Asianet Suvarna News Asianet Suvarna News

Cleaning Tips : ಒಂದ್ಕಡೆ ಕ್ಲೀನ್ ಮಾಡಿದ್ರೆ ಇನ್ನೊಂದು ಕಡೆ ಕೊಳಕಿರುತ್ತೆ ಏನು ಮಾಡ್ಲಿ?

ಮನೆ ಕ್ಲೀನ್ ಮಾಡಿ ಮಾಡಿ ಸುಸ್ತಾಯ್ತು ಅಂತಾ ಮಹಿಳೆಯರು ಹೇಳೋದನ್ನು ನೀವು ಕೇಳಿರಬಹುದು. ಮನೆ ಕ್ಲೀನ್ ಮಾಡೋದು ಅಷ್ಟು ಕಷ್ಟವಾ ಅಂತಾ ನಿಮಗೆ ಅನ್ನಿಬಹುದು. ಹೌದು, ಮನೆಯನ್ನು ಅಚ್ಚುಕಟ್ಟಾಗಿ ಇಡೋದು ಒಂದು ಕಲೆ. ಅದನ್ನು ನಿಯಮಿತವಾಗಿ ಮಾಡಿದ್ರೆ ಮನೆ ಸುಂದರವಾಗಿ ಕಾಣೋದ್ರಲ್ಲಿ ಡೌಟೇ ಇಲ್ಲ.
 

Things To Do If You Feel Your Home Is Never Clean
Author
First Published Dec 28, 2022, 2:22 PM IST

ಮನೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಿದ ನಂತರವೂ ಅನೇಕ ಬಾರಿ ಸಂಪೂರ್ಣ ತೃಪ್ತಿ ನಮಗೆ ಸಿಗೋದಿಲ್ಲ. ಇದಲ್ಲೆ ಕಾರಣ ಮನೆಯ ಯಾವುದೋ ಮೂಲೆ ಅಸ್ವಸ್ತವಾಗಿರುತ್ತದೆ. ಮಕ್ಕಳಿಗೆ ರಜೆ ಇದ್ರೆ ಮುಗಿದೇ ಹೋಯ್ತು. ನೀವು ಬೆಳಿಗ್ಗೆ ಮನೆ ಸ್ವಚ್ಛಗೊಳಿಸಿದ್ದು ವ್ಯರ್ಥವಾದಂತೆ. ಪ್ರತಿ ದಿನ ಎರಡು ಬಾರಿ ಮನೆ ಕ್ಲೀನ್ ಮಾಡೋದು ಸುಲಭದ ಕೆಲಸವಲ್ಲ. ಅದ್ರಲ್ಲೂ ಉದ್ಯೋಗಸ್ಥ ಮಹಿಳೆಯರಿಗೆ ಇದು ಸವಾಲಿನ ಕೆಲಸ. ವಾರಾಂತ್ಯದಲ್ಲಿ ಮನೆ ಕ್ಲೀನ್ ಮಾಡಿರ್ತಾರೆ. ಆದ್ರೆ ವಾರದ ದಿನಗಳಲ್ಲಿ ಮನೆ ಮತ್ತೆ ಹಳೆ ಸ್ಥಿತಿಗೆ ಬಂದಿರುತ್ತದೆ. ರೂಮ್ ಕ್ಲೀನ್ ಮಾಡಿದ್ರೆ ಹಾಲ್ ಚೆನ್ನಾಗಿ ಕಾಣಲ್ಲ, ಹಾಲ್ ಮಾಡಿದ್ರೆ ಬಾತ್ ರೂಮ್ ಅಂತ ನೀವು ಟೆನ್ಷನ್ ನಲ್ಲಿದ್ರೆ ಕೂಲ್ ಆಗಿ. ನಾವು ಮನೆಯನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳಬೇಕು ಎನ್ನುವ ಬಗ್ಗೆ ನಿಮಗೆ ಮಾಹಿತಿಯನ್ನು ನೀಡ್ತೆವೆ. 

ಅಡುಗೆ ಮನೆ (Kitchen) ಯಲ್ಲಿ ಈ ರೂಲ್ಸ್ ಫಾಲೋ ಮಾಡಿ : ಅಡುಗೆ ಮನೆಯ ಗ್ಯಾಸ್ (Gas) ಕಟ್ಟೆಯ ಮೇಲೆ ಹೆಚ್ಚು ಪಾತ್ರವಿದ್ದಷ್ಟೂ ಅದರ ಸೌಂದರ್ಯ ಕೆಡುತ್ತದೆ. ಹಾಗಾಗಿ ಎಲ್ಲ ಪಾತ್ರೆ (Utensil) ಯನ್ನು ನೀವು ಅದ್ರ ಮೇಲೆ ಇಡಬೇಡಿ. ನಿಮಗೆ ಅಗತ್ಯವಿಲ್ಲ ಎನ್ನುವ ಪಾತ್ರೆಗಳನ್ನು ಒಳಗಿಡಿ. ಸಣ್ಣಪುಟ್ಟ ಲೋಟಗಳನ್ನು ಗ್ಯಾಸ್ ಕಟ್ಟೆ ಮೇಲೆ ಇಡಬೇಡಿ. ಅಡುಗೆ ಮಾಡಿದ ನಂತ್ರ ಕಟ್ಟೆಯನ್ನು ಸ್ವಚ್ವಗೊಳಿಸಿ. ತರಕಾರಿ ಹೆಚ್ಚಿನದ ನಂತ್ರ ಸಿಪ್ಪೆ ತೆಗೆದ ನಂತ್ರ ಅದನ್ನು ಡಸ್ಟ್ ಬಿನ್ ಗೆ ಹಾಕಿ. ಸಿಂಕ್ ನಲ್ಲಿ ಪಾತ್ರೆಗಳನ್ನು ಇಡುವ ಅಭ್ಯಾಸ ಅನೇಕರಿಗಿರುತ್ತದೆ. ಹಾಗೆ ಮಾಡಿದ್ರೆ ಅಡುಗೆ ಮನೆ ಸುಂದರವಾಗಿ ಕಾಣುವುದಿಲ್ಲ. ಜೊತೆಗೆ ಕೆಲಸ ಹೆಚ್ಚಾಗುತ್ತದೆ. ಆ ಕ್ಷಣದಲ್ಲಿಯೇ ಪಾತ್ರೆ ತೊಳೆದ್ರೆ ನಿಮಗೆ ಕೆಲಸ ಭಾರ ಎನ್ನಿಸುವುದಿಲ್ಲ. 

ಹಿರಿಯರು ಮನೆಯಲ್ಲಿದ್ದರೆ ಹೆರಿಗೆ ನಂತ್ರ ನೀರು ಕುಡಿಯಲು ಬಿಡೋಲ್ಲ, ಇದು ಒಳ್ಳೇದಾ?

ಒಂದೇ ದಿನ ಕೆಲಸ ಹೊರೆಯಾಗ್ಬಾರದು ಅಂದ್ರೆ ಹೀಗೆ ಮಾಡಿ : ಮೊದಲನೇಯದಾಗಿ ಸ್ವಚ್ಛಗೊಳಿಸುವ ವಸ್ತುಗಳು ಕೈಗೆ ಸಿಗುವಂತೆ ಇರಬೇಕು. ಬಾತ್ ರೂಮಿನಲ್ಲಿ ಸ್ವಚ್ಛಗೊಳಿಸುವ ವಸ್ತುಗಳು ನಿಮ್ಮ ಕಣ್ಣಿಗೆ ಕಾಣುವಂತೆ ಇಡಿ. ಅಡುಗೆ ಮನೆಯಲ್ಲಿ ಕೂಡ ಕ್ಲೀನಿಂಗ್ ಬಟ್ಟೆಯನ್ನು ಸ್ಟ್ಯಾಂಡ್ ನಲ್ಲಿ ಇಟ್ಟುಕೊಳ್ಳಿ. ನೀವು ಬಳಸಿದ ನಂತ್ರ ಅದನ್ನು ಸ್ವಚ್ಛಗೊಳಿಸಬೇಕು. ಆಗ ವಾರದ ಅಂತ್ಯದಲ್ಲಿ ಎಲ್ಲ ಕಡೆ ಕ್ಲೀನ್ ಮಾಡುವುದು ತಪ್ಪುತ್ತದೆ. ನೀವು ಪ್ರತಿ ದಿನ ಬಾತ್ ರೂಮನ್ನು ಕ್ಲೀನ್ ಮಾಡ್ತಿದ್ದರೆ ಅದು ಸ್ವಚ್ಛವಾಗಿಯೇ ಇರುತ್ತದೆ. 

ಡೋರ್‌ಮ್ಯಾಟ್‌ ಹೇಗೆ ಸ್ವಚ್ಛಗೊಳಿ : ಬಾತ್ ರೂಮ್ ಹೊರಗೆ ನೀರನ್ನು ಹೀರಿಕೊಳ್ಳಲು ಮ್ಯಾಟ್‌ ಇಡಲಾಗುತ್ತದೆ. ಮನೆ ಕೊಳಕಾಗದಂತೆ ನೋಡಿಕೊಳ್ಳಲು ಅದನ್ನು ಹಾಕಲಾಗುತ್ತದೆ. ಆದ್ರೆ ಅದೇ ವಿಪರೀತ ಕೊಳಕಾಗಿರುತ್ತದೆ. ಇದರಿಂದ ಗಬ್ಬು ವಾಸನೆ ಬರುತ್ತಿರುತ್ತದೆ. ಮ್ಯಾಟ್ ಆಗಾಗ ಒದ್ದೆಯಾಗುವುದರಿಂದ ವಾಸನೆ ಬರುತ್ತದೆ. ಇದನ್ನು ತಪ್ಪಿಸಬೇಕು ಎಂದಾದ್ರೆ ನೀವು ಬಟ್ಟೆಯ ಮ್ಯಾಟ್‌ಗಳನ್ನು ಬಾತ್ ರೂಮಿನ ಹೊರಗೆ ಹಾಕಬೇಡಿ. ಅವು ಬೇಗ ಒದ್ದೆಯಾಗುತ್ತವೆ. ಬಟ್ಟೆ ಮ್ಯಾಟ್ ಬದಲು ನೀವು ರಬ್ಬರ್ ಅಥವಾ ಸಿಲಿಕೋನ್ ಮ್ಯಾಟ್ಸ್ ಹಾಕಬಹುದು. ಈ ಮ್ಯಾಟ್ ಗಳನ್ನು ನೀವು ಸಾಧ್ಯವಾದ್ರೆ ವಾರಕ್ಕೆ ಎರಡು ದಿನ ತೊಳೆಯಬೇಕು. ಕನಿಷ್ಠ ವಾರದಲ್ಲಿ ಒಮ್ಮೆಯಾದ್ರೂ ಕ್ಲೀನ್ ಮಾಡಬೇಕು. 

Skin Care: ಚರ್ಮದ ಆರೈಕೆಗೆ ಹ್ಯಾಂಡ್ ಕ್ರೀಮ್ ಬಳಸೋದು ಅಗತ್ಯ ಯಾಕೆ ?

ಅಗತ್ಯಕ್ಕೆ ಮಹತ್ವ ನೀಡಿ : ಮನೆಯಲ್ಲಿ ಬೇಡದ ವಸ್ತುಗಳ ಸಂಖ್ಯೆ ಹೆಚ್ಚಿರುತ್ತದೆ. ಅನವಶ್ಯಕ ವಸ್ತುಗಳನ್ನು ನಾವು ಸಂಗ್ರಹಿಸಿಡುವ ಕಾರಣ ಮನೆ ತುಂಬಿದಂತೆ ಇರುತ್ತದೆ. ಇದ್ರಿಂದ ಮನೆ ಸ್ವಚ್ಛವಾಗಿರುವುದಿಲ್ಲ. ನೀವು ಅಗತ್ಯವಿರುವ ವಸ್ತುಗಳನ್ನು ಮಾತ್ರ ಇಟ್ಟುಕೊಳ್ಳಿ. ಅನೇಕರು ಪ್ಲಾಸ್ಟಿಕ್ ಕವರ್ ನಿಂದ ಹಿಡಿದು ಜಂಕ್ ಹಿಡಿದ ವಸ್ತುಗಳನ್ನು ಕೂಡ ಇಟ್ಟುಕೊಂಡಿರುತ್ತಾರೆ. ಬೆಡ್ ರೂಮಿನಲ್ಲಿಯೂ ಕೆಲ ಬೇಡದ ವಸ್ತುಗಳಿರುತ್ತವೆ. ಇವು ಬೆಡ್ ರೂಮಿನ  ಸೌಂದರ್ಯ ಹಾಳು ಮಾಡುತ್ತವೆ. ಪ್ರತಿ ದಿನ ಮನೆ ಕ್ಲೀನ್ ಮಾಡಿದ್ರೂ ಅನೇಕ ಬಾರಿ ಧೂಳಿನಿಂದ ಮನೆ ಕೊಳಕಾಗಿ ಕಾಣುತ್ತದೆ. ಆಗ ನೀವು ಪಿಠೋಪಕರಣ ಸೇರಿದಂತೆ ಧೂಳಿರುವ ಜಾಗವನ್ನು ಸ್ವಚ್ಛಗೊಳಿಸಬೇಕು.
 

Follow Us:
Download App:
  • android
  • ios