ಹೌದು. ಹೆಂಡತಿಯನ್ನೂ ಬಾಡಿಗೆಗೆ ಕೊಡುವವರು - ತೆಗೆದುಕೊಳ್ಳುವವರು ಇದ್ದಾರೆ. ಭಾರತದ ಒಂದು ಹಳ್ಳಿಯಲ್ಲಿ ಈ ವಿಚಿತ್ರ ರೂಢಿ ಇದೆ! ಇಲ್ಲಿ ತುಸು ಶ್ರೀಮಂತರ ಸ್ವಲ್ಪ ಬಡವರ ಮನೆಯ ಹೆಣ್ಣುಮಕ್ಕಳನ್ನು ಬಾಡಿಗೆಗೆ ಪಡೆಯುತ್ತಾರೆ. ತಂದೆ ತನ್ನ ಹೆಣ್ಣುಮಕ್ಕಳನ್ನು, ಗಂಡ ತನ್ನ ಹೆಂಡತಿಯನ್ನು ಬಾಡಿಗೆಗೆ ಕೊಡುತ್ತಾನೆ.

ಕಾರು, ಮನೆ, ಛತ್ರ ಬಾಡಿಗೆಗೆ ನೀಡುವುದೆಲ್ಲ ನಿಮಗೆ ಗೊತ್ತು. ಕೂಲಿಗಳೂ ಬಾಡಿಗೆ ಸಿಗುತ್ತಾರೆ. ಆದರೆ ಹೆಂಡತಿ? ವಿಚಿತ್ರ ಅನಿಸಬಹುದಲ್ವೇ? ಹೌದು. ಹೆಂಡತಿಯನ್ನೂ ಬಾಡಿಗೆಗೆ ಕೊಡುವವರು - ತೆಗೆದುಕೊಳ್ಳುವವರು ಇದ್ದಾರೆ. ಭಾರತದ ಒಂದು ಹಳ್ಳಿಯಲ್ಲಿ ಈ ವಿಚಿತ್ರ ರೂಢಿ ಇದೆ! ಬಾಡಿಗೆಗೆ ಬಂದವಳು ಪಡೆದವನ ಎಲ್ಲ ಅಗತ್ಯಗಳನ್ನೂ ಪೂರೈಸಬೇಕು. ಅದು ಒಪ್ಪಂದ. ಮಧ್ಯಪ್ರದೇಶದ ಶಿವಪುರಿ ಎಂಬ ಪ್ರದೇಶದಲ್ಲಿ ಈ ಪದ್ಧತಿ ಇದೆ. ಇದನ್ನು 'ದಧೀಚ' ಪದ್ಧತಿ ಎಂದು ಕರೆಯಲಾಗುತ್ತದೆ. ಪುರಾಣದ ದಧೀಚಿ ಮುನಿಗೂ ಈ ಕ್ರಮಕ್ಕೂ ಯಾವ ಸಂಬಂಧವೂ ಇಲ್ಲ. ಇದೇನೂ ತುಂಬಾ ಹಳತಾದ ರೂಢಿಯಲ್ಲ. ನೂರು ವರ್ಷದಿಂದೀಚೆಗೆ ಇದು ಶುರುವಾಗಿದೆ. ಇಲ್ಲಿ ತುಸು ಶ್ರೀಮಂತರ ಸ್ವಲ್ಪ ಬಡವರ ಮನೆಯ ಹೆಣ್ಣುಮಕ್ಕಳನ್ನು ಬಾಡಿಗೆಗೆ ಪಡೆಯುತ್ತಾರೆ. ತಂದೆ ತನ್ನ ಹೆಣ್ಣುಮಕ್ಕಳನ್ನು, ಗಂಡ ತನ್ನ ಹೆಂಡತಿಯನ್ನು ಬಾಡಿಗೆಗೆ ಕೊಡುತ್ತಾನೆ. ಬಾಡಿಗೆ ಅವಧಿ ಒಂದು ದಿನದಿಂದ ಆರಂಭಿಸಿ ಒಂದು ವರ್ಷದವರೆಗೆ ಇರಬಹುದು. ಇದೆಲ್ಲವೂ ಲಿಖಿತ ಅಗ್ರಿಮೆಂಟ್ ಮೇಲೇ ಆಗುತ್ತದೆ. ಒಂದು ವರ್ಷದ ನಂತರ ಆಕೆ ಇನ್ನೂ ಬೇಕು ಎಂದಿದ್ದರೆ ಅಗ್ರಿಮೆಂಟ್ ರಿನ್ಯೂ ಮಾಡಬೇಕು. 

ಇಲ್ಲಿ ತಂದೆಯರು ಎಂಟು ಒಂಬತ್ತು ವರ್ಷದಿಂದಲೇ ತಮ್ಮ ಹೆಣ್ಣುಮಕ್ಕಳನ್ನು ಬಾಡಿಗೆಗೆ ಕೊಡಲು ಶುರು ಮಾಡುತ್ತಾರೆ. ಹುಡುಗಿಯರು ಋತುಮತಿಯರಾಗಿರಬೇಕು ಅಂತಲೂ ಇಲ್ಲ. ಮದುವೆಯಾದ ಗಂಡನೂ ಮೊದಲ ರಾತ್ರಿ ಸುಖ ಅನುಭವಿಸಿ ಎರಡನೇ ರಾತ್ರಿಯಿಂದಲೇ ಆಕೆಯನ್ನು ಹಣವಂತರಿಗೆ ಬಾಡಿಗೆಗೆ ಕೊಡುವುದೂ ಇದೆ. ಪಡೆದುಕೊಂಡವರು ಆಕೆಯನ್ನು ಯಾವುದಕ್ಕೂ ಬಳಸಬಹುದು. ಮುಖ್ಯವಾಗಿ ಸೆಕ್ಸ್ ಸುಖಕ್ಕಾಗಿಯೇ ಈ ದಂಧೆ ನಡೆಯುವುದು. ಅದರ ಬಳಿಕ ಹಗಲಿನಲ್ಲಿ ಆಕೆಯನ್ನು ಮನೆಗೆಲಸ, ಹೊಲಗೆಲಸ ಹೀಗೆ ಎಲ್ಲದಕ್ಕೂ ಬಳಸಲಾಗುತ್ತದೆ. ಬಾಡಿಗೆಗೆ ಪಡೆದವನು, ಆತನ ಅಣ್ಣತಮ್ಮಂದಿರು, ಸ್ವಂತ ಗಂಡ, ಆಕೆಯ ಮಾವ, ಹೀಗೆ ಯಾರು ಬೇಕಾದರೂ ಆಕೆಯನ್ನು ಬಲಾತ್ಕರಿಸಬಹುದು. ಆಕೆ ವಿರೋಧಿಸುವಂತಿಲ್ಲ. 

ಪೊಲೀಸರಿಗೆ ಇದು ಗೊತ್ತಿಲ್ಲವೆ? ಗೊತ್ತಿದೆ. ಆದರೆ ಕ್ರಮ ಕೈಗೊಳ್ಳಲಾರರು. ಅವರೂ ಇದರಲ್ಲಿ ಪಾಲುದಾರರು. ತನ್ನ ಮೇಲೆ ಆಗುತ್ತಿರುವುದು ರೇಪ್ ಎಂಬುದು ಕೂಡ ಈ ಸ್ತ್ರೀಯರಿಗೆ ಅರಿವಿಲ್ಲ. ಬಡತನವನ್ನು ಹಾಸಿ ಹೊದ್ದ ಪ್ರದೇಶ ಇದು. ಇತ್ತೀಚೆಗೆ ಕೆಲವು ಎನ್‌ಜಿಒಗಳು ಈ ಪ್ರದೇಶಗಳಲ್ಲಿ ಓಡಾಡಿ ಅರಿವು ಮೂಡಿಸಲು ತೊಡಗಿವೆ.

ದೊಡ್ಡ ತುಟಿಗಾಗಿ 4 ಬಾರಿ ಸರ್ಜರಿ ಮಾಡಿಸ್ಕೊಂಡ ಮಹಿಳೆ, ಆಮೇಲೆ ಆಗಿದ್ದೇ ಬೇರೆ!

ಹುಡುಗಿಯರ ಅಂದ ಚಂದ ದೇಹದ ಗಟ್ಟಿತನ ಎಲ್ಲವನ್ನೂ ಹೊಂದಿಕೊಂಡು ಆಕೆಯ ಬಾಡಿಗೆ ನಿರ್ಧಾರ ಆಗುತ್ತದೆ. ಮಧ್ಯವಯಸ್ಸು ಮೀರಿದವಳನ್ನು ಯಾರೂ ಬಯಸುವುದಿಲ್ಲ. ಕನ್ಯೆಯರಿಗೆ, ನೋಡಲು ಸುಂದರವಾಗಿರುವವರಿಗೆ ಲಕ್ಷಗಟ್ಟಲೆ ಹಣ ಸಿಗುತ್ತದೆ. ಸಾಮಾನ್ಯ ರೂಪಿನವರಿಗೆ ಸಾವಿರಗಳ ಲೆಕ್ಕ. ವಧುವನ್ನು ಸುಂದರ, ದೈಹಿಕವಾಗಿ ಆಕರ್ಷಕ ಮತ್ತು ಕನ್ಯೆ ಎಂದು ಪರಿಗಣಿಸಿದರೆ 2 ಲಕ್ಷದವರೆಗೆ ತಲುಪುತ್ತದೆ. ಕನ್ಯೆಯರಲ್ಲದ ಹುಡುಗಿಯರ ಮೌಲ್ಯ ರೂ. 10,000 ರಿಂದ 15,000, ಅವರ ವಯಸ್ಸು, ಚರ್ಮದ ಟೋನ್ ಮತ್ತು ಅವರು ತೊಡಗಿಸಿಕೊಂಡಿರುವ ಹಿಂದಿನ ಒಪ್ಪಂದದ ಮದುವೆಗಳಂತಹ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಶುರುವಾಗಿದೆ ಹಸ್ಬೆಂಡ್ ಟೆಸ್ಟ್ ಎಂಬ ಹೊಸ ಟ್ರೆಂಡ್! ಅಷ್ಟಕ್ಕೂ ಹೆಣ್ಮಕ್ಕಳು ಗಂಡಿನಲ್ಲಿ ಏನು ಹುಡುಕ್ತಾರೆ?

ಇದು ಹೇಗೆ ಶುರುವಾಯಿತು? ಕಾಲದ ಯಾವುದೋ ಒಂದು ಹಂತದಲ್ಲಿ ಇಲ್ಲಿ ಹೆಣ್ಣುಮಕ್ಕಳ ಸಂಖ್ಯೆ ವಿಪರೀತವಾಗಿ ಕಡಿಮೆಯಾಯಿತು. ಆಗ ಇರುವ ಹೆಣ್ಣುಮಕ್ಕಳನ್ನು ಹಂಚಿಕೊಳ್ಳುವ ರೂಢಿ ಶುರುವಾಯಿತು. ಹಣವಿದ್ದ ಪುರುಷರು ಬಡ ಹೆಣ್ಣುಮಕ್ಕಳನ್ನು ವಧುದಕ್ಷಿಣೆ ಕೊಟ್ಟು ಕೊಂಡುಕೊಳ್ಳತೊಡಗಿದರು. ಬಡವರಿಗೆ ಅದೂ ಸಾಧ್ಯವಿಲ್ಲದಾಗ, ಬಾಡಿಗೆ ಪದ್ಧತಿ ಬಂತು. ಸ್ತ್ರೀಯರ ಆಯ್ಕೆಗೆ ಹೆಚ್ಚಿನ ಸ್ವಾತಂತ್ರ್ಯ ಮಾನ್ಯತೆ ಬರಬೇಕಾದ ಸನ್ನಿವೇಶ ಹೋಗಿ ಈ ಕೆಟ್ಟ ರೂಢಿ ಬಂತು. ಪುರುಷ ಪ್ರಧಾನ ಸಮಾಜ ಸ್ತ್ರೀಯರನ್ನು ಹೀಗೆ ಸೋಲಿಸಿತು.