Asianet Suvarna News Asianet Suvarna News

ಕಿರಿಕಿರಿಯ ಒಣಕೆಮ್ಮಿಗೆ ಈ ಮನೆಯೌಷಧ ಬೆಸ್ಟ್

ಕೂತರೂ ನಿಂತರೂ ಕೆಮ್ಮು ಕಾಟ(Cough). ಮಲಗಲೂ ಬಿಡದೆ ರಾತ್ರಿಯೂ ನಿದ್ರೆಗೆಡಿಸುವ ಈ ಕೆಮ್ಮು ಚಳಿಗಾಲದಲ್ಲಿ(Winter) ಕಾಡುವುದು ಹೆಚ್ಚು. ಒಣ ಕೆಮ್ಮು(Dry Cough) ಅಥವಾ ನಾಯಿ ಕೆಮ್ಮು ನಿವಾರಣೆಗೆ ಆಯುರ್ವೇದದಲ್ಲಿ(Ayurveda) ಮನೆಯಲ್ಲೆ ಮಾಡಬಹುದಾದ ಸರಳ ಔಷಧವಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ.

Try these home remedies to control Dry Cough during Winter
Author
First Published Dec 30, 2022, 4:01 PM IST

ಚಳಿಗಾಲದಲ್ಲಿ ಕೇವಲ ಶೀತ(Cold), ಜ್ವರದಂತಹ(Fever) ಸೋಂಕಿನ ರೋಗಗಳು ಮಾತ್ರ ಪದೇ ಪದೇ ಬರುವುದಿಲ್ಲ. ವಿಪರೀತ ಚಳಿಗೆ ಒಣ ಕೆಮ್ಮು(Dry Cough) ಅಥವಾ ನಾಯಿ ಕೆಮ್ಮು ಸಹ ಬೆನ್ನಟ್ಟಿರುತ್ತವೆ. ಚಳಿಗಾಲದಲ್ಲಿ ದೇಹವು ಪ್ರತೀ ಕ್ಷಣವು ಹೋರಾಡುತ್ತದೆ. ಚಳಗಾಲದಲ್ಲಿ ಎಲ್ಲರೂ ಸಾಮಾನ್ಯವಾಗಿ ಎದುರಿಸುವ ಉಸಿರಾಟದ(Respiration) ಆರೋಗ್ಯ ಸಮಸ್ಯೆ ಎಂದರೆ ಅದು ಕೆಮ್ಮು. ಒಣ ಕೆಮ್ಮು ಹೆಚ್ಚಾಗಿ ಲೋಳೆ ಅಥವಾ ಕಫದ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಇದು ಅಲರ್ಜಿ(Allergy), ಅಸ್ತಮಾ(Asthma), ಸೋಂಕು(Infection) ಅಥವಾ ಆಸಿಡ್ ರಿಫ್ಲಕ್ಸ್(Acid Reflex) ಸೇರಿದಂತೆ ಹಲವು ಕಾರಣಗಳಿಂದ ಎದುರಾಗಬಹುದು. ಕಿರಿಕಿರಿ ಉಂಟುಮಾಡುವ ಗಂಟಲನ್ನು ನಿರ್ವಹಿಸುವಾಗ ಸುಲಭವಾಗಿ ಸಿಗುವ ಔಷಧಗಳನ್ನು ಬಳಸುವುದು ಸಾಮಾನ್ಯ. ಆದರೆ ಮನೆಯಲ್ಲಿರುವ ಪದಾರ್ಥಗಳಿಂದ ಮಾಡಿದ ಆಯುರ್ವೇದ ಔಷಧ ಬಳಸಿದರೆ ಕೆಮ್ಮು ಕಡಿಮೆಯಾಗುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಒಣ ಕೆಮ್ಮಿನ ಸಮಸ್ಯೆಗಳನ್ನು ನಿಭಾಯಿಸಲು ಬಳಸಬಹುದಾದ ಮನೆಮದ್ದುಗಳು ಇಲ್ಲಿದೆ.

1. ಶುಂಠಿ ಟೀ (Ginger Tea)
ಚಳಿಗಾಲಕ್ಕೆ ಅತ್ಯುತ್ತಮ ಆಯುರ್ವೇದ ಗಿಡಮೂಲಿಕೆ ಎಂದರೆ ಅದು ಶುಂಠಿ. ಇದರಲ್ಲಿ ಉರಿಯೂತದ(Anti Inflammatory) ಮತ್ತು ಉತ್ಕರ್ಷಣ ನಿರೋಧಕ(Anti Oxidant) ಗುಣಲಕ್ಷಣಗಳು ಹೇರಳವಾಗಿದೆ. ಹಾಗಾಗಿ ಕಿರಿಕಿರಿ ಉಂಟುಮಾಡುವ ಗಂಟಲು ಮತ್ತಿ ಉಸಿರಾಟದ ವಾಯು ಮಾರ್ಗಗಳನ್ನು ಶಮನಗೊಳಿಸಿ ಕೆಮ್ಮುಗೆ ಪರಿಹಾರ ನೀಡುತ್ತದೆ. ಒಂದು ಪ್ಯಾನ್‌ಗೆ ಅಗತ್ಯ ಪ್ರಮಾಣದ ನೀರು ಹಾಕಿಕೊಳ್ಳಿ. ಅದಕ್ಕೆ ಹೊಸದಾಗಿ ಪುಡಿ ಮಾಡಿದ ಶುಂಠಿಯನ್ನು ಅಥವಾ ಹಸಿ ಶುಂಠಿಯನ್ನು ಜಜ್ಜಿ ಹಾಕಿದರೂ ಆಗುತ್ತದೆ. ಈ ಮಿಶ್ರಣವು ಒಂದಷ್ಟು ನಿಮಿಷ ಚೆನ್ನಾಗಿ ಕುದಿಯಲಿ. ನಂತರ ಅದಕ್ಕೆ ಟೀ ಪುಡಿಯನ್ನು ಸೇರಿಸಿ ಮತ್ತೆ ಕುದಿಸಿಕೊಳ್ಳಿ. ಸ್ಟೌ ಆಫ್ ಮಾಡಿದ ನಂತರ  ಅದನ್ನು ಸೋಸಿ ಜೇನುತುಪ್ಪದೊಂದಿಗೆ(Honey) ಬಿಸಿ ಇರುವಾಗಲೇ ಕುಡಿಯಬೇಕು. ಹೀಗೆ ಒಣ ಕೆಮ್ಮು ಕಡಿಮೆ ಆಗುವವರೆಗೂ ಕುಡಿಯಬೇಕು.  

ಚಳಿಗಾಲದಲ್ಲಿ ನೆಮ್ಮದಿ ಕೆಡಿಸುವ ಒಣ ಕೆಮ್ಮು... ನಿವಾರಣೆಗೆ ಅಂಗೈಯಲ್ಲೇ ಮದ್ದು

2. ಬೆಳ್ಳುಳ್ಳಿ(Garlic)
ಬೆಳ್ಳುಳ್ಳಿ ಎಂದಾಕ್ಷಣ ಎಲ್ಲರೂ ಮೂಗು ಮುರಿಯುವವರೇ ಹೆಚ್ಚು. ಇದರ ಹಸಿವಾಸನೆಯಿಂದ ಸೇವಿಸಲು ಹಿಂಜರಿಯುತ್ತಾರೆ. ಆದರೆ ಆಯುರ್ವೇದದಲ್ಲಿ ಬೆಳ್ಳುಳ್ಳಿ ಉತ್ತಮ ಔಷಧಗಳಲ್ಲಿ ಒಂದಾಗಿದೆ. ಒಣ ಕೆಮ್ಮಿಗೆ ಹಸಿ ಬೆಳ್ಳುಳ್ಳು ಬಹಳ ಒಳ್ಳೆಯದು. ಬೆಳ್ಳುಳ್ಳಿಯ ಒಂದು ಅಥವಾ ಎರಡು ಬೇಳೆಯನ್ನು ಹಾಲಿನಲ್ಲಿ(Milk) ಕುದಿಸಿ ಅದಕ್ಕೆ ಚಿಟಿಕೆ ಅರಿಶಿಣವನ್ನು(Turmeric) ಸೇರಿಸಿ ಬಿಸಿ ಇರುವಾಗಲೇ ಕುಡಿಯಬೇಕು. ಒಣ ಕೆಮ್ಮಿಗೆ ಇದು ಸೂಕ್ತ ಚಿಕಿತ್ಸೆಯಾಗಿದ್ದು, ಗಂಟಲನ್ನು ಗುಣಪಡಿಸಲು ಮತ್ತು ಶಮನಗೊಳಿಸಲು ಸಹಾಯ ಮಾಡುತ್ತದೆ.

3. ಸಾವಯವ ಜೇನುತುಪ್ಪ(Honey)
ಆಯುರ್ವೇದದಲ್ಲಿ ಜೇನುತುಪ್ಪವನ್ನು ಪ್ರಮುಖ ಔಷಧವಾಗಿ ಬಳಸಲಾಗುತ್ತದೆ. ಜೇನು ಹುಳಗಳು ಕೂಡಿಟ್ಟ ಈ ನೈಸರ್ಗಿಕ ಹಾಗೂ ಸಾವಯವ ಜೇನುತುಪ್ಪ(Organic Honey) ಮಕ್ಕಳಿಂದ ಹಿಡಿದು ಎಲ್ಲರಿಗೂ ಒಳ್ಳೆಯದು. ಇದು ಒಣ ಕೆಮ್ಮಿನಿಂದ ಗಂಟಲಲ್ಲಿ ಉಂಟಾಗುವ ಕಿರಿಕಿರಿಗೆ ಚಿಕಿತ್ಸೆ ನೀಡುತ್ತದೆ. 

4. ಲೈಕೋರೈಸ್(Licorice)
ಲೈಕೋರೈಸ್ ಅಂದರೆ ಜೇಷ್ಠ ಮಧು (Jeshtamadhu). ಈ ಜೇಷ್ಠಮಧು ನಮ್ಮ ಸಾಂಪ್ರದಾಯಿಕ ಆಯುರ್ವೇದ ಗಿಡಮೂಲಿಕೆಗಳಲ್ಲಿ ಒಂದಾಗಿದೆ. ಈ ಬೇರು ಕೆಮ್ಮು, ಅಸ್ತಮಾ(Asthma) ಮತ್ತು ನೋಯುತ್ತಿರುವ ಗಂಟಲಿಗೆ ಉತ್ತಮ ಚಿಕಿತ್ಸೆ ನೀಡುತ್ತದೆ. ಕೆಲವು ತುಂಡುಗಳ ಜೇಷ್ಠಮಧುವನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಕುದಿಸಬೇಕು. ಅದಕ್ಕೆ ಚೂರು ಕಾಳುಮೆಣಸಿನ(Black Pepper) ಪುಡಿ ಹಾಕಿ ಕುದಿಸಿ. ಚೆನ್ನಾಗಿ ಕುದಿಸಿದ ನಂತರ ಅದನ್ನು ಸೋಸಿ ಬಿಸಿ ಇರುವಾಗಲೇ ಕುಡಿಯಬೇಕು. ಇದು ಕಫದ ಕೆಮ್ಮು, ಒಣ ಕೆಮ್ಮು ಇದ್ದರೂ ಗುಣವಾಗುತ್ತದೆ.

Cough remedies: ಚಳಿಗಾಲದ ಒಣಕೆಮ್ಮಿಗೆ ಮನೆಯಲ್ಲೇ ಇದೆ ಪರಿಹಾರ

5. ಥೈಮ್ ಟೀ (Thyme Tea)
ಥೈಮ್ ಟೀ ಎಂದರೆ ದೊಡ್ಡಪತ್ರೆ (Doddapathre) ಸೊಪ್ಪಿನ ಟೀ. ಇದಕ್ಕೆ ಸಾಂಬರ್ ಸೊಪ್ಪೆಂದೂ ಸಹ ಕರೆಯುತ್ತಾರೆ. ಇದು ಆಯುರ್ವೇದದಲ್ಲಿ ಔಷಧೀಯ ಗುಣಗಳುಳ್ಳ ಉತ್ತಮ ಮದ್ದಾಗಿದೆ. ಮಕ್ಕಳಿಗೆ ಶೀತ, ಕೆಮ್ಮು ಕಾಣಿಸಿಕೊಂಡಾಗ ಇದರ ರಸಕ್ಕೆ ಜೇನುತುಪ್ಪ ಹಾಕಿ ಕುಡಿಸಲಾಗುತ್ತದೆ. ಇನ್ನು ಒಣ ಕೆಮ್ಮಿನ ಚಿಕಿತ್ಸೆಗೆ, ಶುಷ್ಕ, ಸೆಳೆತದ ಕೆಮ್ಮು ಮತ್ತು ನಾಯಿ ಕೆಮ್ಮಿನ ಚಿಕಿತ್ಸೆಗೆ ಇದು ಬಳಸಲಾಗುತ್ತದೆ. ದೊಡ್ಡಪತ್ರೆ ಸೊಪ್ಪಿಗೆ ಕಾಳುಮೆಣಸು, ಅರಳುಪ್ಪು ಹಾಕಿ ದವಡೆಯಲ್ಲಿ ಇಟ್ಟುಕೊಂಡು ಅದರ ರಸವನ್ನು ನಿಧಾನವಾಗಿ ಸವಿಯಬೇಕು. ಸವಿಯುವಾಗ ಅದರ ರಸವು ಗಂಟಲಿಗೆ ಖಾರ ಮುಟ್ಟಬೇಕು. ಹೀಗೆ ಮಾಡಿದರೆ ಒಣ ಕೆಮ್ಮು ಕಡಿಮೆಯಾಗುತ್ತದೆ.

Follow Us:
Download App:
  • android
  • ios