Asianet Suvarna News Asianet Suvarna News

ಸರ್ಕಾರಿ ಕೆಲಸದಲ್ಲಿದ್ದವ್ನು ಬೇಕಾದ್ರೆ, ವರದಕ್ಷಣೆಯನ್ನೂ ಕೊಡ್ಬೇಕು!

ವಧುವಿನ ಪಕ್ಕದಲ್ಲೇ ವರದಕ್ಷಿಣೆ ಬೇಡಿಕೆ ಸಮರ್ಥಿಸಿಕೊಂಡ ವರ

ಸರ್ಕಾರಿ ಕೆಲಸದಲ್ಲಿದ್ದವನೇ ಬೇಕು, ವರದಕ್ಷಿಣೆ ಕೊಡಲ್ಲ ಅಂದ್ರೆ ಆಗಲ್ಲ

ಬಿಹಾರದಲ್ಲಿ ನಡೆದ ಮದುವೆಯಲ್ಲಿ ನಡೆದ ಘಟನೆ

groom defending his familys demand for dowry  threatens to leave in bihar san
Author
First Published Mar 8, 2022, 9:01 PM IST

ನವದೆಹಲಿ (ಮಾ.8): ಅಂತಾರಾಷ್ಟ್ರೀಯ ಮಹಿಳಾ ದಿನದಂದು (International Women's Day) ವಿಶ್ವದ ಎಲ್ಲಡೆ ಮಹಿಳೆಯ (Women) ಬಗ್ಗೆ ಸ್ಫೂರ್ತಿದಾಯಕ ಕಥೆಗಳು, ಸಾಹಸಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾಗಿದೆ. ಆದರೆ, ಮಂಗಳವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ವಿಡಿಯೋವೊಂದನ್ನು (Viral Video) ಗಮನಿಸಿದರೆ, ಮಹಿಳಾ ಸಬಲೀಕರಣಕ್ಕಾಗಿ (empower women) ಇನ್ನಷ್ಟು ಕೆಲಸ ಮಾಡಲೇಬೇಕು ಎನ್ನುವುದು ಅರ್ಥವಾಗುತ್ತದೆ.

ಬಿಹಾರದಲ್ಲಿ (Bihar) ನಡೆದ ಮದುವೆ ಎಂದು ಹೇಳಲಾದ ವೀಡಿಯೋವಿನಲ್ಲಿ,  ವರನೊಬ್ಬ ತನ್ನ ಕುಟುಂಬದ ವರದಕ್ಷಿಣೆಯ (Dowry Demand) ಬೇಡಿಕೆಯನ್ನು ಬಹಿರಂಗವಾಗಿ ಸಮರ್ಥನೆ ಮಾಡಿಕೊಂಡಿದ್ದು ಮಾತ್ರವಲ್ಲದೆ, ತನ್ನ ಬೇಡಿಕೆ ಪೂರೈಸದೇ ಇದ್ದಲ್ಲಿ ಮದುವೆಯನ್ನು ನಿರಾಕರಿಸಿ ಹೊರಡುವುದಾಗಿ ಬೆದರಿಕೆಯನ್ನೂ ಹಾಕಿದ್ದಾನೆ.

ಮದುವೆಯ ವೇದಿಕೆಯಲ್ಲಿ ಮದುಮಗಳೊಂದಿಗೆ ನಿಂತಿರುವ ವ್ಯಕ್ತಿ, "ವರದಕ್ಷಿಣೆ ಪಡೆದುಕೊಳ್ಳುವುದು ಹೇಗೆ ತಪ್ಪು? ವರದಕ್ಷಿಣೆ ವ್ಯವಸ್ಥೆ ಇಲ್ಲ ಎಂದು ಯಾರು ಹೇಳುತ್ತಾರೆ? ಎಲ್ಲಾ ಕಡೆಯೂ ವರದಕ್ಷಿಣೆಯ ಸಂಪ್ರದಾಯವಿದೆ. ಕೆಲವೊಂದು ಗೊತ್ತಾಗುತ್ತದೆ. ಕೆಲವೊಂದು ಗೊತ್ತಾಗುವುದಿಲ್ಲ. ನನಗೆ ವರದಕ್ಷಿಣೆ ಸಿಕ್ಕಿಲ್ಲ ಎನ್ನುವ ಕಾರಣಕ್ಕಾಗಿ ನಿಮಗೆ ಇದರ ಬಗ್ಗೆ ಗೊತ್ತಾಗಿದೆ. ಹಾಗೇನಾದರೂ ವರದಕ್ಷಿಣೆ ಈಗಾಗಲೇ ಸಿಕ್ಕಿದ್ದರೆ, ಇದರ ಬಗ್ಗೆ ಗೊತ್ತಾಗುತ್ತಲೇ ಇರಲಿಲ್ಲ. ಅಷ್ಟೇ' ಎಂದು ಹೇಳಿರುವುದು ದಾಖಲಾಗಿದೆ. ಈ ಹಂತದಲ್ಲಿ, ವಧುವಿನ ಮನೆಯವರು ವರದಕ್ಷಿಣೆಯ ಒಂದು ಭಾಗವನ್ನು ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದರೆ, ಉಳಿದ ಹಣವನ್ನು ಆ ನಂತರ ನೀಡುವುದಾಗಿ ಭರವಸೆ ನೀಡುತ್ತಾರೆ. ಅದಕ್ಕೆ ವರ, "ಏನು ಆಗಬೇಕೋ ಇವತ್ತೇ ಆಗಬೇಕು. ನನ್ನ ಬೇಡಿಕೆ ಈಡೇರಿದರೆ ಮಾತ್ರವೇ ಮದುವೆ. ಇಲ್ಲವಾದರೆ, ಬಾರಾತ್ (ಮೆರವಣಿಗೆ) ಸಮೇತ ಇಲ್ಲಿಂದ ಹೊರಡುತ್ತೇನೆ' ಎಂದು ಎಚ್ಚರಿಸಿದ್ದಾನೆ.


ಇಲ್ಲಿಗೆ ಬರುವ ಮುನ್ನ ವಧುವಿನ ಮನೆಯವರು ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದ್ದರು ಎಂದು ವರ ತಿಳಿಸಿದ್ದಾನೆ. ಆದರೆ ಇಲ್ಲಿಬೆ ಬಂದ ಬಳಿಕವೇ ನಮಗೆ ಇಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗಿಲ್ಲ ಎನ್ನುವ ಅಂಶ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾನೆ .ಹುಡುಗಿಯ ಕುಟುಂಬ ಅವರ "ಅರ್ಹತೆಯಲ್ಲಿ" ವರನ ಹೊಂದಾಣಿಕೆಯನ್ನು ಕಂಡುಕೊಳ್ಳಬೇಕು ಎಂದು ಅವರು ಹೇಳುತ್ತಾರೆ. "ಹುಡುಗಿಯ ಮನೆಯವರು ಅವರಿಗಿಂತ ಉತ್ತಮವಾಗಿರುವ, ಶ್ರೀಮಂತವಾಗಿರುವ ವರನನ್ನೇ ಹುಡುಕುತ್ತಾರೆ. ಸರ್ಕಾರಿ ಕೆಲಸದಲ್ಲಿರುವವನೇ ಬೇಕು ಅಂತಾರೆ. ಹೀಗಿದ್ದಾಗ ವರದಕ್ಷಿಣೆ ನೀಡದೇ ಇದ್ದರೆ ಮದುವೆ ಹೇಗೆ ನಡೆಯುತ್ತದೆ? ಮದುವೆಗೆ ನಾವೂ ಕೂಡ ದೊಡ್ಡ ಖರ್ಚು ಮಾಡಿದ್ದೇವೆ. ಅದನ್ನು ಹೇಗೆ ನಾವು ನಿರ್ವಹಿಸಬೇಕು" ಎಂದು ಹೇಳಿದ್ದಾನೆ.

Viral Video: ಹಾರ ಹಾಕುವಾಗಲೇ ವಧುವಿನ ಕಪಾಳಕ್ಕೆ ಬಾರಿಸಿದ ವರ!
ವಧುವು ವರನಿಗೆ ಉಳಿದ ಮೊತ್ತವನ್ನು ಶೀಘ್ರದಲ್ಲೇ ನೀಡುವುದಾಗಿ ಹೇಳಿದಾಗ, ಅವನು ಚಿನ್ನದ ಸರ ಮತ್ತು ಉಂಗುರವು ಬಾಕಿ ಉಳಿದಿದೆ ಎನ್ನುವ ವರ ತನಗೆ ಅದು ತಕ್ಷಣವೇ ಬೇಕು ಎಂದು ಒತ್ತಿ ಹೇಳುತ್ತಾನೆ. ಈ ನಡುವೆ ಅಕ್ಕಪಕ್ಕದಲ್ಲಿರುವ ವ್ಯಕ್ತಿಗಳು, ನೀನು ವಿದ್ಯಾವಂತ ಮದುವೆ ನಡೆಯದೇ ಇದ್ದಲ್ಲಿ ಎರಡೂ ಕುಟುಂಬಗಳು ಅವಮಾನವನ್ನು ಎದುರಿಸಬೇಕಾಗುತ್ತದೆ. ಅದರ ಎಚ್ಚರಿಯನ್ನು ಹೊಂದಿರಬೇಕು ಎನ್ನುತ್ತಾರೆ. ಕೊನೆಗೆ ಒಪ್ಪಿಗೆಯೊಂದಿಗೆ ಮದುವೆ ನಡೆಯುತ್ತದೆ. ಈ ವೀಡಿಯೊಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ವರನನ್ನು ಟೀಕೆ ಮಾಡಿದ್ದು ಮಾತ್ರವಲ್ಲದೆ ಆತನನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

Viral Video: ಯಕ್ಷಗಾನದಲ್ಲಿ ಮೂಡಿಬಂತು "ಶ್ರೀವಲ್ಲಿ", ನೆಟಿಜನ್ ಗಳು ಫಿದಾ!
ವರದಕ್ಷಿಣೆ ನಿಷೇಧ ಕಾಯಿದೆ, 1961 ರ ಅಡಿಯಲ್ಲಿ, ಯಾರಾದರೂ ವರದಕ್ಷಿಣೆ ನೀಡುವುದು ಅಥವಾ ತೆಗೆದುಕೊಳ್ಳುವುದು ಅಥವಾ ಅಂತಹ ಕೃತ್ಯಗಳಿಗೆ ಕುಮ್ಮಕ್ಕು ನೀಡಿದರೆ ಐದು ವರ್ಷಕ್ಕೆ ಕಡಿಮೆಯಿಲ್ಲದ ಜೈಲು ಶಿಕ್ಷೆ ಮತ್ತು ₹ 15,000 ಕ್ಕಿಂತ ಕಡಿಮೆ ದಂಡ ಅಥವಾ ವರದಕ್ಷಿಣೆಯ ಮೌಲ್ಯ, ಯಾವುದು ಹೆಚ್ಚೋ ಅದು ಶಿಕ್ಷೆಗೆ ಗುರಿಯಾಗುತ್ತದೆ.

 

Follow Us:
Download App:
  • android
  • ios