Asianet Suvarna News Asianet Suvarna News

Eating Disorder: 22 ವರ್ಷಗಳಿಂದ ಒಮ್ಮೆಯೂ ಸಸ್ಯಾಹಾರ ಸೇವನೆ ಮಾಡಿಲ್ಲ ಈ ಮಹಿಳೆ!

ಕೆಲವರಿಗೆ ಚಿಕನ್ ಇಷ್ಟವಾದ್ರೆ ಮತ್ತೆ ಕೆಲವರಿಗೆ ಸೂಪ್ ಇಷ್ಟ. ಇನ್ನು ಕೆಲವರಿಗೆ ಸಿಹಿ ಇಷ್ಟ. ಪ್ರಿಯವಾದ ಆಹಾರ ಸಿಕ್ಕಿದ್ರೆ ಪಾತ್ರೆ ಖಾಲಿಯಾಗುತ್ತದೆ. ಆದ್ರೆ ಇಲ್ಲೊಬ್ಬ ಮಹಿಳೆ ವಿಚಿತ್ರವಾಗಿದ್ದಾಳೆ. ಆಕೆ ಮಾಂಸಹಾರ ಬಿಟ್ಟು ಸಸ್ಯಾಹಾರ ಮುಟ್ಟೋದೇ ಇಲ್ಲ. 
 

Summer Monro From Cambridge survives only on chips and chicken nuggets since last 22 years
Author
Bangalore, First Published Mar 10, 2022, 4:19 PM IST

ಸಸ್ಯಾಹಾರ (Vegetarian) ಮತ್ತೆ ಮಾಂಸಹಾರ (Meat). ಇದ್ರಲ್ಲಿ ಯಾವುದು ಒಳ್ಳೆಯದು ಎಂಬ ತರ್ಕಕ್ಕೆ ಸರಿಯಾದ ಉತ್ತರ ಇನ್ನೂ ಸಿಕ್ಕಿಲ್ಲ. ಕೆಲವರು ಸಸ್ಯಾಹಾರ ಇಷ್ಟಪಟ್ಟರೆ ಮತ್ತೆ ಕೆಲವರು ಮಾಂಸಹಾರ ಇಷ್ಟಪಡ್ತಾರೆ. ಸಸ್ಯಾಹಾರಿಗಳು ಮಾಂಸಹಾರ ಸೇವನೆ ಮಾಡೋದು ಕಡಿಮೆ. ಅನೇಕರು ಮಾಂಸ ಮುಟ್ಟುವುದಿಲ್ಲ. ಆದ್ರೆ ಮಾಂಸಹಾರಿಗಳು ಹಾಗಲ್ಲ. ಸಸ್ಯಾಹಾರದ ಜೊತೆ ಮಾಂಸಹಾರವನ್ನೂ ಸೇವನೆ ಮಾಡ್ತಾರೆ. ಆದ್ರೆ ಇಲ್ಲೊಬ್ಬ ಮಹಿಳೆ (Woman) ಈವರೆಗೂ ಸಸ್ಯಾಹಾರವನ್ನೇ ಸೇವನೆ ಮಾಡಿಲ್ಲ. ಯಸ್. ಇದು ಸತ್ಯ. 22 ವರ್ಷಗಳಿಂದ ಆ ಮಹಿಳೆ ಸಸ್ಯಹಾರವನ್ನು ಸೇವನೆ ಮಾಡೇ ಇಲ್ಲ. ಪ್ರತಿ ದಿನ ಮಾಂಸಾಹಾರ ಸೇವನೆ ಮಾಡ್ತಾಳೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ (Night) ಮಲಗುವವರೆಗೂ ಆಕೆ ತಿನ್ನೋದು (Eat ) ಮಾಂಸಹಾರವನ್ನು ಮಾತ್ರ. 

ಯಾರು ಈ ಮಹಿಳೆ ?
ಸತತ 22 ವರ್ಷಗಳಿಂದ ಮಾಂಸಹಾರ ಸೇವನೆ ಮಾಡ್ತ ಬಂದಿರುವ ಆ ಮಹಿಳೆ ಹೆಸರು ಸಮರ್ ಮನ್ರೋ (Summer Monro). ಆಕೆ ಕೇಂಬ್ರಿಡ್ಜ್ (Cambridge )ನಿವಾಸಿ. ಸಮರ್ ಮೆನ್ರೋ ವಯಸ್ಸು ಇನ್ನೂ 25 ವರ್ಷ. ಕಳೆದ 22 ವರ್ಷಗಳಿಂದ ಸಮರ್ ಮೆನ್ರೋ ಸಸ್ಯಾಹಾರ ಸೇವನೆ ಮಾಡಿಲ್ಲ. 

ಮಾಂಸಾಹಾರ ಶುರುವಾಗಿದ್ದು ಯಾವಾಗ? : ಸಮರ್ ಮೆನ್ರೋ ಮೂರು ವರ್ಷದಲ್ಲಿರುವಾಗ ಆಕೆಗೆ ಮ್ಯಾಶ್ ಮಾಡಿದ ಆಲೂ ಸೇವನೆ ಮಾಡುವಂತೆ ಒತ್ತಾಯ ಮಾಡಲಾಗಿತ್ತಂತೆ. ಆದ್ರೆ ಆಲೂ ತಿನ್ನದ ಸಮರ್ ಮೆನ್ರೋ ಅಲ್ಲಿಂದ ಸಂಪೂರ್ಣವಾಗಿ ಸಸ್ಯಹಾರ ತ್ಯಜಿಸಿದ್ದಾಳೆ. ಸಂಪೂರ್ಣ ಮಾಂಸಹಾರಿಯಾಗಿ ಬದಲಾಗಿದ್ದಾಳೆ. 

ಮಾಂಸಹಾರಕ್ಕಾಗಿ ಹಣ ಬಿಟ್ಟ ಸಮರ್ ಮೆನ್ರೋ : ಸಮರ್ ಮನ್ರೋ ಮಾಂಸಹಾರವನ್ನು ಎಷ್ಟು ಪ್ರೀತಿಸುತ್ತಾಳೆಂದ್ರೆ ಹಣ ಕೊಡ್ತೇವೆ ಸಸ್ಯಹಾರ ಸೇವನೆ ಮಾಡು ಅಂದ್ರೂ ಆಕೆ ಸೇವಿಸುವುದಿಲ್ಲವಂತೆ. ಒಮ್ಮೆ ಆಕೆ ಸ್ನೇಹಿತರು ಬಟಾಣಿ ತಿನ್ನುವಂತೆ ಬೆಟ್ ಕಟ್ಟಿದ್ದರಂತೆ. ಇದಕ್ಕೆ 1000 ಪೌಂಡ್ ಅಂದ್ರೆ ಸುಮಾರು ಒಂದು ಲಕ್ಷ ರೂಪಾಯಿ ನೀಡುವುದಾಗಿ ಹೇಳಿದ್ದರಂತೆ. ಆದ್ರೆ ಸಮರ್ ಮನ್ರೋ ಬಟಾಣಿ ತಿನ್ನದೆ ಒಂದು ಲಕ್ಷ ರೂಪಾಯಿ ಕಳೆದುಕೊಂಡಿದ್ದಾಳೆ.
ಸಮರ್ ಮೆನ್ರೋ 22 ವರ್ಷಗಳಲ್ಲಿ ಕುರ್ ಕುರೆ, ಚಿಪ್ಸ್ ಮಾತ್ರ ತಿಂದಿದ್ದಾಳಂತೆ. ಚಿಕನ್ ನಂತಹ ಆಹಾರ ಸೇವನೆ ಮಾಡುವಾಗ್ಲೂ ಅದು ಗರಿಗರಿಯಾಗಿರಬೇಕೆಂದು ಆಕೆ ಬಯಸ್ತಾಳೆ. ಸಮರ್ ಮನ್ರೋ, ಎಆರ್ ಎಫ್ ಐಡಿ (Avoidant/restrictive Food Intake Disorder) ನಿಂದ ಬಳಲುತ್ತಿದ್ದಾಳೆ. 

ಸರ್ಕಾರಿ ಕೆಲಸದಲ್ಲಿದ್ದವ್ನು ಬೇಕಾದ್ರೆ, ವರದಕ್ಷಣೆಯನ್ನೂ ಕೊಡ್ಬೇಕು!

ಮೂರು ತಿಂಗಳು ಚಿಕನ್‌ನಿಂದ ದೂರ : ಸಮರ್ ಮನ್ರೋ ವಿಟಮಿನ್, ಮಿನರಲ್ ಸೇರಿದಂತೆ ಯಾವುದೇ ಸಪ್ಲಮೆಂಟರಿ ಮಾತ್ರೆ ಸೇವನೆ ಮಾಡುವುದಿಲ್ಲ. ಆದ್ರೆ ಸಮರ್ ಮನ್ರೋಗೆ ಬೇರೆ ಯಾವುದೇ ಖಾಯಿಲೆಯಿಲ್ಲ. ಆಕೆ ರಕ್ತ ಪರೀಕ್ಷೆ ಕೂಡ ಮಾಡಿಸಿದ್ದಾಳೆ. ಆದ್ರೆ ಒಂದು ಬಾರಿ ಚಿಕನ್ ನಗೆಟ್ಸ್ ತಿನ್ನುವಾಗ ಆಕೆಗೆ ಕೋಳಿಯ ರಕ್ತನಾಳಗಳು ಸಿಕ್ಕಿದ್ದವಂತೆ. ಹಾಗಾಗಿ ಮೂರು ತಿಂಗಳ ಕಾಲ ಚಿಕನ್ ತಿನ್ನೋದನ್ನು ಬಿಟ್ಟಿದ್ದಳಂತೆ. ಕೆಲ ಬೇರೆ ನಾನ್ ವೆಜ್ ತಿಂದು ಹೊಟ್ಟೆ ತುಂಬಿಸಿಕೊಂಡಿದ್ದಳಂತೆ. ವಿಶೇಷವೆಂದ್ರೆ  ಅದ್ರಲ್ಲಿ ಕೇವಲ 100 ಕ್ಯಾಲೋರಿ ಇರುತ್ತಿತ್ತಂತೆ. 

HEALTH ALERT: ಆರೋಗ್ಯದಲ್ಲಿ ಈ ರೀತಿ ಏರುಪೇರಾದ್ರೆ ಖಂಡಿತಾ ನಿರ್ಲಕ್ಷಿಸಬೇಡಿ!

ಆಹಾರ ಸೇವನೆಯಿಂದ ಅನಾರೋಗ್ಯ : ಸಮರ್ ಮನ್ರೋ ದೈಹಿಕವಾಗಿ ಆರೋಗ್ಯವಾಗಿದ್ದಾಳಂತೆ. ಆದ್ರೆ ಮಾನಸಿಕವಾಗಿ ಅನಾರೋಗ್ಯಕ್ಕೊಳಗಾಗಿದ್ದಾಳಂತೆ. ಬೇರೆಯವರು ಆಹಾರ ಸೇವನೆ ಮಾಡೋದನ್ನು ನೋಡಿದ್ರೆ ಈಕೆಗೂ ತಿನ್ನಬೇಕೆಂಬ ಆಸೆಯಾಗುತ್ತದೆಯಂತೆ. ಆದ್ರೆ ಅತಿಯಾಗಿ ತಿನ್ನಲು ಆಗೋದಿಲ್ಲವಂತೆ. ಒಮ್ಮೆ ಹಣ್ಣು ತಿಂದು ಅನಾರೋಗ್ಯಕ್ಕೊಳಗಾಗಿದ್ದಳಂತೆ. 26 ವರ್ಷದ ಡೀನ್ ಮೆಕ್‌ನೈಟ್ ಜೊತೆ ವಾಸವಾಗಿರುವ ಸಮರ್ ಮನ್ರೋ, ಕಡಿಮೆ ವೆರೈಟಿಯಿರುವ ಹೊಟೇಲ್ ಗೆ ಆಗಾಗ ಹೋಗ್ತಿರುತ್ತಾಳೆ. 

Follow Us:
Download App:
  • android
  • ios