Asianet Suvarna News Asianet Suvarna News

ಮದುವೆಯಾದ ನಂತರ ಮಹಿಳೆಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಾಡೋದು ಏನು?

ಮದುವೆಯಾದ ನಂತರ ಮಹಿಳೆಯರ ಅಭಿರುಚಿಗಳು ಬದಲಾಗುತ್ತವೆ. ಹಾಗಾಗಿ ಅವರ ಜೀವನಶೈಲಿಯೂ ನಿಧಾನವಾಗಿ ಬದಲಾಗುತ್ತದೆ. ಮದುವೆಯಾದ ಹೊಸತರಲ್ಲಿ ಗೂಗಲ್ ನಲ್ಲಿ ಈ ಪ್ರಮುಖ ವಿಷಯಗಳ ಬಗ್ಗೆ  ತಿಳಿದುಕೊಳ್ಳುತ್ತಾರೆ.

These top five things newly married woman searches on google mrq
Author
First Published Aug 15, 2024, 8:00 PM IST | Last Updated Aug 15, 2024, 8:00 PM IST

ಇಂದು ಏನೇ ಸಮಸ್ಯೆ ಬಂದರೂ ಗೂಗಲ್ ಮೊರೆ ಹೋಗಲಾಗುತ್ತದೆ. ಗೂಗಲ್ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ. ಆ ಉತ್ತರವನ್ನು ಒಪ್ಪಿಕೊಳ್ಳಬೇಕಾ ಅಥವಾ ಬೇಡವಾ ಎಂಬುವುದು ಬಳಕೆದಾರರ ವಿವೇಚನೆಗೆ ಬಿಟ್ಟಿದ್ದು. ಇಂದು ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಥ್ರೆಡ್ ಸೇರಿದಂತೆ ಹಲವು ಸೋಶಿಯಲ್ ಮೀಡಿಯಾ ಆಪ್‌ಗಳು ಬಂದಿವೆ. ಇಂದು ಬಹುತೇಕ ಎಲ್ಲರೂ ಸೋಶಿಯಲ್ ಮೀಡಿಯಾದಲ್ಲಿಯೇ ಹೆಚ್ಚು ಸಮಯ ಕಳೆಯುತ್ತಾರೆ. ಕೆಲಸದ ಎಷ್ಟೇ ಒತ್ತಡವಿದ್ರೂ ಗಂಟೆಗೆ ಒಮ್ಮೆಯಾದ್ರೂ ಮೊಬೈಲ್ ಹಿಡಿದುಕೊಳ್ಳುತ್ತಾರೆ. ಇನ್ನು ಮಹಿಳೆಯರು ಸಹ ಇಂದು ಮೊಬೈಲ್‌ನಲ್ಲಿ ಕಾಲ ಕಳೆಯುತ್ತಾರೆ. ಮಹಿಳೆಯರ ಜೀವನ ಮದುವೆಯಾದ ಬಳಿಕ ಭಾಗಶಃ ಬದಲಾಗುತ್ತದೆ. ಮಹಿಳೆ ತನಗೆ ಗೊತ್ತಿಲ್ಲದೇ ತನ್ನಲ್ಲಿಯ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುತ್ತಾಳೆ. ಇನ್ನು ಮಕ್ಕಳು ಆದ್ಮೇಲೆ ತನ್ನ ಇಡೀ ಜೀವನ ಅವರಿಗಾಗಿ ಮೀಸಲಿಡುತ್ತಾರೆ. 

ಮದುವೆಯಾದ ಮಹಿಳೆಯರು ಗೂಗಲ್‌ ನಲ್ಲಿ ಹೆಚ್ಚು ಏನು ಹುಡುಕುತ್ತಾರೆ ಎಂಬುದರ ಅಧ್ಯಯನದ ವರದಿಯೊಂದು ಹೊರ ಬಂದಿದೆ. ಮದುವೆ ನಂತ್ರ ಮಹಿಳೆಯರು ಅಡುಗೆ ಮಾಡೋವದರಿಂದ ಹಿಡಿದು ಸಣ್ಣ ಸಣ್ಣ ವಿಷಯಕ್ಕೂ ಗೂಗಲ್ ಮೇಲೆ ಅವಲಂಬಿತರಾಗುತ್ತಾರೆ. ಮದುವೆಯಾದ ಹೊಸತರಲ್ಲಿ ಮಹಿಳೆಯರು ಗೂಗಲ್‌ನಲ್ಲಿ ಸರ್ಚ್ ಮಾಡುವ ಕೆಲ ವಿಷಯಗಳು ಬಹಿರಂಗಗೊಂಡಿವೆ. 

1.ಮದುವೆಯಾದ ನಂತರ ಪತಿಗೆ ಸಂಬಂಧಸಿದ ವಿಷಯಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಈ ವಿಷಯ ಕಾಮಿಡಿ ಅಂತ ಅನ್ನಿಸಿದರೂ ಸತ್ಯ ಎಂದು ಸಮೀಕ್ಷೆಗಳು ಹೇಳುತ್ತವೆ. ಗೂಗಲ್‌ನಲ್ಲಿ ಗಂಡನ ಇಷ್ಟ-ಕಷ್ಟಗಳ ಬಗ್ಗೆ ವಿವರವಾಗಿ ನೋಡುತ್ತಾರೆ. ಸಾಮಾನ್ಯವಾಗಿ ಪುರುಷರಿಗೆ ಯಾವ ರೀತಿಯ ಆಹಾರ, ಬಟ್ಟೆ ಸೇರಿದಂತೆ ಏನು ಇಷ್ಟವಾಗುತ್ತೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಎಂದಿಗೂ ನೇರವಾಗಿ ಗಂಡನಿಗೆ ಈ ಬಗ್ಗೆ ಕೇಳಲ್ಲ. ಎಲ್ಲಾ ವಿಷಯಗಳನ್ನು ತಿಳಿದುಕೊಂಡು ಗಂಡನಿಗೆ ಸರ್ಪ್ರೈಸ್ ಕೊಡಲು ಮಹಿಳೆಯರು ಇಷ್ಟಪಡುತ್ತಾರೆ. 

2.ಮಹಿಳೆಯರು ಗಂಡ ತನ್ನ ಮಾತುಗಳನ್ನು ಕೇಳುವಂತೆ ಏನು ಮಾಡಬೇಕು ಎಂಬುದನ್ನು ಗೂಗಲ್ ನಲ್ಲಿ ಸರ್ಚ್ ಮಾಡ್ತಾರೆ. ಮದುವೆ ನಂತರ ಪತಿಯನ್ನು ಸಂತೋಷವಾಗಿ ನೋಡಿಕೊಳ್ಳಲು ಮಹಿಳೆಯರು ಬಯಸುತ್ತಾರೆ. ಪತಿಯನ್ನು ಮೆಚ್ಚಿಸಲು ಮಹಿಳೆಯರ ಮೊದಲ ಪ್ರಯತ್ನವೇ ನೆಚ್ಚಿನ ಆಹಾರ ತಯಾರಿಸೋದು. ಹೀಗೆ ಪತಿಗೆ ಇಷ್ಟವಾದ ಕೆಲಸಗಳನ್ನೇ ಮಾಡುವ ಮೂಲಕ ಆತನ ಪ್ರೀತಿ ಪಡೆಯಲು ಪ್ರಯತ್ನಿಸುತ್ತಿರುತ್ತಾರೆ. 

3.ಮದುವೆ ನಂತರ ಮಹಿಳೆಯರು ಹೆಚ್ಚು ಸರ್ಚ್ ಮಾಡುವ ವಿಷಯ ಅಂದ್ರೆ ಅದು ಮಕ್ಕಳನ್ನು ಪಡೆಯೋದರ ಬಗ್ಗೆ. ಗರ್ಭಧಾರಣೆಗೆ ಸಂಬಂಧಿಸಿದ ವಿಷಯಗಳ ಕುರಿತು ಗೂಗಲ್ ಮೂಲಕ ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಮಕ್ಕಳನ್ನು ಹೊಂದಲು ಯಾವ ತಿಂಗಳು ಉತ್ತಮ? ಯಾವ ವಯಸ್ಸಿನಲ್ಲಿ ಮಗುವನ್ನು ಹೊಂದುವುದು ಉತ್ತಮ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಗೂಗಲ್ ಸಹಾಯ ಪಡೆಯುತ್ತಾರೆ. 

ಫಸ್ಟ್‌ನೈಟ್‌ನಲ್ಲಿ ಸರ್ಪ್ರೈಸ್ ಕೊಡಲು ಹೋಗಿ ಕೈ, ಕಣ್ಣು ಕಿವಿ ಕಳ್ಕೊಂಡ ಗಂಡ… ಖಾಸಗಿ ಅಂಗ ಚೆಕ್ ಮಾಡ್ಕೊಂಡ !

4.ಮದುವೆ ನಂತರ ಗಂಡನ ತಾಯಿ ಹಾಗೂ ಸೋದರಿಯರ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಗೂಗೊಲ್ ನಲ್ಲಿ ತಿಳಿದುಕೊಳ್ಳುತ್ತಾರೆ. ಪತಿಯ ಕುಟುಂಬದಲ್ಲಿ ಒಂದಾಗೋದು ಹೇಗೆ? ಎಲ್ಲರ ಪ್ರೀತಿ ಗಳಿಸೋದು ಹೇಗೆ> ಕುಟುಂಬದ ಜವಾಬ್ದಾರಿಯನ್ನು ನಿರ್ವಹಣೆ ಮಾಡೋದು ಹೇಗೆ ಎಂಬುದರ ಬಗ್ಗೆ ಗೂಗಲ್‌ನಲ್ಲಿ ತಿಳಿದುಕೊಳ್ಳುತ್ತಾರೆ.

5.ಮದುವೆಯಾದ ಬಳಿಕ ಪತಿಯ ಕುಟುಂಬದ ಧಾರ್ಮಿಕ ಆಚರಣೆಗಳು ಭಿನ್ನವಾಗಿದ್ದರೆ ಅದನ್ನು ಸಹ ಗೂಗಲ್‌ ನಿಂದ ತಿಳಿದುಕೊಳ್ಳಲು ಮಹಿಳೆಯರು ಪ್ರಯತ್ನಿಸುತ್ತಾರೆ.

ಲೈಂಗಿಕ ಸಂಬಂಧದ ವೇಳೆ ಮಹಿಳಾ ಸಂಗಾತಿಗೆ ಇಷ್ಟವಾಗೋದೇನು?

Latest Videos
Follow Us:
Download App:
  • android
  • ios