Gold Investment: ಬರೀ ಚಿನ್ನ ಕೊಳ್ಳೋದಲ್ಲ, ಹೀಗೂ ಮಾಡಬಹುದು ಹೂಡಿಕೆ

ಬಂಗಾರದ ಖರೀದಿ ಮಾಡುವ ವಿಷ್ಯ ಬಂದಾಗ ಮಹಿಳೆಯರು ಆಸಕ್ತಿ ತೋರಿಸುತ್ತಾರೆ. ಅದೇ ಹೂಡಿಕೆ ಎಂದಾಗ ಅದು ನಮಗೆ ತಿಳಿಯೋದಿಲ್ಲವೆಂದೋ ಅದಕ್ಕೆ ಹೆಚ್ಚು ಹಣಬೇಕು ಎಂದೋ ನಿರ್ಲಕ್ಷ್ಯ ಮಾಡ್ತಾರೆ. ಆದ್ರೆ ಹಣ ಗಳಿಸುವ ಜೊತೆಗೆ ಚಿನ್ನದಲ್ಲಿ ಹೂಡಿಕೆ ಮಾಡೋದು ಕೂಡ ಮಹಿಳೆಯರಿಗೆ ಮುಖ್ಯ. 
 

Unique Investment Option For New Generation Women

ಭಾರತದಲ್ಲಿ ಬಂಗಾರ ಪ್ರೇಮಿಗಳ ಸಂಖ್ಯೆ ಹೆಚ್ಚಿದೆ. ಭಾರತ ಎರಡನೇ ಅತಿದೊಡ್ಡ ಚಿನ್ನದ ಗ್ರಾಹಕರನ್ನು ಹೊಂದಿರುವ ದೇಶವಾಗಿದೆ. ಇಲ್ಲಿನ ಮಹಿಳೆಯರು ಚಿನ್ನ ಖರೀದಿಗೆ ವಿಶೇಷ ಆಸಕ್ತಿ ತೋರುತ್ತಾರೆ. ಚಿನ್ನದ ಆಭರಣವನ್ನು ಖರೀದಿಸಲು ಮಹಿಳೆಯರು ಮುಂದಾಗ್ತಾರೆ. ಸಣ್ಣ ಮಟ್ಟದಲ್ಲಿಯೇ ಹಣ ಉಳಿತಾಯ ಮಾಡಿ ಅಥವಾ ಬಂದ ಸಂಬಳದಲ್ಲಿ ಒಂದು ಭಾಗವನ್ನು ಕೂಡಿಟ್ಟು ಅದ್ರಲ್ಲಿ ಬಂಗಾರದ ಆಭರಣ ಖರೀದಿ ಮಾಡುವ ಎಷ್ಟೋ ಮಹಿಳೆಯರನ್ನು ನೀವು ನೋಡ್ಬಹುದು. ಆಪತ್ಕಾಲದಲ್ಲಿ ಬಂಗಾರದ ಆಭರಣ ನೆರವಿಗೆ ಬರುತ್ತದೆ ಎಂಬುದು ಒಂದು ಕಾರಣವಾದ್ರೆ ಇನ್ನೊಂದು ಇದು ಐಷಾರಾಮಿ ಸೂಚಕವಾಗಿದೆ. 

ಇನ್ನು ಕೆಲವರು ಬಂಗಾರ (Gold) ದ ನಾಣ್ಯಗಳನ್ನು ಹೆಚ್ಚಿನ ಮಟ್ಟದಲ್ಲಿ ಖರೀದಿ ಮಾಡ್ತಾರೆ. ಹಣ ಉಳಿತಾಯ (Saving) ಮಾಡಲು ಬಂಗಾರದ ನಾಣ್ಯ ಖರೀದಿ ಮಾಡಿಟ್ಟುಕೊಳ್ತಾರೆ. ಇದರ ನಿರ್ವಹಣೆ, ರಕ್ಷಣೆ, ರಿಡೀಮ್ ಎಲ್ಲ ವಿಷ್ಯದಲ್ಲೂ ಇದು ದುಬಾರಿ ಎನ್ನಬಹುದು. ನೀವು ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸಿದ್ದರೆ ಹಣಕ್ಕಿಂತ ಇಟಿಎಫ್‌ (ETF) ಗಳ ಮೂಲಕ ಹೂಡಿಕೆ ಮಾಡೋದು ಒಳ್ಳೆಯ ಮಾರ್ಗವಾಗಿದೆ. ನಾವಿಂದು ಇಟಿಎಫ್ ಗೆ ಸಂಬಂಧಿಸಿದಂತೆ ಕೆಲ ಮಾಹಿತಿಯನ್ನು ನಿಮಗೆ ನೀಡ್ತೇವೆ.

ಉದ್ಯೋಗ ತೊರೆದು ಬರ್ಗರ್ ಕಂಪನಿ ಪ್ರಾರಂಭಿಸಿದ ಎಂಬಿಎ ಪದವೀಧರೆ;ಐದೇ ವರ್ಷದಲ್ಲಿ 40 ಕೋಟಿ ರೂ. ವಹಿವಾಟು

ಭೌತಿಕ ರೂಪದ ಚಿನ್ನ (Physical Gold) : ಭೌತಿಕ ರೂಪದಲ್ಲಿ ಚಿನ್ನ ಖರೀದಿ ಮಾಡಿದ್ರೆ ನಿರ್ವಹಣೆ, ವಿಮೆ (Insurance), ಸಂಸ್ಕರಣಾ ಶುಲ್ಕ, ವಹಿವಾಟು ಶುಲ್ಕ, ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದ ಅನೇಕ ವೆಚ್ಚಗಳನ್ನು ಪಾವತಿಸಬೇಕಾಗುತ್ತದೆ. ತಮ್ಮ ಉಳಿತಾಯದ ಸಣ್ಣ ಮಟ್ಟವನ್ನು ಭೌತಿಕ ಚಿನ್ನ ಖರೀದಿಗೆ ಬಳಸುವವರಿಗೆ ಈ ವೆಚ್ಚ ಹೆಚ್ಚೆನ್ನಿಸುವುದಿಲ್ಲ. ಆದ್ರೆ ದೊಡ್ಡ ಮಟ್ಟದಲ್ಲಿ ಖರೀದಿಗೆ ಮುಂದಾಗುವವರಿಗೆ ಈ ಎಲ್ಲ ವೆಚ್ಚ ಪ್ರತ್ಯೇಕ ಹೊಣೆಯಾಗುತ್ತದೆ.

ಭೌತಿಕವಲ್ಲದ ಚಿನ್ನದ ಮೇಲೆ ಹೂಡಿಕೆ : ಭೌತಿಕವಲ್ಲದ ಚಿನ್ನ ಎಂದಾಗ ನಮ್ಮ ಮುಂದೆ ಕಡಿಮೆ ಆಯ್ಕೆಗಳಿವೆ. ಇತ್ತೀಚಿನ ದಿನಗಳಲ್ಲಿ ಭಾರತದ ಹೂಡಿಕೆದಾರರಲ್ಲಿ ಚಿನ್ನದ ಇಟಿಎಫ್‌ಗಳು ಜನಪ್ರಿಯ ಆಯ್ಕೆಯಾಗಿ ಬದಲಾಗ್ತಿವೆ. ಇಟಿಎಫ್ ಗಳನ್ನು ಪ್ರಮುಖ ಸ್ಟಾಕ್ ಎಕ್ಸ್ಚೇಂಜ್ ಗಳಲ್ಲಿ ವ್ಯಾಪಾರ ಮಾಡಲಾಗುತ್ತದೆ. ಚಿನ್ನದ ಇಟಿಎಫ್‌ಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಇರುತ್ತವೆ. ಅಲ್ಲಿ ಒಂದು ಘಟಕವು ಒಂದು ಗ್ರಾಂ ಚಿನ್ನಕ್ಕೆ ಸಮಾನವಾಗಿರುತ್ತದೆ. ಚಿನ್ನವು ಶೇಕಡಾ 99.5ರಷ್ಟು ಶುದ್ಧವಾಗಿರುತ್ತದೆ. ಇಟಿಎಫ್ ಗಳನ್ನು ಯಾವಾಗಬೇಕಾದ್ರೂ ಮಾರಬಹುದು, ಖರೀದಿ ಮಾಡಬಹುದು :  ಇಲ್ಲಿ ನೀವು ಚಿನ್ನವನ್ನು ಕೈನಲ್ಲಿ ಹಿಡಿದುಕೊಂಡು ಅದನ್ನು ಮಾರಾಟ ಮಾಡಬೇಕಾಗಿಲ್ಲ. ಅದರಲ್ಲಿ ಶೇಖರಣಾ ವೆಚ್ಚವಿರೋದಿಲ್ಲ. ಭದ್ರತೆಯ ಅಪಾಯವೂ ಇರೋದಿಲ್ಲ. ಇಟಿಎಫ್‌ಗಳನ್ನು ದಿನದ ವಹಿವಾಟಿನ ಸಮಯದ ಯಾವುದೇ ಸಮಯದಲ್ಲಿ ಎಕ್ಸ್ ಚೇಂಜ್‌ಗಳಲ್ಲಿ ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು.  

ಯೂಟ್ಯೂಬ್ ಮೂಲಕವೇ ಕೋಟ್ಯಧೀಶೆಯಾದ ಪ್ರಾಜಕ್ತಾ ಕೋಲಿ; ಈಕೆ ತಿಂಗಳ ಆದಾಯ ಕೇಳಿದ್ರೆ ಶಾಕ್ ಆಗ್ತೀರಾ!

ಮಹಿಳೆಯರಿಗೆ ಹೂಡಿಕೆ ಆಯ್ಕೆ : ಚಿನ್ನವು ಯಾವಾಗ್ಲೂ ನಮ್ಮ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುತ್ತದೆ. ಬಂಗಾರದ ಆಭರಣ ಖರೀದಿ ಮಾಡಿ, ಅದಕ್ಕೆ ಹೆಚ್ಚಿನ ವೆಚ್ಛ ಭರಿಸುವ ಬದಲು ಮಹಿಳೆಯರು ಇಟಿಎಫ್ ಗಳಲ್ಲಿ ಹೂಡಿಕೆ ಮಾಡಬೇಕು. ಕಷ್ಟಪಟ್ಟು ಹಣ ಗಳಿಸಿ, ಸ್ವಾವಲಂಭಿಯಾಗ್ತಿರುವ ಮಹಿಳೆಯರಿಗೆ ಹೂಡಿಕೆ, ಉಳಿತಾಯ ಕೂಡ ಬಹಳ ಮುಖ್ಯ. ಬಂಗಾರದ ಹೂಡಿಕೆ ಮಾಡಲು ದೊಡ್ಡ ಮಟ್ಟದಲ್ಲಿ ಬಂಡವಾಳ ಅಗತ್ಯವೆಂದು ಅನೇಕರು ಭಾವಿಸಿದ್ದಾರೆ. ಆದ್ರೆ ಇದು ತಪ್ಪು. ಇಟಿಎಫ್ ಗಳಲ್ಲಿ ನೀವು ಕಡಿಮೆ ಬಂಡವಾಳದಲ್ಲಿಯೇ ಹೂಡಿಕೆ ಶುರು ಮಾಡಬಹುದು. ಕಷ್ಟವೆನಿಸಿದ ಸಂದರ್ಭದಲ್ಲಿ ಅದನ್ನು ಮಾರಾಟ ಮಾಡಬಹುದು. ಇಟಿಎಫ್ ನಲ್ಲಿ ಬಂಗಾರದ ಹೂಡಿಕೆ ಮಾಡಲು ನಿಮ್ಮ ಬಳಿ 1000 ರೂಪಾಯಿ ಇದ್ರೆ ಸಾಕು. ಯಾವುದೇ ತೊಂದರೆಗಳಿಲ್ಲದೆ ಮತ್ತು ದೊಡ್ಡ ಹಣವನ್ನು ಖರ್ಚು ಮಾಡದೆ ಗೋಲ್ಡ್ ಇಟಿಎಫ್ ಮೂಲಕ ಹೂಡಿಕೆ ಮಾಡಬಹುದು. ಈ ಹೂಡಿಕೆಯು ಸಂಪೂರ್ಣವಾಗಿ ಸುರಕ್ಷಿತ, ಸುಲಭವಾಗಿದೆ. 

Latest Videos
Follow Us:
Download App:
  • android
  • ios