ಮಕ್ಕಳ ಸಲಹೆ.. ಸಾಲವಿಲ್ಲದ ವ್ಯವಹಾರ.. ಯಶಸ್ವಿ ಮಹಿಳೆ ಎಲ್ಲರಿಗೆ ಸ್ಫೂರ್ತಿ
ಬ್ಯುಸಿನೆಸ್ ಶುರು ಮಾಡುವ ವೇಳೆ ಸಾಲ ಮಾಡಬೇಕು ಅಂತ ಅನೇಕರು ಭಾವಿಸಿದ್ದಾರೆ. ಆದ್ರೆ ಸಾಲ ಇಲ್ಲದೆ, ಇರುವ ವಸ್ತುವಿನಲ್ಲೇ ವ್ಯಾಪಾರ ಶುರು ಮಾಡಿ ಯಶಸ್ವಿಯಾಗ್ಬಹುದು ಎಂಬುದಕ್ಕೆ ಈಗೆ ಉತ್ತಮ ನಿದರ್ಶನ.
ನಾವು ಏನು ಯೋಚನೆ ಮಾಡ್ತೇವೋ ಅದೇ ಆಗ್ತೇವೆ ಎನ್ನುವ ಮಾತೊಂದಿದೆ. ತನ್ನ ಯಶಸ್ಸಿನ ಬಗ್ಗೆ ಆಲೋಚನೆ ಮಾಡುವ ಜೊತೆಗೆ ಅದು ಯಶಸ್ವಿಯಾಗಲು ಶ್ರಮಿಸಿದಾಗ ಗುರಿ ತಲುಪಲು ಸಾಧ್ಯ. ನಮ್ಮ ದೇಶದಲ್ಲಿ ಈಗ್ಲೂ ಅನೇಕ ಪ್ರದೇಶಗಳು ಪುರುಷ ಪ್ರಧಾನವಾಗಿವೆ. ಅಲ್ಲಿ ಮಹಿಳೆಯರು ಎಲ್ಲ ಕೆಲಸಗಳನ್ನು ಮಾಡುವಂತಿಲ್ಲ. ಮಹಿಳೆಯರಿಗಾಗಿ ಪ್ರತ್ಯೇಕ ನಿಯಮಗಳಿವೆ. ಮನೆಯಿಂದ ಹೊರಗೆ ಬಂದು ಮಹಿಳೆ ದುಡಿಮೆ ಶುರು ಮಾಡಿದ್ರೆ ಆಕೆ ಬಗ್ಗೆ ಜನರು ನಾನಾ ರೀತಿಯಲ್ಲಿ ಮಾತನಾಡ್ತಾರೆ. ಹೊರಗಿನವರು ಏನೇ ಮಾತನಾಡ್ಲಿ, ಮನೆಯವರು, ಮಕ್ಕಳು ಬೆನ್ನಿಗೆ ನಿಂತ್ರೆ ಎಲ್ಲವೂ ಸಾಧ್ಯ ಎಂಬುದಕ್ಕೆ ಈ ಮಹಿಳೆ ಸಾಕ್ಷ್ಯ. ಜನರ ನಾನಾ ಮಾತುಗಳನ್ನು ನಿರ್ಲಕ್ಷ್ಯಿಸಿ ಧೈರ್ಯವಾಗಿ ಸಾಲವಿಲ್ಲದೆ ಬ್ಯುಸಿನೆಸ್ ಶುರು ಮಾಡಿದ ಮಹಿಳೆ ಈಗ ವಾರ್ಷಿಕವಾಗಿ 2.5 ಲಕ್ಷ ರೂಪಾಯಿ ಸಂಪಾದನೆ ಮಾಡ್ತಿದ್ದಾರೆ.
ಎಲ್ಲ ಸಮಸ್ಯೆಯನ್ನು ಮೆಟ್ಟಿನಿಂತು ಯಶಸ್ವಿಯಾದ ಮಹಿಳೆ ಹೆಸರು ಸಂಗೀತಾ (Sangeeta) ಕುಮಾರಿ. ಅವರು ಪಾಟ್ನಾ (Patna) ದ ವೈಶಾಲಿ ನಿವಾಸಿ. ಚಾಕೋಲೇಟ್ ಎಲ್ಲರಿಗೂ ಇಷ್ಟ. ಆದ್ರೆ ಚಾಕೋಲೇಟ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದೇ ಕಾರಣಕ್ಕೆ ಮಕ್ಕಳಿಗೆ ಚಾಕೋಲೇಟ್ ತಿನ್ನದಂತೆ ಪಾಲಕರು ಸಲಹೆ ನೀಡ್ತಾರೆ. ದೊಡ್ಡವರು ಚಾಕೋಲೇಟ್ (Chocolate) ಇಷ್ಟಪಟ್ಟರೂ ಆರೋಗ್ಯದ ಕಾರಣಕ್ಕೆ ಅದ್ರ ಸೇವನೆ ಕಡಿಮೆ ಮಾಡ್ತಾರೆ. ಆದ್ರೆ ಸಂಗೀತಾ ಕುಮಾರಿ ತಯಾರಿಸುತ್ತಿರುವ ಚಾಕೋಲೇಟ್ ಭಿನ್ನವಾಗಿದೆ. ಇದನ್ನು ಯಾವುದೇ ಭಯವಿಲ್ಲದೆ ಮಕ್ಕಳು ಹಾಗೂ ವೃದ್ಧರು ಕೂಡ ತಿನ್ನಬಹದು.
ಇನ್ಫೋಸಿಸ್ ಷೇರಿನ ಲಾಭಾಂಶ ತೆಗೆದುಕೊಂಡು ಬೇರೆಯಾದ ನಾರಾಯಣ ಮೂರ್ತಿ ಮಗ ರೋಹನ್ ಮೂರ್ತಿ!
ಸಂಗೀತಾ ಕುಮಾರಿ ವ್ಯಾಪಾರ ಜೀವನ (Business Life) ಶುರುವಾಗಿದ್ದು ಅಣಬೆಯಿಂದ (Mushroom). ಏನಾದ್ರೂ ವ್ಯಾಪಾರ ಶುರು ಮಾಡ್ಬೇಕು ಎಂಬ ಆಸೆ ಹೊಂದಿದ್ದ ಸಂಗೀತಾ ಕುಮಾರಿಗೆ ಮೊದಲು ಅವರ ಪತಿ ನೆರವಾದ್ರು. ಮನೆಯಲ್ಲಿ ಅಣಬೆ ಬೆಳೆದು ಮಾರುವಂತೆ ಸಲಹೆ ನೀಡಿದ್ದರು. ಏಳು ವರ್ಷಗಳ ಹಿಂದೆ ಸಂಗೀತಾ ಅಣಬೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದರು.
ಮನೆಯಲ್ಲಿಯೇ ಉತ್ತಮ ಗುಣಮಟ್ಟದ ಅಣಬೆ ಬೆಳೆಯುತ್ತಿದ್ದ ಸಂಗೀತಾ, ಅದನ್ನು ಮಾರಾಟ ಮಾಡುವ ಜವಾಬ್ದಾರಿ ಕೂಡ ಹೊತ್ತಿದ್ದರು. ತಮ್ಮ ಸ್ಕೂಟರ್ ನಲ್ಲಿ ಅಣಬೆ ಹಾಕಿಕೊಂಡು ಹೋಗ್ತಿದ್ದ ಸಂಗೀತಾ, ಹಳ್ಳಿ ಹಳ್ಳಿಗೆ, ಮಾರುಕಟ್ಟೆಗೆ ಹೋಗಿ ಇದನ್ನು ಮಾರಾಟ ಮಾಡುತ್ತಿದ್ದರು. ಹಳ್ಳಿ ಮಹಿಳೆಯರು ಮನೆಯಿಂದ ಹೊರಗೆ ಹೋಗ್ಬಾರದು ಎಂದು ಅನೇಕರು ಸಂಗೀತಾ ಕೆಲವನ್ನು ವಿರೋಧಿಸಿದ್ದರು.
ಸಂಗೀತ ಯಾರ ಮಾತಿಗೂ ತಲೆಕೆಡಿಸಿಕೊಳ್ಳಲಿಲ್ಲ. ಕೊರೊನಾ ಸಮಯದಲ್ಲಿ ಮಾತ್ರ ಸಂಗೀತಾ ಕೆಲಸಕ್ಕೆ ಅಡ್ಡಿಯಾಗಿತ್ತು. ಲಾಕ್ ಡೌನ್ ಕಾರಣ ಅಣಬೆ ಮಾರಾಟ ಕಷ್ಟವಾಗಿತ್ತು. ಈ ಸಮಯದಲ್ಲಿ ಮಕ್ಕಳು ನೀಡಿದ ಸಲಹೆಯನ್ನು ಸಂಗೀತಾ ಪಾಲಿಸಿದ್ರು. ಮಕ್ಕಳ ಐಡಿಯಾದಂತೆ ಸಂಗೀತಾ ಅಣಬೆಯಿಂದ ಚಾಕೋಲೇಟ್ ತಯಾರಿಸಲು ಶುರು ಮಾಡಿದ್ರು. ಸಂಗೀತ ಶುರು ಮಾಡಿದ ಈ ಚಾಕೋಲೇಟ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಮಕ್ಕಳಿಗೆ ವಿಟಮಿನ್ ಡಿ ಇದ್ರಿಂದ ಸಿಗುತ್ತದೆ. ವೃದ್ಧರಿಗೆ ಈ ಚಾಕೋಲೇಟ್ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೆಲಸ ಕೂಡ ಮಾಡುತ್ತದೆ.
ರಿಲಯನ್ಸ್‌ನಲ್ಲಿ ಅತೀ ಹೆಚ್ಚು ಪಾಲುದಾರರು ಯಾರು? ಮುಕೇಶ್ ಅಂಬಾನಿ-ಪತ್ನಿ, ಮಕ್ಕಳು ಅಲ್ಲ!
ಸಂಗೀತ ಬರೀ ಚಾಕೋಲೇಟ್ ಮಾತ್ರವಲ್ಲ ಅಣಬೆಯನ್ನು ಒಣಗಿಸಿ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಾರೆ. ಮಿಠಾಯಿ, ಬಿಸ್ಕತ್ ಕೂಡ ತಯಾರಿಸುತ್ತಾರೆ ಸಂಗೀತಾ. ಅಣಬೆ ಮಾರಾಟ ಮಾಡಿದ ನಂತ್ರ ಉಳಿಯುವ ಚೂರುಗಳಿಂದ ಅವರು ಬಿಸ್ಕತ್, ಚಾಕೋಲೇಟ್ ತಯಾರಿಸುತ್ತಾರೆ.
ಸಂಗೀತಾ ತಯಾರಿಸುವ ಅಣಬೆ ಉತ್ಪನ್ನಕ್ಕೆ ಹೆಚ್ಚಿನ ಬೇಡಿಕೆ ಇದೆ. ಅವರು ಅವರು 250 ಗ್ರಾಂ ಬಿಸ್ಕತನ್ನು 100 ರೂಪಾಯಿಗೆ ಮಾರಾಟ ಮಾಡುತ್ತಾರೆ. ಸ್ಥಳೀಯ ಮಾರುಕಟ್ಟೆಯಲ್ಲಿ ಅವರು ಉತ್ಪನ್ನಗಳನ್ನು ಮಾರಾಟ ಮಾಡುವುದಲ್ಲದೆ ಕರೆ ಮಾಡಿ ಆರ್ಡರ್ ನೀಡಿದವರಿಗೆ ಉತ್ಪನ್ನ ಮಾರಾಟ ಮಾಡುತ್ತಾರೆ.