Asianet Suvarna News Asianet Suvarna News

ಉದ್ಯೋಗ ತೊರೆದು ಬರ್ಗರ್ ಕಂಪನಿ ಪ್ರಾರಂಭಿಸಿದ ಎಂಬಿಎ ಪದವೀಧರೆ;ಐದೇ ವರ್ಷದಲ್ಲಿ 40 ಕೋಟಿ ರೂ. ವಹಿವಾಟು

ಕನಸು ಕಂಡರೆ ಸಾಲದು ಅದನ್ನು ಬೆನ್ನಟ್ಟಿ ಹೋದರಷ್ಟೇ ನನಸು ಮಾಡಿಕೊಳ್ಳಲು ಸಾಧ್ಯ. ಈ ರೀತಿ ಕನಸಿನ ಬೆನ್ನಟ್ಟಿ ಹೋಗಿ ಯಶಸ್ಸು ಸಾಧಿಸಿದವರು ನೀಲಂ ಸಿಂಗ್. ಇಂದು ದೇಶದ ಕಿರಿಯ ಯಶಸ್ವಿ ಮಹಿಳಾ ಉದ್ಯಮಿಗಳಲ್ಲಿಇವರೂ ಒಬ್ಬರಾಗಿದ್ದಾರೆ. ಇವರು ಸ್ಥಾಪಿಸಿದ ದಿ ಬರ್ಗರ್ ಕಂಪನಿ ಕೇವಲ ಐದು ವರ್ಷಗಳಲ್ಲಿ ದೇಶಾದ್ಯಂತ 100 ಮಳಿಗೆಗಳನ್ನು ಹೊಂದಿದ್ದು, 40 ಕೋಟಿ ರೂ. ವಹಿವಾಟು ನಡೆಸುತ್ತಿದೆ. 

Meet Neelam Singh Gurgaon woman who created burger company with Rs 40 crore turnover with personal savings anu
Author
First Published Mar 16, 2023, 11:42 AM IST

Business Desk:ಸ್ವಂತ ಉದ್ಯಮ ಪ್ರಾರಂಭಿಸುವ ಕನಸು ಕಾಣುವವರ ಸಂಖ್ಯೆ ಇಂದು ಹೆಚ್ಚಿದೆ.  ಕೈತುಂಬಾ ಸಂಬಳ ನೀಡುವ ಉದ್ಯೋಗ ತೊರೆದು ತಮ್ಮದೇ ಸ್ವಂತ ಉದ್ಯಮ ಪ್ರಾರಂಭಿಸಿ ಯಶಸ್ಸು ಕಂಡವರ ಸಂಖ್ಯೆ ಕೂಡ ಕಡಿಮೆಯೇನಿಲ್ಲ. ಈ ರೀತಿ ಸ್ವಂತ ಉದ್ಯಮದ ಕನಸನ್ನು ಬೆನ್ನತ್ತಿ ಯಶಸ್ಸು ಸಾಧಿಸಿದವರಲ್ಲಿ ನೀಲಂ ಸಿಂಗ್ ಕೂಡ ಒಬ್ಬರು. ಎಂಬಿಎ ಪದವೀಧರೆಯಾಗಿರುವ ನೀಲಂ ಜೆನ್ ಪ್ಯಾಕ್ಟ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಾರ್ಷಿಕ 5ಲಕ್ಷ ರೂ. ಪ್ಯಾಕೇಜ್ ಹೊಂದಿದ್ದರು. ಆದರೆ, ಯಾರದ್ದೋ ಕೈಕೆಳಗೆ ಕೆಲಸ ಮಾಡೋದಕ್ಕಿಂತ ಸ್ವಂತ ಉದ್ಯಮ ಪ್ರಾರಂಭಿಸಬೇಕು ಎಂಬ ನಿಲುವು ಹೊಂದಿದ್ದ ನೀಲಂಗೆ ತ್ವರಿತ ಸೇವೆಯ ರೆಸ್ಟೋರೆಂಟ್ (ಕ್ಯುಎಸ್ ಆರ್) ಪ್ರಾರಂಭಿಸುವ ಯೋಚನೆ ಮೂಡಿತ್ತು. ಈ ಯೋಚನೆ ಎಂಬಿಎ ಮಾಡುವಾಗಲೇ ನೀಲಂ ಮನಸ್ಸಿನಲ್ಲಿ ಮೂಡಿತ್ತು. ಈ ಕನಸು ನನಸು ಮಾಡಿಕೊಳ್ಳಲು ತ್ವರಿತ ಸೇವೆಯ ರೆಸ್ಟೋರೆಂಟ್ (ಕ್ಯುಎಸ್ ಆರ್) ಸಂಸ್ಥೆಯೊಂದನ್ನು ಸೇರಿದ ನೀಲಂ ಅಲ್ಲಿ 3 ವರ್ಷಗಳ ಕಾಲ ಕಾರ್ಯನಿರ್ವಹಿಸಿದರು. ಆ ಬಳಿಕ ಗುರ್ಗಾಂವ್ ನಲ್ಲಿ 'ದಿ ಬರ್ಗರ್ ಕಂಪನಿ' ಸ್ಥಾಪಿಸಿ, ಕೆಲವೇ ವರ್ಷಗಳಲ್ಲಿ ದೇಶದ ಕಿರಿಯ ಯಶಸ್ವಿ ಮಹಿಳಾ ಉದ್ಯಮಿಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. 

ಗುರ್ಗಾಂವ್ ನಲ್ಲಿ 2018ರಲ್ಲಿ 'ದಿ ಬರ್ಗರ್ ಕಂಪನಿಯ' ಮೊದಲ ಔಟ್ ಲೆಟ್  ಪ್ರಾರಂಭಿಸಿದ ಸಮಯದಲ್ಲಿ ನೀಲಂ ಸಿಂಗ್ ಅವರ ವಯಸ್ಸು 29 ವರ್ಷ. ಐದು ವರ್ಷಗಳೊಳಗೆ ಕಂಪನಿಯ ಟರ್ನ್ ಒವರ್ 40 ಕೋಟಿ ರೂ. ಗೆ ಬೆಳೆದಿದೆ. ಇನ್ನು ಕಂಪನಿಯು ಪ್ರಸ್ತುತ ನವದೆಹಲಿ ಸೇರಿದಂತೆ ಏಳು ರಾಜ್ಯಗಳಲ್ಲಿ 100 ಔಟ್ ಲೆಟ್ ಗಳನ್ನು ಹೊಂದಿದೆ. 

ಯೂಟ್ಯೂಬ್ ಮೂಲಕವೇ ಕೋಟ್ಯಧೀಶೆಯಾದ ಪ್ರಾಜಕ್ತಾ ಕೋಲಿ; ಈಕೆ ತಿಂಗಳ ಆದಾಯ ಕೇಳಿದ್ರೆ ಶಾಕ್ ಆಗ್ತೀರಾ!

ಉತ್ತರ ಪ್ರದೇಶ ಆಗ್ರಾ ಮೂಲದವರಾದ ನೀಲಂ ಸಿಂಗ್ ತಂದೆ ಶಾಲೆ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದರು. ಹೈದರಾಬಾದ್ ICFAI ಸಂಸ್ಥೆಯಿಂದ ಎಂಬಿಎ ಪದವಿ ಪಡೆದಿರುವ ನೀಲಂ ಸಿಂಗ್ ಗೆ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಒಳ್ಳೆಯ ಆಹಾರ ಹಾಗೂ ನೆಮ್ಮದಿಯ ವಾತಾವರಣ ಒದಗಿಸುವ ಆಸೆಯಿತ್ತು. ಇದಕ್ಕೆ ತಕ್ಕಂತೆ ಆಕೆ 'ದಿ ಬರ್ಗರ್ ಕಂಪನಿ' ಸ್ಥಾಪಿಸಿದರು. 

ಶಾಲಾ ದಿನಗಳಲ್ಲೇ ಸ್ವಂತ ಉದ್ಯಮ ಸ್ಥಾಪಿಸುವ ಕನಸು ನೀಲಂ ಅವರಲ್ಲಿತ್ತು. ವಿದ್ಯಾರ್ಥಿಯಾಗಿರುವಾಗಲೇ ಮೂರು ದಿನಗಳ ಕ್ಯಾಂಪಸ್ ಫೆಸ್ಟಿವಲ್ ನಲ್ಲಿ ಅವರು ತಿನಿಸುಗಳ ಮಾರಾಟ ಮಳಿಗೆ ತೆರೆದಿದ್ದರು. ಅಷ್ಟೇ ಅಲ್ಲ, ಅದರಿಂದ 1ಲಕ್ಷ ರೂ. ಲಾಭ ಕೂಡ ಗಳಿಸಿದ್ದರು. ಈ ಎಲ್ಲ ಅನುಭವಗಳು ಸ್ವಂತ ಆಹಾರ ಉದ್ಯಮ ಪ್ರಾರಂಭಿಸುವ ನೀಲಂ ಕನಸಿಗೆ ಬೆಂಬಲ ನೀಡಿದ್ದವು.

ನೀಲಂ ಅವರ ಪತ್ನಿ ನಿತೇಶ್ ಧನ್ ಖರ್ ಕಾರ್ಪೋರೇಟ್ ಎಕ್ಸಿಕ್ಯುಟಿವ್ ಆಗಿ ಉತ್ತಮ ಉದ್ಯೋಗದಲ್ಲಿದ್ದಾರೆ.ನೀಲಂ ಉದ್ಯೋಗ ತೊರೆದು ಸ್ವಂತ ಉದ್ಯಮ ಪ್ರಾರಂಭಿಸುವಾಗ ಹೆತ್ತವರಿಂದಲೂ ಕೂಡ ಹಣ ಪಡೆಯದೆ ತನ್ನ ಸ್ವಂತ ಉಳಿತಾಯದ ಹಣವನ್ನು ಹೂಡಿಕೆ ಮಾಡಿದ್ದರು. ಬರೀ ಎಂಟು ತಿಂಗಳ ಅವಧಿಯಲ್ಲಿ ಆಕೆ 5ಲಕ್ಷ ರೂ. ಉಳಿತಾಯ ಮಾಡಿದ್ದರು. ಇವರ ಮೊದಲ ಔಟ್ ಲೆಟ್ ಗುರ್ಗಾಂವ್ ಗ್ಲೋಬಲ್ ಫೋಯೆರ್ ಮಾಲ್ ನಲ್ಲಿತ್ತು. ಈ ಸಮಯದಲ್ಲಿ ನಿತೇಶ್ ಸಾಕಷ್ಟು ಸಮಯ ಮಾಡಿದ್ದರು. ಆದರೂ ಕೆಲವೊಂದು ಕೆಲಸಗಳನ್ನು ನೀಲಂ ಏಕಾಂಗಿಯಾಗಿ ನಿರ್ವಹಿಸಿದ್ದರು. ಫ್ಲೋರಿಂಗ್, ಲೈಟ್ಸ್ ನಿಂದ ಹಿಡಿದು ಒಳಾಂಗಣ ವಿನ್ಯಾಸದ ತನಕ ಎಲ್ಲವನ್ನೂ ಅವರೇ ನಿರ್ವಹಿಸಿದ್ದರು.

Bengaluru: ಸಮೋಸಾ ಮಾರಿ ದಿನಕ್ಕೆ 12ಲಕ್ಷ ರೂ. ಗಳಿಸುತ್ತಿದ್ದಾರೆ ಈ ಮಹಿಳಾ ಉದ್ಯಮಿ!

ರೆಸ್ಟೋರೆಂಟ್ ಅನ್ನು ಕಡಿಮೆ ಸಿಬ್ಬಂದಿಯೊಂದಿಗೆ ನೀಲಂ ನಿರ್ವಹಣೆ ಮಾಡಿದರು. ರೆಸ್ಟೋರೆಂಟ್ ನ ಯಾವುದೇ ಕೆಲಸವನ್ನು ಮಾಡಲು ನೀಲಂ ಹಿಂಜರಿಯುತ್ತಿರಲಿಲ್ಲ. ಕೋವಿಡ್ -19 ಮೊದಲ ಅಲಯ ಬಳಿಕ ಅಂದರೆ 2020ರಲ್ಲಿ ನೀಲಂ ಫ್ರಾಂಚೈಸಿ ಮಾಡೆಲ್ ಪರಿಚಯಿಸಿದರು. ಈ ಸಮಯದಲ್ಲಿ ಬಹುತೇಕ ಜನರು ಸ್ವಂತ ಉದ್ಯಮ ನಡೆಸಲು ಬಯಸಿದ್ದರು. ಹೀಗಾಗಿ ಇವರ ಕಂಪನಿಯ ಫ್ರಾಂಚೈಸಿಗೆ ಬೇಡಿಕೆ ಹೆಚ್ಚಿತು.  ಪ್ರಸ್ತುತ ದಿ ಬರ್ಗರ್ ಕಂಪನಿ 100 ಮಳಿಗೆಗಳನ್ನು ಹೊಂದಿದ್ದು, ಅದರಲ್ಲಿ ಒಂದನ್ನು ಮಾತ್ರ ನೀಲಂ ಸ್ವತಃ ನಿರ್ವಹಣೆ ಮಾಡುತ್ತಿದ್ದಾರೆ. 20 ಜನರ ಸಣ್ಣ ಕಾರ್ಪೋರೇಟ್ ತಂಡವನ್ನು ಅವರು ಹೊಂದಿದ್ದಾರೆ. ದಿ ಬರ್ಗರ್ ಕಂಪನಿಯಲ್ಲಿ ಒಂದು ಬರ್ಗರ್ ಬೆಲೆ 39ರೂ.ನಿಂದ 239ರೂ. ನಡುವೆ ಇದೆ. 

Follow Us:
Download App:
  • android
  • ios