ಸಂಬಂಧಗಳೇ ಹಾಗೆ. ನಮ್ಮವರು ನಮ್ಮವರಾಗಿಲ್ಲವೆಂದ್ರೂ ಅವ್ರ ಮೇಲಿನ ಮೋಹ ಎಲ್ಲೋ ಕಾಡ್ತಿರುತ್ತದೆ. ಅವರ ಜೊತೆ ಮೊದಲಿನ ಬಂಧ ಸಾಧ್ಯವಿಲ್ಲ ಎಂಬ ಅರಿವಿದ್ದರೂ ಮನಸ್ಸು ಘಾಸಿಗೊಳ್ಳುತ್ತದೆ. ಮಾಜಿಯ ಮುಂದಿನ ಹೆಜ್ಜೆ ನಮ್ಮನ್ನು ಚುಚ್ಚುತ್ತದೆ.  

ಪ್ರೀತಿ (Love) ಸಿದ ವ್ಯಕ್ತಿ ದೂರವಾದ್ಮೇಲೆ ನೋವು (Pain) ನುಂಗಲೇಬೇಕು. ಸಂಬಂಧ (Relationship) ಮುರಿದು ಬಿದ್ಮೇಲೆ ವಿಚ್ಛೇದನ (Divorce) ಪಡೆದ ನಂತ್ರವೂ ಅವರು ನಮ್ಮವರು ಎಂಬ ಭಾವನೆ ಎಲ್ಲೋ ಮೂಲೆಯಲ್ಲಿರುತ್ತದೆ. ಅವರ ಪ್ರತಿ ಹೆಜ್ಜೆಯನ್ನು ಕಣ್ಣು ಗಮನಿಸುತ್ತಿರುತ್ತದೆ. ಅವರು ಹೇಗಿದ್ದಾರೆ ? ನನ್ನಿಂದ ದೂರವಾಗಿ ಸುಖವಾಗಿದ್ದಾರೆಯೇ ? ಹೊಸ ಸಂಬಂಧದಲ್ಲಿದ್ದಾರಾ ? ಇನ್ನೊಂದು ಮದುವೆಯಾಗ್ತಿದ್ದಾರಾ ? ಹೀಗೆ ಅನೇಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಿರುತ್ತದೆ. ಕೆಲವರು ವಿಚ್ಛೇದನ ಪಡೆದರೂ ಸ್ನೇಹಿತರಂತಿರಲು ಬಯಸ್ತಾರೆ. ಇಬ್ಬರ ಮಧ್ಯೆ ಮಾತುಕತೆ, ಭೇಟಿ ಇರುತ್ತದೆ. ಆದ್ರೆ ಪ್ರೀತಿ ಮಾತ್ರ ಇರುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ತನ್ನ ನೋವನ್ನು ಹೇಳಿಕೊಂಡಿದ್ದಾನೆ. ಮಾಜಿ ಪತ್ನಿಯ ಇನ್ನೊಂದು ಮದುವೆ ವಿಷ್ಯ ಆತನ ನಿದ್ರೆ ಹಾಳು ಮಾಡಿದೆ.

ಮಾಜಿ ಪತ್ನಿ ಮದುವೆಯಾಗ್ತಿರೋದು ಯಾರನ್ನ ಗೊತ್ತಾ? : ಆತನಿಗೆ 35 ವರ್ಷವಂತೆ. ಮದುವೆಯಾಗಿ ಮೂರು ವರ್ಷಕ್ಕೆ ವಿಚ್ಛೇದನ ಪಡೆದಿದ್ದಾನೆ. ಇಬ್ಬರ ಮಧ್ಯೆ ಹೊಂದಾಣಿಕೆ ಇಲ್ಲ ಎಂಬ ಕಾರಣಕ್ಕೆ ಇಬ್ಬರೂ ಬೇರೆಯಾಗಿದ್ದಾರೆ. ಆದ್ರೆ ವಿಚ್ಛೇದನ ಪಡೆದ ನಂತ್ರವೂ ಇಬ್ಬರ ಮಧ್ಯೆ ಮಾತುಕತೆ ನಡೆಯುತ್ತಿದೆ. ಕಳೆದ ಆರು ವರ್ಷಗಳಿಂದ ಅನೇಕ ಬಾರಿ ಇಬ್ಬರು ಭೇಟಿಯಾಗಿದ್ದಾರೆ. ಮಾಜಿ ಪತ್ನಿಗೆ ಡೆಂಗ್ಯೂ ಆದಾಗ ಆಸ್ಪತ್ರೆಯಲ್ಲಿ ಆಕೆ ಜೊತೆಗಿದ್ದವನು ಮಾಜಿ ಪತಿಯಂತೆ. ವಿಚ್ಛೇದನ ನಂತ್ರವೂ ಕೆಲವೊಂದು ಜವಾಬ್ದಾರಿಗಳಿರುತ್ತವೆ. ಅದನ್ನು ನಿಭಾಯಿಸಲು ನಾನು ಆಕೆ ಜೊತೆಗಿದ್ದೇನೆ ಎನ್ನುತ್ತಾನೆ ಆತ. ಪತ್ನಿಯನ್ನು ಈಗ್ಲೂ ಗೌರವದಿಂದ ನೋಡುವ ವ್ಯಕ್ತಿಗೆ ಪತ್ನಿಯ ಮದುವೆ ವಿಷ್ಯ ಗೊತ್ತಾಗಿದೆ. ಆಕೆ ಇನ್ನೊಂದು ಮದುವೆಯಾಗುವ ನಿರ್ಧಾರಕ್ಕೆ ಬಂದಿರುವುದು ಆತನಿಗೆ ಬೇಸರ ತಂದಿಲ್ಲ. ಆದ್ರೆ ಆಕೆ ಮದುವೆಯಾಗ್ತಿರುವ ವ್ಯಕ್ತಿಯೇ ಈತನಿಗೆ ದೊಡ್ಡ ಸಮಸ್ಯೆಯಾಗಿದೆ. ಅಷ್ಟಕ್ಕೂ ಮಾಜಿ ಪತ್ನಿ ಮದುವೆಯಾಗ್ತಿರುವುದು ಬೇರೆ ಯಾರನ್ನೂ ಅಲ್ಲ ಮಾಜಿ ಪತಿಯ ಸ್ನೇಹಿತನನ್ನು. 

ಪ್ರೀತಿಯಲ್ಲಿದ್ದೂ Loneliness ಕಾಡ್ತಿದ್ಯಾ? ಕಾರಣ ಕಂಡುಕೊಳ್ಳಿ

ಯಸ್. ಕಾಲೇಜಿನಲ್ಲಿ ಬೆಸ್ಟ್ ಫ್ರೆಂಡ್ ಆಗಿದ್ದ ವ್ಯಕ್ತಿ ಮದುವೆಗೂ ಬಂದಿದ್ದನಂತೆ. ಅಲ್ಲಿಯೇ ಪತ್ನಿ ಹಾಗೂ ಸ್ನೇಹಿತನ ಭೇಟಿಯಾಗಿತ್ತಂತೆ. ಆದ್ರೆ ಮದುವೆ ನಂತ್ರ ಸ್ನೇಹಿತ ವಿದೇಶದಲ್ಲಿ ಸೆಟಲ್ ಆದ ಕಾರಣ ಆತನ ಸಂಪರ್ಕ ನನಗಿರಲಿಲ್ಲ ಎನ್ನುತ್ತಾನೆ ಈತ. ಆದ್ರೀಗ ಸ್ನೇಹಿತರಿಂದ ತನ್ನ ಪತ್ನಿ ಮದುವೆಯಾಗ್ತಿರುವ ವ್ಯಕ್ತಿ ಯಾರು ಎಂಬುದು ತಿಳಿದಿದೆ. ಇದು ಆತನ ನಿದ್ರೆ ಕಸಿದಿದೆ. ಆಪ್ತ ಸ್ನೇಹಿತ ಎಂಬ ವಿಷ್ಯ ಗೊತ್ತಿದ್ದೂ ಪತ್ನಿ ಹೀಗೆ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಆತನಿಗೆ ಶುರುವಾಗಿದೆ. ಇಬ್ಬರು ಮೊದಲೇ ಪ್ರೀತಿಸುತ್ತಿದ್ದರಾ? ಪತ್ನಿ ವಿವಾಹೇತರ ಸಂಬಂಧ ಹೊಂದಿದ್ದಳಾ? ಸ್ನೇಹಿತ ನನಗೆ ಮೋಸ ಮಾಡಿದ್ನಾ? ನನ್ನ ಪತ್ನಿ ಎಂಬುದು ಗೊತ್ತಿದ್ದೂ ಮದುವೆಗೆ ಮುಂದಾದ ಸ್ನೇಹಿತ ನನಗೆ ನೋವು ನೀಡಲು ಯತ್ನಿಸುತ್ತಿದ್ದಾನಾ? ಹೀಗೆ ನಾನಾ ಪ್ರಶ್ನೆಗಳು ತಲೆಯಲ್ಲಿ ಓಡುತ್ತಿದೆಯಂತೆ. ಸ್ನೇಹಿತರಿಗೆ ಏನು ಹೇಳ್ಬೇಕು ಎಂಬುದು ಗೊತ್ತಾಗ್ತಿಲ್ಲ ಎಂದಿದ್ದಾನೆ ವ್ಯಕ್ತಿ.

ಹೀಗೆಲ್ಲಾ ಆಗ್ತಿದ್ರೆ ನೀವು Love Addict ಆಗಿದ್ದೀರಾ ಎಂದರ್ಥ

ತಜ್ಞರ ಸಲಹೆ : ಯಾವುದೇ ಕಾರಣಕ್ಕೆ ವಿಚ್ಛೇದನವಾಗಿದ್ದರೂ ಮಾಜಿಗಳ ಮೇಲೆ ವಿಶೇಷ ಪ್ರೀತಿಯಿರುವುದು ನಿಜ. ಈಗ ಇಬ್ಬರು ದೂರವಾಗಿದ್ದೀರಾ. ಮತ್ತೆ ಅದ್ರ ಬಗ್ಗೆ ಆಲೋಚಿಸಿ ಪ್ರಯೋಜನವಿಲ್ಲ. ಇದ್ರಿಂದ ಎಲ್ಲರ ಸಂಬಂಧ ಹಾಳಾಗಬಹುದು. ಹಾಗಾಗಿ ಮಾಜಿ ಪತ್ನಿಗೆ ನಿಮ್ಮ ಬೆಂಬಲ ನೀಡಿ. ಸ್ನೇಹಿತರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗಬೇಡಿ. ಒಂದು ವೇಳೆ ನಿಮ್ಮ ದುಃಖ ಅವರಿಗೆ ತಿಳಿದ್ರೆ ಅವರು ನಿಮ್ಮ ವಿಚ್ಛೇದನದ ಬಗ್ಗೆ ನಾನಾ ಪ್ರಶ್ನೆ ಕೇಳಬಹುದು. ಮಾಜಿ ಪತ್ನಿಯ ಮುಂದಿನ ಜೀವನ ನಿಮಗೆ ಮುಖ್ಯ. ಮತ್ತೆ ನೀವಿಬ್ಬರೂ ಒಂದಾಗಲು ಸಾಧ್ಯವಿಲ್ಲ ಎಂದಾದ್ಮೇಲೆ ಅವರ ಬಾಳಲ್ಲಿ ಬಿರುಗಾಳಿಯಾಗ್ಬೇಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ.