ಸ್ನಾನ ಮಾಡಕ್ಕಾಗ್ಲಿಲ್ಲ ಅಂತ ಗುಪ್ತಾಂಗ ಹಾಗೂ ಕಂಕುಳಿಗೆ ಸೆಂಟ್ ಹಾಕ್ಕೊಳ್ಳುತ್ತಾರೆ,  ಸ್ನಾನ ಮಾಡುವಾಗ ನೀರಿನೊಂದಿಗೆ ಯೂರಿನ್ನನ್ನೂ ಸೇರಿಸಿ ಹರಿಸುತ್ತಾರೆ! ಮಾತನ್ನು ಮನರಂಜಕವಾಗಿಸಲು ಅಲ್ಲೊಂದಿಷ್ಟು ಸುಳ್ಳುಪಳ್ಳುಗಳನ್ನು ಸೇರಿಸುತ್ತಾರೆ. ಫ್ಲಶ್ ಮಾಡುವ ಮೊದಲು ಅದರತ್ತ ಒಮ್ಮೆ ಕಣ್ಣು ಹಾಯಿಸುತ್ತಾರೆ- ಹುಡುಗಿಯರೆಂದರೆ ದೇವಲೋಕದ ಅಪ್ಸರೆಯರು ಎಂದುಕೊಂಡಿರುವ ಹುಡುಗರು ಹಲವರು. ಅವರಲ್ಲಿ ಯಾವುದೇ ಇಂಥ ದುರಭ್ಯಾಸ(?)ಗಳನ್ನು ಕೂಡಾ ಕಲ್ಪಿಸಿಕೊಳ್ಳಲಾರರು. ಆದರೆ, ಹುಡುಗಿಯರು ಕೂಡಾ ಹುಡುಗರಂತೆಯೇ- ಅವರು ಮಾಡುವುದೆಲ್ಲವನ್ನೂ ಮಾಡುತ್ತಾರೆ, ಆದರೆ ಸ್ವಲ್ಪ ಗುಟ್ಟಾಗಿ, ತನ್ನನ್ನು ಬಿಟ್ಟು ಮತ್ತಾರಿಗೂ ತಿಳಿಯದಂತೆ ಮಾಡುತ್ತಾರೆ ಅಷ್ಟೇ. 

ಮನುಷ್ಯರೆಲ್ಲರೂ ಒಂದಿಲ್ಲೊಂದು ಬಾರಿ ವಿಚಿತ್ರವಾಗಿ ವರ್ತಿಸುತ್ತೇವೆ. ಕೆಲವೊಂದು ವಿಷಯಗಳನ್ನು ಗುಟ್ಟು ಮಾಡಲೂ ಬಯಸುತ್ತೇವೆ. ಆದರೆ, ಈ ಎಲ್ಲ ವಿಲಕ್ಷಣವಾದ, ವಿಪರೀತದ ವರ್ತನೆಯನ್ನು ಪುರುಷರು ಮಾತ್ರ ತೋರುತ್ತಾರೆ ಎಂದು ಬಹುತೇಕರು ನಂಬಿರುತ್ತಾರೆ. ಹುಡುಗಿಯರೇನಿದ್ದರೂ ಹೈಫೈ. ಅವರಲ್ಲಿ ಯಾವುದೇ ಒರಟಾದ, ಅವಮಾನಕರವಾದ, ವಿಲಕ್ಷಣವಾದ ವರ್ತನೆಯಿರಲು ಸಾಧ್ಯವಿಲ್ಲ ಎಂದುಕೊಂಡಿರುತ್ತಾರೆ. ಆದರೆ, ಎಲ್ಲ ಹುಡುಗಿಯರೂ ಸೀಕ್ರೆಟ್ ಆಗಿ ಈ ವರ್ತನೆಗಳನ್ನು ತೋರುತ್ತಿರುತ್ತಾರೆ. ಆದರೆ, ಬಹಿರಂಗವಾಗಿ ಒಪ್ಪಿಕೊಳ್ಳುವುದಿಲ್ಲ ಅಷ್ಟೇ. 

7 ವರ್ಷ ಸಾಕಿದ್ದ ಮಗನೇ ಆಕೆಯನ್ನು ಗರ್ಭಿಣಿ ಮಾಡಿದ!

ಸೈಬರ್ ಸ್ಟಾಕಿಂಗ್
ರಿಲ್ಯಾಕ್ಸ್, ಕಾನೂನುಬಾಹಿರವಾದದ್ದೇನು ಅಲ್ಲ. ಯಾರು ಯಾರನ್ನು ಡೇಟ್ ಮಾಡುತ್ತಿದ್ದಾರೆ, ಪಕ್ಕದ ಮನೆಯಲ್ಲೇನು ತಿಂಡಿ ಮಾಡಿದ್ದಾರೆ, ನಮ್ಮ ತರಗತಿಯ ಆ ಹುಡುಗಿ ದೀಪಾವಳಿಗೆ ಏನು ಬಟ್ಟೆ ಹಾಕಿದ್ದಳು, ನಮ್ಮ ಎಕ್ಸ್ ತನ್ನ ಹೊಸ ಗರ್ಲ್‌ಫ್ರೆಂಡ್ ಜೊತೆ ಎಲ್ಲಿಲ್ಲಿ ಸುತ್ತುತ್ತಿದ್ದಾನೆ, ಅವಳೊಂದಿಗೆ ನಿಜವಾಗಿಯೂ ಖುಷಿಯಾಗಿದ್ದಾನಾ, ಅವಳ ಪ್ರೊಫೈಲ್ ಹೇಗಿದೆ ಮುಂತಾದ್ದನ್ನೆಲ್ಲ ಎಲ್ಲ ಹುಡುಗಿಯರೂ ಸ್ಟಾಕ್ ಮಾಡುತ್ತಿರುತ್ತಾರೆ. ಅಷ್ಟೇ ಅಲ್ಲ, ಇಂದು ಪಾರ್ಟಿಯಲ್ಲಿ ಹುಡುಗನೊಬ್ಬ ಭೇಟಿಯಾದಾಗ ತನಗೆ ಅವನ ಬಗ್ಗೆ ತಿಳಿಯಲು ಆಸಕ್ತಿಯೇ ಇಲ್ಲದಂತೆ ವರ್ತಿಸಿದರೂ, ಮನೆಗೆ ಹೋಗುತ್ತಿದ್ದಂತೆಯೇ ಫೇಸ್ಬುಕ್‌ನಲ್ಲಿ ಅವನ ಹೆಸರು ಹುಡುಕಿ ಪ್ರೊಫೈಲ್ ಚೆಕ್ ಮಾಡುತ್ತಾರೆ. ಆತ ಏನು ಲೈಕ್ ಮಾಡಿದ್ದಾನೆ, ಎಂಥ ಆಸಕ್ತಿ ಹೊಂದಿದ್ದಾನೆ ಎಲ್ಲವನ್ನೂ ಹುಡುಕಾಡುತ್ತಾರೆ. 

ಮೂಗಿನಲ್ಲಿ ಗಣಿಗಾರಿಕೆ
ಸಣ್ಣಗಿರುವಾಗ ಮೂಗಿಗೆ ಬೆರಳು ಹಾಕಿದರೆ ಅಮ್ಮ ಕೈಮೇಲೆ ಹೊಡೆಯುತ್ತಿದ್ದಳಷ್ಟೇ. ಆನಂತರದಲ್ಲಿ ಅದನ್ನು ಬಿಟ್ಟರೆಂದು ಅಮ್ಮ ಎಂದುಕೊಂಡಳು. ಆದರೆ, ಅವರದನ್ನು ಸೀಕ್ರೆಟ್ ಆಗಿ ಮಾಡಲಾರಂಭಿಸುತ್ತಾರೆ. ಕೆಲವೊಮ್ಮೆ ಹಾಗೆ ಮಾಡುವುದು ಅವರಿಗೆ ಗೊತ್ತಾಗುವುದೇ ಇಲ್ಲ. ಅವರು ಅಮ್ಮನಾಗಿ ಮಕ್ಕಳಿಗೆ ಮೂಗಿಗೆ ಬೆರಳು ತೂರಿಸದಂತೆ ಬುದ್ಧಿ ಹೇಳುತ್ತಿದ್ದರೂ ಅವರ ಅಭ್ಯಾಸ ಏಕಾಂತದಲ್ಲಿ ನಡೆಯುತ್ತಿರುತ್ತದೆ. 

ಗಡ್ಡದ ಕೂದಲನ್ನು ಹೆಕ್ಕಿ ತೆಗೆಯುವುದು
ಬಹಳಷ್ಟು ಹುಡುಗಿಯರಿಗೆ, ಮಹಿಳೆಯರಿಗೆ ಗಡ್ಡ, ಮೀಸೆ ಜಾಗದಲ್ಲಿ ಒಂದೆರಡು ಉದ್ದ ಕೂದಲು ಹಣುಕುವುದಿದೆ. ಯಾರಾದರೂ ಹುಡುಗಿಯರ ಬ್ಯೂಟಿ ಸೀಕ್ರೆಟ್ ಕೇಳಿದರೆ ರಾತ್ರಿ ಹೊತ್ತು ಕ್ರೀಮ್ ಹಚ್ಚುವುದು, ಫೇಶಿಯಲ್ ಇತ್ಯಾದಿ ಇತ್ಯಾದಿ ಹೇಳುವುದಿದೆ. ಆದರೆ, ಗಡ್ಡದಲ್ಲಿ ಉದ್ದಕೆ ಹಣಕಿದ ಕೂದಲನ್ನು ಟ್ವೀಜರ್‌ನಿಂದ ತೆಗೆದುಕೊಂಡಿದ್ದನ್ನು ಯಾರೂ ಹೇಳುವುದಿಲ್ಲ. 

ಸಂಗಾತಿಯ ಬಟ್ಟೆ ಮೂಸುವುದು
ಸಂಗಾತಿಯ ಬಟ್ಟೆ ಮೂಸುವುದು ಒಂಥರಾ ಸ್ಟ್ರೆಸ್ ಬಸ್ಟರ್. ಇದನ್ನು ಹಲವು ಅಧ್ಯಯನಗಳೂ ಹೇಳಿವೆ. ಈ ಕೆಲಸದಲ್ಲಿ ಹಲವು ಮಹಿಳೆಯರಿಗೆ ಒಂದು ರೀತಿಯ ಸಮಾಧಾನ ಸಿಗುತ್ತದೆ, ಸಾಂತ್ವಾನವೂ. ಆದರೆ, ಕೆಲವರು ಮಾತ್ರ ಗಂಡನ ಮೇಲಿನ ಅನುಮಾನದಿಂದ ಯಾರೂ ಇಲ್ಲದಾಗ ಆತನ ಬಟ್ಟೆ ಮೂಸಿ ನೋಡಿ ಸಾಕ್ಷಿಗಾಗಿ ತಡಕಾಡುತ್ತಾರೆ. 

ಎಲ್ಲ ಇದ್ದೂ ನಾವೇಕೆ ಖುಷಿಯಾಗಿಲ್ಲ?

ಡೇಟಿಂಗ್ ತಯಾರಿ
ಹುಡುಗಿಯೊಬ್ಬಳು ಡೇಟಿಂಗ್ ಹೋಗುತ್ತಾಳೆ ಎಂದರೆ ಆಕೆ ಹಲವು ರೀತಿಯ ಸಂಭಾಷಣೆಗಳನ್ನು, ಹೇಗೆ ನಗಬೇಕು, ಹೇಗೆ ವರ್ತಿಸಬೇಕು ಎಂಬುದನ್ನೆಲ್ಲ ಮನಸ್ಸಿನಲ್ಲೇ ಹಲವು ಬಾರಿ ಕಲ್ಪಿಸಿಕೊಂಡಿರುತ್ತಾಳೆ. ಇದನ್ನು ಕನ್ನಡಿ ಮುಂದೆಯೂ ಪ್ರಾಕ್ಟೀಸ್ ಮಾಡಿರುತ್ತಾಳೆ. ಅಷ್ಟೇ ಅಲ್ಲ, ತಾನು ಕೂದಲನ್ನು ಕಟ್ಟಬೇಕೇ ಬಿಡಬೇಕೆ, ಯಾವ ಬಟ್ಟೆ ಹಾಕಬೇಕು, ಅದಕ್ಕೆ ಯಾವೆಲ್ಲ ಮ್ಯಾಚಿಂಗ್ ಆಭರಣಗಳನ್ನು ಹಾಕಬೇಕು, ಚಪ್ಪಲಿ ಯಾವುದು ಹೊಂದುತ್ತದೆ ಎಂಬುದನ್ನೆಲ್ಲ ಯೋಚಿಸುವಾಗ ಮನಸ್ಸಿನಲ್ಲೊಂದು ದೊಡ್ಡ ಯುದ್ಧವೇ ಆದಂತಾಗುತ್ತಿರುತ್ತದೆ. 

ಸೌಂದರ್ಯದ ಮೆಚ್ಚುಗೆ
ಹುಡುಗಿಯೊಬ್ಬಳು ತನ್ನ ಅಂದಚೆಂದಕ್ಕೆ ಅಷ್ಟಾಗಿ ಪ್ರಾಮುಖ್ಯತೆ ಕೊಡುವುದಿಲ್ಲ ಎಂಬಂತೆ ವರ್ತಿಸಿದರೂ, ಆಕೆ ತೆರೆಯ ಹಿಂದೆ ಸಾಧ್ಯವಾದಷ್ಟು ಚೆಂದ ಕಾಣಲು ಶ್ರಮ ಹಾಕಿರುತ್ತಾಳೆ. ಪದೇ ಪದೆ ಪೋನ್ ಕ್ಯಾಮೆರಾದಲ್ಲಿ ಮುಖ ನೋಡಿಕೊಂಡು ತನ್ನ ಸೌಂದರ್ಯಕ್ಕೆ ತಾನೇ ಮೆಚ್ಚುಗೆ ಕೊಟ್ಟುಕೊಳ್ಳುತ್ತಿರುತ್ತಾಳೆ.