Asianet Suvarna News Asianet Suvarna News

ಟ್ರ್ಯಾಕ್ ಮೇಲೆ ಓಡಿದ 103 ವರ್ಷದ ಅಜ್ಜಿ, ಯುವಕರನ್ನೂ ನಾಚಿ ನೀರಾಗುವಂತೆ ಮಾಡಿದ ವೃದ್ಧೆ!

ಫಿಟ್ನೆಸ್ ಈಗ ಬಹಳ ಮುಖ್ಯ. ನಾವು ಫಿಟ್ ಆಗಿರ್ಬೇಕೆಂದ್ರೆ ನಮ್ಮ ಜೀವನಶೈಲಿಯಲ್ಲಿ ಬದಲಾವಣೆ ತರಬೇಕು. ಆಗ ನಮ್ಮ ವಯಸ್ಸು ಬರೀ ಲೆಕ್ಕಕ್ಕೆ ಮಾತ್ರ ಸೀಮಿತವಾಗುತ್ತದೆ. ಈ ಅಜ್ಜಿ ಫಿಟ್ನೆಸ್ ಕಾಯ್ದುಕೊಳ್ಳೋದ್ರಲ್ಲಿ ಯಶಸ್ವಿಯಾಗಿದ್ದು ಎಲ್ಲರ ಗಮನ ಸೆಳೆದಿದ್ದಾರೆ. 
 

Trending Hundred Three Year Old Elderly Woman Kalavati Devi Run On Track roo
Author
First Published Nov 10, 2023, 12:31 PM IST

ನಮ್ಮ ಆರೋಗ್ಯ ನಮ್ಮ ಕೈನಲ್ಲಿದೆ. ಈಗಿನ ಜೀವನಶೈಲಿ ಯುವಕರ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಕೆಲಸದ ಒತ್ತಡ, ವ್ಯಾಯಾಮವಿಲ್ಲದ ಜಡ ಜೀವನ ಹಾಗೂ ಫಾಸ್ಟ್ ಫುಡ್ ಸೇರಿ ಅನಾರೋಗ್ಯಕರ ಆಹಾರ ಸೇವನೆ, ದೇಹದಿಂದ ಬೆವರು ಹೊರಗೆ ಹೋಗದ ಕಾರಣ ನಾನಾ ರೋಗಗಳು ಯುವಕರನ್ನು ಮುತ್ತಿಕೊಳ್ತಿವೆ. ತಮ್ಮ ನಲವತ್ತನೇ ವಯಸ್ಸಿನಲ್ಲೇ ಜನರು ವೃದ್ಧರಂತೆ ವರ್ತಿಸಲು ಶುರು ಮಾಡ್ತಿದ್ದಾರೆ. ಕಾಲು ನೋವು, ಸೊಂಟ ನೋಟು, ಶುಗರ್, ಬಿಪಿ ಹೀಗೆ ಒಂದಲ್ಲ ಒಂದು ಸಮಸ್ಯೆ ಅವರನ್ನು ಕಾಡ್ತಿದೆ. ಆದ್ರೆ ಹಿಂದಿನ ಕಾಲದ ಜನರು ಈಗಿನಂತಿರಲಿಲ್ಲ. ಅವರ ಜೀವನಶೈಲಿ ಭಿನ್ನವಾಗಿತ್ತು. ಅದೇ ಅವರನ್ನು ಈಗ್ಲೂ ಫಿಟ್ ಆಗಿರಿಸಿದೆ. ತಮ್ಮ 90 ನೂರನೇ ವಯಸ್ಸಿನಲ್ಲೂ ಫಿಟ್ ಆಗಿರುವ, ಹೊಲಕ್ಕೆ ಕೆಲಸಕ್ಕೆ ಹೋಗುವ ಅನೇಕರನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ನೋಡ್ತಿದ್ದೇವೆ. ಕೆಲವರು ತಮ್ಮ ಫಿಟ್ನೆಸ್ ಗೆ ಕಾರಣವೇನು ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ತಾರೆ. ಈಗ ಮತ್ತೊಂದು ಅಜ್ಜಿಯ ವಿಡಿಯೋ ವೈರಲ್ ಆಗಿದೆ. ಆ ಅಜ್ಜಿ ವಯಸ್ಸು ಕೇಳಿದ್ರೆ ನೀವು ದಂಗಾಗ್ತೀರಾ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗಿರುವ ಅಜ್ಜಿ ವಯಸ್ಸು ೮೦ -೯೦ ಅಲ್ಲ. 103 ವರ್ಷ. ಅಜ್ಜಿ ವಾರಣಾಸಿಯ ಪರಮಾನಂದಪುರದ ನಿವಾಸಿ. ಹೆಸರು ಕಲಾವತಿ (Kalavati) ದೇವಿ. ಅವರ ಫಿಟ್ನೆಸ್ (Fitness) ಎಲ್ಲರ ಹುಬ್ಬೇರಿಸಿದೆ.  

ನಡು ವಯಸ್ಸೆಂದರೆ ತಳಮಳ ಬೇಡ, ಬದುಕನ್ನ ಹೊಸದಾಗಿ ನೋಡೋದ ಕಲೀರಿ

ಇನ್ನೂ ಮೂವತ್ತು ವರ್ಷ ವಯಸ್ಸಾಗಿರುವವರೇ ಟ್ರ್ಯಾಕ್ (Track) ಮೇಲೆ ಓಡಲು ಹಿಂದೆ ಮುಂದೆ ನೋಡ್ತಾರೆ. ಆದ್ರೆ ಈ 103ರ ಹರೆಯದ ಅಜ್ಜಿ ಓಟದ ಸ್ಪರ್ಧೆಯಲ್ಲಿ ಟ್ರ್ಯಾಕ್ ಮೇಲೆ ಓಡುವ ಮೂಲಕ ಯುವಕರಿಗೆ ಫಿಟ್ನೆಸ್ ಪಾಠ ಹೇಳಿದ್ದಾರೆ. ಫಿಟ್ನೆಸ್ ಎಷ್ಟು ಮುಖ್ಯ ಎಂಬ ಸಂದೇಶ ನೀಡಿದ್ದಾರೆ. 

ಕಲಾವತಿ ಫಿಟ್ನೆಸ್ ಗೆ ಇದು ಕಾರಣ : ಅಜ್ಜಿ ಕಲಾವತಿ ದೇವಿಗೆ ಸ್ಪರ್ಧೆಯ ಪಾಲ್ಗೊಳ್ಳುವುದು ಬಹಳ ಖುಷಿಒಯ ವಿಷ್ಯ. ಸ್ಪರ್ಧೆ ಆರಂಭಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ್ದ ಅಜ್ಜಿ, ತುಂಬಾ ಉತ್ಸುಕನಾಗಿದ್ದೇನೆ ಎಂದಿದ್ದರು. ಸಮತೋಲಿತ ದಿನಚರಿ ಮತ್ತು ಆಹಾರ ಪದ್ಧತಿ ಅವರ ಈ ಆರೋಗ್ಯಕ್ಕೆ ಮುಖ್ಯ ಕಾರಣ. ಸರಳ ಜೀವನ, ಮಿತವಾದ ಆಹಾರ ಮತ್ತು ಪ್ರತಿದಿನ ಬೆಳಿಗ್ಗೆ 5 ಗಂಟೆಗೆ  ಎದ್ದು ವಾಕಿಂಗ್ ಮಾಡುವುದು ಅವರ ದಿನಚರಿಯ ಪ್ರಮುಖ ಭಾಗವಾಗಿದೆ. ಇದೇ ಅವರನ್ನು ಇಷ್ಟು ಫಿಟ್ ಆಗಿಸಿದೆ.  ಕಾಶಿ ಎಂಪಿ ಕ್ರೀಡಾ ಸ್ಪರ್ಧೆಯ 100 ಮೀಟರ್ ಓಟ ಸ್ಪರ್ಧೆಗೆ ಅಜ್ಜಿಯೇ ತಮ್ಮ ಹೆಸರು ನೋಂದಾಯಿಸಿದ್ದರು ಎಂಬುದು ವಿಶೇಷ. 

ಅಜ್ಜಿ ಕಲಾವತಿ ದೇವಿ ಬಾಲ್ಯದಿಂದಲೂ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಕಲಾವತಿ ದೇವಿ ಅವರಿಗೆ ಬಾಲ್ಯದಲ್ಲಿಯೇ  ವಿವಾಹವಾಗಿತ್ತು. ಆದ್ರೆ ಪತಿ ಜೊತೆ ದೀರ್ಘ ಕಾಲ ಜೀವನ ನಡೆಸಲು ಸಾಧ್ಯವಾಗಲಿಲ್ಲ. ಮದುವೆಯಾದ ಕೆಲ ವರ್ಷಗಳಲ್ಲೇ ಪತಿ ಸಾವನ್ನಪ್ಪಿದ್ದರು. ನಂತ್ರ ಕಲಾವತಿ ದೇವಿ ತಮ್ಮ ತಂದೆಯ ಮನೆಗೆ ವಾಪಸ್ ಆಗಿದ್ದರು. ಅಲ್ಲಿಂದ ಇಲ್ಲಿಯವರೆಗೂ ತಂದೆ ಮನೆಯಲ್ಲೇ ಅವರು ಜೀವನ ನಡೆಸುತ್ತಿದ್ದಾರೆ.  

16ನೇ ವಯಸ್ಸಿಗೆ ಮಗು, ಎರಡು ಮದುವೆ, ಮಗನ ಸಾವು..ಆದ್ರೂ 250 ಕೋಟಿ ಮೌಲ್ಯದ ಸಂಸ್ಥೆ ಕಟ್ಟಿದ ಶಹನಾಜ್ ಹುಸೇನ್

ಅಜ್ಜಿ ಟ್ರ್ಯಾಕ್ ನಲ್ಲಿ ಓಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣ ಬಳಕೆದಾರರು ಅಜ್ಜಿಗೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. ಫಿಟ್ನೆಸ್ ಗೆ ಅಜ್ಜಿ ಉತ್ತಮ ನಿದರ್ಶನ ಎನ್ನುತ್ತಿದ್ದಾರೆ. ಈ ವಯಸ್ಸಿನಲ್ಲಿ ಇಂಥ ಫಿಟ್ನೆಸ್ ಅಧ್ಬುತ ಅಂತಾ ಒಬ್ಬರು ಕಮೆಂಟ್ ಮಾಡಿದ್ರೆ ಮತ್ತೊಬ್ಬರು ಈ ವಯಸ್ಸಿನಲ್ಲಿ ಹಾಸಿಗೆಯಿಂದ ಏಳೋದು ಕಷ್ಟ ಎಂದಿದ್ದಾರೆ. 
 

Follow Us:
Download App:
  • android
  • ios