Asianet Suvarna News Asianet Suvarna News

ಬಾಯಿ ಕಳ್ಕೊಂಡು ಮಲಗ್ಬೇಡಿ! ಹಾಗೆ ಮಲಗಿದಾಗ ಹಾವೇ ಬಾಯಿಯೊಳಗೆ ಹೋಗಿತ್ತಂತೆ!

ಜೀವಂತ ಹಾವು ನಿಮ್ಮ ಹೊಟ್ಟೆ ಸೇರಿದ್ರೆ ಹೇಗಾಗ್ಬೇಡ? ಮೊದಲನೇಯದಾಗಿ ಹೊಟ್ಟೆ ಒಳಗೆ ಹಾವು ಹೋಗೋದಾದ್ರೂ ಹೇಗೆ? ಇದೆಲ್ಲ ನೋ ಛಾನ್ಸ್ ಬಿಡಿ ಅನ್ಬೇಡಿ. ಇಂಥ ಘಟನೆಗಳೂ ನಡೆಯುತ್ವೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತೆ. 
 

Snake Crawled Into Woman Mouth In Russia Viral Video roo
Author
First Published Oct 9, 2023, 12:02 PM IST

ಜನರ ದೇಹದ ಒಳಗೆ ಅದೇನ್ ಏನ್ ಹೋಗುತ್ತೋ ಹೇಳೋಕೆ ಸಾಧ್ಯವಿಲ್ಲ. ಕೆಲ ದಿನಗಳ ಹಿಂದೆ ವೃದ್ಧೆಯೊಬ್ಬಳ ಮೆದುಳಿನಲ್ಲಿ ಸೂಜಿ ಇರೋದು ಸುದ್ದಿಯಾಗಿತ್ತು.  ಇನ್ನೊಬ್ಬ ಪಂಜಾಬ್ ವ್ಯಕ್ತಿ ಹೊಟ್ಟೆಯಲ್ಲಿ ಪಿನ್, ಇಯರ್ ಫೋನ್, ಲಾಕೆಟ್, ಸ್ಕ್ರೂ ಸೇರಿದಂತೆ 100ಕ್ಕೂ ಹೆಚ್ಚು ವಸ್ತುಗಳನ್ನು ವೈದ್ಯರು ಹೊರಗೆ ತೆಗೆದ ಸುದ್ದಿ ಹರಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಇಂಥ ವಿಚಿತ್ರ ಸುದ್ದಿಗಳು ಆಗಾಗ ಸದ್ದು ಮಾಡ್ತಾನೆ ಇರುತ್ವೆ. ನಾವು ಮನುಷ್ಯನ ದೇಹದೊಳಗೆ ಜೀವವಿಲ್ಲದ ವಸ್ತುಗಳು ಇರೋದನ್ನು ಕೇಳಿದ್ದೇವೆ. ಆದ್ರೆ ಈಗ ಮತ್ತೊಂದು ವಿಚಿತ್ರ, ಅಚ್ಚರಿಯ, ಮೈ ಜುಮ್ಮೆನ್ನಿಸುವ ಸುದ್ದಿ ಹೊರ ಬಿದ್ದಿದೆ. ಈ ಮಹಿಳೆ ಹೊಟ್ಟೆಗೆ ಸೇರಿದ್ದು ಪಿನ್, ಸೂಜಿ ಅಲ್ಲ. ಹಾವು. ಅದೂ ಜೀವಂತ ಹಾವು.

ಯಸ್, ಅಚ್ಚರಿಯಾದ್ರೂ ಇದು ನಿಜ. ಸಾಮಾಜಿಕ ಜಾಲತಾಣ (Social Network) ದಲ್ಲಿ ಇದ್ರ ವಿಡಿಯೋ ವೈರಲ್ (Viral) ಆಗಿದೆ. ಮಹಿಳೆ ಹೊಟ್ಟೆಯಿಂದ ವೈದ್ಯರು ಜೀವಂತ ಹಾವನ್ನು ಹೊರಗೆ ತೆಗೆಯುತ್ತಿರುವ ವಿಡಿಯೋ ನೋಡಿ, ನೆಟ್ಟಿಗರು ಕಂಗಾಲಾಗಿದ್ದಾರೆ. ಇದು ಹೇಗೆ ಸಾಧ್ಯ? ಹಾವು (Snake) ಹೇಗೆ ಹೊಟ್ಟೆ ಒಳಗೆ ಹೋಯ್ತು ಅಂತಾ ಪ್ರಶ್ನೆ ಮಾಡ್ತಿದ್ದಾರೆ. ಅದಕ್ಕೆಲ್ಲ ಉತ್ತರ ನಮ್ಮ ಬಳಿ ಇದೆ.

ಕ್ಯಾನ್ಸರ್‌ ಅನುವಂಶಿಕವಾಗಿ ಹರಡುತ್ತಾ? ತಜ್ಞರು ನೀಡಿರೋ ಮಾಹಿತಿ ಇಲ್ಲಿದೆ.

ಮಹಿಳೆ ಹೊಟ್ಟೆ ಸೇರಿದ ಹಾವು : ರಷ್ಯಾದ ಡಾಗೆಸ್ತಾನ್ ನಲ್ಲಿ ನಡೆದ ಘಟನೆಯ ವಿಡಿಯೋ ವೈರಲ್ ಆಗಿದೆ. ಮಲಗಿದ್ದ ಮಹಿಳೆಗೆ ಎಚ್ಚರವಾಗ್ತಿದ್ದಂತೆ ವಿಪರೀತ ಅನಾರೋಗ್ಯ ಕಾಡಿದೆ. ಆಕೆ ಪ್ರಜ್ಞೆ ತಪ್ಪಿದ್ದಾಳೆ. ತಕ್ಷಣ ಮಹಿಳೆಯನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆ ತಂದಿದ್ದಾರೆ. ಮಹಿಳೆ ನಿದ್ರೆ ಮಾಡುತ್ತಿರುವಾಗ ಬಾಯಿ ತೆರೆದು ಮಲಗಿದ್ದಾಳೆ. ಈ ವೇಳೆ ತೆಳುವಾದ ಹಾವು ಆಕೆಯ ಹೊಟ್ಟೆ ಸೇರಿದೆ.  ಹಾವಿನ ಹೆಸರು ಕೇಳಿದ್ರೆ, ಹಾವು ಕನಸಿನಲ್ಲಿ ಕಂಡ್ರೆ ನಮಗೆ ನಿದ್ರೆ ಬರೋದಿಲ್ಲ. ಈ ಮಹಾತಾಯಿಗೆ ಹಾವು ಬಾಯಿ ಒಳಗೆ ಹೋದ್ರೂ ಎಚ್ಚರವಾಗಿಲ್ಲ. ಜೀವಂತ ಹಾವು ಮಹಿಳೆ ಹೊಟ್ಟೆ ಸೇರಿದ ಮೇಲೆ ಅತ್ತಿಂದಿತ್ತ ಓಡಾಟ ಶುರು ಮಾಡಿದೆ. ಆಗ ಮಹಿಳೆ ಪರಿಸ್ಥಿತಿ ಹದಗೆಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ.

ಕೋವಿಡ್‌ ಬಳಿಕ ಮಕ್ಕಳಲ್ಲಿ ಜ್ವರ, ನೆಗಡಿ, ಕೆಮ್ಮು ಹೆಚ್ಚಳ

ವೈರಲ್ ವಿಡಿಯೋದಲ್ಲಿ ಏನಿದೆ? : Insane Reality Leaks ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದ್ರಲ್ಲಿ ಮಹಿಳೆಯೊಬ್ಬಳು ಮಲಗಿರೋದನ್ನು ನೀವು ನೋಡ್ಬಹುದು. ವೈದ್ಯರು ಅರವಳಿಕೆ ಮದ್ದು ನೀಡಿ ಮಹಿಳೆ ಪ್ರಜ್ಞೆ ತಪ್ಪಿಸಿದ್ದಾರೆ. ನಂತ್ರ ಆಕೆ ಬಾಯಿಗೆ ನಳಿಕೆಯೊಂದನ್ನು ಹಾಕಿದ್ದಾರೆ. ಆ ನಳಿಕೆ ಸಹಾಯದಿಂದ ಹೊಟ್ಟೆಯಲ್ಲಿರುವ ವಸ್ತುವನ್ನು ಹೊರಗೆ ತೆಗೆದಿದ್ದಾರೆ.

ವಾಸ್ತವವಾಗಿ ಹೊಟ್ಟೆಯಲ್ಲಿ ಹಾವಿದೆ ಎಂಬ ಸಂಗತಿ ವೈದ್ಯರಿಗೂ ತಿಳಿದಿರಲಿಲ್ಲ. ಹೊಟ್ಟೆಯಲ್ಲಿ ಏನೋ ಇದೆ ಎಂದುಕೊಂಡೇ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದರು. ಒಂದು ವಸ್ತು ಹೊರಗೆ ಬರ್ತಿರೋದನ್ನು ನೀವು ಆರಂಭದಲ್ಲಿ ಕಾಣಬಹುದು. ಕೊನೆಯಲ್ಲಿ ಅದು ಹಾವು ಎಂಬುದು ಗೊತ್ತಾಗ್ತಿದ್ದಂತೆ ವೈದ್ಯರ ತಂಡ ಬೆಚ್ಚಿಬಿದ್ದಿದೆ. ಆಕೆ ಈಕಡೆ ಹೊರಳಾಡ್ತಿದ್ದ ಹಾವನ್ನು ನೋಡಿ ಅಲ್ಲಿದ್ದ ನರ್ಸ್ ಭಯಗೊಂಡಿದ್ದಾಳೆ. ಮಹಿಳೆ ಹೊಟ್ಟೆಯಿಂದ ಹಾವನ್ನು ತೆಗೆದು ಅದನ್ನು ಒಂದು ಡಬ್ ಗೆ ಹಾಕಿರೋದನ್ನು ನೀವು ವಿಡಿಯೋದಲ್ಲಿ ನೋಡ್ಬಹುದು. ಹಾವು ಮೂರು ಇಂಚು ಉದ್ದವಿತ್ತು ಎಂದು ಇಲ್ಲಿ ಮಾಹಿತಿ ನೀಡಲಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ 2020ರಲ್ಲಿ ನಡೆದಿದ್ದು ಎನ್ನಲಾಗಿದೆ. ಆದ್ರೆ ವಿಡಿಯೋ ಈಗ ಸುದ್ದಿ ಮಾಡ್ತಿದೆ. ಇದು ಹೇಗೆ ಸಾಧ್ಯ ಎಂದು ನೆಟ್ಟಿಗರು ಪ್ರಶ್ನೆ ಮಾಡ್ತಿದ್ದಾರೆ. ಕೆಲವರು ಅಚ್ಚರಿ ವ್ಯಕ್ತಪಡಿಸಿದ್ರೆ ಮತ್ತೆ ಕೆಲವರು ಇದು ಸುಳ್ಳಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. 
 

Follow Us:
Download App:
  • android
  • ios