Asianet Suvarna News Asianet Suvarna News

ಉಳಿದ ಸಕ್ಕರೆ ಪಾಕವೇನು ಮಾಡೋದು ಅಂತ ಯೋಚಿಸ್ಬೇಡಿ, ಮತ್ತೊಂದು ಸ್ಟೀಟ್ ಮಾಡಿ!

ಕೆಲವೊಂದು ಸ್ವೀಟ್ ತಯಾರಿಸಲು ಸಕ್ಕರೆ ಪಾಕ ಅಗತ್ಯ. ಸಿಹಿ ತಿಂದ್ಮೇಲೆ ಉಳಿದ ಸಕ್ಕರೆ ಪಾಕ ಎನ್ ಮಾಡೋದು ಗೊತ್ತಾಗೋದಿಲ್ಲ. ಅದನ್ನು ಮರುಬಳಕೆ ಕೂಡ ಮಾಡಬಹುದು. ಅದ್ರಿಂದ ಅನೇಕ ಸಿಹಿ ತಯಾರಿಸಬಹುದು.
 

Tips To Use The Leftover Sugar Syrup
Author
First Published Jan 2, 2023, 2:54 PM IST

ಜಾಮೂನು, ಜಿಲೆಬಿ ಹೀಗೆ ಅನೇಕ ಸಿಹಿ ತಿಂಡಿಯನ್ನು ಸಕ್ಕರೆ ಪಾಕದಲ್ಲಿ ಅದ್ದಲಾಗುತ್ತದೆ. ಮನೆಯಲ್ಲಿ ಮಾಡಿದ ಜಾಮೂನು ಅಥವಾ ಹೊರಗಡೆಯಿಂದ ತಂದ ಜಾಮೂನಾಗ್ಲಿ ಜನರು ಇಷ್ಟಪಟ್ಟು ತಿನ್ನುತ್ತಾರೆ. ಆದ್ರೆ ಸಕ್ಕರೆ ಪಾಕ ಹಾಗೆಯೇ ಉಳಿಯುತ್ತದೆ. ಅನೇಕರು ಈ ಉಳಿದ ಸಕ್ಕರೆ ಪಾಕವನ್ನು ಏನು ಮಾಡ್ಬೇಕು ಎಂಬುದು ತಿಳಿಯದೆ ಅದನ್ನು ಚೆಲ್ಲುತ್ತಾರೆ. ನಿಮ್ಮ ಮನೆಯಲ್ಲೂ ಸಕ್ಕರೆ ಪಾಕ ಉಳಿದಿದೆ ಅಂದ್ರೆ ನೀವು ಅದನ್ನು ಮರುಬಳಕೆ ಮಾಡಬಹುದು. ಅದನ್ನು ಬಳಸಿಕೊಂಡು ಕೆಲ ಸಿಹಿ ತಿಂಡಿಗಳನ್ನು ನೀವು ತಯಾರಿಸಬಹುದು. ನಾವಿಂದು ಉಳಿದ ಸಕ್ಕರೆ ಪಾಕವನ್ನು ಹೇಗೆಲ್ಲ ಬಳಸಬೇಕು ಎಂಬುದನ್ನು ನಿಮಗೆ ಹೇಳ್ತೆವೆ.

ಸಕ್ಕರೆ (Sugar) ಪಾಕವನ್ನು ಬಳಸಿ ಮಾಡಿ ಈ ಎಲ್ಲ ತಿಂಡಿ : ಸಕ್ಕರೆ ಪಾಕ ಉಳಿದಿದ್ದರೆ ನೀವು ಅದನ್ನು ಬಳಸಿಕೊಂಡು ಕೆಲ ಸಿಹಿ (Sweet) ತಿಂಡಿ ತಯಾರಿಸಬಹುದು. ಲಡ್ಡು ತಯಾರಿಸಲು ಸಕ್ಕರೆ ಪಾಕವನ್ನು ನಾವು ಬಳಸ್ತೇವೆ. ನೀವು ಉಳಿದ ಸಕ್ಕರೆ ಪಾಕದಲ್ಲಿ ಲಡ್ಡನ್ನು ತಯಾರಿಸಬಹುದು. ಇಷ್ಟೇ ಅಲ್ಲದೆ ಬೆಸನ್ ಬರ್ಫಿ (Besan Barfi), ಬಲುಶಾಹಿ,  ಬಿಸ್ಕತ್ತುಗಳಂತಹ ಅನೇಕ ರೀತಿಯ ಸಿಹಿತಿಂಡಿಗಳನ್ನು ತಯಾರಿಸಲು ಬಳಸಬಹುದು.

ಸಿಹಿ ಓಟ್ ಮೀಲ್  (Oatmeal) : ಮನೆಯಲ್ಲಿ ಕೆಲವರು ಓಟ್ ಮೀಲ್ ತಯಾರಿಸುತ್ತಾರೆ. ಇದಕ್ಕೆ ಸಿಹಿ ಗಂಜಿ ಎನ್ನಬಹುದು. ಅದು ತುಂಬಾ ಪ್ರಯೋಜನಕಾರಿಯಾಗಿದೆ. ಸಿಹಿ ಗಂಜಿ ಮಾಡುವಾಗ ಅದಕ್ಕೆ ಸಕ್ಕರೆ ಹಾಕುವ ಬದಲು ನಿಮ್ಮ ರುಚಿಗೆ ತಕ್ಕಂತೆ ಉಳಿದ ಸಕ್ಕರೆ ಪಾಕವನ್ನು ಹಾಕಿದರೆ ಗಂಜಿಯ ರುಚಿ ಹೆಚ್ಚುತ್ತದೆ.

ಕಿರಿಕಿರಿಯ ಒಣಕೆಮ್ಮಿಗೆ ಈ ಮನೆಯೌಷಧ ಬೆಸ್ಟ್

ಸಕ್ಕರೆ ಪಾಕದ ಪುಡಿ ಮಾಡಿ ಇಡಿ : ಸಕ್ಕರೆ ಪಾಕ ಸ್ವಲ್ಪ ಗಟ್ಟಿಯಾಗುವವರೆಗೆ ಕುದಿಸಿ. ನಂತ್ರ ಅದನ್ನು ಒಣಗಲು ಬಿಡಿ. ನೀವು ಬಿಸಿಲಿನಲ್ಲಿ ಕೂಡ ಇದನ್ನು ಒಳಗಿಸಬಹುದು. ಆ ನಂತ್ರ ನೀವು ಅದನ್ನು ಪುಡಿ ಮಾಡಬೇಕು. ಈ ಸಕ್ಕರೆ ಪುಡಿಯನ್ನು ನೀವು ಹಾಗೆಯೇ ಅನೇಕ ದಿನ ಇಡಬಹುದು. ಅದನ್ನು ಬೇರೆ ಸಿಹಿ ತಯಾರಿಸಲು ಬಳಸಬಹುದು.

ಹೋಳಿಗೆ ಹೂರ್ಣ : ಹೋಳಿಕೆ ಹೂರ್ಣಕ್ಕೆ ಸಕ್ಕರೆ ಹಾಗೂ ಬೆಲ್ಲ ಎರಡನ್ನೂ ಬಳಸಲಾಗುತ್ತದೆ. ನೀವು ಸಕ್ಕರೆ ಬಳಸ್ತಿರಿ ಎಂದಾದ್ರೆ ಈ ಸಕ್ಕರೆ ಪಾಕವನ್ನು ಕೂಡ ನೀವು ಬಳಸಬಹುದು. ಮೃದುವಾದ ಬೇಳೆಗೆ ಸಕ್ಕರೆ ಪಾಕವನ್ನು ಸೇರಿಸಿ ಅದನ್ನು ಬೇಯಿಸಬೇಕು. ಇದು ಸರಿಯಾಗಿ ಮಿಕ್ಸ್ ಆಗಿ ಡ್ರೈ ಆಗುವವರೆಗೂ ಕೈ ಆಡಿಸುತ್ತಿರಬೇಕು. ಕಲಸಿದ ಮೈದಾ ಅಥವಾ ಗೋಧಿ ಹಿಟ್ಟಿನ ಮಿಶ್ರಣದಲ್ಲಿ ಇದನ್ನು ತುಂಬಿ ನೀವು ಹೋಳಿಗೆ ಸಿದ್ಧಪಡಿಸಬಹುದು. ಸಕ್ಕರೆ ಪಾಕವನ್ನು ಇದಕ್ಕೆ ಬೆರೆಸುವುದ್ರಿಂದ ರುಚಿ ಹೆಚ್ಚಾಗುತ್ತದೆ. 

Kitchen Tips: ಮೀನಿನ ದುರ್ವಾಸನೆ ದೂರ ಮಾಡಲು ಈ ಟಿಪ್ಸ್‌ ಫಾಲೋ ಮಾಡಿ

ಸಿಹಿ ಪರಾಠ – ಪೂರಿ : ಬೆಳಗಿನ ಉಪಹಾರಕ್ಕೆ ನೀವು ಸಿಹಿ ಪರಾಠ ಅಥವಾ ಪೂರಿ ತಯಾರಿಸುತ್ತಿದ್ದರೆ ಕೂಡ ನೀವು ಸಕ್ಕರೆ ಪಾಕವನ್ನು ಬಳಸಬಹುದು. ಗೋಧಿ ಹಿಟ್ಟಿಗೆ ಅಥವಾ ನೀವು ಪರಾಠ ಮಾಡ್ತಿರುವ ಹಿಟ್ಟಿಗೆ ಸಕ್ಕರೆ ಪಾಕವನ್ನು ಬೆರೆಸಿ ಮಿಕ್ಸ್ ಮಾಡಬೇಕು. ನಂತ್ರ ಪರಾಠ ಅಥವಾ ಪೂರಿ ತಯಾರಿಸಬಹುದು. 

ಪ್ಯಾನ್ ಕೇಕ್ ಗೆ ಬಳಸಿ ಸಕ್ಕರೆ ಪಾಕ :  ಪ್ಯಾನ್‌ ಕೇಕ್‌ ತಯಾರಿಸಲು ಕೂಡ ನೀವು ಇದನ್ನು ಬಳಸಬಹುದು. ಬಾಳೆ ಹಣ್ಣಿನ ಪ್ಯಾನ್ ಕೇಕ್ ಮಾಡುವ ವೇಳೆ ಸಕ್ಕರೆ ಬದಲು ಉಳಿದ ಸಕ್ಕರೆ ಪಾಕವನ್ನು ಹಾಕಿ ನಂತ್ರ ಉಳಿದ ವಸ್ತುಗಳನ್ನು ಬೆರೆಸಿ ಸರಿಯಾಗಿ ಮಿಕ್ಸ್ ಮಾಡಿ ಕೇಕ್ ತಯಾರಿಸಿ.

ಶಾಹಿ ಪುಲಾವ್ : ಶಾಹಿ ಪುಲಾವ್ ತಯಾರಿಸಲು ಕೂಡ ನೀವು ಸಕ್ಕರೆ ಪಾಕ ಬಳಸಬಹುದು. ಮೊದಲು ಅಕ್ಕಿಯನ್ನು ಸಕ್ಕರೆ ಪಾಕದಲ್ಲಿ ನೆನೆಸಬೇಕು. ನಂತ್ರ ಅದನ್ನು ಬೇಯಿಸಬೇಕು.
 

Follow Us:
Download App:
  • android
  • ios