Asianet Suvarna News Asianet Suvarna News

ಗೀಜರ್ ಸ್ಫೋಟದಿಂದ ದೂರ ಇರ್ಬೇಕೆಂದ್ರೆ ಹೀಗೆಲ್ಲ ಮಾಡಿ

ಚಳಿಗಾಲದಲ್ಲಿ ತಣ್ಣೀರು ಸ್ನಾನ ಮಾಡು ಅಂದ್ರೆ ಹೆಂಗೆ? ಗೀಜರ್ ಆನ್ ಮಾಡಿ ಬಕೆಟ್ ತುಂಬ ನೀರು ತುಂಬಿಸಿ ಸ್ನಾನ ಮಾಡೋ ಮಜವೇ ಬೇರೆ. ಆದ್ರೆ ಸ್ನಾನ ಮಾಡುವಾಗ್ಲೂ ಗೀಜರ್ ಆನ್ ಇದೆ ಅಂದ್ರೆ ಹುಷಾರ್.. ಜೀವಕ್ಕೆ ಇದು ಅಪಾಯತರಬಹುದು. 
 

This Is The Reason Of Geyser Blast While Bathing
Author
First Published Jan 21, 2023, 11:27 AM IST

ಗ್ಯಾಸ್ ಅಥವಾ ಎಲೆಕ್ಟ್ರಿಕ್ ಉಪಕರಣಗಳು ಈಗ ಮನುಷ್ಯನ ಜೀವನದ ಪ್ರಮುಖ ಅಂಶವಾಗಿದೆ. ಪ್ರತಿಯೊಬ್ಬರ ಮನೆಯಲ್ಲೂ ಸಿಲೆಂಡರ್ ಗ್ಯಾಸ್, ಫ್ರಿಜ್, ಅವನ್, ಗ್ಯಾಸ್ ಗೀಜರ್ ಹೀಗೆ ಹತ್ತು ಹಲವು ಉಪಕರಣಗಳನ್ನು ನಾವು ಕಾಣ್ತೆವೆ. ಇಂತಹ ಗ್ಯಾಸ್, ಇಲೆಕ್ಟ್ರಿಕ್ ಉಪಕರಣಗಳು ನಮಗೆ ಎಷ್ಟು ಉಪಕಾರಿಯೋ ಅಷ್ಟೇ ಅಪಾಯಕಾರಿ ಕೂಡ. ಇತ್ತೀಚೆಗೆ ಹಲವು ಕಡೆ ನಡೆದ ಗೀಜರ್, ಗ್ಯಾಸ್, ಫ್ರಿಜ್ ಗಳ ಸ್ಪೋಟವು ಇಂತಹ ಉಪಕರಣಗಳು ಮನುಷ್ಯನ ಜೀವಕ್ಕೆ ಎಷ್ಟು ಮಾರಕ ಎಂಬುದಕ್ಕೆ ಉತ್ತಮ ನಿದರ್ಶನವಾಗಿದೆ.

ಇಂತಹ ಸ್ಫೋಟ (Explosion) ಗಳು ನಮ್ಮ ನಿರ್ಲಕ್ಷದಿಂದಲೂ ಆಗುತ್ತವೆ. ಗ್ಯಾಸ್ (Gas), ಎಲೆಕ್ಟ್ರಿಕ್ ಉಪಕರಣಗಳನ್ನು ಅಳವಡಿಸಲು ಬರುವವರು ಸರಿಯಾದ ಮಾನದಂಡವನ್ನು ಅನುಸರಿಸದೇ ಇರುವುದರಿಂದ ಕೂಡ ಅನೇಕ ಬಾರಿ ಸ್ಫೋಟಗಳು ಸಂಭವಿಸುತ್ತವೆ.  ಹೆಚ್ಚಿನ ಸಮಯ ಗೀಜರ್ ಆನ್ ಇಡುವುದರಿಂದಲೂ ಬಾಯ್ಲರ್ ಮೇಲೆ ಹೆಚ್ಚಿನ ಒತ್ತಡ ಬಿದ್ದು, ಅದರಿಂದ ಲೀಕೇಜ್ (leakage) ಆಗುತ್ತದೆ. ಅತೀ ಹೆಚ್ಚಿನ ಒತ್ತಡದಿಂದಲೇ ಗೀಜರ್ ಸ್ಪೋಟಗೊಳ್ಳುತ್ತದೆ. ಇದು ವಿದ್ಯುತ್ ಉಪಕರಣವಾದ್ದರಿಂದ ಜೀವಕ್ಕೆ ಅಪಾಯವುಂಟಾಗುತ್ತದೆ.

ವೃದ್ಧಾಪ್ಯದ ಒಂಟಿತನ ಬಲ್ಲಿರಾ? ಅದನ್ನ ನಿವಾರಿಸುವ 'ಗುಡ್‌ ಫೆಲೋಸ್‌'ಗೆ ರತನ್‌ ಟಾಟಾ ಬೆನ್ನೆಲುಬು

ಈಗಂತೂ ಚಳಿಗಾಲವಾದ್ದರಿಂದ ತಣ್ಣನೆಯ ನೀರಿನಲ್ಲಿ ಸ್ನಾನ (Bath) ಮಾಡುವುದಂತೂ ಸಾಧ್ಯವಾಗದ ಮಾತು. ಈ ಸಮಯದಲ್ಲಿ ಎಲ್ಲರೂ ಸ್ನಾನ ಮಾಡಲು ಬಿಸಿಯಾದ ನೀರನ್ನೇ ಬಳಸುತ್ತಾರೆ. ಹಳ್ಳಿಗಳಲ್ಲಿ ಸಾಮಾನ್ಯವಾಗಿ ನೀರು ಕಾಯಿಸಲು ಕಟ್ಟಿಗೆ ಒಲೆಗಳನ್ನೇ ಬಳಸುತ್ತಾರೆ. ಕೆಲವು ಕಡೆ ಸೋಲಾರ್ ಕೂಡ ಬಳಕೆಯಲ್ಲಿದೆ. ನಗರಗಳಲ್ಲಿ ಸೋಲಾರ್ ಇದ್ದರೂ ಕೂಡ ಹೆಚ್ಚಿನ ಮನೆಗಳಲ್ಲಿ ಗ್ಯಾಸ್ ಗೀಜರ್, ಎಲೆಕ್ಷ್ಟಿಕ್ ಗೀಜರ್ ಅಥವಾ ಕಾಯ್ಲ್ ಗಳನ್ನು ಬಳಸುತ್ತಾರೆ. ಗೀಜರ್  ಹೆಚ್ಚು ಸುರಕ್ಷಿತ ಎಂದು ಭಾವಿಸುತ್ತಾರೆ. ಈ ಗೀಜರ್ ಗಳು ಎಷ್ಟೇ ಸುರಕ್ಷಿತವಾದರು ಕೂಡ ಕೆಲವೊಮ್ಮೆ ನಮ್ಮ ನಿರ್ಲಕ್ಷದಿಂದ ದೊಡ್ಡ ಅನಾಹುತವೇ ಸಂಭವಿಸಬಹುದು. ಅದಕ್ಕೆ ನಾವು ಗೀಜರ್ ಗಳ ಬಳಕೆ ಮಾಡವಾಗ ಅದರ ಬಗ್ಗೆ ಸಾಕಷ್ಟು ತಿಳುವಳಿಕೆ ಹೊಂದಿರಬೇಕು ಹಾಗೂ ಸುರಕ್ಷತೆಯ ಕ್ರಮಗಳನ್ನು ಚಾಚೂ ತಪ್ಪದೆ ಅನುಸರಿಸಬೇಕು. ಗೀಜರ್ ಬಳಸುವಾಗ ನಾವು ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳು ಹೀಗಿವೆ.

ನೀವು ಸ್ನಾನಕ್ಕೆ ಹೋಗುವ ಮೊದಲೇ ಗೀಜರ್ ಆನ್ ಮಾಡಿ ನೀರನ್ನು ಕಾಯಿಸಿಕೊಳ್ಳಿ. ನೀರು ಕಾದ ನಂತರ ಗೀಜರ್ ಅನ್ನು ಆಫ್ ಮಾಡಿ ಬಿಸಿಯಾದ ನೀರನ್ನು ಬಕೆಟ್ ನಲ್ಲಿ ಸ್ಟೋರ್ ಮಾಡಿಕೊಳ್ಳಿ. ನೀವು ಸ್ನಾನ ಮಾಡುವಾಗ ಯಾವುದೇ ಕಾರಣಕ್ಕೂ ಗೀಜರ್ ಆನ್ ಮಾಡಬೇಡಿ. ಎಲ್ಲಿ ಗೀಜರ್ ಅನ್ನು ಅಳವಡಿಸುತ್ತಾರೋ ಅಲ್ಲಿ ಗೀಜರ್ ಮತ್ತು ಗೋಡೆಯ ನಡುವೆ ಸ್ವಲ್ಪ ಖಾಲಿ ಸ್ಥಳವಿರಲಿ. ಗೀಜರ್ ಅನ್ನು ಗೋಡೆಗೆ ಅಂಟಿಸಿ ಅಳವಡಿಸುವುದು ಸುರಕ್ಷಿತವಲ್ಲ.

ವಾಟರ್ ಹೀಟರ್ ಖರೀದಿಸುವಾಗ ಒಳ್ಳೆಯ ರೇಟಿಂಗ್ ಇರುವ ಹೀಟರ್ ಖರೀದಿಸಿ. ನೀವು ಖರೀದಿಸಿದ ಹೀಟರ್ ಹೆಚ್ಚು ಅವಧಿಯ ವಾರೆಂಟಿ ಮತ್ತು ಸರ್ವೀಸ್ ಇರುವ ಕಂಪನಿಯದ್ದೇ ಆಗಿರಲಿ.
ಐಎಸ್ಐ ಮಾರ್ಕ್ ಹೊಂದಿರುವ ಮತ್ತು ಆಟೊಮೆಟಿಕ್ ಸ್ವಿಚ್ ಆಫ್ ವ್ಯವಸ್ಥೆ ಇರುವ ಗೀಜರ್  ಖರೀದಿಸಿ. 

ಗೀಜರ್ ಮೇಲಿರುವ ಸೆಕ್ಯುರಿಟಿ ಫೀಚರ್ ಕಡೆಗೆ ಲಕ್ಷ್ಯವಹಿಸಿ. ಇದರಿಂದ ನೀವು ಅಪಘಾತದ ಸಮಯದಲ್ಲಿ ಏನು ಮಾಡಬೇಕೆಂಬುದರ ಕುರಿತು ಮಾಹಿತಿ ಇರುತ್ತದೆ. ಹೀಟರ್ ಖರೀದಿಸುವ ಮುನ್ನ ಅದು ಹೆಚ್ಚಿನ ಒತ್ತಡವನ್ನು ಭರಿಸುವ ಸಾಮರ್ಥ್ಯ ಮತ್ತು ಟ್ಯಾಂಕ್ ಸ್ಪೋಟದಂತಹ ಸಮಸ್ಯೆಗಳನ್ನು ತಡೆಗಟ್ಟುತ್ತದೆಯೇ ಎಂಬುದನ್ನು ಪರೀಕ್ಷಿಸಿ.

ತೂಕ ಹೆಚ್ಚಿಸಿಕೊಳ್ಳೋ ಯೋಚನೆ ಇದ್ದರೆ ಇಲ್ಲಿದೆ ಬೆಸ್ಟ್ ಫುಡ್

ಅವಧಿ ಮುಗಿಯುವ ಮುನ್ನವೇ ಗೀಜರ್ ಅನ್ನು ಪರಿಣಿತರ ಬಳಿ ಸರ್ವೀಸ್ ಮಾಡಿಸಿ. ಉಪ್ಪು ನೀರನ್ನು ಬಳಸುವ ಗೀಜರ್ ಗಳನ್ನು 2 ವರ್ಷಕ್ಕೊಮ್ಮೆ ರಿಸ್ಕೇಲ್ ಮಾಡಿಸಿ. ಬಾತ್ ರೂಮ್ ಗೆ 10-35 ಲೀಟರ್ ನೀರಿನ ಸಾಮರ್ಥ್ಯವುಳ್ಳ ವಾಟರ್ ಹೀಟರ್ ಬಳಸಿ.

ಆಟೊಮೆಟಿಕ್ ಹೀಟ್ ಸೆನ್ಸಾರ್ ಇರುವ ಗೀಜರ್ ಗಳಲ್ಲಿ ಒಮ್ಮೊಮ್ಮೆ ಸೆನ್ಸಾರ್ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಅಂತಹ ಸಮಯದಲ್ಲಿಯೂ ಗೀಜರ್ ಸ್ಪೋಟವಾಗಬಹುದು ಎಚ್ಚರ. 

 

Follow Us:
Download App:
  • android
  • ios