ಸಾಮಾಜಿಕ ಜಾಲತಾಣ ರೆಡ್ಡಿಟ್ ನಲ್ಲಿ ಜನರು ತಮ್ಮ ಕಥೆಗಳನ್ನು ಹೇಳಿಕೊಳ್ತಿರುತ್ತಾರೆ. ಕೆಲವರ ಜೀವನದಲ್ಲಿ ನಡೆದ ಘಟನೆಗಳು ಅಚ್ಚರಿ ಹುಟ್ಟಿಸಿದ್ರೆ ಮತ್ತೆ ಕೆಲವು ನೋವು ನೀಡುತ್ತವೆ. ಈಗ ಈ ಮಹಿಳೆ ತನ್ನ ತಂದೆ ಮಾಡಿದ ಕೆಲಸವೊಂದರ ಬಗ್ಗೆ ಬರೆದು, ಬಳಕೆದಾರರ ಅಭಿಪ್ರಾಯ ಕೇಳಿದ್ದಾಳೆ.  

ಮಕ್ಕಳ ಮದುವೆಗಾಗಿ ಪಾಲಕರು ದೀರ್ಘ ಕಾಲದಿಂದಲೇ ಹಣ ಕೂಡಿಸಲು ಶುರು ಮಾಡ್ತಾರೆ. ಅಲ್ಲಿ ಇಲ್ಲಿ ಹೂಡಿಕೆ ಮಾಡಿ ಇಲ್ಲವೆ ಬ್ಯಾಂಕ್ ನಲ್ಲಿ ಹಣವಿಟ್ಟು, ಕೈನಲ್ಲಿ ಕಾಸಿದ್ದಾಗ ಬಂಗಾರ ಖರೀದಿ ಮಾಡಿ ಮಕ್ಕಳ ಮದುವೆಗೆ ಸಿದ್ಧತೆ ನಡೆಸುತ್ತಿರುತ್ತಾರೆ. ಮಗಳ ಮದುವೆ ಅಂದ್ರೆ ತಂದೆಗೆ ಜವಾಬ್ದಾರಿ ಎರಡುಪಟ್ಟು ಹೆಚ್ಚಾಗುತ್ತದೆ. ಮದುವೆಯಲ್ಲಿ ಹಾಗೆ ಮದುವೆ ಆದ್ಮೇಲೆ ಗಂಡನ ಮನೆಯಲ್ಲಿ ಮಗಳು ಯಾವುದೇ ತೊಂದರೆ ಎದುರಿಸದಿರಲಿ ಎನ್ನುವ ಕಾರಣಕ್ಕೆ ಮದುವೆಯನ್ನು ಅದ್ಧೂರಿಯಾಗಿ ಮಾಡುವುದಲ್ಲದೆ ಒಂದಿಷ್ಟು ವಸ್ತುವನ್ನು ಉಡುಗೊರೆ ರೂಪದಲ್ಲಿ ತಂದೆ ಮಗಳಿಗೆ ನೀಡುತ್ತಾನೆ. ಮಗಳ ಮದುವೆಗೆ ಸಾಲ ಮಾಡಿ, ಅದನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಪಾಲಕರಿದ್ದಾರೆ. ಮಗಳ ಮದುವೆ ಸಮಯದಲ್ಲಿ ಹೆಚ್ಚುವರಿ ಟೆನ್ಷನ್ ತಂದೆ ಮೇಲೆ ಇರುತ್ತದೆ ಅಂದ್ರೆ ತಪ್ಪಾಗೋದಿಲ್ಲ. ಆದ್ರೆ ಎಲ್ಲ ತಂದೆಯರು ಒಂದೇ ರೀತಿ ಇರೋದಿಲ್ಲ. ಅಪ್ಪ ಮಾಡಿದ ಹಣವನ್ನು ಮಗಳ ಮದುವೆಗೆ ಖರ್ಚು ಮಾಡುವ ಬದಲು ಮತ್ತಿನ್ನೇನಕ್ಕೂ ಬಳಸಿ ಮಗಳನ್ನು ಸಂಕಷ್ಟಕ್ಕೆ ನೂಕುವ ಪಾಲಕರಿದ್ದಾರೆ. ರೆಡ್ಡಿಟ್ ನಲ್ಲಿ ಮಹಿಳೆಯೊಬ್ಬಳು ತನ್ನಪ್ಪನ ಕಥೆ ಹೇಳಿದ್ದಾಳೆ. ಅಜ್ಜ ಅಂದ್ರೆ ಅಪ್ಪನ ಅಪ್ಪ, ಮೊಮ್ಮಗಳ ಮದುವೆಗೆ ಕೂಡಿಟ್ಟಿದ್ದ ಹಣವನ್ನು ಆಕೆಯ ತಂದೆ ಕಳ್ಳತನ ಮಾಡಿದ್ದಾನೆ. ಇದ್ರಿಂದಾಗಿ ಮದುವೆ ವೇಳೆ ಸಾಕಷ್ಟು ಕಷ್ಟ ಅನುಭವಿಸಬೇಕಾಯ್ತು ಎಂದು ರೆಡ್ಡಿಟ್ ಮೂಲಕ ಮಹಿಳೆ ಹೇಳಿಕೊಂಡಿದ್ದಾಳೆ. 

ರೆಡ್ಡಿಟ್ (Reddit) ನಲ್ಲಿ ಆಕೆ ನೀಡಿದ ಮಾಹಿತಿ ಪ್ರಕಾರ, ಆಕೆ ತಂದೆ, ಆಕೆಯ ಮದುವೆ (Marriage) ಗೆ ಕೂಡಿಟ್ಟಿದ್ದ ಹಣವನ್ನು ಕಳ್ಳತನ ಮಾಡಿದ್ದಾನೆ. ಇದೇ ಕಾರಣಕ್ಕೆ ತಂದೆ ಜೊತೆ ಸಂಬಂಧ ಮುರಿದುಕೊಳ್ಳಲು ಮಗಳು ಮುಂದಾಗಿದ್ದಾಳೆ. ತಂದೆ ಜೊತೆ ಮಾತನಾಡುವುದಿಲ್ಲ ಎಂದಿದ್ದಾಳೆ. 

ಓವ್ಯುಲೇಶನ್ ಆಗೋವಾಗ ಮಾತ್ರವಲ್ಲ, ವೀಕೆಂಡ್ ಗಳಲ್ಲೂ ಮಹಿಳೆಯರ ಕಾಮಾಸಕ್ತಿ ಹೆಚ್ಚುತ್ತಂತೆ!

ನಾವಿಬ್ಬರು ಓಡಿ ಹೋಗಿ ಮದುವೆ ಮಾಡಿಕೊಳ್ಳುವ ಆಲೋಚನೆ ಮಾಡಿದ್ದೆವು. ಕೊನೆಯಲ್ಲಿ ಮನೆಯವರ ಮುಂದೆ ಸಾಂಪ್ರದಾಯಿಕವಾಗಿ ದಾಂಪತ್ಯ ಜೀವನಕ್ಕೆ (Married Life) ಕಾಲಿಡುವ ನಿರ್ಧಾರಕ್ಕೆ ಬಂದ್ವಿ. ಇಬ್ಬರ ಮನೆಯಲ್ಲೂ ಮದುವೆಗೆ ಒಪ್ಪಿಗೆ ನೀಡಿದ್ದರು. ಮದುವೆಗೆ ಎಂಟು ತಿಂಗಳ ಇರುವಾಗಲೇ ಖರ್ಚಿ (Expenses) ನ ಬಗ್ಗೆ ಮಾತನಾಡಿದ್ದೆವು. ಇಬ್ಬರ ಮನೆಯಲ್ಲೂ ಹಣ ನೀಡುವುದಾಗಿ ಹೇಳಿದ್ದರು. ಮದುವೆ ಇನ್ನೇನು ಎರಡು ತಿಂಗಳಿದೆ ಎನ್ನುವ ವೇಳೆಗೆ ಅತ್ತೆಯಾಗುವವಳು ಹಣ ನೀಡಿದ್ದಳು. ಅದನ್ನು ನಾವು ಮದುವೆ ಹಾಲ್ ಬುಕ್ಕಿಂಗ್ ಗೆ ನೀಡಿದ್ವಿ. ಊಟದ ವ್ಯವಸ್ಥೆಗೆ ತಂದೆ ಹಣ ನೀಡುವುದಾಗಿ ಒಪ್ಪಿದ್ದರು. ಆದ್ರೆ ಮಾತಿನಂತೆ ನಡೆದುಕೊಳ್ಳಲಿಲ್ಲ. ನನ್ನ ಅಜ್ಜ, ನನ್ನ ಮದುವೆಗೆ ಕೂಡಿಟ್ಟಿದ್ದ ಹಣವನ್ನು ನನ್ನ ತಂದೆ ಕಳ್ಳತನ ಮಾಡಿದ್ದರು. ಇದ್ರಿಂದ ನಾವು ಸಾಕಷ್ಟು ಸಮಸ್ಯೆ ಎದುರಿಸಬೇಕಾಯ್ತು. ಕಷ್ಟಪಟ್ಟು ಹಣ ಹೊಂದಿಸಿ ಮದುವೆ ಆಗಿದ್ದೇವೆ. ಮೋಸ ಮಾಡಿದ ತಂದೆ ಜೊತೆ ಮಾತನಾಡದಿರುವ ನಿರ್ಧಾರಕ್ಕೆ ನಾನು ಬಂದಿದ್ದೇನೆ ಎಂದು ಮಹಿಳೆ ಬರೆದುಕೊಂಡಿದ್ದಾಳೆ. ಅಲ್ಲದೆ ಈ ವಿಷ್ಯವನ್ನು ಮನೆಯಲ್ಲಿ ಯಾರಿಗೂ ತಿಳಿಸಿಲ್ಲ ಎಂಬುದನ್ನೂ ಹೇಳಿದ್ದಾಳೆ.

ಒಂದು ಘಟನೆ ನಂತ್ರ ಸಂಬಂಧವೇ ಬದಲಾಯ್ತು, ಸಹೋದರನಾದ ಪತಿ!

ರೆಡ್ಡಿಟ್ ನಲ್ಲಿ ಈ ಪೋಸ್ಟ್ ವೈರಲ್ ಆಗಿದೆ. ಅನೇಕರು ಇದಕ್ಕೆ ಕಮೆಂಟ್ ಮಾಡಿದ್ದಾರೆ. ಅಜ್ಜ ನಿಮ್ಮ ಮದುವೆಗೆ ಕೂಡಿಟ್ಟ ಹಣವನ್ನು ಅಪ್ಪ ಖರ್ಚು ಮಾಡುವುದು ಸರಿಯಲ್ಲ. ಇದು ನಿಮಗೆ ಮಾತ್ರವಲ್ಲ ಅಜ್ಜನಿಗೂ ಮಾಡಿದ ಮೋಸ. ಹಾಗಾಗಿ ನೀವು ಈ ವಿಷ್ಯವನ್ನು ಅಜ್ಜನಿಗೆ ಅವಶ್ಯವಾಗಿ ಹೇಳಿ ಎಂದು ಅನೇಕರು ಸಲಹೆ ನೀಡಿದ್ದಾರೆ. ಮನೆಯ ಎಲ್ಲರಿಗೂ ಈ ವಿಷ್ಯ ತಿಳಿಯಬೇಕಾದ ಅವಶ್ಯಕತೆ ಇದೆ ಎಂದು ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ತಮ್ಮ ಮದುವೆಯಲ್ಲಿ ತಂದೆ ಏನು ಮಾಡಿದ್ರು ಎಂಬುದನ್ನು ಹೇಳಿಕೊಂಡಿದ್ದಾರೆ.