Asianet Suvarna News Asianet Suvarna News

ಎದ್ದೂ ಬಿದ್ದೂ ನೆಲದಲ್ಲಿ ಹೊರಳಾಡ್ತಾಳೆ, ಏರ್‌ಪೋರ್ಟ್‌ನಲ್ಲಿ ಯುವತಿಯ ಡ್ಯಾನ್ಸ್‌; ಜನರು ಕಕ್ಕಾಬಿಕ್ಕಿ!

ಇತ್ತೀಚೆಗೆ ಜನರು ಮೆಟ್ರೋ ರೈಲುಗಳು, ರೈಲ್ವೆ ಪ್ಲಾಟ್‌ಫಾರ್ಮ್‌ಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್‌ಗಾಗಿ ಡ್ಯಾನ್ಸ್ ಮಾಡುವ ಅಭ್ಯಾಸ ಹೆಚ್ಚುತ್ತಿದೆ. ಹಾಗೆಯೇ ಇತ್ತೀಚಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾದ ಯುವತಿಯ ಡ್ಯಾನ್ಸ್ ವಿಡಿಯೋವೊಂದುಸ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

Seriously Frustrating, Internet Reacts To Womans Dance At Mumbai Airport, Demands Action Vin
Author
First Published May 30, 2024, 5:56 PM IST

ಇತ್ತೀಚೆಗೆ ಜನರು ಮೆಟ್ರೋ ರೈಲುಗಳು, ರೈಲ್ವೆ ಪ್ಲಾಟ್‌ಫಾರ್ಮ್‌ಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್‌ಗಾಗಿ ಡ್ಯಾನ್ಸ್ ಮಾಡುವ ಅಭ್ಯಾಸ ಹೆಚ್ಚುತ್ತಿದೆ. ಹಾಗೆಯೇ ಇತ್ತೀಚಿಗೆ ಮುಂಬೈ ಲೋಕಲ್‌ ಟ್ರೈನ್‌ನಲ್ಲಿ ಯುವತಿಯೊಬ್ಬಳು ಅಶ್ಲೀಲವಾಗಿ ನೃತ್ಯ ಮಾಡುತ್ತಿರುವ ವೀಡಿಯೊ ವೈರಲ್ ಆಗಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಮುಂಬೈ ವಿಮಾನ ನಿಲ್ದಾಣದಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾದ ಯುವತಿಯ ಡ್ಯಾನ್ಸ್ ವಿಡಿಯೋವೊಂದುಸ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಕಿಕ್ಕಿರಿದು ಜನರು ತುಂಬಿದ್ದರೂ ಯುವತಿಯೊಬ್ಬಳು ಸಲ್ವಾರ್ ಕುರ್ತಾ ಧರಿಸಿ ವಿಚಿತ್ರವಾಗಿ ಡ್ಯಾನ್ಸ್ ಮಾಡುತ್ತಾಳೆ. ದುಪ್ಪಟ್ಟಾವನ್ನು ಎಸೆದು, ನೆಲದಲ್ಲಿ ಮಲಗಿ ಏಳುತ್ತಾ ಡ್ಯಾನ್ಸ್ ಮಾಡಿ ಸುತ್ತಮುತ್ತಲಿರುವ ಜನರಿಗೆ ಕಿರಿಕಿರಿಯನ್ನುಂಟು ಮಾಡುವುದನ್ನು ನೋಡಬಹುದು. ಅನೇಕ ಜನರು ಅವಳನ್ನು ಕುತೂಹಲದಿಂದ ನೋಡುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಆಗಿದೆ. ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

'ಧಕ್‌ ಧಕ್‌' ಹಾಡಿಗೆ ಡ್ಯಾನ್ಸ್ ಮಾಡಿ ಪಡ್ಡೆ ಹುಡುಗರ ಹಾರ್ಟ್‌ಬೀಟ್ ಹೆಚ್ಚಿಸಿದ ಯುವತಿ

ಹಲವಾರು ಜನರು ಆಕೆಯ ವರ್ತನೆಯನ್ನು ಟೀಕಿಸಿದರು. ಈ ಕೃತ್ಯವನ್ನು ಸಾರ್ವಜನಿಕ ಉಪದ್ರವ ಎಂದು ಕರೆದರು, ಆಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಕೇಳಿದರು. ಒಬ್ಬ ಬಳಕೆದಾರರು, 'ರೀಲ್ಸ್‌ನಿಂದಾಗಿ ಜನರು ಸಮಾಧಾನದಿಂದ ಎಲ್ಲೆಡೆ ಪ್ರಯಾಣಿಸುವುದು ಕಷ್ಟವಾಗಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, 'ವೈರಸ್ ವಿಮಾನ ನಿಲ್ದಾಣಗಳನ್ನು ತಲುಪಿದೆ' ಎಂದು ಹೀಯಾಳಿಸಿದ್ದಾರೆ.

ಮತ್ತೊಬ್ಬರು, 'ಕಾಮನ್‌ಸೆನ್ಸ್ ಅನ್ನೋದು ಎಲ್ಲಿ ಮಾಯವಾಗುತ್ತಿದೆ' ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು, 'ಈ ರೀತಿ ಸಾರ್ವಜನಿಕವಾಗಿ ಜನರಿಗೆ ತೊಂದರೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಮತ್ತು ದಂಡ ಹಾಕುವ ಅಗತ್ಯವಿದೆ' ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು, 'ಜನರು ಗಂಭೀರ ವ್ಯವಹಾರಕ್ಕಾಗಿ ವಿಮಾನ ನಿಲ್ದಾಣಗಳಿಗೆ ಭೇಟಿ ನೀಡುವುದು ಟೈಮ್ ಪಾಸ್ ಮತ್ತು ಮನರಂಜನೆಗಾಗಿ ಅಲ್ಲ. ವಿಮಾನ ನಿಲ್ದಾಣದಲ್ಲಿ ಇದನ್ನೆಲ್ಲಾ ನೋಡಬೇಕಾಗಿ ಬಂದಿರುವುದು ವಿಪರ್ಯಾಸ' ಎಂದಿದ್ದಾರೆ.

Viral Video: ವಧು ಬಿದ್ದರೂ ಎತ್ತದ ವರನ ನಡೆಗೆ ನೆಟ್ಟಿಗರು ಗರಂ! ಇವನೆಂಥ ಗಂಡು?

ಇದಕ್ಕೂ ಮುನ್ನ ಮುಂಬೈನಲ್ಲಿ ಚಲಿಸುತ್ತಿರುವ ಲೋಕಲ್ ರೈಲಿನೊಳಗೆ ಯುವತಿಯೊಬ್ಬಳು ಭೋಜ್‌ಪುರಿ ಹಾಡುಗಳಿಗೆ ಅಶ್ಲೀಲವಾಗಿ ಡ್ಯಾನ್ಸ್ ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ವೀಡಿಯೋಗಳಲ್ಲಿ, ಮಹಿಳೆಯು ಮುಂಬೈ ಸ್ಥಳೀಯ ರೈಲುಗಳ ಸಾಮಾನ್ಯ ಮತ್ತು ಮಹಿಳಾ ಬೋಗಿಗಳ ಒಳಗೆ ಮತ್ತು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಚೋದನಕಾರಿಯಾಗಿ ನೃತ್ಯ ಮಾಡುತ್ತಿದ್ದು, ಇತರ ಪ್ರಯಾಣಿಕರಿಗೆ ತೊಂದರೆಯನ್ನುಂಟು ಮಾಡುತ್ತಿರುವುದನ್ನು ನೋಡಬಹುದು.

Latest Videos
Follow Us:
Download App:
  • android
  • ios