Asianet Suvarna News Asianet Suvarna News

ಫಸ್ಟ್‌ನೈಟ್‌ನಲ್ಲಿ ಸರ್ಪ್ರೈಸ್ ಕೊಡಲು ಹೋಗಿ ಕೈ, ಕಣ್ಣು ಕಿವಿ ಕಳ್ಕೊಂಡ ಗಂಡ… ಖಾಸಗಿ ಅಂಗ ಚೆಕ್ ಮಾಡ್ಕೊಂಡ !

ಮದುವೆಯಾದ ಬಳಿಕ ಸಂಗಾತಿ ಜೊತೆ ಕಳೆಯು ಮೊದಲರಾತ್ರಿ ಅನುಭವ ನೆನಪಿನಲ್ಲಿರಬೇಕೆಂದು ಕೋಣೆಯನ್ನು ಹೂಗಳಿಂದ ಅಲಂಕರಿಸಲಾಗುತ್ತದೆ. ಆದ್ರೆ ಇಲ್ಲಿ ವರ ಸರ್ಪ್ರೈಸ್ ಕೊಡೋಕೆ ಹೋಗಿ ಆಸ್ಪತ್ರೆ ಸೇರಿದ್ದಾನೆ.

A disastrous first night surprise Groom admitted to hospital mrq
Author
First Published Aug 15, 2024, 3:58 PM IST | Last Updated Aug 15, 2024, 3:58 PM IST

ನವದೆಹಲಿ: ಮದುವೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಇತ್ತೀಚೆಗೆ ನವದಂಪತಿಗಳೇ ತಮ್ಮ ಮದುವೆ ವಿಡಿಯೋಗಳನ್ನು ಲೈವ್ ಮಾಡಿಕೊಳ್ಳುವ ಮೂಲಕ ಟ್ರೋಲ್ ಆಗುತ್ತಿರುತ್ತಾರೆ. ವ್ಯಕ್ತಿಯೋರ್ವ ಮೊದಲ ರಾತ್ರಿ ಪತ್ನಿಗೆ ಸರ್ಪೈಸ್ ನೀಡಲು ಹೋಗಿ ಪಜೀತಿಗೆ ಸಿಲುಕಿದ್ದಾನೆ. ಸರ್ಪ್ರೈಸ್ ನೀಡಲು ಹೋಗಿದ್ದಾಗ ಸ್ಪೋಟಗೊಂಡ ಪರಿಣಾಮ ವ್ಯಕ್ತಿಯ ಒಂದು ಕೈಯನ್ನು ಕತ್ತರಿಸಲಾಗಿದೆ. ಇಷ್ಟು ಮಾತ್ರವಲ್ಲದೇ ಮುಂದಿನ ಏಳು ತಿಂಗಳು ಆಸ್ಪತ್ರೆಯಲ್ಲಿಯೇ ಆತ ಚಿಕಿತ್ಸೆ ಪಡೆದುಕೊಳ್ಳಬೇಕಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ. ರೊಮ್ಯಾಂಟಿಕ್ ಆಗಿ ರಾತ್ರಿ ಕಳೆಯಬೇಕೆಂದು ಮಂಚ ಏರಬೇಕಿದ್ದ ವ್ಯಕ್ತಿ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದಾನೆ.

ಕೆನಡಾದಲ್ಲಿ 23 ವರ್ಷದ ಎಮಿ ಎಂಬಾಕೆ ಜೊತೆ 24 ವರ್ಷದ ಲೇವಿಯ ಮದುವೆಯಾಗಿತ್ತು. ಮದುವೆಯ ಐದು ದಿನಗಳ ಬಳಿಕ ಲೇವಿ ಮತ್ತು ಎಮಿ ಹನಿಮೂನ್‌ಗೆ ತೆರಳಿದ್ದರು. ಈ ವೇಳೆ ಲೇವಿಯ ಕೆಲ ಕುಟುಂಬಸ್ಥರು ಸಹ ಜೋಡಿಯ ಜೊತೆಯಲ್ಲಿದ್ದರು. ಫಸ್ಟ್ ನೈಟ್‌ನಲ್ಲಿ ಪತ್ನಿಗೆ ಸರ್ಪ್ರೈಸ್ ನೀಡಲು ಲೇವಿ ಪಟಾಕಿ ತೆಗೆದುಕೊಂಡು ಬಂದಿದ್ದಾನೆ. ಪಟಾಕಿಗೆ ಬೆಂಕಿ ಹಚ್ಚಿ ಅವುಗಳನ್ನು ನೀರಿನಲ್ಲಿ ಎಸೆಯೋದು ಲೇವಿಯ ಪ್ಲಾನ್ ಆಗಿತ್ತು. ಪಟಾಕಿ ಎಸೆದ 60 ಸೆಕೆಂಡ್‌ಗೆ ಅದು ಸ್ಪೋಟಗೊಂಡು ನೀರು ಚಿಮ್ಮಿ ತಮ್ಮಿಬ್ಬರ ಮೇಲೆ ಬೀಳುವಂತೆ ಎಲ್ಲಾ ವ್ಯವಸ್ಥೆಯನ್ನು ಲೇವಿ ಮಾಡಿಕೊಮಂಡಿದ್ದನು. ಆದರೆ ಪಟಾಕಿ ತಯಾರಿಸುವಾಗ ಕೆಲ ಸಾಮಾಗ್ರಿ ಸಿಗದಕ್ಕೆ ಇದ್ದ ವಸ್ತುಗಳಲ್ಲಿಯೇ ಅಡ್ಜಸ್ಟ್ ಮಾಡಿದ್ದನು. ಹಾಗಾಗಿ ಪಟಾಕಿ ಸಮಯಕ್ಕೂ ಮೊದಲೇ ಸ್ಪೋಟಗೊಂಡಿದೆ. 

ಮದುವೆಯಾಗಿ ಫಸ್ಟ್ ನೈಟ್‌ಗೂ ಮುನ್ನವೇ ನವದಂಪತಿ ಹೊಡೆದಾಟ; ವಧು ಸಾವು, ವರನ ಸ್ಥಿತಿ ಗಂಭೀರ

ಕೈಯಲ್ಲಿಯೇ ಪಟಾಕಿ ಸ್ಪೋಟಗೊಂಡ ಪರಿಣಾಮ ಲೇವಿ ಪ್ರಜ್ಞೆ ಕಳೆದುಕೊಂಡಿದ್ದಾನೆ. ಪಟಾಕಿ ಸ್ಪೋಟದಿಂದ ಲೇವಿಯ ಕೈಯೆಲ್ಲಾ ರಕ್ತಮಯವಾಗಿತ್ತು. ಮುಖ, ಹೊಟ್ಟೆ ಸೇರಿದಂತೆ ದೇಹದ ತುಂಬೆಲ್ಲಾ ಸುಟ್ಟ ಗಾಯಗಳಾಗಿದ್ದವು. ಗಂಭೀರ ಸ್ಥಿತಿಯಲ್ಲಿದ್ದ ಲೇವಿಯನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ದುರ್ಘಟನೆಯಲ್ಲಿ ಲೇವಿಯ ಒಂದು ಕಣ್ಣು ಸಂಪೂರ್ಣ ದೃಷ್ಟಿಯನ್ನು ಕಳೆದುಕೊಂಡಿದೆ. ಎರಡು ಕಿವಿಯ ಪರದೆ ತುಂಡಾಗಿದೆ. ಒಂದು ಕೈ ಸಂಪೂರ್ಣ ಗಾಯವಾಗಿದ್ದರಿಂದ ಕತ್ತರಿಸಲಾಗಿದೆ. ಮರುದಿನ ಬೆಳಗ್ಗೆ ಜ್ಞಾನ ಬಂದಾಗ ಲೇವಿಗೆ ತನ್ನ ಒಂದು ಕೈಯನ್ನು ಸಂಪೂರ್ಣವಾಗಿ ಕತ್ತರಿಸಿದ ವಿಷಯ ಕೇಳಿ ಶಾಕ್ ಆಗಿದ್ದಾನೆ. ದೇಹದಲ್ಲಿ ಇಷ್ಟೆಲ್ಲಾ ಗಾಯವಾಗಿದ್ದನ್ನು ಕಂಡು ತನ್ನ ಪ್ರೈವೇಟ್ ಪಾರ್ಟ್ ಇದೆಯಾ? ಇಲ್ಲವಾ ಎಂದು ಲೇವಿ ಹುಡುಕಲು ಶುರು ಮಾಡಿದ್ದಾನೆ. ನಂತರ ಪತ್ನಿಗೆ ತನ್ನ ಪ್ರೈವೇಟ್ ಸರಿಯಾಗಿದೆ ಅಲ್ಲವಾ ಎಂದು ಲೇವಿ ಕೇಳಿದ್ದಾನೆ. 

ವೈದ್ಯರ ಪ್ರಕಾರ, ಲೇವಿಯ ದೇಹದ ತುಂಬೆಲ್ಲಾ ಗಾಯಗಳಾಗಿವೆ. 14 ದಿನ ಐಸಿಯುನಲ್ಲಿ ಮತ್ತು ಸುಮಾರು 7 ತಿಂಗಳು ಆತ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಬೇಕಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ನಂತರ ಮನೆಯಲ್ಲಿಯೇ ಆತ ವಿಶ್ರಾಂತಿ ಪಡೆದುಕೊಳ್ಳಬೇಕು ಎಂದು ಹೇಳಿದ್ದರು. 2015ರಲ್ಲಿ ಲೇವಿ ಮತ್ತು ಎಮಿಯ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕೃತಕ ಕೈಯನ್ನು ಅಳವಡಿಸಿಕೊಂಡಿರುವ ಲೇವಿ ಈಗ ಮೋಟಿವಿಷೇನಲ್ ಸ್ಪೀಕರ್‌ ಆಗಿದ್ದಾನೆ. ತನ್ನ ಹಲವು ಭಾಷಣಗಳಲ್ಲಿ ತನ್ನೊಂದಿಗೆ ನಡೆದ ಘಟನೆಯ ಬಗ್ಗೆ ಹೇಳಿಕೊಂಡಿದ್ದಾನೆ. ಇಷ್ಟೆಲ್ಲಾ ಗಾಯಗಳಾದರೂ ದೇವರು ನನ್ನನ್ನು ಜೀವಂತವಾಗಿ ಇರಿಸಿರೋದಕ್ಕೆ ಧನ್ಯವಾದ ಹೇಳುತ್ತೇನೆ ಎಂದಿದ್ದಾನೆ. ಇಷ್ಟೆಲ್ಲಾ ಆದರೂ ಎಮಿ ಮಾತ್ರ ಆತನ ಜೊತೆಯಲ್ಲಿಯೇ ಜೀವನ ನಡೆಸುತ್ತಿದ್ದಾಳೆ.

ಫಸ್ಟ್ ನೈಟ್‌ಗೂ ಮೊದಲೇ  ಆಸ್ಪತ್ರೆಗೆ  ದಾಖಲಾದ ವಧು; ಗಂಡನ ನಡೆ ಕಂಡು ಮೂಕವಿಸ್ಮಿತರಾದ ಕುಟುಂಬಸ್ಥರು

Latest Videos
Follow Us:
Download App:
  • android
  • ios