾಲ್ಕ್ ಸಿಲಿಕಾನ್, ಮೆಗ್ನೀಸಿಯಮ್ ಮತ್ತು ಆಮ್ಲಜನಕದಿಂದ ಮಾಡಲ್ಪಟ್ಟಿದೆ. ಇದು ಕಲ್ನಾರು ಎಂಬ ರಾಸಾಯನಿಕ ಅಂಶವನ್ನು ಸಹ ಹೊಂದಿದೆ, ಹೀಗಾಗಿ ಇದನ್ನು ಇನ್ಹೇಲ್ ಮಾಡಿದಾಗ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಅತ್ಯುತ್ತಮವಾದ ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ಟಾಲ್ಕಮ್ ಪೌಡರ್‌ನಂತಹ ವಸ್ತುಗಳ ಅಧಿಕ ಬಳಕೆ ಕ್ಯಾನ್ಸರ್‌ಗೆ ಗುರಿಯಾಗುವಂತೆ ಮಾಡುತ್ತದೆ.
Beauty Tips: ಮೇಕಪ್ ಮಾಡಿಕೊಳ್ಳದೆ ಸುಂದರವಾಗಿ ಕಾಣುವುದು ಹೇಗೆ..?
ಟಾಲ್ಕಮ್ ಪೌಡರ್ ಬಳಕೆಯಿಂದ ಹಲವು ಆರೋಗ್ಯ ಸಮಸ್ಯೆ
ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ ಟ್ಯಾಲ್ಕ್ ಸುರಕ್ಷತೆಯ ಬಗ್ಗೆ ಮಾಹಿತಿ ನೀಡುತ್ತದೆ. ಇದರ ಪ್ರಕಾರ, ಗಣಿಗಾರಿಕೆ ಮಾಡುವಾಗ ಭೂಮಿಯಲ್ಲಿ ಟಾಲ್ಕ್ ಮತ್ತು ಕಲ್ನಾರುಗಳನ್ನು ಕಾಣಬಹುದು. ಇದರಲ್ಲಿ ಕಲ್ನಾರ್, ಟಾಲ್ಕ್ ಅನ್ನು ಕಲುಷಿತಗೊಳಿಸಬಹುದು ಮತ್ತು ಅಲ್ಲಿಂದ ಸಮಸ್ಯೆ ಪ್ರಾರಂಭವಾಗುತ್ತದೆ ಎಂದು ತಿಳಿಸಲಾಗಿದೆ. ಟ್ಯಾಲ್ಕ್ ಅನ್ನು ಉಸಿರಾಡುವುದರಿಂದ ಕೆಮ್ಮು, ಕಣ್ಣಿನ ಕಿರಿಕಿರಿ ಮತ್ತು ಉಸಿರಾಟದ ತೊಂದರೆ ಸೇರಿದಂತೆ ಅನೇಕ ಆರೋಗ್ಯ (Health) ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕಣ್ಣಿನಲ್ಲಿ ಸುಡುವ ಸಂವೇದನೆ, ವಾಂತಿ, ಅತಿಸಾರದಂತಹ ಹೊಟ್ಟೆಯ ಸಮಸ್ಯೆಗಳು ಸಹ ಟಾಲ್ಕಮ್ ಪೌಡರ್ ಬಳಸುವುದರಿಂದ ಉಂಟಾಗಬಹುದು ಎಂದು ತಿಳಿದುಬಂದಿದೆ.
ಟಾಲ್ಕಮ್ ಪೌಡರಿನಲ್ಲಿರುವ ಟಾಲ್ಕ್ ಅಂಶ ಮೂಗಿನೊಳಗೆ ಹೋದರೆ ಇದು ಶ್ವಾಸಕೋಶಕ್ಕೆ ಹೋಗಿ ಅಲರ್ಜಿಗೆ (Allergies) ಕಾರಣವಾಗಬಹುದು. ಇದರಿಂದ ಕಣ್ಣು, ಮೂಗು, ಗಂಟಲಿನಲ್ಲಿ ತುರಿಕೆ, ಸುಸ್ತು, ಚರ್ಮದಲ್ಲಿ ಉರಿ, ಗುಳ್ಳೆಗಳು ಸಹ ಕಾಣಿಸಿಕೊಳ್ಳುತ್ತದೆ. ಮಹಿಳೆಯರು ಅತಿಯಾಗಿ ಟಾಲ್ಕಮ್ ಪೌಡರ್ ಬಳಸುವುದರಿಂದ ಗರ್ಭಕೋಶದ ಕ್ಯಾನ್ಸರ್‌ನ ಅಪಾಯ ಹೆಚ್ಚಾಗಿರುತ್ತದೆ.