Asianet Suvarna News Asianet Suvarna News

Breast Health: ಸ್ತನ ಕ್ಯಾನ್ಸರ್ ಪತ್ತೆಗೆ “ಥ್ಯಾಂಕ್ಸ್ ಎ ಡಾಟ್’

ಮಹಿಳೆಯರು ಸ್ವಯಂ ತಪಾಸಣೆ ಮಾಡಿಕೊಂಡರೆ ತುಂಬ ಬೇಗ ಸ್ತನ ಕ್ಯಾನ್ಸರ್ ಪತ್ತೆ ಮಾಡಿಕೊಳ್ಳಬಹುದು. ಅದಕ್ಕಾಗಿ ರೆಗ್ಯುಲರ್ ಆಗಿ ಪರೀಕ್ಷೆ ಮಾಡಿಕೊಳ್ಳುವುದು ಮುಖ್ಯ. ಅದಕ್ಕಾಗಿ ಎಸ್ ಬಿಐ ಲೈಫ್ ಇನ್ಸೂರೆನ್ಸ್ ವಿನೂತನ ಬಾಟ್ ವೊಂದನ್ನು ಆರಂಭಿಸಿದ್ದು, ಸ್ತನ ಕ್ಯಾನ್ಸರ್ ಪತ್ತೆಗೆ ನೆರವಾಗಬಲ್ಲದು. 
 

To early detection of breast cancer, use this bot for reminder
Author
First Published Nov 4, 2022, 5:30 PM IST

ಬಹಳಷ್ಟು ಮಹಿಳೆಯರಿಗೆ ತಾವು ಸೂಪರ್ ವುಮನ್ ಎನಿಸಿಕೊಳ್ಳುವುದೆಂದರೆ ಭಾರೀ ಪ್ರೀತಿ. ಹೀಗಾಗಿ ಅವರು ವೃತ್ತಿ, ಮನೆ ಎಲ್ಲವನ್ನೂ ನಿಭಾಯಿಸುವ ಸವಾಲನ್ನು ಸುಲಭವಾಗಿ ಸ್ವೀಕರಿಸುತ್ತಾರೆ. ಮನೆಯಲ್ಲಿ ಯಾರದ್ದೇ ಸಹಕಾರವಿಲ್ಲದಿದ್ದರೂ ಹೋರಾಟ ಮಾಡುತ್ತಾರೆ. ಮನೆ, ಮಕ್ಕಳು, ಪತಿ, ಅವರ ಮನೆಯವರು ಎಲ್ಲವನ್ನೂ ಸಂಭಾಳಿಸುತ್ತ ಅದೆಷ್ಟೋ ಬಾರಿ ಹೈರಾಣಾಗುತ್ತಾರೆ. ಈ ನಡುವೆ, 40 ದಾಟಿದಂತೆ ಆರೋಗ್ಯ ಕೈಕೊಡುತ್ತದೆ. ಆಗಲೇ ಅವರಿಗೆ ತಮ್ಮ ಜೀವನ ಅದ್ಯಾವ ರೀತಿಯಲ್ಲಿ ಓಟದಿಂದ ಕೂಡಿತ್ತು ಎನ್ನುವ ಅರಿವಾಗುತ್ತದೆ. ಇನ್ನು, ಗೃಹಿಣಿಯರಾದರೆ ಬಾಹ್ಯ ಕೆಲಸಕ್ಕೆ ಹೋಗುವುದಿಲ್ಲವೇನೋ ಸರಿ. ಆದರೆ, ಕೌಟುಂಬಿಕ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ಅದ್ಯಾವ ಪರಿ ಮುಳುಗುತ್ತಾರೆ ಎಂದರೆ, ತಮ್ಮನ್ನು ತಾವು ವಿಚಾರಿಸಿಕೊಳ್ಳುವುದಕ್ಕೆ ಅವರಿಗೆ ಸಮಯವೇ ಸಿಗುವುದಿಲ್ಲ. ಮಕ್ಕಳು ಬೆಳೆಯುತ್ತ ವಿದ್ಯಾಭ್ಯಾಸಕ್ಕೆಂದು ದೂರ ಹೋಗುವ ಸಮಯದಲ್ಲಿ, ಪತಿ ಮಧ್ಯವಯಸ್ಸಿನ ಹೋರಾಟದಲ್ಲಿ ಮುಳುಗಿರುವಾಗ ಗೃಹಿಣಿಯರಲ್ಲಿ ಅನಾರೋಗ್ಯ ಕಂಡುಬರುವುದು ಹೆಚ್ಚು. ಆಗ ಅವರು ಅಕ್ಷರಶಃ ಏಕಾಂಗಿಯಾಗುತ್ತಾರೆ. ಆರೋಗ್ಯ ಸಮಸ್ಯೆ ಎಂದರೆ, ಕ್ಯಾನ್ಸರ್ ನಂತಹ ದೀರ್ಘಕಾಲದ ಚಿಕಿತ್ಸೆ, ಒತ್ತಾಸೆ ಅಗತ್ಯವಿರುವ ಸಮಸ್ಯೆಯೂ ಇರಬಹುದು ಎಂದರೆ ಎಚ್ಚರಿಕೆ ತೆಗೆದುಕೊಳ್ಳಬೇಕಲ್ಲವೇ?  

ಮಹಿಳೆಯರಲ್ಲಿ (Women) ಇತ್ತೀಚೆಗೆ ಗರ್ಭಕೊರಳು ಕ್ಯಾನ್ಸರ್ (Cancer), ಸ್ತನ (Breast) ಕ್ಯಾನ್ಸರ್ ಪ್ರಮಾಣ ಅಗಾಧವಾಗಿ ಏರಿಕೆಯಾಗುತ್ತಿದೆ. 2020ರ ದಾಖಲೆ ಪ್ರಕಾರ, ಕ್ಯಾನ್ಸರ್ ಗೆ ತುತ್ತಾದ ಮಹಿಳೆಯರ ನಾಲ್ವರು ಮಹಿಳೆಯರ ಪೈಕಿ ಒಬ್ಬರಲ್ಲಿ ಸ್ತನ ಕ್ಯಾನ್ಸರ್ ಇದೆ. ಹಾಗೆಯೇ, ಸ್ತನ ಕ್ಯಾನ್ಸರ್ ಗೆ ತುತ್ತಾದ ಶೇ.37ರಷ್ಟು ಮಹಿಳೆಯರು ಸಾವಿಗೀಡಾಗಿದ್ದಾರೆ. ಹೀಗಾಗಿ, ಮಹಿಳೆ ಸ್ತನಗಳ ಆರೋಗ್ಯ (Health), ಸುರಕ್ಷತೆ, ಎಚ್ಚರಿಕೆಗಳ ನಡುವೆ ಸಾಗಬೇಕಾಗುತ್ತದೆ. ಸ್ತನಗಳಲ್ಲಿ ನೋವು (Pain), ಮೊಡವೆ, ಕೆಂಪು ಕಲೆ, ತೊಟ್ಟಿನಿಂದ ರಕ್ತ ಅಥವಾ ಬಿಳಿ ದ್ರವ ಹೊರಗೆ ಬರುತ್ತಿದ್ದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಜತೆಗೆ, ನಿಯಮಿತವಾಗಿ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹಾಗೆಯೇ, ಸ್ವತಃ ತಪಾಸಣೆ (Test) ಮಾಡಿಕೊಳ್ಳುವುದು ಅಗತ್ಯ.

Health Tips : ನೈಟ್ ಶಿಫ್ಟ್ ಮಾಡಿದ್ರೆ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚು

ಥ್ಯಾಂಕ್ಸ್ ಎ ಡಾಟ್ (Thanks A Dot)
ಮಹಿಳೆಯರು ತಾವೇ ಸ್ವತಃ ಸ್ತನಗಳ ಪರೀಕ್ಷೆ ಮಾಡಿಕೊಳ್ಳುವುದು ಎಷ್ಟೋ ಬಾರಿ ಜೀವ ಉಳಿಸುವ ಕಾರ್ಯವಾಗಬಹುದು. ತಿಂಗಳಿಗೆ ಒಮ್ಮೆಯಾದರೂ ಸ್ತನಗಳ ಪರೀಕ್ಷೆ ಮಾಡಿಕೊಳ್ಳಬೇಕು. ದೇಹದಲ್ಲಿ ಏನೋ ಸರಿಯಾಗಿಲ್ಲ ಎನಿಸಿದಾಗ ಖಂಡಿತ ಅಲಕ್ಷ್ಯ ಮಾಡಬಾರದು. ಇತ್ತೀಚೆಗೆ ಎಸ್ ಬಿಐ ಲೈಫ್ ಇನ್ಸೂರೆನ್ಸ್ (SBI Life Insurance) ಸ್ತನಗಳ ಪರೀಕ್ಷೆಗೆಂದು ಹೊಸ ರೀತಿಯ ಪ್ರಯೋಗವೊಂದನ್ನು  ಪರಿಚಯಿಸಿದೆ. “ಥ್ಯಾಂಕ್ಸ್ ಎ ಡಾಟ್’ ಹೆಸರಿನ ಬಾಟ್ ಒಂದನ್ನು ರೂಪಿಸಿದೆ. ತಾವೇ ಸ್ವತಃ ನಿಯಮಿತವಾಗಿ (Regular) ಸ್ತನಗಳ ತಪಾಸಣೆ ಮಾಡಿಕೊಳ್ಳುವ ಮೂಲಕ ಮಹಿಳೆರು ತಮ್ಮ ಆರೋಗ್ಯದ ವಿಚಾರದಲ್ಲಿ ಸಬಲರಾಗಲು ಇದೊಂದು ಉತ್ತಮ ಮಾರ್ಗ  ಎನ್ನಬಹುದು.  

Breast Cancer: ಹೆಣ್ಣನ್ನು ಮಾತ್ರವಲ್ಲ, ಪುರುಷರನ್ನೂ ಮುಕ್ಕುತ್ತೆ ಈ ರೋಗ

ರಿಮೈಂಡರ್ (Reminder) ಬಂದಾಗ ಪರೀಕ್ಷೆ ಮಾಡ್ಕೊಳಿ
ಇದರಲ್ಲಿ ಮಾಡಬೇಕಾದುದು ಸಿಂಪಲ್. ಎಸ್ ಬಿಐ ಲೈಫ್ ಇನ್ಸೂರೆನ್ಸ್ ಒಂದು ನಂಬರ್ ನೀಡಿದೆ. ಅದು 8860780000. ಈ ನಂಬರ್ ಗೆ ವಾಟ್ಸಾಪ್ ನಲ್ಲಿ “Hi’ ಎಂದು ಸಂದೇಶ ಕಳುಹಿಸಿ. ನಿಮಗೆ ಸ್ತನಗಳ ಪರೀಕ್ಷೆ ಮಾಡಿಕೊಳ್ಳುವುದು ಹೇಗೆ ಎನ್ನುವ ವಿಡಿಯೋ ಬರುತ್ತದೆ. ಇದರಂತೆಯೇ ಪರೀಕ್ಷಿಸಿಕೊಂಡು ಏನಾದರೂ ಅಸಹಜತೆ ಕಂಡುಬಂದರೆ ವೈದ್ಯರ ಬಳಿ ಹೋಗಬೇಕು. ಇಲ್ಲಿ ಪ್ರತಿತಿಂಗಳು ಸ್ವಯಂ ತಪಾಸಣೆಗೆ  ಒಳಗಾಗಲು ನಿಗದಿತ ದಿನಾಂಕ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗುತ್ತದೆ. ಮಾಸಿಕ ಋತುಸ್ರಾವವಾದ ವಾರದೊಳಗೆ ಸ್ತನಗಳ ಪರೀಕ್ಷೆ ಮಾಡಿಕೊಳ್ಳುವುದು ಉತ್ತಮ. ಈ ಹಿನ್ನೆಲೆಯಲ್ಲಿ ಮುಟ್ಟಾದ ವಾರದೊಳಗೆ ದಿನಾಂಕ ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಲಾಗುತ್ತದೆ. ನೀವು ಯಾವ ದಿನಾಂಕ, ಸಮಯ ಆಯ್ಕೆ ಮಾಡಿಕೊಳ್ಳುತ್ತೀರೋ ಆ ಸಮಯದಲ್ಲಿ ನಿಮಗೆ ಸ್ತನಗಳ ಪರೀಕ್ಷೆ ಮಾಡಿಕೊಳ್ಳುವುದನ್ನು ನೆನಪಿಸಲಾಗುತ್ತದೆ.  
ಇಷ್ಟೇನಾ ಎನಿಸಬಹುದು. ನಾವು ಬೇರೆ ಎಲ್ಲವನ್ನೂ ಮಾಡುತ್ತೇವೆ. ಆದರೆ, ರೆಗ್ಯುಲರ್ ಆಗಿ ಆರೋಗ್ಯ ತಪಾಸಣೆ (Check Up) ಮಾಡಿಕೊಳ್ಳಲು ಮರೆಯುತ್ತೇವೆ. ಈ ಥ್ಯಾಂಕ್ಸ್ ಡಾಟ್ ನಿಂದ ನಿಮಗೆ ಪ್ರತಿತಿಂಗಳು ನಿಗದಿತ ದಿನಾಂಕಕ್ಕೆ ರಿಮೈಂಡರ್ ಬಂದಾಗ ಪರೀಕ್ಷೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಸೋ, ಟ್ರೈ ಮಾಡಿ.  

Follow Us:
Download App:
  • android
  • ios