ಹುಡುಗಿಯರ ಮನಸ್ಸಿನಲ್ಲಿ ಗುಟ್ಟು ನಿಲ್ಲಲ್ಲ ಎಂಬ ಮಾತಿದೆ. ಆದ್ರೆ ತಮಗೆ ಸಂಬಂಧಿಸಿದ ಕೆಲ ವಿಷ್ಯಗಳನ್ನು ಹುಡುಗಿಯರು ಎಂದೂ ಬಿಟ್ಟು ಕೊಡುವುದಿಲ್ಲ. ಹುಡುಗ್ರ ಯಾವ ಸ್ವಭಾವ ಇಷ್ಟ ಎಂಬುದನ್ನೂ ಹುಡುಗಿಯರು ಯಾರ ಮುಂದೆಯೂ ಹೇಳುವುದಿಲ್ಲ.
ಸ್ನೇಹಿತ (Friend) ರಾಗ್ಬೇಕೆಂದ್ರೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಈಗಿನ ದಿನಗಳಲ್ಲಿ ಜನರು ತಮ್ಮ ಮನಸ್ಸಿನ ವಿಷ್ಯಗಳನ್ನು ಎಲ್ಲರ ಮುಂದೆ ಹೇಳುವುದಿಲ್ಲ. ಸ್ನೇಹಿತರ ಮುಂದೆಯೂ ಕೆಲವು ಗುಟ್ಟುಗಳನ್ನು ಬಿಟ್ಟು ಕೊಡುವುದಿಲ್ಲ. ಇದ್ರಿಂದ ಅವರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಅದ್ರಲ್ಲೂ ಹುಡುಗಿಯರು ತಮ್ಮ ಮನಸ್ಸಿ (mind) ನ ಭಾವನೆ (Emotion)ಗಳನ್ನು ಎಲ್ಲರ ಮುಂದೆ ಹೇಳುವುದಿಲ್ಲ. ಹುಡುಗಿಯರನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. ತಮ್ಮ ಇಷ್ಟ-ಕಷ್ಟಗಳ ಬಗ್ಗೆ ಅವರು ಕೆಲವೇ ಕೆಲವು ಮಂದಿಯ ಮುಂದೆ ಹೇಳ್ತಾರೆ. ಹುಡುಗಿ (girl) ಯರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಕೆಂದ್ರೆ ನೀವು ಮೊದಲು ಅವರ ಮನಸ್ಸಿನಾಳದಲ್ಲಿರುವ ವಿಷ್ಯವನ್ನು ತಿಳಿಯಬೇಕು. ಅದಕ್ಕೂ ಮೊದಲು ಹುಡುಗಿಯರ ಕೆಲ ಸೀಕ್ರೆಟ್ (Secret )ನಿಮಗೆ ಗೊತ್ತಿರಬೇಕು. ಅವರ ಕೆಲ ವಿಷ್ಯಗಳು ನಿಮಗೆ ಅರ್ಥವಾದ್ರೆ ಅವರು ನಿಮ್ಮೊಂದಿಗೆ ಆರಾಮವಾಗಿರ್ತಾರೆ. ನಿಮ್ಮ ಸ್ನೇಹ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ.
ಇಂಥ ಹುಡುಗ್ರನ್ನು ಇಷ್ಟಪಡ್ತಾರೆ ಹುಡುಗಿಯರು : ಹುಡುಗಿಯರಿಗೆ ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡುವ ಹುಡುಗರು ಇಷ್ಟವಾಗ್ತಾರೆ. ಬೇರೆ ಕಡೆ ದೃಷ್ಟಿ ಹರಿಸಿ ಮಾತನಾಡುವ ಅಥವಾ ಕೆಳಗೆ ನೋಡ್ತಾ ಮಾತನಾಡುವ ಹುಡುಗರಿಗೆ ಕಾನ್ಫಿಡೆನ್ಸ್ ಇಲ್ಲವೆಂದು ಹುಡುಗಿಯರು ಭಾವಿಸ್ತಾರೆ. ಅಂಥ ಹುಡುಗರನ್ನು ಹುಡುಗಿಯರು ಇಷ್ಟಪಡುವುದಿಲ್ಲ. ಆತ್ಮವಿಶ್ವಾಸದಿಂದ ಮಾತನಾಡುವು ಹುಡುಗರು ಅವರಿಗೆ ಇಷ್ಟವಾಗ್ತಾರೆ.
ಹುಡುಗಿಯರನ್ನು ಆಕರ್ಷಿಸಲ್ಲ ತೀರ್ಪು ನೀಡುವ ಹುಡುಗರು : ಹುಡುಗರು ಈ ಸಂಗತಿ ಬಗ್ಗೆ ವಿಶೇಷ ಗಮನ ನೀಡ್ಬೇಕು. ಹುಡುಗಿಯರಿಗೆ ತೀರ್ಪು ನೀಡುವ ಹುಡುಗರು ಇಷ್ಟವಾಗುವುದಿಲ್ಲ. ಅಂದ್ರೆ ಹುಡುಗಿಯರು ಹೀಗೆ ಮಾಡ್ಬಾರದು, ಹಾಗೆ ಮಾಡ್ಬಾರದು, ಹುಡುಗಿಯರು ಹೀಗೆ ಇರಬೇಕು.. ಹೀಗೆ ಯಾವುದೇ ವಿಷ್ಯದ ಬಗ್ಗೆ ಜಡ್ಜಮೆಂಟ್ ನೀಡುವ ಹುಡುಗರನ್ನು ಹುಡುಗಿಯರು ಬಯಸುವುದಿಲ್ಲ.
EX WIFE ಮರು ಮದುವೆಯಾಗ್ತಿರೋನ ಹೆಸರು ಕೇಳಿ ನಿದ್ರೆ ಬಿಟ್ಟ ಮಾಜಿ ಪತಿ!
ಸರ್ಪ್ರೈಸ್ ಇಷ್ಟಪಡ್ತಾರೆ ಹುಡುಗಿಯರು : ಹುಡುಗಿಯರಿಗೆ ಸರ್ಪ್ರೈಸ್ ತುಂಬಾ ಇಷ್ಟ. ಅವರು ಈ ವಿಷ್ಯವನ್ನು ಬಹಿರಂಗವಾಗಿ ಹೇಳದೆ ಇರಬಹುದು. ಆದ್ರೆ ಅದು ಅವರಿಗೆ ಖುಷಿ ನೀಡುತ್ತದೆ. ಸಂಬಂಧದಲ್ಲಿ ಅವರು ತಂಗಿಯಾಗಿರಲಿ, ಸ್ನೇಹಿತೆಯಾಗಿರಲಿ, ಪತ್ನಿಯಾಗಿರಲಿ, ಅವರ ಸಂಬಂಧ ಗಟ್ಟಿಯಾಗ್ಬೇಕೆಂದ್ರೆ ನೀವು ಆಗಾಗ ಸಣ್ಣ ಸಣ್ಣ ಸರ್ಪ್ರೈಸ್ ನೀಡ್ತಿರಬೇಕು. ಸರ್ಪ್ರೈಸ್ ನೀಡದೆ ಬೋರಿಂಗ್ ಜೀವನ ನಡೆಸುವ ಹುಡುಗ್ರಿಗೆ ಎಂದೂ ಹುಡುಗಿಯರು ಒಲಿಯುವುದಿಲ್ಲ.
ತಮಾಷೆ – ಮಸ್ತಿ ಮಾಡುವ ಹುಡುಗ : ಸದಾ ಖುಷಿಯಾಗಿರುವ ಹುಡುಗನ ಜೊತೆ ಸ್ನೇಹ ಬೆಳೆಸಲು ಅಥವಾ ಪ್ರೀತಿಸಲು ಹುಡುಗಿಯರು ಬಯಸತಾರೆ. ಸದಾ ದುಃಖದಲ್ಲಿರುವ ಹುಡುಗ ಅಥವಾ ಪದೇ ಪದೇ ತನ್ನ ಕಷ್ಟಗಳನ್ನು ಹೇಳಿಕೊಳ್ತಾ ಸಹಾನುಭೂತಿ ಪಡೆಯಲು ಪ್ರಯತ್ನಿಸುವು ಹುಡುಗ, ಹುಡುಗಿಯರಿಗೆ ಆಕರ್ಷಕವಾಗಿ ಕಾಣುವುದಿಲ್ಲ. ನೀವೂ ಹುಡುಗಿಯರ ಮುಂದೆ ನಿಮ್ಮ ಕಷ್ಟವನ್ನು ಹೇಳಿಕೊಳ್ತಿದ್ದರೆ ನಿಮ್ಮ ಸ್ವಭಾವವನ್ನು ಬದಲಿಸಿ. ನಗ್ತಾ – ತಮಾಷೆಯಾಗಿ ಮಾತನಾಡಲು ಪ್ರಯತ್ನಿಸಿ. ತಮಾಷೆ ಮಿತಿಯಲ್ಲಿರಬೇಕೆಂಬುದನ್ನು ನೆನಪಿಡಿ. ಸದಾ ಹಾಸ್ಯ ಮಾಡ್ತಾ, ಸುತ್ತಮುತ್ತಲಿನವರನ್ನು ನಗಿಸುತ್ತ, ಕಷ್ಟದಲ್ಲಿಯೂ ಸಂತೋಷವಾಗಿರುವ, ಸದಾ ನಗ್ತಿರುವ ಹುಡುಗನ ಕಡೆ ಹುಡುಗಿಯರು ಆಕರ್ಷಿತರಾಗ್ತಾರೆ.
ದೈಹಿಕ ಸಂಬಂಧಕ್ಕೆ ಅಡ್ಡಿ ತರುವ ಏಳು ರೀತಿಯ ಆತಂಕಗಳು
ಗೌರವ ನೀಡುವ ಹುಡುಗ ಇಷ್ಟವಾಗ್ತಾನೆ : ಗೌರವದಿಂದ ಮಾತನಾಡಿಸುವ ಹುಡುಗರನ್ನು ಕಂಡರೆ ಹುಡುಗಿಯರಿಗೆ ಹೆಚ್ಚು ಪ್ರೀತಿ. ಈ ಬಗ್ಗೆ ಹುಡುಗಿಯರು ಎಂದೂ ಹೇಳದೆ ಇರಬಹುದು. ಆದ್ರೆ ಹುಡುಗನಲ್ಲಿ ಮೊದಲು ಹುಡುಗಿ ನೋಡುವುದು ಇದೇ ಸ್ವಭಾವವನ್ನು. ಹಾಗಾಗಿ ಪ್ರತಿಯೊಬ್ಬ ಮಹಿಳೆಗೂ ಗೌರವ ನೀಡಿ ಮಾತನಾಡಿ. ಬರೀ ಹುಡುಗಿ ಮನಸ್ಸು ಕದಿಯಲು ನಾಟಕವಾಡಬೇಡಿ. ಗೌರವ ಮನಸ್ಸಿನಿಂದ ಬರಬೇಕು. ಹಾಗೆ ಎಲ್ಲ ಹುಡುಗಿಯರನ್ನು ಮತ್ತು ಮಹಿಳೆಯರನ್ನು ಗೌರವದಿಂದ ನೋಡಬೇಕು,ಮಾತನಾಡಿಸಬೇಕು. ಆಗ ಹುಡುಗಿ ತಾನಾಗಿಯೇ ನಿಮ್ಮ ಬಳಿ ಬರ್ತಾಳೆ ಎಂಬುದು ನೆನಪಿರಲಿ.
