Asianet Suvarna News Asianet Suvarna News

ಮಗುವಿಗೆ ಎದೆಹಾಲು ಉಣಿಸುತ್ತಾ ಸೌಂದರ್ಯದ ಕುರಿತು ಮಾತನಾಡಿದ ನಟಿ ಸೋನಂ ಕಪೂರ್​

ಮಗುವಿಗೆ ಎದೆಹಾಲು ಉಣಿಸಿದರೆ ಸೌಂದರ್ಯ ಕಮ್ಮಿಯಾಗುತ್ತದೆ ಎನ್ನುವ ಅಮ್ಮಂದಿರಿಗೆ ನಟಿ ಸೋನಂ ಕಪೂರ್​ ಹೇಳಿದ್ದೇನು? 
 

Sonam Kapoor Opens Up About Dealing With Postpartum Weight Says, I Just Dont Feel Like Myself
Author
First Published Apr 23, 2023, 5:15 PM IST

ಹೆಣ್ಣಿಗೆ ತಾಯ್ತನ ಎನ್ನುವುದು ಒಂದು  ಭಾಗ್ಯವೇ ಸರಿ. ಎಷ್ಟೋ ಮಂದಿ ಮಕ್ಕಳಾಗದೇ ಕೊರಗುವುದು ಇದೆ. ತಾಯ್ತನ ಎನ್ನುವುದು ಹೆಣ್ಣಿನ ಪರಿಪೂರ್ಣ ಜೀವನ ಎನ್ನಲಾಗುವುದು. ಆದರೆ ಕೆಲವರಿಗೆ ಯಾವ್ಯಾವುದೋ ಕಾರಣಗಳಿಂದ ಈ ಭಾಗ್ಯ ಸಿಗುವುದಿಲ್ಲ, ಇನ್ನು ಕೆಲವರು ಅದರಲ್ಲಿಯೂ ಕೆಲವು ಸೆಲೆಬ್ರಿಟಿಗಳು ತಮ್ಮ ಗರ್ಭದಿಂದ ಮಗುವನ್ನು ಪಡೆಯಲು ಹಿಂಜರಿಯುವುದು ಉಂಟು. ಇದಕ್ಕೆ ಕಾರಣ, ತಮ್ಮ ಸೌಂದರ್ಯ ಎಲ್ಲಿ ಕುಗ್ಗುತ್ತದೆಯೋ ಎಂಬ ಭಯ ಅವರಿಗೆ. ಇದೇ  ಕಾರಣಕ್ಕೆ ಕೆಲವು ಸೆಲೆಬ್ರಿಟಿಗಳು ಬಾಡಿಗೆ ತಾಯ್ತನದ (Surrogacy) ಮೊರೆ ಹೋಗಿರುವುದನ್ನು ನೋಡಿರಬಹುದು. ಇನ್ನು ಅಕಸ್ಮಾತ್​ ಮಗು ಹುಟ್ಟಿದರೆ ಎದೆಹಾಲನ್ನು ಕುಡಿಸಲು ಹಿಂದೇಟು ಹಾಕುತ್ತಾರೆ. ದೇಹದ ಸೌಂದರ್ಯ ಕುಗ್ಗಿ ಎಲ್ಲಿ ತಮಗೆ ಅವಕಾಶಗಳು ಸಿಗುವುದಿಲ್ಲವೋ ಎನ್ನುವ ಆತಂಕ ಅವರದ್ದು.  ಆದರೆ ಸೌಂದರ್ಯಕ್ಕಿಂತ ಜೀವನದಲ್ಲಿ ಒಮ್ಮೆಯೋ, ಎರಡು ಬಾರಿಯೋ ಸಿಗುವ ತಾಯ್ತನದ ಸಂಪೂರ್ಣ ಸುಖವನ್ನು ಅನುಭವಿಸಬೇಕು ಎನ್ನುವ ಸೆಲೆಬ್ರಿಟಿಗಳೂ ಇದ್ದಾರೆ. ಅವರಲ್ಲಿ ಒಬ್ಬರು ನಟಿ ಸೋನಂ ಕಪೂರ್​.

ಸ್ತನ್ಯಪಾನದ ದಿನಾಚರಣೆ ವೇಳೆ ಮಗುವಿಗೆ ಸ್ತನ್ಯಪಾನದ ಜಾಗೃತಿ ಮೂಡಿಸುವ ಸಲುವಾಗಿ ಹಲವರು ಇದರ ಮಹತ್ವ ಸಾರುವುದು ಉಂಟು. ಆದರೆ ಕೆಲವು ಸೆಲೆಬ್ರಿಟಿಗಳು (Celebrity) ಖುದ್ದು ತಾವು ಮಗುವಿಗೆ ಎದೆಹಾಲು ಉಣಿಸುವ ಫೋಟೋ ಶೇರ್​ ಮಾಡಿಕೊಂಡು ಅದರ ಮಹತ್ವ ಸಾರುತ್ತಿದ್ದಾರೆ. ಅದೇ ರೀತಿ ಕಳೆದ ವರ್ಷವೂ ಕೆಲವು ಚಿತ್ರತಾರೆಯರು ತಮ್ಮ ಮಗುವಿಗೆ ಎದೆಹಾಲು ನೀಡುವ ಫೋಟೋ ಶೇರ್​ ಮಾಡಿಕೊಂಡಿದ್ದರು. ಅವರಲ್ಲಿ ಒಬ್ಬರು ನಟಿ ಸೋನಂ ಕಪೂರ್​.  ಮಗುವಿಗೆ ಸಾರ್ವಜನಿಕವಾಗಿಯೇ ಹಾಲುಣಿಸುವ ಮೂಲಕ ತಾಯಿಯ ಮೌಲ್ಯ ಸಾರಿದ್ದರು ಇವರು. ಇದೀಗ ಈ ನಟಿ, ಅನಿಲ್​ ಕಪೂರ್​ ಪುತ್ರಿ,  ತಾಯ್ತನ, ಮಗು ಮತ್ತು ಸೌಂದರ್ಯದ ಕುರಿತು ಮಾತನಾಡಿದ್ದಾರೆ. 

Anushka Shetty: ಗುಟ್ಟಾಗಿ ಮದ್ವೆಯಾದ್ರಾ ಅನುಷ್ಕಾ ಶೆಟ್ಟಿ? ಮೌನ ಮುರಿದ ನಟಿ ಹೇಳಿದ್ದೇನು?

ಸಾವರಿಯಾ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಸೋನಂ ಕಪೂರ್ (Sonam Kapoor). ಸಿನಿಮಾಗಳಲ್ಲಿ ನಿರೀಕ್ಷೆಯಷ್ಟು ಬೆಳೆಯಲಿಲ್ಲ. ಅಪ್ಪ ಅನಿಲ್​ ಕಪೂರ್​ ಗಳಿಸಿದಷ್ಟು ಖ್ಯಾತಿ ಗಳಿಸಲಿಲ್ಲ. ಈ ನಡುವೆಯೇ ಸೋನಂ 2018 ರಲ್ಲಿ  ಬಹುಕಾಲದ ಗೆಳೆಯ ಆನಂದ್ ಅಹುಜಾ ಅವರನ್ನು ವಿವಾಹವಾದರು. ನಂತರ ಗಂಡು ಮಗುವಿಗೆ ಜನ್ಮ ನೀಡಿದರು. ಮಗನಿಗೆ  'ವಾಯು' ಎಂದು ಹೆಸರಿಡಲಾಗಿದೆ.  ಈ ಕುರಿತು ಸೋನಂ ಕಪೂರ್ ಇನ್‌ಸ್ಟಾಗ್ರಾಮ್ ನಲ್ಲಿ ಮಗುವಿನ ಜೊತೆ ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದರು. ಮಗುವಿನ ಹೆಸರಿನ ಔಚಿತ್ಯವನ್ನೂ ಅವರು ಬರೆದುಕೊಂಡಿದ್ದರು. ‘ನಮ್ಮ ಜೀವನಕ್ಕೆ ಹೊಸ ಉಸಿರು ಸೇರಿಸಲಾಗಿದೆ. ಭಗವಾನ್ ಹನುಮಾನ್ ಮತ್ತು ಭೀಮನ ರೂಪದಲ್ಲಿ ನಮ್ಮ ಶಕ್ತಿ ಮತ್ತು ಧೈರ್ಯದ ಸಂಕೇತ. ಅವರ ಪುತ್ರ ವಾಯು ಕಪೂರ್ ಅಹುಜಾಗೆ ಎಲ್ಲರ ಆಶೀರ್ವಾದವನ್ನು ಬಯಸುತ್ತಿದ್ದಾರೆ. ಹಿಂದೂ ಧರ್ಮದಲ್ಲಿರುವ ಪಂಚಭೂತಗಳಲ್ಲಿ ವಾಯುವೂ (Vayu) ಒಂದು. ವಾಯುವು ತನ್ನಲ್ಲಿರುವ ಪ್ರಬಲ ದೇವರು. ಅದಕ್ಕಾಗಿಯೇ ನಮ್ಮ ಮಗನಿಗೆ ವಾಯು ಎಂದು ಹೆಸರಿಟ್ಟಿದ್ದೇವೆ ಎಂದಿದ್ದರು.

ಸೋನಂ ಕಪೂರ್ ಇತ್ತೀಚೆಗೆ ಮ್ಯಾಗಜೀನ್‌ನೊಂದಿಗಿನ ಸಂವಾದದಲ್ಲಿ ತಮ್ಮ ಗರ್ಭಧಾರಣೆಯ ನಂತರದ ಜೀವನದ ಬಗ್ಗೆ ಮಾತನಾಡಿದರು. ಮಗು ಹುಟ್ಟಿದ ನಂತರದ ತೂಕ ಹೆಚ್ಚಳ, ಸ್ತನ್ಯಪಾನ ಇದೆಲ್ಲದರ ಬಗ್ಗೆಯೂ ಸೋನಂ ಕಪೂರ್‌ ಮಾತನಾಡಿದ್ದಾರೆ. ಮಗು ಹುಟ್ಟಿದ ನಂತರ ತೂಕ ಇನ್ನೂ ಹಾಗೆ ಇದ್ದರೆ ಮಹಿಳೆಯರಿಗೆ ಕಮೆಂಟ್‌ ಮಾಡುವ ಜನಗಳಿಗೇನೂ ಕಮ್ಮಿ ಇರಲ್ಲ. ಆದರೆ ಈ ಕಮೆಂಟ್‌ ಬಗ್ಗೆ ನಾನು ತಲೆನೇ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ ನಟಿ. ಗರ್ಭಿಣಿಯಾಗಿದ್ದಾಗ ತೂಕವನ್ನು ಸಮತೋಲದಲ್ಲಿಟ್ಟುಕೊಳ್ಳುವುದು ಅಗತ್ಯವಾಗಿರುತ್ತದೆ. ಆಗ ಹೇಗಾದರೂ ವ್ಯಾಯಾಮ, ಯೋಗ  ಮಾಡುವ ಮೂಲಕ ತೂಕವನ್ನು ಸರಿದೂಗಿಸಬಹುದು. ಆದರೆ  ಮಗು ಹುಟ್ಟಿದ ನಂತರ ಒಂದೇ ಬಾರಿ ತೂಕ ಇಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ತೂಕದಲ್ಲಿ ಏರಿಕೆ ಕಂಡುಬಂದರೆ ಹೆದರುವ ಅವಶ್ಯಕತೆ ಇಲ್ಲ. ತೂಕವನ್ನು ಒಂದೇ ಬಾರಿ ಇಳಿಸಿಕೊಳ್ಳುವ  ಅವಶ್ಯಕವೂ ಅಲ್ಲ ಎಂದು ಕಿವಿಮಾತು ಹೇಳಿದ್ದಾರೆ ನಟಿ.

ದೂರವಾದ್ರೂ ಹೊಟ್ಟೆ ಬಳಿ ನಾಗಚೈತನ್ಯ ಕುರುಹು: ಯಾಕಪ್ಪಾ ಇದು ಅಂತಿದ್ದಾರೆ ಫ್ಯಾನ್ಸ್!

ಗರ್ಭಧಾರಣೆ ನಂತರ ವರ್ಷದವರೆಗಾದರೂ ಮಗುವಿನ ಆರೈಕೆಯಲ್ಲಿ ಅಮ್ಮ  ನಿರತಳಾಗಿರುತ್ತಾಳೆ. ನಮ್ಮ ದೇಹ ಕೂಡ ಇದರಿಂದಾಗಿ ಒಂದೇ ರೀತಿ ಇರುತ್ತದೆ. ನಾನು ಈ ತೂಕದ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ. ಈಗ ನನಗೆ ಮುಖ್ಯ ನನ್ನ ಮಗು. ನಾನು ನನ್ನ ಮಗನಿಗೆ ಇನ್ನೂ ಸ್ತನ್ಯಪಾನ ಮಾಡಿಸುತ್ತಿದ್ದೇನೆ ಮತ್ತು ಕನಿಷ್ಠ ಒಂದು ವರ್ಷದವರೆಗೆ ಎದೆ ಹಾಲುಣಿಸುವುದನ್ನು ಮುಂದುವರೆಸಲು ನಾನು ಬಯಸುತ್ತೇನೆ. ಹಾಲುಣಿಸುವಾಗ ಮಹಿಳೆಯರಿಗೆ ಸಹಜವಾಗಿಯೇ ದೇಹಕ್ಕೆ ಆಹಾರ, ವಿಶ್ರಾಂತಿ ಮತ್ತು ಶಕ್ತಿಯ ಅಗತ್ಯವಿರುತ್ತದೆ. ನಾನು ಯಾವುದೇ ಕ್ರೇಜಿ ಡಯಟ್‌ ಫಾಲೋ ಮಾಡುತ್ತಿಲ್ಲ. ಉತ್ತಮ ಆಹಾರವನ್ನು ಸೇವಿಸುತ್ತಿದ್ದೇನೆ. ಡಯಟ್‌ (Diet) ಬದಲಿಗೆ ನಾನು ವ್ಯಾಯಾಮ ಮಾಡುತ್ತಿದ್ದೇನೆ. ನನ್ನ ಗರ್ಭಾವಸ್ಥೆಯಲ್ಲಿ ನಾನು ನನ್ನ ಬಗ್ಗೆ ಕಾಳಜಿ ವಹಿಸಿದ್ದೇನೆ ಮತ್ತು ನಾನು ಅದನ್ನು ಇನ್ನೂ ಕೂಡ ಮುಂದುವರಿಸಲಿದ್ದೇನೆ ಎಂದು ಸೋನಂ ಹೇಳಿದ್ದಾರೆ.

Follow Us:
Download App:
  • android
  • ios