Asianet Suvarna News Asianet Suvarna News

ಪಿತ್ರಾರ್ಜಿತ ಆಸ್ತಿಯನ್ನ ಬೇಡ ಅಂದೋರುಂಟಾ? ಈ ಹೋರಾಟಗಾರ್ತಿಯದ್ದು ವಿಭಿನ್ನ ದಾರಿ

ಪಿತ್ರಾರ್ಜಿತ ಆಸ್ತಿಯನ್ನು ಸದ್ವಿನಿಯೋಗ ಮಾಡಬೇಕೆಂದು ಆಸ್ಟ್ರಿಯಾದ ಹೋರಾಟಗಾರ್ತಿ ಮರೀನ್ ಎಂಜೆಲ್ಹಾರ್ನ್ ನಿರ್ಧರಿಸಿದ್ದಾರೆ. ಇದನ್ನು ಹೇಗೆ ಮಾಡಬಹುದು ಎಂದು ಸಲಹೆ ನೀಡಲೆಂದೇ ಸುಮಾರು 50 ಜನರನ್ನು ಆಯ್ಕೆ ಮಾಡಲಾಗಿದ್ದು, ಇವರು ತಮ್ಮ ವಿಚಾರ ಹಂಚಿಕೊಳ್ಳುತ್ತಿದ್ದಾರೆ. ಪಿತ್ರಾರ್ಜಿತ ಆಸ್ತಿಗಾಗಿ ಹೋರಾಟ ನಡೆಯುವ ಈ ದಿನಗಳಲ್ಲಿ ಇವರು, ಆಸ್ತಿಯನ್ನು ಲೋಕಕಲ್ಯಾಣಕ್ಕಾಗಿ ವಿನಿಯೋಗಿಸುತ್ತಿರುವುದು ಅಚ್ಚರಿಯ ಸಂಗತಿ.
 

This activist decided to distribute her ancestrol property sum
Author
First Published Feb 1, 2024, 5:30 PM IST

ಪಿತ್ರಾರ್ಜಿತ ಆಸ್ತಿ ಬೇಕೆಂದು ಎಲ್ಲರೂ ಬಯಸುತ್ತಾರೆ. ಸ್ವಯಾರ್ಜಿತ ಆಸ್ತಿ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ಪಿತ್ರಾರ್ಜಿತ ಆಸ್ತಿಯೆಂದರೆ ಎಲ್ಲರಿಗೂ ಬೇಕು. ಕೆಲವರಿಗೆ ಹಿರಿಯರು ಮಾಡಿಟ್ಟ ಭೂಮಿಯನ್ನು ಪ್ರಸಾದದ ರೂಪದಲ್ಲಾದರೂ ಸ್ವೀಕರಿಸಬೇಕು ಎನ್ನುವ ಭಾವನೆ. ಅಥವಾ ಹಾಗೆ ಹೇಳಾದರೂ ಮತ್ತೊಬ್ಬರ ಮೂಗಿಗೆ ತುಪ್ಪ ಒರೆಸುವ ಕೆಲಸ ಮಾಡುತ್ತಾರೆ. ಕೆಲವರಿಗೆ ಸುಲಭವಾಗಿ ಬರುವ ಆಸ್ತಿಯನ್ನು ಯಾಕಾದರೂ ಬಿಡಬೇಕು ಎನ್ನುವ ಮನೋಭಾವ. ಒಟ್ಟಿನಲ್ಲಿ ಊರು, ಭೂಮಿಯಿಂದ ದೂರವಿದ್ದರೂ ಪಿತ್ರಾರ್ಜಿತ ಆಸ್ತಿಯ ಮೇಲಿನ ಮೋಹ ಮಾತ್ರ ಹೋಗುವುದಿಲ್ಲ. ಇನ್ನು, ಕೆಲವರಂತೂ ಮಕ್ಕಳಿಗಾಗಿ ಹೆಚ್ಚು ಆಸ್ತಿ ಯಾಕೆ ಮಾಡಲಿಲ್ಲ ಎಂದು ತಂದೆಯನ್ನೇ ದಬಾಯಿಸುತ್ತಾರೆ. ಹೆಚ್ಚು ಆಸ್ತಿಯನ್ನು ಮಾಡಿಡದ ತಂದೆ-ತಾಯಿಯರನ್ನು ಗೋಳಾಡಿಸುವವರೂ ಇದ್ದಾರೆ. ಹೆಚ್ಚು ಆಸ್ತಿ ಮಾಡಿಟ್ಟವರಿಗೆ ಹೆಚ್ಚು ಮರ್ಯಾದೆಯಂತೂ ಇರುತ್ತದೆ. ಹೀಗಾಗಿ, ಪಿತ್ರಾರ್ಜಿತ ಆಸ್ತಿಯೆಂದರೆ ಅದೊಂದು ಬೇರೆಯದೇ ಆದ ಲೋಕ. ಕಿಲುಬು ಕಾಸಿಲ್ಲದೆ ಕೈಗೆ ಬರುವ ಪಿತ್ರಾರ್ಜಿತ ಆಸ್ತಿಯನ್ನು ಬೇಡ ಎನ್ನುವವರು ಕಡಿಮೆಯೇ. ಅದರಲ್ಲೂ ಲೋಕಕಲ್ಯಾಣಕ್ಕಾಗಿ ಪಿತ್ರಾರ್ಜಿತ ಆಸ್ತಿಯನ್ನು ಬಿಡುವವರು ಇಲ್ಲವೇ ಇಲ್ಲ ಎಂದರೆ ತಪ್ಪಿಲ್ಲ. ಇದ್ದರೂ ಬಹಳ ವಿರಳ ಪ್ರಮಾಣದಲ್ಲಿರುತ್ತಾರೆ. ಆಸ್ಟ್ರಿಯಾದ ಪತ್ರಕರ್ತೆ ಹಾಗೂ ಹೋರಾಟಗಾರ್ತಿಯೊಬ್ಬರು ಈಗ ಈ ವಿರಳಾತಿವಿರಳ ಜನರಿಗೆ ಸೇರ್ಪಡೆಯಾಗಿದ್ದಾರೆ. 

ಆಸ್ಟ್ರಿಯಾದ (Austria) ಪತ್ರಕರ್ತೆ ಹಾಗೂ ಹೋರಾಟಗಾರ್ತಿಯಾಗಿರುವ ಮರೀನ್ ಎಂಜೆಲ್ಹಾರ್ನ್ ತಮಗೆ ಪಿತ್ರಾರ್ಜಿತವಾಗಿ (Inheritance) ಬಂದಿರುವ ಆಸ್ತಿಯನ್ನು (Asset) ಬಿಟ್ಟುಕೊಡುವ ಮೂಲಕ ಈಗ ಸುದ್ದಿಯಲ್ಲಿದ್ದಾರೆ. ಈಕೆಗೆ ಬಂದಿರುವ ಆಸ್ತಿಯ ಪ್ರಮಾಣವಾದರೂ ಎಷ್ಟು ಗೊತ್ತೇ? ಒಂದೇ ಒಂದು ಮೆಟ್ಟು ಜಾಗ ಅಥವಾ ಒಂದು ಹೆಜ್ಜೆಯಷ್ಟನ್ನಾದರೂ ಅಣ್ಣನಿಗೋ, ತಮ್ಮನಿಗೋ ಬಿಟ್ಟುಕೊಡುವುದಿಲ್ಲ ಎಂದು ನಮ್ಮವರು ಹೊಡೆದಾಡಿಕೊಳ್ಳುವ ಸನ್ನಿವೇಶ ನೋಡಿರುತ್ತೇವೆ. ಅಂಥದ್ದರಲ್ಲಿ ಈಕೆ ಪಿತ್ರಾರ್ಜಿತವಾಗಿ ಬಂದಿರುವ ನೂರಾರು ಕೋಟಿ ರೂಪಾಯಿ ಆಸ್ತಿಯನ್ನು ಬಿಟ್ಟುಕೊಡಲು ಮನಸ್ಸು ಮಾಡಿದ್ದಾರೆ.

ಆನ್ಲೈನ್ ನಲ್ಲಿ ಹಳೆ ಕೋಟ್ ಖರೀದಿಸಿದ ಗ್ರಾಹಕಿ. ಅದನ್ನು ಬಳಸಿದ್ದೆಲ್ಲಿ?

ಪಿತ್ರಾರ್ಜಿತ ಸ್ವಂತದ್ದಲ್ಲ
ಮರೀನ್ ಎಂಜೆಲ್ಹಾರ್ನ್ ಕೋಟ್ಯಂತರ (Crores) ರೂಪಾಯಿ ಮೌಲ್ಯದ (Value) ಆಸ್ತಿಗೆ ವಾರಸುದಾರರಾಗಿದ್ದಾರೆ. ಆದರೆ, ಮೊದಲೇ ಹೇಳಿದಂತೆ ಪಿತ್ರಾರ್ಜಿತ ಆಸ್ತಿ ಸ್ವಂತ ದುಡಿಮೆಯಿಂದ ಬಂದಿರುವುದಿಲ್ಲ. ಹೀಗಾಗಿ, ಈಕೆಗೆ ಅದರ ಬಗ್ಗೆ ಮೋಹವಿಲ್ಲ. ಅಷ್ಟೇ ಅಲ್ಲ, ಅತ್ಯಂತ ವಿರಕ್ತ ಭಾವನೆ ಹೊಂದಿದ್ದಾರೆ. ಆಕೆ ಹೇಳುವುದನ್ನು ಕೇಳಿದರೆ ನಿಜಕ್ಕೂ ಎಲ್ಲರೂ ಒಮ್ಮೆ ಎದೆಮುಟ್ಟಿ ನೋಡಿಕೊಳ್ಳುವಂತೆ ಆಗುತ್ತದೆ. “ನಾನು ಅದೃಷ್ಟಕ್ಕೆ ವಾರಸುದಾರಳಾಗಿದ್ದೇನೆ. ಹೀಗಾಗಿಯೇ ನನ್ನ ಬಳಿ ಅಧಿಕಾರವಿದೆ. ಆಸ್ತಿಯಿದೆ. ಆದರೆ, ಇದೆಲ್ಲವುದಕ್ಕಾಗಿ ನಾನು ಏನೆಂದರೆ ಏನೂ ಮಾಡಿಲ್ಲ. ಅಪ್ರಯತ್ನಪೂರ್ವಕವಾಗಿ ಇದು ನನಗೆ ಬಂದಿದೆ. ಹೀಗಾಗಿ, ಇದನ್ನು ಅರ್ಹರಿಗೆ ದಾನ ಮಾಡುತ್ತೇನೆ’ ಎಂದು ಹೇಳಿದ್ದಾರೆ. 

ಆಸ್ತಿ ವಿನಿಯೋಗ ಹೇಗೆ?
ಆದರೆ, ಆಸ್ತಿಯನ್ನು (Wealth) ಹೇಗೆ ವಿನಿಯೋಗಿಸುವುದು ಅಥವಾ ಯಾವ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯ? ನಿಭಾಯಿಸಿಕೊಂಡು ಹೋಗುವ ಅರ್ಹರನ್ನು ಹುಡುಕುವುದು ಹೇಗೆ? ಹೀಗಾಗಿ, ಈ ಕುರಿತು ಚರ್ಚಿಸಲೆಂದು ಸುಮಾರು 10 ಸಾವಿರ ಜನರನ್ನು ಮೊದಲು ಗುರುತಿಸಲಾಗಿತ್ತು. ಬಳಿಕ, 50 ಜನರ ಶಾರ್ಟ್ ಲಿಸ್ಟ್ (Short List) ಮಾಡಲಾಗಿದ್ದು, ಆಸ್ತಿಯನ್ನು ಹೇಗೆ ವಿನಿಯೋಗಿಸಬಹುದು ಎನ್ನುವ ವಿಚಾರದಲ್ಲಿ ಇವರೊಂದಿಗೆ ಚರ್ಚಿಸುವ ಮೂಲಕ ನಿರ್ಧಾರ ಕೈಗೊಳ್ಳಲಿದ್ದಾರೆ.  ಪ್ರತೀ ವಾರಾಂತ್ಯದಲ್ಲಿ ಮರೀನ್ ಎಂಜೆಲ್ಹಾರ್ನ್ ಆಸ್ತಿ ಹಂಚಿಕೆಯ (Distribution) ಕುರಿತ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪಿತ್ರಾರ್ಜಿತ ಆಸ್ತಿಯನ್ನು ಹೇಗೆ ಬಳಕೆ (Use) ಮಾಡಬಹುದು ಎನ್ನುವ ನಿಟ್ಟಿನಲ್ಲಿ ಇವರು ವಿನೂತನ ವಿಚಾರಗಳನ್ನು ಹಂಚಿಕೊಳ್ಳಬಹುದು.

ಮದುವೆ ತಯಾರಿ, ಸಂಭ್ರಮದಲ್ಲಿದ್ದ ಮಗಳಿಗೆ ಶಾಕ್ ನೀಡಿದ ತಂದೆ!

31 ವರ್ಷದ ಮರೀನ್ ಎಂಜೆಲ್ಹಾರ್ನ್, ಇತ್ತೀಚೆಗೆ ತಮ್ಮ ಯೋಜನೆಯ (Plan) ಕುರಿತು ಕೃತಿಯೊಂದನ್ನು ಬಿಡುಗಡೆ ಮಾಡಿದ್ದಾರೆ. ಇದರ ಹೆಸರು “ಗುಡ್ ಕೌನ್ಸಿಲ್ ಫಾರ್ ರಿಡಿಸ್ಟ್ರಿಬ್ಯೂಷನ್’ ಎಂದಾಗಿದ್ದು, ಇದರಲ್ಲಿ ತಮ್ಮ ವಿಚಾರಗಳನ್ನು (Thoughts) ಅವರು ಹಂಚಿಕೊಂಡಿದ್ದಾರೆ. 

Follow Us:
Download App:
  • android
  • ios