ಭಲೇ…ರಾಪ್ ಮೂಲಕ ಎಲ್ಲರನ್ನೂ ಮರಳು ಮಾಡ್ತಿದ್ದಾರೆ ಈ ಓಲ್ಡ್ ಲೇಡೀಸ್

ಅರವತ್ತಕ್ಕೆ ಅರಳು – ಮರಳು ಎನ್ನುವ ಮಾತಿದೆ. ಆದ್ರೆ ಅದಕ್ಕೆ ಈ ಮಹಿಳೆಯರು ವಿರುದ್ಧವಾಗಿದ್ದಾರೆ. ತಮ್ಮ ವೃದ್ಧಾಪ್ಯದಲ್ಲಿ ಎಲ್ಲರು ಬೆರಗುಗೊಳಿಸುವ ಕೆಲಸ ಮಾಡ್ತಿದ್ದಾರೆ ಇವರು. ವಿದ್ಯೆ ಕಲಿತು ರಾಪರ್ ಆಗಿರೋರ ಕಥೆ ಇಲ್ಲಿದೆ.

South Korea Rapping Grandmothers Made Career At Old Age Of Eighty roo

ಯಾವುದೇ ಕೆಲಸ ಮಾಡಲು ವಯಸ್ಸಿನ ಮಿತಿ ಇಲ್ಲ. ಮನಸ್ಸಿದ್ರೆ ವಯಸ್ಸು ಬರೀ ಲೆಕ್ಕಕ್ಕೆ ಮಾತ್ರ. ಹೊಸದನ್ನು ಕಲಿಯಲು, ಹೊಸ ವೃತ್ತಿ ಶುರು ಮಾಡಲು ನೀವು ವಯಸ್ಸು ನೋಡ್ತಾ ಕುಳಿತುಕೊಳ್ಳಬೇಕಾಗಿಲ್ಲ. ಅನೇಕ ಕೆಲಸ, ಕಲೆಗಳಿಗೆ ನಾವೇ ವಯಸ್ಸಿನ ಗಡಿ ಹಾಕಿಕೊಂಡಿದ್ದೇವೆ. ವಯಸ್ಸು ಅರವತ್ತು ದಾಟುತ್ತಿದ್ದಂತೆ ಅನೇಕ ಕೆಲಸಗಳಿಂದ ಹಿಂದೆ ಸರಿಯಲು ಶುರು ಮಾಡ್ತೇವೆ. ಇನ್ನೇನು ವಯಸ್ಸಾಗ್ತಾ ಇದೆ, ಈಗ ವೃತ್ತಿ ಶುರು ಮಾಡಿ ಮಾಡೋದೇನಿದೆ ಅಂತಾ ಮನೆಯಲ್ಲಿ ಕುಳಿತುಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಬಾಲ್ಯದಲ್ಲಿಯೇ ನೃತ್ಯ ಅಥವಾ ಹಾಡುಕಲಿತವರು ಮಾತ್ರ ವಯಸ್ಸಾದ್ಮೇಲೂ ಅದನ್ನು ಮುಂದುವರೆಸುತ್ತಾರೆಯೇ ವಿನಃ ವಯಸ್ಸಾದ್ಮೇಲೆ ಡಾನ್ಸ್ ಕಲಿಯುವವರ ಸಂಖ್ಯೆ ಬಹಳ ಅಪರೂಪ. ಅದರಲ್ಲಿ ಕೆಲವೇ ಕೆಲವು ಮಂದಿ, ವಯಸ್ಸನ್ನು ಲೆಕ್ಕಿಸದೆ, ಇರುವ ಒಂದು ಲೈಫ್ ನಲ್ಲಿ ತಮ್ಮ ಆಸೆ ತೀರಿಸಿಕೊಳ್ಳಲು, ಏನಾದ್ರೂ ಸಾಧಿಸಲು ಬಯಸ್ತಾರೆ. ನಾಲ್ಕು ಜನ ನಮ್ಮನ್ನು ಗುರುತಿಸಬೇಕೆಂಬ ಬಯಕೆ ಹೊಂದಿರುತ್ತಾರೆ. ತಮ್ಮ ಅರವತ್ತು, ಎಪ್ಪತ್ತನೇ ವಯಸ್ಸಿನಲ್ಲಿ ಪರೀಕ್ಷೆ ಬರೆಯುವವರು, ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರನ್ನು ನೀವು ನೋಡ್ಬಹುದು. ಆದ್ರೆ ಇಲ್ಲೊಂದು ಮಹಿಳೆ ಗುಂಪು ಭಿನ್ನವಾಗಿ ಜನರ ಗಮನ ಸೆಳೆಯುತ್ತಿದೆ. ಉತ್ತರ ಕೋರಿಯಾದ ಈ ಮಹಿಳೆಯರಿಗೆ ವಯಸ್ಸಿನ ಚಿಂತೆ ಇಲ್ಲ. ಸಾಧಿಸಬೇಕೆಂಬ ಛಲವಿದೆ. ತಮ್ಮನ್ನು ತಾವು ಖುಷಿಯಾಗಿಟ್ಟುಕೊಳ್ಳಬೇಕೆಂಬ ನಿಟ್ಟಿನಲ್ಲಿ ಅವರು ಕೆಲಸ ಮಾಡ್ತಿದ್ದಾರೆ. ಹಾಗಾಗಿಯೇ ಗುಂಪುಕಟ್ಟಿಕೊಂಡು ರಸ್ತರಸ್ತೆಗಿಳಿದಿದ್ದಾರೆ.  ಬಿಂದಾಸ್ ಆಗಿ ಹಾಡು ಹೇಳ್ತಾ ಎಂಜಾಯ್ ಮಾಡೋದಲ್ಲದೆ ನೆರೆದವರಿಗೆ ಮನರಂಜನೆ ನೀಡ್ತಿದ್ದಾರೆ.

ರಾಪ್ (Rap) ಅಜ್ಜಿಯಂದಿರು : ಉತ್ತರ ಜಿಯೋಂಗ್‌ಸಾಂಗ್ ಪ್ರಾಂತ್ಯದಲ್ಲಿ ವಾಸಿಸುವ 7-8 ಅಜ್ಜಿಯರ ಜೋಶ್ ನೋಡಿದ್ರೆ ನೀವು ದಂಗಾಗ್ತೀರಿ. ಅವರ ವಯಸ್ಸು ಕಮ್ಮಿ ಏನಿಲ್ಲ. ಸುಮಾರು 70-80 ವರ್ಷ ವಯಸ್ಸಿನ ಈ ಅಜ್ಜಿಯರು ರಾಪ್ ನಲ್ಲಿ ಯುವಕರನ್ನು ನಾಚಿಸ್ತಾರೆ. ಬಾಲ್ಯದಲ್ಲಿ ಇವರೇನು ಹಾಡುಗಾರರಾಗಿರಲಿಲ್ಲ. ಆಗ ಓದಿಲ್ಲದೆ, ಮನೆ, ಕುಟುಂಬವನ್ನು ನೋಡಿಕೊಳ್ತಿದ್ದ ಅಜ್ಜಿಯರು ಈಗ ಫ್ರೀ. ಇವರೆಲ್ಲ ಹಳ್ಳಿಯವರು. ಆಗ ಶಿಕ್ಷಣ ಪಡೆದಿರಲಿಲ್ಲ. ಕೊರಿಯಾ (Korea) ದಲ್ಲಿ ಬರೆಯಲು ಹಾಗೂ ಓದಲು ಬಳಸುವ ಹಂಗುಲ್ ಲಿಪಿ ಕೂಡ ಇವರಿಗೆ ತಿಳಿದಿರಲಿಲ್ಲ.  

ಫ್ಯಾಷನ್‌ ವೀಕ್‌ನಲ್ಲಿ ತುಂಡುಡುಗೆಯಲ್ಲಿ ಮಿಂಚಿದ ಬ್ಯೂಟಿಕ್ವೀನ್ ದಿವಿತಾ, 1000 ಕೋಟಿಯ ಉದ್ಯಮ ಕಟ್ಟಿದ ಚೆಲುವೆ!

ವೃದ್ಧಾಪ್ಯದಲ್ಲಿ ಓದು ಕಲಿತ ಅಜ್ಜಿಯರು : ನಿವೃತ್ತಿ ಸಮಯದಲ್ಲಿ ಏನಾದ್ರೂ ಮಾಡ್ಬೇಕೆಂದುಕೊಂಡವರು ಒಟ್ಟುಗೂಡಿದ್ರಿ. 2016 ರಲ್ಲಿ ದಕ್ಷಿಣ ಕೊರಿಯಾದ ಲಿಪಿಯನ್ನು ಓದಿದರು. ನಂತ್ರ ರಾಪ್ ಮಾಡೋದನ್ನು ಕಲಿತ್ರು. ಈಗ ಸಡಿಲವಾದ ಡ್ರೆಸ್ ಹಾಕಿಕೊಂಡು ರಾಪ್ ಮಾಡ್ತಾರೆ. ಜನರು ಅಜ್ಜಿಯಂದಿರ ರಾಪ್ ಗುಂಪನ್ನು ಗುರುತಿಸಲು ಶುರು ಮಾಡಿದ್ದಾರೆ.

ಗುಂಪಿನ ನಾಯಕಿ ವಯಸ್ಸೆಷ್ಟು? : ಈ ವೃದ್ಧ ಮಹಿಳೆಯರ ಗುಂಪಿನ ನಾಯಕಿ ವಯಸ್ಸು 81. ರಾಪ್ ನ ಅನೇಕ ವಿಡಿಯೋಗಳನ್ನು ಮಾಡಿ ಆಕೆ ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡ್ತಾಳೆ. ಈ ಟೀಂ ತಮ್ಮ ತಂಡಕ್ಕೆ ಸುನಿ ಆಂಡ್ ಸೆವೆನ್ ಪ್ರಿನ್ಸೆಸಸ್ ಎಂದು ಹೆಸರಿಟ್ಟುಕೊಂಡಿದೆ. ಕೃಷಿ, ಗ್ರಾಮೀಣ ಜೀವನಕ್ಕೆ ಸಂಬಂಧಿಸಿದ ವಿಷ್ಯವನ್ನಿಟ್ಟುಕೊಂಡು ಇವರು ರಾಪ್ ಮಾಡ್ತಾರೆ. 

ಸೆಕ್ಸ್‌ಗೋಸ್ಕರ ಮದ್ವೆಯಾಗೋಲ್ಲ ಎಂದಿದ್ದ ಕಿರಾತಕ ನಟಿ ಸಲಿಂಗಕಾಮಿಯೇ?

ಆರಂಭದಲ್ಲಿ ಶಾಲೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು ಇವರು. ಜನರು ಇವರ ಬಟ್ಟೆ ಹಾಗೂ ಹಾಡಿನ ಸ್ಟೈಲ್ ಇಷ್ಟಪಡ್ತಾರೆ. ನಿಧಾನವಾಗಿ ಇವರ ಜನಪ್ರಿಯತೆ ಹೆಚ್ಚಾಯ್ತು. ಅನೇಕ ಟಿವಿ ಶೋಗಳಲ್ಲೂ ಇವರು ಕಾಣ್ತಿರುತ್ತಾರೆ. ರಾಪ್ ಮಾಡ್ತಾ ಮಾಡ್ತಾ ನಾವು ನಮ್ಮನ್ನು ಯಂಗ್ ಎಂದುಕೊಳ್ತಿದ್ದೇವೆ ಎನ್ನುತ್ತಾರೆ ಈ ಅಜ್ಜಿಯಂದಿರು. ವಯಸ್ಸು ಯಾವುದೇ ಆಗಿರಲಿ ಮನಸ್ಸಿಗೆ ಸಂತೋಷ ಮುಖ್ಯ. ನಿಮ್ಮನ್ನು ನೀವು ಸದಾ ಯುವಕರು ಎಂದುಕೊಂಡ್ರೆ ಯಾವ ಕೆಲಸವೂ ಕಷ್ಟವಾಗೋದಿಲ್ಲ. ಸದಾ ಒಂದಿಲ್ಲೊಂದು ಕೆಲಸದಲ್ಲಿ ಬ್ಯುಸಿಯಿದ್ರೆ ವೃದ್ಧಾಪ್ಯದಲ್ಲಿ ಒಂಟಿತನ ಕಾಡೋದಿಲ್ಲ ಎಂಬುದನ್ನು ಇವರಿಂದ ಕಲಿಯಬೇಕು. 

Latest Videos
Follow Us:
Download App:
  • android
  • ios