Asianet Suvarna News Asianet Suvarna News

16ನೇ ವಯಸ್ಸಿಗೆ ಮಗು, ಎರಡು ಮದುವೆ, ಮಗನ ಸಾವು..ಆದ್ರೂ 250 ಕೋಟಿ ಮೌಲ್ಯದ ಸಂಸ್ಥೆ ಕಟ್ಟಿದ ಶಹನಾಜ್ ಹುಸೇನ್

ಶಹನಾಜ್ ಹುಸೇನ್ ಬ್ಯೂಟಿ ಪಾರ್ಲರ್, ಸೌಂದರ್ಯ ಉತ್ಪನ್ನಗಳು ದೇಶಾದ್ಯಂತ ಜನಪ್ರಿಯತೆ ಗಳಿಸಿವೆ. ಶಹನಾಜ್ ಹುಸೇನ್ ಅವರನ್ನು ಭಾರತದ ಮೊದಲ ಮಹಿಳಾ ಉದ್ಯಮಿ ಕೂಡ ಹೌದು. ಇವರ ನಿವ್ವಳ ಆದಾಯ  250 ಕೋಟಿ ರೂ.
 

Meet Shahnaz Husain Became A Mother At 16 Two Marriages Rapper Sons Suicide Rs 250 Cr Net Worth anu
Author
First Published Nov 9, 2023, 6:34 PM IST

Business Desk: ಮಹಿಳೆಯರಿಗೆ ಶಹನಾಜ್ ಹುಸೇನ್ ಸೌಂದರ್ಯವರ್ಧಕಗಳ ಬಗ್ಗೆ ತಿಳಿದೇ ಇರುತ್ತದೆ. ಬ್ಯೂಟಿ ಪಾರ್ಲರ್ ಗಳಲ್ಲಿ ಈ ಬ್ರ್ಯಾಂಡ್ ನ ಉತ್ಪನ್ನಗಳು ಇದ್ದೇ ಇರುತ್ತವೆ. ಆದರೆ, ಈ ಸಂಸ್ಥೆ ಸ್ಥಾಪನೆಗೊಂಡಿದ್ದು ಹೇಗೆ? ಅದರ ಹಿಂದಿರುವ ವ್ಯಕ್ತಿ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಶಹನಾಜ್ ಹುಸೇನ್ ಎಂಬ ಹೆಸರಿನ ಮಹಿಳೆಯೇ ಈ ಸಂಸ್ಥೆ ಸಂಸ್ಥಾಪಕಿ. ಈಕೆ ಭಾರತದ ಮೊಟ್ಟಮೊದಲ ಮಹಿಳಾ ಉದ್ಯಮಿ ಕೂಡ ಹೌದು. ಇಂದಿಗೂ ಕೂಡ ಮಹಿಳಾ ಉದ್ಯಮಿಗಳಿಗೆ ಈಕೆ ಸ್ಪೂರ್ತಿ. ಇಂದು ಶಹನಾಜ್ ಹುಸೇನ್ ಬ್ರ್ಯಾಂಡ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ನವದೆಹಲಿ ಮನೆಯ ಪುಟ್ಟ ಕೋಣೆಯಲ್ಲಿ ಬ್ಯೂಟಿ ಪಾರ್ಲರ್ ಮೂಲಕ ಉದ್ಯಮ ಪ್ರಾರಂಭಿಸಿದ ಶಹನಾಜ್ ಹುಸೇನ್ ಇಂದು 250 ಕೋಟಿ ರೂ. ನಿವ್ವಳ ಆದಾಯ ಹೊಂದಿದ್ದಾರೆ. ಭಾರತದ ಗಿಡಮೂಲಿಕೆ, ಆಯುರ್ವೇದದ ಮಹಿಮೆಯನ್ನು ಜಗತ್ತಿಗೆ ಸಾರಿದ ಕೀರ್ತಿ ಶಹನಾಜ್ ಹುಸೇನ್ ಅವರಿಗೆ ಸಲ್ಲುತ್ತದೆ. ಇಂದು ಶಹನಾಜ್ ಹುಸೇನ್ ಗ್ರೂಪ್ ಮೌಲ್ಯ 500 ಕೋಟಿ ರೂ.

ಪ್ರತಿಷ್ಟಿತ ಕೌಟುಂಬಿಕ ಹಿನ್ನೆಲೆ
ಶಹನಾಜ್ ಹುಸೇನ್ 1944ರ ನವೆಂಬರ್ 5ರಂದು ಜನಿಸಿದರು. ಆದರೆ, ಬಹುತೇಕರಿಗೆ ಶಹನಾಜ್ ಶ್ರೀಮಂತ ಹಾಗೂ ಪ್ರತಿಷ್ಟಿತ ಕುಟುಂಬಕ್ಕೆ ಸೇರಿದವರು ಎಂಬುದು ತಿಳಿದಿಲ್ಲ. ಶಹನಾಜ್ ತಂದೆ ನಸಿರ್ ಉಲ್ಲಾ ಬೇಗ್ ಅಲಹಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಇವರ ತಾಯಿ ತಂದೆ ಹೈದರಾಬಾದ್ ಸೇನೆಯಲ್ಲಿ ಕಮಾಂಡರ್ ಇನ್ ಚೀಫ್ ಆಗಿದ್ದರು. 

ಎಂಎಸ್ಸಿ ಪದವೀಧರೆಯಾದರೂ ತಂದೆ ಕಾಯಕ ಮುಂದುವರಿಸಿದ ಪುತ್ರಿ, ಎಮ್ಮೆ ಸಾಕಣೆಯಿಂದ ಇಂದು ಕೋಟಿಗಟ್ಟಲೆ ಗಳಿಕೆ!

14ನೇ ವಯಸ್ಸಿನಲ್ಲೇ ಮದುವೆ
ಶಹನಾಜ್ ಹುಸೇನ್ 14ನೇ ವಯಸ್ಸಿನಲ್ಲೇ ನ್ಯಾಯಮೂರ್ತಿ ನಾಸಿರ್ ಹುಸೇನ್ ಅವರನ್ನು ವಿವಾಹವಾದರು. ಇವರದ್ದು ಮನೆಯವರು ನೋಡಿ ಮಾಡಿದ ಮದುವೆಯಾಗಿತ್ತು. ನಾಸಿರ್ ಕುಟುಂಬ ಇವರ ಕುಟುಂಬಕ್ಕೆ ಆಪ್ತವಾಗಿದ್ದ ಹಿನ್ನೆಲೆಯಲ್ಲಿ ಮದುವೆ ಮಾಡಲಾಗಿತ್ತು. ಮದುವೆ ಬಳಿಕ ನಾಸಿರ್ ಅವರಿಗೆ ಇರಾನ್ ನಲ್ಲಿ ಪೋಸ್ಟಿಂಗ್ ಆಯಿತು. ಇಲ್ಲಿಂದಲೇ ಶಹನಾಜ್ ಆಯುರ್ವೇದದ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಲು ಪ್ರಾರಂಭಿಸಿದ್ದು. 

16ನೇ ವಯಸ್ಸಿನಲ್ಲಿ ಮದುವೆ
ಮದುವೆಯಾದ ಎರಡು ವರ್ಷಕ್ಕೆ ಶಹನಾಜ್ ಹುಸೇನ್ ತಾಯಿಯಾದರು. ಇವರಿಗೆ ಇಬ್ಬರು ಮಕ್ಕಳು ಹುಟ್ಟಿದರು. ತಾಯಿಯಾದ ಬಳಿಕವೇ ಶಹನಾಜ್ ಗೆ ಜೀವನದಲ್ಲಿ ತಾನೇನೂ ಸಾಧಿಸಿಲ್ಲ ಂಬ ಕೊರಗು ಕಾಡಲು ಪ್ರಾರಂಭಿಸಿತು. ಇದೇ ಸಮಯದಲ್ಲಿ ಆಕೆ ತನಗೆ ಆಸಕ್ತಿಯಿದ್ದ ಕಾಸ್ಮೆಟಿಕ್ಸ್ ಹಾಗೂ ಸೌಂದರ್ಯಕ್ಕೆ ಸಂಬಂಧಿಸಿ ಅಧ್ಯಯನ ನಡೆಸಲು ನಿರ್ಧರಿಸಿದರು. ಪ್ರಸಿದ್ಧ ಸಂಸ್ಥೆಗಳಲ್ಲಿ ಈ ಬಗ್ಗೆ ಅಧ್ಯಯನ ಕೂಡ ನಡೆಸಿದರು.

ಮನೆಯಲ್ಲೇ ಮೊದಲ ಪಾರ್ಲರ್ ಪ್ರಾರಂಭ
ಇರಾನ್ ನಿಂದ ದೆಹಲಿಗೆ ಹಿಂತಿರುಗಿದ ಬಳಿಕ ಶಹನಾಜ್ ಹುಸೇನ್ ಮನೆಯಲ್ಲೇ ಮೊದಲ ಪಾರ್ಲರ್ ಪ್ರಾರಂಭಿಸಿದರು. ಇವರು ಆಯುರ್ವೇದಿಕ್ ಹಾಗೂ ಗಿಡಮೂಲಿಕೆ ಉತ್ಪನ್ನಗಳನ್ನು ಮಾತ್ರ ಬಳಸುತ್ತಿದ್ದ ಕಾರಣ ದೊಡ್ಡ ಪ್ರಮಾಣದಲ್ಲಿ ಗ್ರಾಹಕರು ಬರಲು ಪ್ರಾರಂಭಿಸಿದರು. ಮುಂದೆ ದೇಶಾದ್ಯಂತ ಶಹನಾಜ್ ಹುಸೇನ್ ಬ್ಯೂಟಿ ಪಾರ್ಲರ್ ಗಳು ಜನ್ಮ ತಾಳಿದವು. ಇವರ ಸಂಸ್ಥೆಯಲ್ಲಿ ಸಿದ್ಧಗೊಂಡ ಸೌಂದರ್ಯವರ್ಧಕಗಳಿಗೆ ಬೇಡಿಕೆ ಹೆಚ್ಚಿತು. ಬಹುತೇಕ ಎಲ್ಲ ಪಾರ್ಲರ್ ಗಳು ಇವರ ಉತ್ಪನ್ನಗಳನ್ನು ಬಳಸಲು ಪ್ರಾರಂಭಿಸಿದವು.

ಭಾರತೀಯ ಬಿಲಿಯನೇರ್‌ನ ಸೊಸೆ, ಜರ್ಮನ್‌ನಲ್ಲಿ ದಿನಕ್ಕೆ ಕೋಟಿ ಕೋಟಿ ಗಳಿಸುವ ಬೃಹತ್ ಉದ್ಯಮಿ!

ಪತಿ ಮರಣ, ಮಗನ ಆತ್ಮಹತ್ಯೆ
ಈ ನಡುವೆ ಶಹನಾಜ್ ಬದುಕಿನಲ್ಲಿ ಆಘಾತದ ಮೇಲೆ ಆಘಾತ ಎದುರಾಯಿತು. 1999ರಲ್ಲಿ ಶಹನಾಜ್ ಪತಿ ಹೃದಯಾಘಾತದಿಂದ ಮರಣ ಹೊಂದಿದರು. ಇನ್ನು 2008ರಲ್ಲಿ ರ್ಯಾಪರ್ ಆಗಿದ್ದ ಶಹನಾಜ್ ಪುತ್ರ ಸಮೀರ್ ಹುಸೇನ್ ಆತ್ಮಹತ್ಯೆ ಮಾಡಿಕೊಂಡಿದ್ದ.

ಎರಡನೇ ಮದುವೆ
ಪತಿ ನಾಸಿರ್ ಹುಸೇನ್ ನಿಧನದ ಬಳಿಕ ಶಹನಾಜ್ ಇನ್ನೊಂದು ಮದುವೆಯಾದರು. ರಾಜ್ ಕುಮಾರ್ ಪುರಿ ಅಕ್ಕ್ ಅವರ ಜೊತೆಗೆ ಪ್ರೀತಿಯಲ್ಲಿ ಬಿದ್ದು, ಅವರನ್ನೇ ವಿವಾಹವಾದರು.

250 ಕೋಟಿ ರೂ. ನಿವ್ವಳ ಸಂಪತ್ತು
ಶಹನಾಜ್ ಹುಸೇನ್ ಅವರ ನಿವ್ವಳ ಸಂಪತ್ತು 250 ಕೋಟಿ ರೂ. ಇವರಿಗೆ ಭಾರತದ ಪ್ರತಿಷ್ಟಿತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಕೂಡ ಸಿಕ್ಕಿದೆ. 

Follow Us:
Download App:
  • android
  • ios