ಸ್ವಿಮಿಂಗ್ ಫೂಲ್ನಲ್ಲಿ ಪ್ರಬಲ ವೀರ್ಯಾಣು ಇದ್ರೆ ಮಹಿಳೆ ಪ್ರಗ್ನೆಂಟ್!
ಸ್ವಿಮಿಂಗ್ ಪೂಲ್ ನಲ್ಲಿ ವೀರ್ಯ ಸ್ಖಲನವಾದರೆ ಹೆಣ್ಣು ಮಕ್ಕಳು ಗರ್ಭವತಿಯಾಗ್ತಾರಾ?/ ಇಂಡೋನೆಷಿಯಾದಿಂದ ಹೊರಟ ಸುದ್ದಿಗೆ ಭಾರತದ ಪುರಾಣ ಲಿಂಕ್/ ನೀರಿನಲ್ಲಿ ಇರುವ ರಾಸಾಯನಿಕಗಳು ಯಾವ ಯಾವ ಪರಿಣಾಮವನ್ನು ಬೀರುವುದಿಲ್ಲವೇ?
ಭಾರತೀಯರಿಗೆ ಈ ಸುದ್ದಿ ಹೊಸದೇನೂ ಅಲ್ಲ. ಆದರೆ ಎಲ್ಲಿಂದಲೋ ಎಲ್ಲಿಗೋ ಲಿಂಕ್ ತೆಗೆದುಕೊಂಡು ಹೋಗುತ್ತಿದೆ. ಇಂಡೋನೇಷಿಯಾದ ಮಕ್ಕಳ ಹಕ್ಕು ಕಾಪಾಡುವ ಅಧಿಕಾರಿಯೊಬ್ಬರು ಸಮಸ್ಯೆ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ಅರೇ ಎಲ್ಲಿಯ ಪುರಾಣದ ಋಷ್ಯಶೃಂಗ ಎಲ್ಲಿಯ ಇಂಡೊನೇಷಿಯಾ ಅಂದುಕೊಂಡ್ರಾ ಹೇಳುತ್ತೇವೆ ಕೇಳಿ.
ಸ್ವಿಮಿಂಗ್ ಪೂಲ್ ನಲ್ಲಿ ಪ್ರಬಲ ವೀರ್ಯಾಣು ಇದ್ದರೆ ಅದು ಮಗುವಿನ ಜನನಕ್ಕೆ ಕಾರಣವಾಗಬಹುದು ಎಂಬ ಹೇಳಿಕೆ ದೊಡ್ಡ ಚರ್ಚೆ ಹುಟ್ಟುಹಾಕಿದೆ. ಇದು ಸಾಧ್ಯವೇ? ಈ ಬಗ್ಗೆ ವೈದ್ಯರು ಏನು ಹೇಳುತ್ತಾರೆ? ಮೆಡಿಕಲ್ ಸೈನ್ಸ್ ಏನು ಹೇಳುತ್ತದೆ? ಹೀಗೆ ತರೇವಾರಿ ವಿಭಾಗದಲ್ಲಿ ಚರ್ಚೆ ನಡೆದಿದೆ.
ಪುರುಷರು ಎಷ್ಟು ದಿನಕ್ಕೊಮ್ಮೆ ವೀರ್ಯ ಬಿಡುಗಡೆ ಮಾಡ್ಬೇಕು?
ಇಂಡೊನೇಷಿಯಾದ ಮಹಿಳಾ ಆಯೋಗದ ಕಮಿಷನರ್ ಸಿಟ್ಟಿ ಹಿಕ್ ಮಾಟೈ ಕಳೆದ ವಾರ ಮಾಡಿದ ಸುದ್ದಿಗೋಷ್ಠಿ ಅವರ ಸ್ಥಾನಕ್ಕೆ ಕುತ್ತು ತಂದಿದೆ. ಶಕ್ತಿಶಾಲಿಯಾದ ವೀರ್ಯ ಈಜುಕೋಳದ ನೀರಿನಲ್ಲಿ ಇದ್ದರೆ ಅದು ಸಹ ಗರ್ಭಕ್ಕೆ ಕಾರಣವಾಗಬಹುದು. ಸೆಕ್ಸುವಲ್ ಆಕ್ಟಿವಿಟಿ ಯಾವುದೇ ಇಲ್ಲದಿದ್ದರೂ ಪುರುಷ ಈಜುಕೋಳದಲ್ಲಿ ವೀರ್ಯ ಸ್ಖಲನ ಮಾಡಿದ್ದರೆ ಅದು ಗರ್ಭಾವಸ್ಥೆಗೆ ಕಾರಣವಾಗಬಹುದು ಎಂದು ಹೇಳಿದ್ದರು.
ಮಹಿಳೆ ಕೂಡ ಸೆಕ್ಸುವಲಿ ಆಕ್ಟೀವ್ ಮೂಡ್ ನಲ್ಲಿ ಇದ್ದರೆ ಸಾಧ್ಯತೆಗಳು ಹೆಚ್ಚು. ಮಹಿಳೆಯರು ಮತ್ತು ಪುರುಷರು ಸ್ವಿಮಿಂಗ್ ಪೂಲ್ ನಲ್ಲಿ ಇದ್ದಾಗ ಪುರುಷರು ಹೇಗೆ ವರ್ತನೆ ಮಾಡುತ್ತಾರೆ ಎಂದು ಹೇಳಲು ಅಸಾಧ್ಯ ಎಂದು ಅಧಿಕಾರಿ ಹೇಳಿದ್ದಾರೆ.
ಆದರೆ ಮಾಧ್ಯಮವೊಂದು ಡಾಕ್ಟರ್ ಹೇಳಿಕೆಯನ್ನು ವರದಿ ಮಾಡಿದೆ. ಇಂಡೊನೇಶಿಯನ್ ಡಾಕ್ಟರ್ ಅಸೋಸಿಯೇಷನ್ ನ ನಜರ್ ಹೇಳುವಂತೆ ಈ ರೀತಿಯ ಕಾರಣದಿಂದ ಮಹಿಳೆ ಗರ್ಭವತಿ ಆಗುವುದು ಅಸಾಧ್ಯ ಎಂದಿದ್ದಾರೆ. ಈಜುಕೋಳದ ನೀರು ಕ್ಲೋರಿನ್ ಮತ್ತು ಇತರ ರಾಸಾಯನಿಕ ಇರುವುದುದರಿಂದ ವೀರ್ಯಾಣು ಜೀವಂತ ಇರುವುದು ಅಸಾಧ್ಯ ಎಂದು ಹೇಳುತ್ತಾರೆ.
ವಿರುದ್ಧ ಲಿಂಗದೊಂದಿಗೆ ಸ್ವಿಮ್ ಮಾಡುವುದು ಗರ್ಭಕ್ಕೆ ಕಾರಣವಾಗುವುದು ಅಸಾಧ್ಯ. ಒಂದು ವೇಳೆ ಪುರುಷ ವೀರ್ಯ ಸ್ಖಲನ ಮಾಡಿದ್ದರೂ ಅದು ಯೋನಿಯನ್ನು ಹಾಗೆಯೇ ಪ್ರವೇಶ ಮಾಡುವುದು ಅಸಾಧ್ಯ ಎಂದು ವೈದ್ಯರು ಹೇಳುತ್ತಾರೆ.
ಇಷ್ಟೆಲ್ಲಾ ಘಟನೆ ನಡೆದ ಮೇಲೆ ಸಿಟ್ಟಿ ಹಿಕ್ ಮಾಟೈ ಕ್ಷಮಾಪಣೆಯನ್ನು ಕೇಳಿದ್ದಾರೆ. ಇದೊಂದು ಪರ್ಸನಲ್ ಸ್ಟೇಟ್ ಮೆಂಟ್ ಆಗಿತ್ತು ಎಂದು ಹೇಳಿ ವಿವಾದಕ್ಕೆ ತೆರೆ ಎಳೆಯುವ ಕೆಲಸ ಮಾಡಿದ್ದಾರೆ.
ದಾನಿಗಳ ಬದಲು ತನ್ನ ವೀರ್ಯ ಬಳಸಿದ ವೈದ್ಯ ಮಹಾಶಯ!
ಏನಿದು ಖುಷ್ಯಶೃಂಗನ ಕತೆ? ಮಹಾಭಾರತದ ಒಂದು ಪರ್ವದಲ್ಲಿ ಬರುವ ಕತೆಯೂ ಮೇಲಿನ ಸುದ್ದಿಗೂ ಲಿಂಕ್ ಆಗುತ್ತದೆ. ಮಹರ್ಷಿ ಕಾಶ್ಯಪ ವಿಭಾಂಡಕನು ಕೌಶಿಕೀ ನದಿಯನ್ನು ಸೇರಿ ಅಲ್ಲಿ ದೀರ್ಘಕಾಲ ಪರಿಶ್ರಮಿಸಿ ಋಷಿ-ದೇವತೆಗಳಿಂದ ಗೌರವಿಸಲ್ಪಟ್ಟು ತಪಸ್ಸಿನಲ್ಲಿ ನಿರತನಾಗಿದ್ದನು. ಅವನು ನೀರಿನಲ್ಲಿ ಸ್ನಾನಮಾಡುತ್ತಿರುವಾಗ ಅಪ್ಸರೆ ಊರ್ವಶಿಯನ್ನು ನೋಡಿದಾಗ ವೀರ್ಯವು ಸ್ಖಲನವಾಯಿತು. ಆಗಲೇ ಅಲ್ಲಿಗೆ ಬಾಯಾರಿಕೆಯಿಂದ ಬಂದು ನೀರನ್ನು ಕುಡಿಯುತ್ತಿದ್ದ ಹೆಣ್ಣು ಜಿಂಕೆಯೊಂದು ಅದನ್ನು ಕುಡಿಯಿತು ಮತ್ತು ಅದು ಗರ್ಭಿಣಿಯಾಯಿತು.
ಇದೇ ಜಿಂಕೆ ಮಗುವೊಂದಕ್ಕೆ ಜನ್ಮ ನೀಡಿತು. ಅವನೇ ಮುಂದೆ ಋಷ್ಯಶೃಂಗನಾಗಿ ಬೆಳೆದನು. ತಲೆಯಲ್ಲಿ ಕೋಡುಗಳು ಇದ್ದವು. ಋಷ್ಯಶೃಂಗ ಅರಣ್ಯದಲ್ಲಿ ಬೆಳೆಯುತ್ತಾನೆ.
ಕೇಳಲೇಬೇಕು ಹುನಗುಂಡಿ ದೇವಿಯ ಪುರಾಣ
ನೀರನಲ್ಲಿ ಇದ್ದ ವೀರ್ಯಾಣುವೇ ಮಗುವಿನ ಜನನಕ್ಕೆ ಕಾರಣವಾಯಿತು ಎಂದು ಪುರಾಣದ ಕತೆ ಹೇಳಿತು. ಚಿಕ್ಕಮಗಳೂರು ಶೃಂಗೇರಿ ಸಮೀಪದ ಕಿಗ್ಗದಲ್ಲಿರುವ ಋಷ್ಯಶೃಂಗಕ್ಕೆ ರಾಜಕಾರಣಿಗಳು ಸಹ ಭೇಟಿ ನೀಡುತ್ತಾರೆ. ಮಳೆ ಇಲ್ಲದೆ ಬರ ಎದುರಾಗ ಹಿಂದೆ ಅಧಿಕಾರದಲ್ಲಿದ್ದ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ಋಷ್ಯಶೃಂಗಕ್ಕೆ ಭೇಟಿ ನೀಡಿ ಪೂಜೆ ಮಾಡಿದ್ದರು.
#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"