ಆನ್ಲೈನ್ ನಲ್ಲಿ ಹಳೆ ಕೋಟ್ ಖರೀದಿಸಿದ ಗ್ರಾಹಕಿ. ಅದನ್ನು ಬಳಸಿದ್ದೆಲ್ಲಿ?
ನಮ್ಮ ವಸ್ತುಗಳ ಮೇಲೆ ನಮಗೊಂದು ವಿಶೇಷ ಪ್ರೀತಿ ಇರುತ್ತದೆ. ಅದನ್ನು ಬೇರೆಯವರ ಕೈಗೆ ನೀಡಿದಾಗ ಅವರೂ ಅಷ್ಟೇ ಕಾಳಜಿಯಲ್ಲಿ ನೋಡಿಕೊಳ್ಬೇಕು ಅಂತಾ ಬಯಸ್ತೇವೆ. ಅವರೇನಾದ್ರೂ ಅದನ್ನು ತಪ್ಪಾಗಿ ಬಳಸಿದ್ರೆ ಕಣ್ಣಲ್ಲಿ ನೀರು ಬರುವಷ್ಟು ನೋವಾಗುತ್ತೆ.
ಹಿಂದೆ ಹೊಸ ಬಟ್ಟೆಗಳನ್ನು ಖರೀದಿಸಲು ಹಣವಿಲ್ಲ ಎನ್ನುವ ಕಾರಣಕ್ಕೆ ಸಂಬಂಧಿಕರು, ಇಲ್ಲವೆ ಶ್ರೀಮಂತರು ಬಳಸಿದ ಬಟ್ಟೆಯನ್ನು ಅವರಿಂದ ಪಡೆದು ಧರಿಸ್ತಿದ್ದರು. ಆದ್ರೆ ಈಗ ಅದೇ ಒಂದು ಬ್ಯುಸಿನೆಸ್ ಆಗಿದೆ. ಜನರು ಹಣ ಮಾಡಲು ತಮ್ಮ ಹಳೆಯ ಹಾಗೂ ಧರಿಸಲು ಯೋಗ್ಯವಾಗಿರುವ ಬಟ್ಟೆಯನ್ನು ಬಡವರಿಗೆ ದಾನ ಮಾಡುವ ಬದಲು ಅದನ್ನು ಮಾರಾಟ ಮಾಡ್ತಿದ್ದಾರೆ. ಕೆಲ ವೆಬ್ ಸೈಟ್ ಗಳು ಹಳೆ ಬಟ್ಟೆಗಳ ಮಾರಾಟಕ್ಕೆ ಪ್ರಸಿದ್ಧಿ ಪಡೆದಿವೆ. ನೀವು ಬಳಸಿದ ಬಟ್ಟೆಯನ್ನು ಅಲ್ಲಿ ಮಾರಾಟ ಮಾಡಬಹುದು. ಹಾಗೆಯೇ ಅವರು ಬಳಸಿದ ಬಟ್ಟೆಯನ್ನು ನೀವು ಖರೀದಿ ಕೂಡ ಮಾಡಬಹುದು. ಸೆಕೆಂಡ್ ಹ್ಯಾಂಡ್ ಬಟ್ಟೆಯನ್ನು ಜನರು ಖರೀದಿ ಮಾಡಿ ತಮ್ಮಿಷ್ಟ ಬಂದಂತೆ ಬಳಸ್ತಾರೆ. ನಿಮಗೆ ಅತ್ಯಂತ ಪ್ರಿಯವಾದ ಡ್ರೆಸನ್ನು ಖರೀದಿ ಮಾಡಿದವರೂ ಧರಿಸಬೇಕು ಎಂದೇನಿಲ್ಲ. ಅದನ್ನು ಅವರು ಪಿಲ್ಲೋ ಕವರ್ ಮಾಡಲು ಬಳಸಬಹುದು. ಅದು ಅವರ ಆಯ್ಕೆ. ಹೀಗೆ ಆನ್ಲೈನ್ ನಲ್ಲಿ ಒಂದು ಕೋಟ್ ಮಾರಾಟ ಮಾಡಿದ್ದ ಮಹಿಳೆ, ಖರೀದಿ ಮಾಡಿದವರು ಅದನ್ನು ಹೇಗೆ ಬಳಸಿದ್ದಾರೆ, ಅದ್ರಿಂದ ತನಗೆ ಎಷ್ಟು ನೋವಾಗಿದೆ ಎಂಬುದನ್ನು ಹಂಚಿಕೊಂಡಿದ್ದಾಳೆ.
ಟೋರಿ @blondietori88 ಹೆಸರಿನ ಟ್ವಿಟರ್ (Twitter) ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ. ಟೋರಿಗೆ 35 ವರ್ಷ ವಯಸ್ಸು. ಆಕೆ ತನ್ನನ್ನು ತಾನು ಫ್ರಾಂಕೋಫೈಲ್ (Francophile) ಎಂದಿದ್ದಾಳೆ. ಫ್ರಾಂಕೋಫೈಲ್ ಅಂದ್ರೆ ಫ್ರಾನ್ಸ್ (France) ಅಥವಾ ಫ್ರಾನ್ಸ್ ಜನರನ್ನು ಪ್ರೀತಿಸುವ ಜನರು ಎಂದರ್ಥ. ಅಂದ್ರೆ ಟೋರಿ, ಫ್ರಾನ್ಸ್ ನವಳು. ಟೋರಿ, ಟ್ವಿಟರ್ ನಲ್ಲಿ ಸ್ಕ್ರೀನ್ ಶಾಟ್ ಒಂದನ್ನು ಹಂಚಿಕೊಂಡಿದ್ದಾಳೆ. ಅದ್ರಲ್ಲಿ ವಿಂಟೆಡ್ ಹೆಸರಿನ ವೆಬ್‌ಸೈಟ್ ಸ್ಕ್ರೀನ್ ಶಾಟ್ ಇದೆ. ವಿಂಟೆಡ್ ಹಳೆ ಬಟ್ಟೆಗಳನ್ನು ಮಾರಾಟ ಮಾಡುವ – ಖರೀದಿ ಮಾಡುವ ಒಂದು ವೆಬ್ಸೈಟ್ ಆಗಿದೆ.
ಜರ್ಮನಿಯೊಂದೇ ಅಲ್ಲ, ಈ 7 ದೇಶಗಳಲ್ಲಿದೆ ವಾರಕ್ಕೆ 4 ದಿನ ಕೆಲಸ ಪಾಲಿಸಿ
ಟೋರಿ ಬಳಿ ಚಿರತೆ ಮುದ್ರೆಯ ಒಂದು ಕೋಟ್ ಇತ್ತು. ಆ ಕೋಟ್ ಟೋರಿಗೆ ಬಹಳ ಇಷ್ಟವಾಗಿತ್ತು. ಅದನ್ನು ಟೋರಿ ಆನ್ಲೈನ್ ನಲ್ಲಿ ಮಾರಾಟ ಮಾಡಲು ಮುಂದಾಗಿದ್ದಾಳೆ. ಆ ಕೋಟನ್ನು ಗ್ರಾಹಕರೊಬ್ಬರು ಖರೀದಿ ಕೂಡ ಮಾಡಿದ್ದಾರೆ. ಆ ಕೋಟ್ ಮಾರಾಟವಾಗಿದ್ದು ಟೋರಿಗೆ ಖುಷಿ ನೀಡಿತ್ತು. ಆದ್ರೆ ಅವರು ಯಾವ ಉದ್ದೇಶಕ್ಕೆ ಚಿರತೆ ಮುದ್ರೆಯ ಈ ಕೋಟ್ ಖರೀದಿ ಮಾಡಿದ್ದಾರೆ ಎಂಬುದು ತಿಳಿದ ಮೇಲೆ ನಿರಾಸೆಯಾಗಿದೆ. ಇದೊಂದು ಅವಮಾನ. ನಾನು ಇಷ್ಟು ದೊಡ್ಡ ಅವಮಾನವನ್ನು ಜೀವನದಲ್ಲಿ ಎದುರಿಸಿರಲಿಲ್ಲ ಎಂದು ಬರೆದಿದ್ದಾಳೆ.
ಅಷ್ಟಕ್ಕೂ ಕೋಟ್ ಬಳಕೆಯಾಗಿದ್ದು ಎಲ್ಲಿ? : ಟೋರಿಯ ಈ ಕೋಟನ್ನು ಆಕೆ ಮತ್ತ್ಯಾವ ಉದ್ದೇಶಕ್ಕೂ ಖರೀದಿ ಮಾಡಿಲ್ಲ, ಫ್ಯಾನ್ಸಿ ಡ್ರೆಸ್ (Fancy Dress) ಕಾಂಪಿಟೇಶನ್ ಗಾಗಿ ಖರೀದಿ ಮಾಡಿದ್ದಳು. ಖರೀದಿ ಮಾಡಿದ ಹುಡುಗಿ ಕ್ಯಾಟ್ ಸ್ಲೇಟರ್ ಪಾತ್ರವನ್ನು ನಿರ್ವಹಿಸಬೇಕಾಗಿತ್ತು, ಕ್ಯಾಟ್ ಸ್ಲೇಟರ್ ಧಾರವಾಹಿಯಲ್ಲಿ ಬರುವ ಒಂದು ಪಾತ್ರ. ನಟಿ ಜೆಸ್ಸಿಕಾ ವ್ಯಾಲೇಸ್ ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರದಲ್ಲಿ ಅವರು ಯಾವಾಗ್ಲೂ ಚಿರತೆ ಪ್ರಿಂಟ್ ಕೋಟ್ ಅನ್ನು ಧರಿಸುತ್ತಾರೆ. ಹಾಗಾಗಿಯೇ ಫ್ಯಾನ್ಸಿ ಡ್ರೆಸ್ ಕಾಂಪಿಟೇಷನ್ ನಲ್ಲಿ ಪಾಲ್ಗೊಳ್ಳಬೇಕಾಗಿದ್ದ ಹುಡುಗಿ ಕೂಡ ಈ ಕೋಟ್ ಧರಿಸಿದ್ದಾಳೆ. ಇದೇ ಕಾರಣಕ್ಕೆ ಕೋಟ್ ಖರೀದಿ ಮಾಡ್ತಿರುವುದಾಗಿ ವೆಬ್ಸೈಟ್ ನಲ್ಲಿ ಆಕೆ ಬರೆದಿದ್ದಾಳೆ.
ಕಣ್ಣು ಕುಕ್ಕುತ್ತೆ ವಿಶ್ವದ ಏಕೈಕ 10 ಸ್ಟಾರ್ ಹೋಟೆಲ್ ಒಳಾಂಗಣ; ಒಂದು ದಿನದ ಬಾಡಿಗೆ ಎಷ್ಟು?
ಆದ್ರೆ ತನ್ನಿಷ್ಟದ ಕೋಟನ್ನು ಖರೀದಿದಾರಳು ಫ್ಯಾನ್ಸಿ ಡ್ರೆಸ್ ಕಾಂಪಿಟೇಷನ್ ಉದ್ದೇಶಕ್ಕೆ ಖರೀದಿ ಮಾಡಿದ್ದು ಟೋರಿಗೆ ಇಷ್ಟವಾಗಿಲ್ಲ. ಇದು ನಾಚಿಗೆ ವಿಷ್ಯ ಎಂದಿದ್ದಾಳೆ. ಆಕೆ ಪೋಸ್ಟ್ ವೈರಲ್ ಆಗಿದೆ. ಈವರೆಗೆ ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದು, ಕಮೆಂಟ್ ಕೂಡ ಮಾಡಿದ್ದಾರೆ.