ಪ್ರಗ್ನೆನ್ಸಿ ಅವಾಯ್ಡ್ ಮಾಡಬೇಕೆಂದರೆ ಬಹುತೇಕ ಜೋಡಿಗಳು ಕಾಂಡೋಮ್ ಮೊರೆ ಹೋಗುತ್ತಾರೆ. ಇಲ್ಲವೇ, ಬೆಳಗ್ಗೆದ್ದು ಮಾತ್ರೆ ತಿಂದು ನಿರಾಳವಾಗುತ್ತಾಳೆ ಮಹಿಳೆ. ಆದರೆ, ಸೆಕ್ಷುಯಲಿ ಬಹಳ ಆ್ಯಕ್ಚಿವ್ ಆಗಿದ್ದಾಗ ಪದೇ ಪದೆ ಮಾತ್ರೆ ತೆಗೆದುಕೊಳ್ಳುವುದು ಕೂಡಾ ಧೀರ್ಘಕಾಲದಲ್ಲಿ ಅಡ್ಡ ಪರಿಣಾಮಗಳನ್ನು ಬೀರಬಹುದು. ಮಹಿಳೆಯರಿಗೆ ಇಷ್ಟೇ ಅಲ್ಲದೆ, ವೆಜೈನಲ್ ರಿಂಗ್, ಇಂಟ್ರಾ ಯುಟೆರಿನ್ ಡಿವೈಸಸ್, ಇಂಜೆಕ್ಷನ್, ಮಾತ್ರೆಗಳು ಸೇರಿದಂತೆ ಹಲವಾರು ಕಾಂಟ್ರಾಸೆಪ್ಟಿವ್ ಆಯ್ಕೆಗಳಿವೆ. ಅವುಗಳಲ್ಲಿ ನಿಮ್ಮ ದೇಹಕ್ಕೆ ಯಾವುದು ಹೆಚ್ಚು ಸೂಟ್ ಆಗುತ್ತದೆ ನೋಡಿ ಬಳಸುವುದನ್ನು ರೂಢಿಸಿಕೊಳ್ಳಿ. 

ಓರಲ್ ಕಾಂಟ್ರಾಸೆಪ್ಟಿವ್ ಪಿಲ್ಸ್

ಸಾಮಾನ್ಯವಾಗಿ ಗರ್ಭ ನಿರೋಧಕವಾಗಿ ಬಳಸುವ ಎಲ್ಲ ಮಾತ್ರೆಗಳನ್ನೂ ಹಾರ್ಮೋನ್ ಬಳಸಿ ತಯಾರಿಸಲಾಗಿರುತ್ತದೆ. ಹಾಗಾಗಿ, ಕಡಿಮೆ ಡೋಸ್‌ನ ಮಾತ್ರೆಗಳನ್ನು ಬಳಸುವ ಅಭ್ಯಾಸ ಒಳ್ಳೆಯದು. ಇದರ ಅಡ್ಡ ಪರಿಣಾಮ ಕಡಿಮೆ ಇದ್ದು, ಪೀರಿಯಡ್ಸ್ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಇದರಲ್ಲಿ ಎರಡು ಋತುಚಕ್ರಗಳ ನಡುವೆ ಬ್ಲೀಡಿಂಗ್ ಅಥವಾ ಸ್ಪಾಟಿಂಗ್ ಕಂಡುಬರುವ ಚಾನ್ಸ್ ಕಡಿಮೆ. ಆದರೆ, ಈ ಮಾತ್ರೆಗಳನ್ನು ಸ್ತ್ರೀ ರೋಗ ತಜ್ಞರ ಸಲಹೆ ಪಡೆದೇ ಬಳಸುವುದು ಒಳ್ಳೆಯದು. ಅಂದ ಹಾಗೆ, ಸಿಗರೇಟ್ ಸ್ಮೋಕಿಂಗ್ ಚಟ ಹಾಗೂ ಕಾಂಟ್ರಾಸೆಪ್ಟಿವ್ ಪಿಲ್ ತೆಗೆದುಕೊಳ್ಳುವ ಅಭ್ಯಾಸ ಎರಡೂ ಇದ್ದರೆ ಇದು ಬಹಳ ಅಪಾಯಕಾರಿ. ಕಾಂಟ್ರಾಸೆಪ್ಟಿವ್ ಪಿಲ್‌ಗಳನ್ನು ಪ್ರತಿದಿನವೂ ತೆಗೆದುಕೊಳ್ಳಬೇಕಾಗುತ್ತದೆ. 

ಬಾಯ್ ಫ್ರೆಂಡ್‌ವೀರ್ಯವೇ ಕೊರೋನಾಕ್ಕೆ ಔಷಧ, ವಾರಕ್ಕೆ ಮೂರು ಸಾರಿ!

ಇಂಟ್ರಾ ಯುಟೆರಿನ್ ಡಿವೈಸಸ್

ಪ್ರಗ್ನೆನ್ಸಿ ತಡೆವಲ್ಲಿ ಹೆಚ್ಚು ಸುರಕ್ಷಿತವಾದ, ವಿಫಲವಾಗದ ಆಯ್ಕೆ ಎಂದರೆ ಇಂಟ್ರಾ ಯುಟೆರಿನ್ ಡಿವೈಸ್‌ಗಳು. ಇದರಲ್ಲಿ ಕಾಪರ್ ಹಾಗೂ ಹಾರ್ಮೋನಲ್ ಎಂಬ ಎರಡು ವಿಧಗಳಿವೆ. ಇವನ್ನು ತಜ್ಞವೈದ್ಯರು ಗರ್ಭಾಶಯದೊಳಗೆ ಸೇರಿಸುತ್ತಾರೆ. ಇವುಗಳಲ್ಲಿ ಹಾರ್ಮೋನಲ್ ಹೆಚ್ಚು ಉತ್ತಮ ಆಯ್ಕೆಯಾಗಿದ್ದು, ಇದನ್ನು ಒಮ್ಮೆ ಹಾಕಿದರೆ ಐದು ವರ್ಷಗಳ ಕಾಲ ಗರ್ಭ ಕಟ್ಟುವ ಭಯವಿಲ್ಲ. 5 ವರ್ಷದ ಬಳಿಕ ಬೇಕೆಂದಲ್ಲಿ ಮತ್ತೆ ಹಾಕಿಸಿಕೊಳ್ಳಬೇಕು. ಕಾಪರ್‌ ಡಿವೈಸ್‌ಗಳಲ್ಲೂ ಎರಡು ವಿಧಗಳಿದ್ದು, ಮೂರರಿಂದ ಐದು ವರ್ಷದ ಬಳಿಕ ಬದಲಾಯಿಸಬೇಕು. 

ವೆಜೈನಲ್ ರಿಂಗ್

ಇವು ಹಾರ್ಮೋನ್‌ಗಳಿಂದ ತುಂಬಿದ ರಿಂಗ್ ಆಗಿದ್ದು, ಮಹಿಳೆಯು ತಾನೇ ಯೋನಿಗೆ ಹಾಕಿಕೊಳ್ಳಬೇಕು. ಇದೂ ಕೂಡಾ ಬಹಳ ಸುರಕ್ಷಿತ ಗರ್ಭ ನಿರೋಧಕ ವಿಧಾನವಾಗಿದ್ದು, ಪ್ರತಿ ತಿಂಗಳು ಕೂಡಾ ಹೊಸ ರಿಂಗ್ ಹಾಕಿಕೊಳ್ಳಬೇಕಾಗುತ್ತದೆ. 

ಇಂಜೆಕ್ಷನ್ಸ್

ಇಂಜೆಕ್ಷನ್ ಮೂಲಕ ಗರ್ಭ ತಡೆಯುವ ವಿಧಾನ ಕೂಡಾ ಬಹಳ ಪರಿಣಾಮಕಾರಿ. ಮೂರು ತಿಂಗಳ ಕಾಲ ಮತ್ತೆ ಟೆನ್ಷನ್ ಬೇಡ. ಇದು ಬಹಳ ಪರಿಣಾಮಕಾರಿಯಾದರೂ ಕೆಲವರಲ್ಲಿ ಅಡ್ಡ ಪರಿಣಾಮ ಬೀರಿ ಮಧ್ಯೆ ಬ್ಲೀಡಿಂಗ್ ಕಾಣಿಸಿಕೊಳ್ಳುವುದಿದೆ. 

ಮಹಿಳೆಯರ ಕಾಂಡೋಮ್

ಪಾಲಿಯುರೆಥೇನ್‌ನಿಂದ ಮಾಡಲಾಗುವ ಮಹಿಳೆಯರ ಕಾಂಡೋಮ್ ಸರಿಯಾಗಿ ಬಳಸಿದರೆ ಶೇ.99ರಷ್ಟು ಪರಿಣಾಮಕಾರಿ. ಲೈಂಗಿಕವಾಗಿ ಹರಡುವ ಕಾಯಿಲೆಗಳ ವಿರುದ್ಧವೂ ಇದು ರಕ್ಷಣೆ ನೀಡುತ್ತದೆ. ಆದರೆ ಹರಿದು ಹೋಗುವ ಭಯ ಇದ್ದೇ ಇರುತ್ತದೆ. ಇವನ್ನು ಸೆಕ್ಸ್‌ಗಿಂತ 8 ಗಂಟೆಗಳ ಮೊದಲೇ ಇಟ್ಟುಕೊಳ್ಳಬಹುದು. 

24*7 ಜತೆಗೇ ಇರುವುದು ಹೇಗೆ? ಪ್ರೀತಿ ಇಲ್ಲದೆ ಹೂವು ಅರಳೀತು ಹೇಗೆ?

ಕಾಂಟ್ರಾಸೆಪ್ಟಿವ್ ಪ್ಯಾಚ್

ಈ ಪ್ಯಾಚ್‌ಗಳು ಈಸ್ಟ್ರೋಜನ್ ಹಾಗೂ ಪ್ರೊಜೆಸ್ಟ್ರೋಜನ್ನನ್ನು ಹೊಂದಿದ್ದು, ಇವನ್ನು ತೋಳಿಗೆ ಅಂಟಿಸಿಕೊಳ್ಳಲಾಗುತ್ತದೆ. ಇದು ಹಾರ್ಮೋನನ್ನು ದೇಹಕ್ಕೆ ಬಿಡುಗಡೆ ಮಾಡಿ ಗರ್ಭಾಶಯದ ಲೈನಿಂಗ್ ತೆಳುವಾಗುವಂತೆ ಹಾಗೂ ಸರ್ವಿಕಲ್ ಮ್ಯಾಕಸ್ ದಪ್ಪಗಾಗುವಂತೆ ಮಾಡುತ್ತದೆ. ಇದು ಶೇ.100ರಷ್ಟು ಪರಿಣಾಮಕಾರಿ. ಆದರೆ, ಪ್ರತಿ ವಾರ ಪ್ಯಾಚ್ ಬದಲಿಸಬೇಕಾಗುತ್ತದೆ. ಇದೇ ಮಾದರಿಯಲ್ಲಿ ಕೆಲಸ ಮಾಡುವುದು ಕಾಂಟ್ರಾಸೆಪ್ಟಿವ್ ಟ್ಯೂಬ್. ಇದನ್ನು ಭುಜದ ಬಳಿ ತೋಳಿನಲ್ಲಿ ಒಳಗೆ ಹಾಕಲಾಗುತ್ತದೆ. ಇದು ಸುಮಾರು 3 ವರ್ಷಗಳ ಕಾಲ ಗರ್ಭ ಕಟ್ಟದಂತೆ ನೋಡಿಕೊಳ್ಳಬಲ್ಲದು.