ಹೆಣ್ಮಕ್ಳೇ ಸ್ಟ್ರಾಂಗ್ ಗುರೂ..ಬರೋಬ್ಬರಿ 1 ಕೋಟಿ ರೂ. ದಂಡ ಸಂಗ್ರಹಿಸಿದ ಮಹಿಳಾ ಟಿಕೆಟ್ ಚೆಕರ್.!
ಹೆಣ್ಮಕ್ಕಳು ಯಾವ ಕೆಲಸ ಕೊಟ್ರೂ ಅಚ್ಚುಕಟ್ಟಾಗಿ ಮಾಡೋದ್ರಲ್ಲಿ ಎತ್ತಿದ ಕೈ. ಅದು ಅಕ್ಷರಶಃ ನಿಜವೆಂಬುದು ಮತ್ತೆ ಸಾಬೀತಾಗಿದೆ. ಸದ್ಯ ಮಹಿಳಾ ಟಿಕೆಟ್ ಚೆಕರ್ ಒಬ್ರು ಪ್ರಯಾಣಿಕರಿಂದ 1 ಕೋಟಿ ರೂಪಾಯಿಗೂ ಅಧಿಕ ದಂಡ ವಸೂಲಿ ಮಾಡಿದ್ದು, ರೈಲ್ವೇ ಸಚಿವಾಲಯದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಹೆಣ್ಮಕ್ಕಳೆಂದ್ರೆ ಏನ್ ಸುಮ್ನೇನಾ..ಯಾವ ಕೆಲ್ಸನಾದ್ರೂ ಚಕಾಚಕ್ ಅಂತ ಮಾಡಿಬಿಡ್ತಾರೆ. ಹಾಗಾಗಿಯೇ ಇವತ್ತಿನ ದಿನಗಳಲ್ಲಿ ಆಲ್‌ಮೋಸ್ಟ್ ಎಲ್ಲಾ ಫೀಲ್ಡ್‌ಗಳಲ್ಲಿ ಮಹಿಳೆಯರು ಕೆಲ್ಸ ಮಾಡೋದನ್ನು ನೋಡಬಹುದು. ಅದರಲ್ಲೂ ಸಾರಿಗೆ ವ್ಯವಸ್ಥೆಯಲ್ಲಿ ಬಹುತೇಕ ಮಂದಿ ಮಹಿಳಾಮಣಿಗಳೇ. ಬಸ್ಸಿನಲ್ಲಿ ಡ್ರೈವರ್, ಕಂಡೆಕ್ಟರ್‌ರಿಂದ ತೊಡಗಿ ಟಿಕೆಟ್ ಕಲೆಕ್ಟರ್, ಮೆಟ್ರೋ ಚಾಲಕರು ಸಹ ಮಹಿಳೆಯರಿದ್ದಾರೆ. ತಾವು ಯಾವ ಕ್ಷೇತ್ರದಲ್ಲೂ ಕೆಲಸ ಮಾಡಲು ಸೈ ಎಂಬುದನ್ನು ಈ ಮಹಿಳೆಯರು ಸಾಬೀತುಪಡಿಸಿದ್ದಾರೆ. ಸದ್ಯ ರೈಲ್ವೇಯ ಮಹಿಳಾ ಟಿಕೆಟ್ ಚೆಕರ್ ಒಬ್ರು ಪ್ರಯಾಣಿಕರಿಂದ 1 ಕೋಟಿ ರೂಪಾಯಿಗೂ ಅಧಿಕ ದಂಡ ವಸೂಲಿ ಮಾಡಿದ್ದು, ರೈಲ್ವೇ ಸಚಿವಾಲಯದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಪ್ರಯಾಣಿಕರಿಂದ 1.03 ಕೋಟಿ ರೂಪಾಯಿ ದಂಡ ವಸೂಲಿ ಮಾಡಿದ ಟಿಕೆಟ್ ಚೆಕರ್
ದಕ್ಷಿಣ ರೈಲ್ವೆಯ ಮುಖ್ಯ ಟಿಕೆಟ್ ಪರಿವೀಕ್ಷಕಿ (Ticket cheker) ರೊಸಾಲಿನ್ ಅರೋಕಿಯಾ ಮೇರಿ ಅವರು ಟಿಕೆಟ್ ಪಡೆಯದ ಪ್ರಯಾಣಿಕರಿಂದ 1.03 ಕೋಟಿ ರೂಪಾಯಿ ದಂಡ (Fine)ವನ್ನು ಸಂಗ್ರಹಿಸಿದ್ದಾರೆ. ಈ ಮೂಲಕ ಪ್ರಯಾಣಿಕರಿಂದ (Passengers) 1 ಕೋಟಿ ರೂಪಾಯಿಗೂ ಅಧಿಕ ದಂಡ ವಸೂಲಿ ಮಾಡಿದ ರೈಲ್ವೆ ಇಲಾಖೆಯ (Railway ministry) ಮೊದಲ ಮಹಿಳಾ ಟಿಕೆಟ್ ತಪಾಸಣೆ ಸಿಬ್ಬಂದಿ ಅನಿಸಿಕೊಂಡಿದ್ದಾರೆ. ರೈಲ್ವೆ ಸಚಿವಾಲಯವು ಮೇರಿ ಪ್ರಯಾಣಿಕರಿಂದ ದಂಡವನ್ನು ಸಂಗ್ರಹಿಸುತ್ತಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಅವರ ಕೆಲಸದ ದಕ್ಷತೆಯನ್ನು ಶ್ಲಾಘಿಸಿದೆ.
ಉದ್ಯೋಗ ತೊರೆದು ಬರ್ಗರ್ ಕಂಪನಿ ಪ್ರಾರಂಭಿಸಿದ ಎಂಬಿಎ ಪದವೀಧರೆ;ಐದೇ ವರ್ಷದಲ್ಲಿ 40 ಕೋಟಿ ರೂ. ವಹಿವಾಟು
ನೆಟ್ಟಿಗರಿಂದ ಮಹಿಳೆಯ ಸಾಧನೆಗೆ ಶಹಬ್ಬಾಸ್
'ತಮ್ಮ ಕರ್ತವ್ಯಗಳಿಗೆ ದೃಢವಾದ ಬದ್ಧತೆಯನ್ನು ತೋರಿಸುತ್ತಾ, @GMS ರೈಲ್ವೇಯ CTI (ಚೀಫ್ ಟಿಕೆಟ್ ಇನ್ಸ್ ಪೆಕ್ಟರ್) ಶ್ರೀಮತಿ ರೋಸಲಿನ್ ಅರೋಕಿಯಾ ಮೇರಿ ಪ್ರಯಾಣಿಕರಿಂದ 1.03 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಿದ್ದಾರೆ. ಭಾರತೀಯ ರೈಲ್ವೇಯಲ್ಲಿ ಈ ರೀತಿ ಟಿಕೆಟ್ ತಪಾಸಣೆ ನಡೆಸಿದ ಮೊದಲನೇ ಮಹಿಳಾ ಸಿಬ್ಬಂದಿಯಾಗಿದ್ದಾರೆ" ಎಂದು ರೈಲ್ವೆ ಸಚಿವಾಲಯ ಟ್ವೀಟ್ ಮಾಡಿದೆ.
ಮಹಿಳಾ ಟಿಕೆಟ್ ಚೆಕರ್ ಕೆಲಸದ ದಕ್ಷತೆ ಎಲ್ಲೆಡೆ ವೈರಲ್ ಆಗಿದ್ದು ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ರೋಸಲಿನ್ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
80 ಲಕ್ಷದ ಆಫರ್ ನೀಡಿದರೂ ಮಾಸ್ಕ್ ತೆಗೆಯದೇ ಘನತೆ ಮೆರೆದ ಹೆಣ್ಣುಮಗಳು
ಬಳಕೆದಾರರೊಬ್ಬರು 'ನಮ್ಮ ಭಾರತವನ್ನು ಸೂಪರ್ ಪವರ್ ಮಾಡಲು ಇಂತಹ ದೃಢವಾದ ಸಂಕಲ್ಪವುಳ್ಳ ಮಹಿಳೆಯರ ಅಗತ್ಯವಿದೆ. ಅಭಿನಂದನೆಗಳು ರೊಸಾಲಿನ್. ನಿಮ್ಮ ಕೆಲಸವನ್ನು ಆತ್ಮವಿಶ್ವಾಸದಿಂ ಮುಂದುವರಿಸಿ' ಎಂದು ಕಮೆಂಟಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, 'ರೋಸಲಿನ್, ನಾನು ನಿಮ್ಮ ಸ್ನೇಹಿತೆಯಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ನಿಮ್ಮನ್ನು ತಿಳಿದುಕೊಂಡಿರುವುದು ನಿಮ್ಮ ಸಾಧನೆಯ ಬಗ್ಗೆ ನನಗೆ ಆಶ್ಚರ್ಯವಿಲ್ಲ. ಈ ಸಾಧನೆ ಕರ್ತವ್ಯಗಳಿಗೆ ನಿಮ್ಮ ಸಮರ್ಪಣೆ, ಬದ್ಧತೆ ಮತ್ತು ಪ್ರಾಮಾಣಿಕತೆಯನ್ನು ತೋರಿಸುತ್ತದೆ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಮಹಿಳಾ ಚೆಕರ್ 'ಇಂಥಾ ಕೆಲಸ ಮಾಡಿರುವುದು ಅದ್ಭುತ' ಎಂದು ಬರೆದುಕೊಂಡಿದ್ದಾರೆ.