Health Alert: ಆರೋಗ್ಯದಲ್ಲಿ ಈ ರೀತಿ ಏರುಪೇರಾದ್ರೆ ಖಂಡಿತಾ ನಿರ್ಲಕ್ಷಿಸಬೇಡಿ!

ಮಹಿಳೆಯರು ತಮ್ಮ ಬಿಡುವಿಲ್ಲದ ಜೀವನಶೈಲಿಯಲ್ಲಿ ಮನೆಯವರಿಗಾಗಿ ತಮ್ಮ ಇಡೀ ದಿನದ ಕೆಲಸ ಕಾರ್ಯಗಳನ್ನು ಮೀಸಲಿಟ್ಟಿರುತ್ತಾರೆ. ಅವರ ಬೇಕು ಬೇಡಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ತಮ್ಮ ಬಗ್ಗೆ ನಿರ್ಲಕ್ಷಿಸುತ್ತಾರೆ. ಆದರೆ, ಆರೋಗ್ಯದ ವಿಷಯದಲ್ಲಿ ಈ ನಿರ್ಲಕ್ಷ್ಯ ಸಲ್ಲದು.

Health symptoms women should never ignore

ನೀವು ನಿಮ್ಮ ಮನೆಮಂದಿಯಲ್ಲಾ ಸಂತೋಷದಿಂದ ಇರಬೇಕು ಯಾವುದೇ ಸಮಸ್ಯೆಗಳನ್ನು ಎದುರಿಸದ ಹಾಗೆ ನೋಡಿಕೊಳ್ಳಬೇಕು ಎಂದು ಭಾವಿಸುವುದು ಸರಿ. ಆದರೆ, ಅವರನ್ನು ನೋಡಿಕೊಳ್ಳಲು ನೀವು ಮೊದಲು ಆರೋಗ್ಯವಾಗಿ (Healthy) ಇರಬೇಕಲ್ಲವೇ? ಹೆಚ್ಚಿನ ಸಂದರ್ಭದಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳುವುದಿಲ್ಲ. ಸಣ್ಣಪುಟ್ಟ ರೋಗಲಕ್ಷಣಗಳು ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷಿಸಿ ಬಿಡುತ್ತಾರೆ. ಉದಾಹರಣೆಗೆ ತಲೆನೋವು, ಕೈಕಾಲುಗಳ ನೋವು.. ಇಂಥವೆಲ್ಲ ಆರೋಗ್ಯ ಸಮಸ್ಯೆ ಎಂದು ಬಹುತೇಕ ಮಹಿಳೆಯರು ಪರಿಗಣಿಸುವುದೇ ಇಲ್ಲ. ಇದರಿಂದ ಹೆಚ್ಚಿನ ಅಪಾಯಗಳು ಕಾಣಿಸಿಕೊಳ್ಳದೆ ಇರಬಹುದು. ಆದರೆ ಹಾಗಂದ ಮಾತ್ರಕ್ಕೆ ಅವನ್ನು ನಿರ್ಲಕ್ಷಿಸುವುದು ಸರಿಯಲ್ಲ. ಅತಿಯಾದ ನಿರ್ಲಕ್ಷದಿಂದಾಗಿ ಮುಂದೆ ಸಮಸ್ಯೆ ಎದುರಿಸಬೇಕಾಗಬಹುದು. ಅದಕ್ಕಾಗಿ ಈಗಿನಿಂದಲೇ ಎಚ್ಚೆತ್ತುಕೊಳ್ಳಿ..

ಉಸಿರಾಟದ ತೊಂದರೆ (Short breath), ಎದೆ ನೋವು ಹಾಗೂ ಕೆಲವೊಮ್ಮೆ ವೇಗವಾಗಿ ಹೃದಯ ಬಡಿದುಕೊಳ್ಳುವುದು.

ಸಾಮಾನ್ಯವಾಗಿ ಮಹಿಳೆಯರು, ತಮ್ಮ ಹೃದಯದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗದಿದ್ದರೆ ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಾರೆ.  ಸೈಲೆಂಟ್ ಹಾರ್ಟ್ ಅಟ್ಯಾಕ್ ಮಹಿಳೆಯರಲ್ಲಿ ಹೆಚ್ಚು ಕಂಡುಬರುತ್ತದೆ. ಇದಕ್ಕೆ ಅವರು ವಿರಾಮವಿಲ್ಲದೆ ಪರಿಶ್ರಮ ಪಡುವುದು ಒಂದು ಕಾರಣವಾಗಿದೆ. ಇಂಥ ಸಂದರ್ಭದಲ್ಲಿ ಎದೆನೋವಿನ ಬದಲಾಗಿ ಉಸಿರಾಟದ ತೊಂದರೆಗಳು ಹಾಗೂ ಅತಿ ಆಯಾಸ ಕಾಣಿಸಿಕೊಳ್ಳುತ್ತದೆ. ಇದರ ಜೊತೆಗೆ ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳುವುದಕ್ಕೆ ಶ್ವಾಸಕೋಶದ ಸಮಸ್ಯೆಯೂ ಕಾರಣವಾಗಿರಬಹುದು.

ಇದ್ದಕ್ಕಿದ್ದಂತೆ ದೌರ್ಬಲ್ಯ (Weakness) ಉಂಟಾಗುವುದು

ಎಲ್ಲಾ ಸರಿ ಇದೆ ಎನಿಸುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ (Sudden) ದೇಹದಲ್ಲಿ ದೌರ್ಬಲ್ಯ ಉಂಟಾಗಬಹುದು. ಇದ್ದಕ್ಕಿದ್ದಂತೆ ಗೊಂದಲಗಳು ಸೃಷ್ಟಿಯಾಗುವುದು, ಮಾತು ತೊದಲುವುದು, ದೃಷ್ಟಿ ಮಸುಕಾಗಬಹುದು, ನಡೆಯಲು ಆಗದೆ ಇರುವ ಪರಿಸ್ಥಿತಿ - ಈ ರೋಗಲಕ್ಷಣಗಳು ಸ್ಟ್ರೋಕ್ ಆಗುವ ಮುನ್ಸೂಚನೆ ಇರಬಹುದು. ಇಂಥ ರೋಗಲಕ್ಷಣಗಳ ಬಗ್ಗೆ ನೀವು ತಿಳಿದುಕೊಂಡಿರುವ ಜೊತೆಗೆ ನಿಮ್ಮ ಕುಟುಂಬದವರಿಗೂ ತಿಳಿಸಿರಿ.

Diabetes Diet ಕುರಿತ ಈ ವಿಷಯಗಳನ್ನು ನಂಬಲು ಹೋಗಬೇಡಿ!

ತಿಂಗಳ ಮುಟ್ಟಿನಲ್ಲಿ (Periods) ಏರುಪೇರುಗಳು

ಪ್ರತಿಸಾರಿ ಋತುಸ್ರಾವ ಆಗುವ ಸಂದರ್ಭದಲ್ಲಿ ಯಾವ ರೀತಿಯ ಅನುಭವವನ್ನು ಹೊಂದುತ್ತೀರಿ ಎಂಬ ವಿಷಯ ನಿಮಗೆ ಚೆನ್ನಾಗಿ ತಿಳಿದಿರುತ್ತದೆ. ಆದರೆ ಈ ಅನುಭವವನ್ನು ಹೊರತುಪಡಿಸಿ ನೀವು ಬೇರೆ ರೀತಿಯ ಸಮಸ್ಯೆಗಳನ್ನು ಎದುರಿಸುವ ಹಾಗಾದರೆ ಅಂಥ ವಿಷಯವನ್ನು ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಸಂಪರ್ಕಿಸಬೇಕು. 

ಚರ್ಮದಲ್ಲಿ (Skin) ಬದಲಾವಣೆಗಳು

ಚರ್ಮದ ಮೇಲೆ ಇದ್ದಕ್ಕಿದ್ದಂತೆ ಬದಲಾವಣೆಗಳು ಕಾಣಿಸಿಕೊಂಡರೆ ಆ ವಿಷಯವನ್ನು ನಿರ್ಲಕ್ಷಿಸಬಾರದು. ಉದಾಹರಣೆಗೆ ಕಂಕುಳಿನ ಕೆಳಗೆ ಹಾಗೂ ಕುತ್ತಿಗೆಯ ಹಿಂಭಾಗದಲ್ಲಿ ಚರ್ಮ ಕಪ್ಪಾಗುವುದು, ಪ್ರಿಡಯಾಬಿಟಿಸ್ ರೋಗಲಕ್ಷಣ ಆಗಿರಬಹುದು. ಹಾಗೂ ಮಚ್ಚೆಗಳು ಇದ್ದಕ್ಕಿದ್ದಂತೆ ದೊಡ್ಡದಾಗುತ್ತ ಹೋಗುವುದು ಕೂಡ ಚರ್ಮಕ್ಕೆ ಸಂಬಂಧಪಟ್ಟ ಕಾಯಿಲೆಯ ಲಕ್ಷಣ ಆಗಿರುತ್ತದೆ. ಆದ್ದರಿಂದ ಇಂಥ ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.

ಅಬ್ಬಬ್ಬಾ! ಸೀರೆಲೂ ಇಷ್ಟೊಂದ್ ಸ್ಟೈಲ್ ಹೊಡೀಬಹುದಾ?!

ಸಡನ್ ತೂಕ ಇಳಿಕೆ (Weight loss)

ನೀವು ತೂಕ ಇಳಿಸುವ ಯಾವುದೇ ಪ್ರಯತ್ನ ಮಾಡದೇ ಇರುವ ಸಂದರ್ಭದಲ್ಲಿಯೂ ಕೂಡ ಇದ್ದಕ್ಕಿದ್ದ ಹಾಗೆಯೇ ತೂಕ ಇಳಿಯುತ್ತಾ ಬಂದರೆ ಅದು ದೇಹ ಅನಾರೋಗ್ಯದತ್ತ ವಾಲುತ್ತಿದೆ ಎಂಬುದರ ಸಂಕೇತ ಆಗಿರುತ್ತದೆ. ಥೈರಾಯಿಡ್ ಸಮಸ್ಯೆ, ಡಯಾಬಿಟಿಸ್, ಮಾನಸಿಕ ತೊಂದರೆಗಳು, ಕರುಳಿನ (Liver) ಕಾಯಿಲೆಗಳು ಅಥವಾ ಕ್ಯಾನ್ಸರ್ ಲಕ್ಷಣಗಳು ಆಗಿರಬಹುದು. ಹಾಗಾಗಿ ಇವುಗಳ ಕುರಿತು ಹೆಚ್ಚಿನ ಕಾಳಜಿವಹಿಸಿ.

ಮಾನಸಿಕ ಒತ್ತಡ ಹಾಗೂ ಉದ್ವೇಗ (Anxiety) ಹೆಚ್ಚಾಗುವುದು

ಪ್ರತಿಯೊಬ್ಬರೂ ಒಂದೊಂದು ರೀತಿಯ ಒತ್ತಡಗಳನ್ನು ಎದುರಿಸುತ್ತಲೇ ಇರುತ್ತಾರೆ. ಹಾಗಂದ ಮಾತ್ರಕ್ಕೆ ಒತ್ತಡಗಳು ಸಾಮಾನ್ಯ ವಿಚಾರ ಎಂದರ್ಥವಲ್ಲ. ನಿಮಗೆ ಇರುವ ಒತ್ತಡವನ್ನು ನಿಭಾಯಿಸಲು ಸಾಧ್ಯವೇ ಆಗುತ್ತಿಲ್ಲ, ಎನ್ನುವಂಥ ಸಂದರ್ಭದಲ್ಲಿ ಇದನ್ನು ನಿರ್ಲಕ್ಷ್ಯ ಮಾಡುವುದು ಒಳ್ಳೆಯದಲ್ಲ. ಆದಷ್ಟು ಬೇಗ ಇದಕ್ಕೆ ಸೂಕ್ತ ಚಿಕಿತ್ಸೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಸಮಸ್ಯೆಗಳು ದೊಡ್ಡದಾಗುತ್ತದೆ.

ಇನ್ನೂ ಕೆಲವು ರೋಗಲಕ್ಷಣಗಳನ್ನು ನೀವು ಸುಮ್ಮನೆ ನಿರ್ಲಕ್ಷ ಮಾಡಬೇಡಿ. ನಿಮ್ಮ ಆರೋಗ್ಯ ಕಾಳಜಿಯು ಕೂಡ ಬಹಳ ಮುಖ್ಯ. ನೀವು ಆರೋಗ್ಯವಾಗಿದ್ದರೆ ಮನೆಮಂದಿಯಲ್ಲಾ ಆರೋಗ್ಯದಿಂದ ಇದ್ದಂತೆ..

Latest Videos
Follow Us:
Download App:
  • android
  • ios