ಪುರುಷನೊಬ್ಬ ಎರಡು ಮೂರು ಮದುವೆಯಾದರೆ ಸಾಮಾನ್ಯ ಎಂದು ಪರಿಗಣಿಸುವ ನಮ್ಮ ಸಮಾಜ, ಅದೇ ಮಹಿಳೆ ಹಾಗೆ ಮಾಡಿದರೆ ಕಣ್ಣರಳಿಸಿ ನೋಡುತ್ತದೆ ಮತ್ತು ಅದನ್ನು ನಿರಾಕರಿಸುತ್ತದೆ. ಆದರೆ ಮಹಿಳೆಯರು ಒಬ್ಬರಿಗಿಂತ ಹೆಚ್ಚು ಸಂಗಾತಿಗಳನ್ನು ಹೊಂದುವುದು ಒಳ್ಳೆಯದು ಎನ್ನುತ್ತಿದೆ ಸಮೀಕ್ಷೆ.

ಯೂನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯಾ ‘ಮಹಿಳೆ ಮತ್ತು ಪುರುಷರಲ್ಲಿನ ಲೈಂಗಿಕ ಪೂರ್ವಾಗ್ರಹಗಳು’ ಎಂಬ ಬಗ್ಗೆ ಸಮೀಕ್ಷೆ ನಡೆಸಿದ್ದು, ಅದು ರಾಯಲ್‌ ಸೊಸೈಟಿ ಮ್ಯಾಗಜಿನ್‌ನಲ್ಲಿ ಪ್ರಕಟವಾಗಿದೆ.

ಮದ್ವೆಯಾಗ್ತಿದೀರಾ? ಹಾಗಿದ್ರೆ ಮೊದ್ಲು ಗೈನಕಾಲಜಿಸ್ಟ್‌ ಅನ್ನು ಭೇಟಿಯಾಗಿ!

ಸಮೀಕ್ಷೆಯಲ್ಲಿ ಮಹಿಳೆಯರು ಹೆಚ್ಚು ಸಂಗಾತಿಗಳನ್ನು ಹೊಂದುವುದರಿಂದ ಅವರಿಗೆ ಕಷ್ಟಕಾಲದಲ್ಲಿ ಅನುಕೂಲವಾಗುತ್ತದೆ ಎನ್ನಲಾಗಿದೆ. ಕೆಲವು ಸಮುದಾಯಗಳಲ್ಲಿ ಮಹಿಳೆಯರು ಒಬ್ಬರಿಗಿಂತ ಹೆಚ್ಚು ಸಂಗಾತಿಗಳನ್ನು ಹೊಂದಿದ್ದು, ಅದು ಅವರಿಗೆ ಕಷ್ಟಕಾಲದಲ್ಲಿ ಅದು ನೆರವಾಗಿದೆ. ಈಗಿನ ವಾತಾವರಣದ ಪರಿಣಾಮ ಪುರುಷರ ಆರ್ಥಿಕ ಹಾಗೂ ಆರೋಗ್ಯ ಸ್ಥಿತಿಗತಿ ಬದಲಾಗುತ್ತಿರುತ್ತದೆ. ಹೀಗಾಗಿ ಮಹಿಳೆಯರು ಒಬ್ಬರಿಗಿಂತ ಹೆಚ್ಚು ಮಂದಿಯನ್ನು ಮದುವೆಯಾಗುವುದು ಚತುರ ತಂತ್ರ. ಅಲ್ಲದೆ ಬದುಕಿನಲ್ಲಿ ಕಷ್ಟಕಾಲ ಎದುರಾದಾಗಲೂ ಇದು ಪ್ರಯೋಜನವಾಗುತ್ತದೆ ಎಂದು ಅಧ್ಯಯನ ನಡೆಸಿದ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಹಾಲುಣಿಸಿ ಭೇಷ್ ಎಂದೆನಿಸಿಕೊಂಡ ತಾಯಂದಿರು!

ಪಶ್ಚಿಮ ತಾಂಜೇನಿಯಾ ಗ್ರಾಮದ ಎಲ್ಲಾ ಮನೆಗಳಿಗೂ ತೆರಳಿ ಹುಟ್ಟು, ಸಾವು, ಮದುವೆ ವಿಚ್ಛೇದನ ಕುರಿತು ದಾಖಲೆಗಳನ್ನು ಸಂಗ್ರಹಿಸಿದ್ದಾರೆ. 2 ದಶಕಗಳ ಕಾಲದ ದಾಖಲೆಗಳ ಆಧಾರದ ಮೇಲೆ ಈ ವಿಷಯವನ್ನು ಹೇಳಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.