ಚಿಕ್ಕಬಳ್ಳಾಪುರ: ಶಕ್ತಿ ಯೋಜನೆಯಡಿ ಒಂದೇ ತಿಂಗಳಲ್ಲಿ 28 ಲಕ್ಷ ಮಹಿಳೆಯರ ಪ್ರಯಾಣ

ರಾಜ್ಯ ಸರ್ಕಾರ ಜಾರಿಗೊಳಿಸಿದ ಮಹಿಳೆಯರ ಉಚಿತ ಬಸ್‌ ಪ್ರಯಾಣ ಶಕ್ತಿ ಯೋಜನೆ ಒಂದು ತಿಂಗಳು ಪೂರ್ಣಗೊಳಿಸಿದೆ. ಸದ್ಯ ಚಿಕ್ಕಬಳ್ಳಾಪುರ ಸಾರಿಗೆ ವಿಭಾಗದಲ್ಲಿ ಈ ಯೋಜನೆಯ ಸೌಲಭ್ಯ ಪಡೆದ ಮಹಿಳೆಯರು ಮತ್ತು ಅದರ ವೆಚ್ಚದ ಅಂಕಿ ಅಂಶವನ್ನು ವಿಭಾಗೀಯ ಸಾರಿಗೆ ನಿಯಂತ್ರಕ ಹಿಮವರ್ಧನ ನಾಯ್ಡು ಬಿಡುಗಡೆ ಮಾಡಿದ್ದಾರೆ.

Shakti Yojana Travel of 28 lakh women in a single month chikkaballapur rav

ಚಿಕ್ಕಬಳ್ಳಾಪುರ (ಜು.14):  ರಾಜ್ಯ ಸರ್ಕಾರ ಜಾರಿಗೊಳಿಸಿದ ಮಹಿಳೆಯರ ಉಚಿತ ಬಸ್‌ ಪ್ರಯಾಣ ಶಕ್ತಿ ಯೋಜನೆ ಒಂದು ತಿಂಗಳು ಪೂರ್ಣಗೊಳಿಸಿದೆ. ಸದ್ಯ ಚಿಕ್ಕಬಳ್ಳಾಪುರ ಸಾರಿಗೆ ವಿಭಾಗದಲ್ಲಿ ಈ ಯೋಜನೆಯ ಸೌಲಭ್ಯ ಪಡೆದ ಮಹಿಳೆಯರು ಮತ್ತು ಅದರ ವೆಚ್ಚದ ಅಂಕಿ ಅಂಶವನ್ನು ವಿಭಾಗೀಯ ಸಾರಿಗೆ ನಿಯಂತ್ರಕ ಹಿಮವರ್ಧನ ನಾಯ್ಡು ಬಿಡುಗಡೆ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಸಾರಿಗೆ ವಿಭಾಗದಲ್ಲಿ ಈವರೆಗೂ 27 ಲಕ್ಷ 96 ಸಾವಿರದ 312 ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡಿದ್ದು, ಇವರ ಟಿಕೆಟ್‌ ಮೊತ್ತ 9ಕೋಟಿ 69ಲಕ್ಷದ 37 ಸಾವಿರದ 984 ರೂಪಾಯಿಯಾಗಿದೆ.

ಯಾದಗಿರಿ: ಪುರುಷರ ಬಟ್ಟೆ ಧರಿಸಿ ಬಂದಿದ್ದ ತೃತೀಯ ಲಿಂಗಿಗೆ ಟಿಕೆಟ್‌ ನೀಡುವಾಗ ಕಂಡಕ್ಟರ್‌ಗೆ ಗೊಂದಲ..!

ಚುನಾವಣಾ ಪೂರ್ವ ಘೋಷಣೆ

ರಾಜ್ಯ ಕಾಂಗ್ರೆಸ್‌ ಸರ್ಕಾರ ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದಂತೆ, ಅಧಿಕಾರಕ್ಕೆ ಬಂದ ಒಂದು ತಿಂಗಳೊಳಗೆ ಮೊದಲ ಗ್ಯಾರಂಟಿಯಾಗಿ ಮಹಿಳೆಯರ ಉಚಿತ ಬಸ್‌ ಪ್ರಯಾಣ ಸೌಲಭ್ಯ ನೀಡುವ ಶಕ್ತಿ ಯೋಜನೆಗೆ ಚಾಲನೆ ನೀಡಿತು. ಜೂನ್‌ 11 ರಂದು ಈ ಯೋಜನೆ ರಾಜ್ಯಾದ್ಯಂತ ಆರಂಭವಾಗಿದ್ದು, ಚಿಕ್ಕಬಳ್ಳಾಪುರದಲ್ಲಿ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌ ಚಾಲನೆ ನೀಡಿದ್ದರು. ಮೊದಲ ದಿನವೇ ಅರ್ಧ ಲಕ್ಷಕ್ಕೂ ಹೆಚ್ಚು ಮಹಿಳೆಯರು ಉಚಿತ ಪ್ರಯಾಣ ಮಾಡಿ ಯೋಜನೆ ಸವಲತ್ತು ಪಡೆದುಕೊಂಡಿದ್ದರು. ಸದ್ಯ ಒಂದು ತಿಂಗಳು ಪೂರ್ಣಗೊಳ್ಳುವ ವೇಳೆಗೆ ಸುಮಾರು 28ಲಕ್ಷ ಮಹಿಳಾ ಪ್ರಯಾಣಿಕರು ಈ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ.

ಚಿಕ್ಕಬಳ್ಳಾಪುರ ವಿಭಾಗದಿಂದ ಉಚಿತ ಪ್ರಯಾಣ

ಜೂನ್‌ 11 ರಿಂದ ಜುಲೈ 11ರವರೆಗೆ ಚಿಕ್ಕಬಳ್ಳಾಪುರ ವಿಭಾಗದಲ್ಲಿ ಒಟ್ಟು 27 ಲಕ್ಷ96 ಸಾವಿರದ 312 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಇವರ ಟಿಕೆಟ್‌ ಮೊತ್ತ 9ಕೋಟಿ 69ಲಕ್ಷದ 37 ಸಾವಿರದ 984 ರೂಪಾಯಿಯಾಗಿದೆ. ಚಿಕ್ಕಬಳ್ಳಾಪುರ ಡಿಪೋದಲ್ಲಿ 6ಲಕ್ಷ 92 ಸಾವಿರದ 94 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಇವರ ಟಿಕೆಟ್‌ ಮೊತ್ತ 2ಕೋಟಿ 42ಲಕ್ಷದ 42 ಸಾವಿರದ 746 ರೂಪಾಯಿಯಾಗಿದೆ. ಚಿಂತಾಮಣಿ ಡಿಪೋದಲ್ಲಿ 5ಲಕ್ಷ 58 ಸಾವಿರದ 822 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಇವರ ಟಿಕೆಟ್‌ ಮೊತ್ತ 2ಕೋಟಿ 20ಲಕ್ಷದ 78ಸಾವಿರದ 473 ರುಪಾಯಿಯಾಗಿದೆ.

ಶಕ್ತಿ ಯೋಜನೆಗೆ ವೀರೇಂದ್ರ ಹೆಗ್ಗಡೆ ಭಾರಿ ಮೆಚ್ಚುಗೆ: ಧರ್ಮಸ್ಥಳಕ್ಕೆ ಸಿದ್ದರಾಮಯ್ಯಗೆ ಆಹ್ವಾನ

ಬಾಗೇಪಲ್ಲಿ ಡಿಪೋದಲ್ಲಿ 4ಲಕ್ಷ 6 ಸಾವಿರದ 171 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಇವರ ಟಿಕೆಟ್‌ ಮೊತ್ತ 1ಕೋಟಿ 54ಲಕ್ಷದ 76 ಸಾವಿರದ 460 ರೂಪಾಯಿಯಾಗಿದೆ. ಗೌರಿಬಿದನೂರು ಡಿಪೋದಲ್ಲಿ 5ಲಕ್ಷ 19 ಸಾವಿರದ 427 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಇವರ ಟಿಕೆಟ್‌ ಮೊತ್ತ 1,65,36,474 ಕೋಟಿ ರುಪಾಯಿಯಾಗಿದೆ. ದೊಡ್ಡಬಳ್ಳಾಪುರ ಡಿಪೋದಲ್ಲಿ 4ಲಕ್ಷ 7 ಸಾವಿರದ 171 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಇವರ ಟಿಕೆಟ್‌ ಮೊತ್ತ 1,19, 87, 251 ಕೋಟಿ ರುಪಾಯಿಯಾಗಿದೆ. ಶಿಡ್ಲಘಟ್ಟಡಿಪೋದಲ್ಲಿ 2ಲಕ್ಷ 12 ಸಾವಿರದ 627 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಇವರ ಟಿಕೆಟ್‌ ಮೊತ್ತ 66,16,580 ಲಕ್ಷ ರುಪಾಯಿಯಾಗಿದೆ.

Latest Videos
Follow Us:
Download App:
  • android
  • ios