Asianet Suvarna News Asianet Suvarna News

ಹೆರಿಗೆ ನಂತರ ಸಡಿಲಗೊಂಡ ಯೋನಿ ಬಿಗಿಗೊಳಿಸಲು ಈ ವ್ಯಾಯಾಮ ಮಾಡಿ

ಹಲವು ಮಹಿಳೆ (Woman)ಯರ ಪಾಲಿಗೆ ಗರ್ಭಾವಸ್ಥೆ ಮತ್ತು ಹೆರಿಗೆಯ ಕಾರಣದಿಂದಾಗಿ ಯೋನಿ (Vagina) ಸಡಿಲಗೊಳ್ಳುವ ಸಮಸ್ಯೆ ಬಹುದೊಡ್ಡ ತೊಂದರೆಯಾಗಿ ಪರಿಣಮಿಸುತ್ತದೆ. ಇದರಿಂದ  ಸಂಗಾತಿ (Partner) ನಮ್ಮಿಂದ ದೂರವಾಗಬಹುದೆಂಬ ಭಯ ಕಾಡುತ್ತದೆ. ಹೀಗಾದಾಗ ಯಾವ್ಯಾವುದೋ ಟ್ಯಾಬ್ಲೆಟ್ಸ್ ತಿಂದು ಆರೋಗ್ಯ (Health) ಹದಗೆಡಿಸಿಕೊಳ್ಳಬೇಕಾಗಿಲ್ಲ. ಹಾಗಿದ್ರೆ ಯೋನಿಯನ್ನು ನೈಸರ್ಗಿಕ ರೀತಿಯಲ್ಲಿ ಬಿಗಿಗೊಳಿಸುವುದು ಹೇಗೆ ತಿಳ್ಕೊಳ್ಳೋಣ. 

To Tighten The Vagina After Delivery, Do These Five Exercises Vin
Author
Bengaluru, First Published Jun 25, 2022, 12:58 PM IST

ಮಹಿಳೆ(Woman)ಯರ ಜನನಾಂಗವನ್ನು ಯೋನಿ(Vagina) ಎಂದೂ ಕರೆಯುತ್ತಾರೆ.  ಯೋನಿಯು ಗರ್ಭಾಶಯ(Uterus)ವನ್ನು ಬಾಹ್ಯ ದೇಹಕ್ಕೆ ಸಂಪರ್ಕಿಸುತ್ತದೆ. ದೇಹದ ಉಳಿದ ಭಾಗಗಳನ್ನು ಕಾಪಾಡಿಕೊಳ್ಳುವುದು, ಸ್ವಚ್ಛವಾಗಿಟ್ಟುಕೊಳ್ಳುವುದು ಎಷ್ಟು ಮುಖ್ಯವೋ ಯೋನಿಯ ಆರೋಗ್ಯವನ್ನೂ ನೋಡಿಕೊಳ್ಳುವುದು ಅಷ್ಟೇ ಮುಖ್ಯ. ಮಹಿಳೆಯರು ಜನನಾಂಗದ ಅನೇಕ ಸಮಸ್ಯೆ (Problem)ಗಳನ್ನು ಎದುರಿಸುತ್ತಾರೆ. ತುರಿಕೆ, ಹಠಾತ್ ಸ್ರಾವ, ಬಿಳಿ ಸ್ರಾವ, ದುರ್ವಾಸನೆ, ಜನನಾಂಗದ ನೋವು ಹೀಗೆ ಅನೇಕ ಸಮಸ್ಯೆ ಕಾಡುತ್ತದೆ. ಮಾತ್ರವಲ್ಲ ಗರ್ಭಾವಸ್ಥೆ ಮತ್ತು ಹೆರಿಗೆಯ ಕಾರಣದಿಂದಾಗಿ ಯೋನಿ ಸಡಿಲಗೊಳ್ಳುವುದು ಸಾಮಾನ್ಯ ಸಮಸ್ಯೆಯಾಗಿದೆ. 

ಹಲವು ಮಹಿಳೆಯರ ಪಾಲಿಗೆ ಗರ್ಭಾವಸ್ಥೆ ಮತ್ತು ಹೆರಿಗೆಯ ಕಾರಣದಿಂದಾಗಿ ಯೋನಿ ಸಡಿಲಗೊಳ್ಳುವ ಸಮಸ್ಯೆ ಬಹುದೊಡ್ಡ ತೊಂದರೆಯಾಗಿ ಪರಿಣಮಿಸುತ್ತದೆ. ಇದರಿಂದ  ಸಂಗಾತಿ ನಮ್ಮಿಂದ ದೂರವಾಗಬಹುದೆಂಬ ಭಯ ಹಲವರನ್ನು ಕಾಡುತ್ತದೆ. ಹೀಗಾಗಿಯೇ ವೈದ್ಯರ ಬಳಿಗೆ ಹೋಗಿ ಯಾವ್ಯಾವುದೋ ಟ್ಯಾಬ್ಲೆಟ್ಸ್ ತೆಗೆದುಕೊಳ್ಳಲು ಶುರು ಮಾಡುತ್ತಾರೆ. ಆದರೆ ಹೀಗೆಲ್ಲಾ ಮಾಡಿ ಆರೋಗ್ಯವನ್ನು ಮತ್ತಷ್ಟು ಕೆಡಿಸಬೇಕಿಲ್ಲ. ಸಡಿಲವಾದ ಯೋನಿಯನ್ನು ನೈಸರ್ಗಿಕ ರೀತಿಯಲ್ಲಿ ಬಿಗಿಗೊಳಿಸಬಹುದು. ಇದಕ್ಕಾಗಿ ಜೀವನಶೈಲಿಯಲ್ಲಿ ಕೆಲವೊಂದು ವ್ಯಾಯಾಮವನ್ನು ಸೇರಿಸಿಕೊಳ್ಳಬೇಕು. 

Vaginal Health: ಮಹಿಳೆಯರ ಸೂಕ್ಷ್ಮ ಭಾಗದಿಂದ ವಾಸನೆ, ಇದನ್ನ ತಡೆಯೋದು ಹೇಗೆ?

ಯೋನಿಯನ್ನು ಆಕಾರವನ್ನು ಬದಲಾಯಿಸುವ ಅಂಗ ಎಂದು ಹೇಳಲಾಗುತ್ತದೆ. ಅಂದರೆ ಅದು ಎಕ್ಸಾಂಪಡೆಬಲ್. ತಾಯಿಯಾದ ನಂತರ ವಯಸ್ಸಾಗುವ ಪ್ರಕ್ರಿಯೆ ಯೋನಿಯು ಸಡಿಲಗೊಳ್ಳಲು ಕಾರಣವಾಗುತ್ತದೆ. ಯೋನಿಯಲ್ಲಿ ಕಡಿಮೆ ನಯಗೊಳಿಸುವಿಕೆ ಇರುತ್ತದೆ. ಆದರೆ ವರ್ಕೌಟ್ ಮಾಡುವ ಮೂಲಕ ಈ ಸಮಸ್ಯೆಯನ್ನು ಹೋಗಲಾಡಿಸಬಹುದು. ಆ ವ್ಯಾಯಾಮಗಳು ಯಾವುವು ಎಂಬ ಬಗ್ಗೆ ಇಲ್ಲಿದೆ ಮಾಹಿತಿ. 

1. ಕೆಗೆಲ್ ವ್ಯಾಯಾಮಗಳು: ಆರೋಗ್ಯ ತಜ್ಞರ ಪ್ರಕಾರ, ಯೋನಿ ಆರೈಕೆಯ ಕೊರತೆಯು ಯೋನಿ ಶುಷ್ಕತೆ, ಸಡಿಲತೆ, ನೋವಿನ ಸಂಭೋಗ ಮತ್ತು ಒತ್ತಡದ ಅಸಂಯಮಕ್ಕೆ ಕಾರಣವಾಗಬಹುದು. ಇದನ್ನು ಹೋಗಲಾಡಿಸಲು ಹಲವು ಚಿಕಿತ್ಸೆಗಳಿವೆ. ಆದರೆ ತಾಲೀಮು ಮಾಡುವುದರಿಂದ ಈ ಸಮಸ್ಯೆ ನೈಸರ್ಗಿಕ ರೀತಿಯಲ್ಲಿ ದೂರವಾಗುತ್ತದೆ. ಇದರಲ್ಲಿ ಒಂದು ವ್ಯಾಯಾಮ ಕೆಗೆಲ್ ವ್ಯಾಯಾಮ. ಕೆಗೆಲ್ ವ್ಯಾಯಾಮಗಳು ಯೋನಿಯನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ. ಅರ್ಧ ಕುಳಿತುಕೊಂಡ ಸ್ಥಿತಿಯಲ್ಲಿ ಕೈಯನ್ನು ಬಿಗಿಯಾಗಿ ಹಿಡಿದಿರುವ ಭಂಗಿಯನ್ನು 5-10 ಸೆಕೆಂಡುಗಳ ಕಾಲ ಹಿಡಿದಿಟ್ಟುಕೊಳ್ಳುವುದು ಮತ್ತು ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ಈ ವ್ಯಾಯಾಮದಲ್ಲಿ ಮಾಡಲಾಗುತ್ತದೆ. ಇದನ್ನು 5 ರಿಂದ 10 ಬಾರಿ ಪುನರಾವರ್ತಿಸಲಾಗುತ್ತದೆ. ನೀವು ಇದನ್ನು ದಿನಕ್ಕೆ ಹಲವಾರು ಬಾರಿ ಮಾಡಬಹುದು. ಇದು ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಯೋನಿಯನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ.

Vaginal Swelling : ಮುಜುಗರ ತರಿಸುವ ಯೋನಿಯ ಊತ, ತುರಿಕೆಗೆ ಇವು ಕಾರಣ

2. ಸ್ಕ್ವಾಟ್‌ಗಳು: ಸ್ಕ್ವಾಟ್ಸ್ ವ್ಯಾಯಾಮವು ಯೋನಿ ಪ್ರದೇಶವನ್ನು ಟೋನ್ ಮಾಡಲು ಸಹ ಸಹಾಯ ಮಾಡುತ್ತದೆ. ಇದನ್ನು ಮಾಡಲು, ಕಾಲುಗಳನ್ನು ಹಿಗ್ಗಿಸಿ ಮತ್ತು ಸೊಂಟವನ್ನು ನೇರವಾಗಿ ನಿಲ್ಲಿಸಿ. ನೀವು ಬೆಂಚ್ ಮೇಲೆ ಕುಳಿತಿರುವಂತೆ ಮೊಣಕಾಲುಗಳನ್ನು ಬಗ್ಗಿಸಿ. ನಂತರ ಎದ್ದುನಿಂತು. ಕೆಲವು ಕ್ಷಣ ನಿಂತ ನಂತರ ಮತ್ತೆ ಹೀಗೆ ಕುಳಿತುಕೊಳ್ಳಿ. ನೀವು ಈ ಸ್ಥಾನವನ್ನು 5 ರಿಂದ 10 ಬಾರಿ ಮಾಡಬಹುದು.

3.ಪೆಲ್ವಿಕ್ ಸ್ಟ್ರೆಚಿಂಗ್: ಪೆಲ್ವಿಕ್ ಸ್ಟ್ರೆಚಿಂಗ್ ಮಾಡಲು, ಕುರ್ಚಿಯ ಮೇಲೆ ಕುಳಿತು ನಿಮ್ಮ ಎರಡೂ ಕಾಲುಗಳನ್ನು ಹಿಗ್ಗಿಸಿ. ನಿಮ್ಮ ಕಣಕಾಲುಗಳ ಕಡೆಗೆ ಬಾಗಿ ಮತ್ತು ನಿಮ್ಮ ತೋಳುಗಳನ್ನು ಹರಡಿ. ಈ ಸಮಯದಲ್ಲಿ, ಯೋನಿಯನ್ನು ಒಳಕ್ಕೆ ಎಳೆಯಿರಿ ಮತ್ತು ಅದನ್ನು ಬಿಡುಗಡೆ ಮಾಡಿ. ಇದು ಯೋನಿಯನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ. ಸ್ನಾಯುಗಳೂ ಬಲಗೊಳ್ಳುತ್ತವೆ.

4. ಕಾಲುಗಳನ್ನು ಮೇಲಕ್ಕೆತ್ತಿ ಮಾಡುವ ವ್ಯಾಯಾಮ: ನೆಲದ ಮೇಲೆ ಮಲಗಿ ಮತ್ತು ಗೋಡೆಯ ವಿರುದ್ಧ ನಿಮ್ಮ ಪಾದಗಳನ್ನು ಮೇಲಕ್ಕೆತ್ತಿ. ಇದರ ನಂತರ, ಎರಡೂ ಕಾಲುಗಳನ್ನು ಒಂದರ ನಂತರ ಒಂದರಂತೆ ಮೇಲಕ್ಕೆ ಮತ್ತು ಕೆಳಕ್ಕೆ ಇಳಿಸಿ. ಈ ವ್ಯಾಯಮ ಸ್ನಾಯುಗಳನ್ನು ಬಲಪಡಿಸುತ್ತದೆ. ಮತ್ತು ಯೋನಿಯಲ್ಲಿ ಬಿಗಿತ ಇರುತ್ತದೆ.

5. ಮೆಡಿಸಿನ್ ಬಾಲ್ ಸಿಟ್-ಅಪ್‌ಗಳು: ಮೆಡಿಸಿನ್ ಬಾಲ್ ಸಿಟ್-ಅಪ್‌ಗಳು ಫ್ಲಾಟ್ ಹೊಟ್ಟೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಇದರೊಂದಿಗೆ, ಯೋನಿಯಲ್ಲಿ ಬಿಗಿತವನ್ನು ತರುತ್ತದೆ. ಈ ವ್ಯಾಯಾಮವನ್ನು ಮಾಡಲು, ಮೊಣಕಾಲುಗಳ ಮೇಲೆ ಕುಳಿತುಕೊಳ್ಳಿ, ಪಾದಗಳನ್ನು ನೆಲದ ಮೇಲೆ ಇರಿಸಿ ಮತ್ತು ಹಿಂಭಾಗವನ್ನು ಗೋಡೆಗೆ ಇರಿಸಿ. ಹಲವು ದಿನಗಳ ಕಾಲ ಈ ವ್ಯಾಯಾಮವನ್ನು ಮುಂದುವರಿಸುವುದರಿಂದ ಯೋನಿಯ ಆರೋಗ್ಯ ಚೆನ್ನಾಗಿರುತ್ತದೆ.

Follow Us:
Download App:
  • android
  • ios