Health Tips: ನಿಮ್ಮ ಕಾಸ್ಮೆಟಿಕ್‌ಗಳನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ

ನಿಮ್ಮ ಮೇಕಪ್ ಕಾಸ್ಮೆಟಿಕ್ಸ್ ಲಿಪ್ಸ್ಟಿಕ್, ಫೇಸ್ ಕ್ರೀಂ, ಐಲೈನರ್ ಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಿದ್ದೀರಾ ಎಂದಾದರೆ ಈಗಲೇ ಎಚ್ಚೆತ್ತುಕೊಳ್ಳಿ. ಇಲ್ಲವಾದರೆ, ಚರ್ಮಕ್ಕೆ ಸಂಬಂಧಪಟ್ಟ ತೊಂದರೆಗಳನ್ನು ಎದುರಿಸಬೇಕಾಗಬಹುದು. ನೀವೇನೋ ನಿಮ್ಮ ಸ್ನೇಹಿತರು ಎಂದು ಹಂಚಿಕೊಳ್ಳುತ್ತೀರಿ ಆದರೆ, ಅದು ನಿಮ್ಮ ತ್ವಚೆಗೆ ಅರ್ಥವಾಗಬೇಕು ಅಲ್ಲವೇ..

reasons why you should not share cosmetics

ಮೇಕಪ್ ಕಾಸ್ಮೆಟಿಕ್ಸ್ (Makup cosmetics) ಅಂದ ಮೇಲೆ ಒಬ್ಬರ ವಸ್ತುಗಳನ್ನು ಇನ್ನೊಬ್ಬರು ಬಳಸುವುದು ಬಹಳ ಸಾಮಾನ್ಯ ವಿಷಯ. ಹಲವಾರು ಸಲ ನಿಮಗೆ ನಿಮ್ಮ ಬಳಿಯಲ್ಲಿರುವ ಕಾಸ್ಮೆಟಿಕ್ಸ್ ಗಳಿಗಿಂತ ನಿಮ್ಮ ಸ್ನೇಹಿತರ (Friends) ಕಾಸ್ಮೆಟಿಕ್ ಹೆಚ್ಚು ಇಷ್ಟವಾಗಿರುತ್ತದೆ. ಹಾಗೂ ಅವರೊಂದಿಗೆ ನೀವು ಅದನ್ನೇ ಬಳಸುತ್ತ ಮತ್ತು ನಿಮ್ಮ ಕಾಸ್ಮೆಟಿಕ್ ಗಳನ್ನು ಕೂಡ ಅವರಿಗೆ ಬಳಸಲು ನೀಡುತ್ತಿರುತ್ತೀರಿ. ಆದರೆ, ಇದರಿಂದ ನಿಮ್ಮ ತ್ವಚೆಗೆ ಏನಾದರೂ ಹಾನಿಯಾಗಬಹುದು ಎಂಬ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ನಮಗೆ ಅರಿವೇ ಇಲ್ಲದೆ ಮಾಡುವ ಸಣ್ಣಪುಟ್ಟ ತಪ್ಪುಗಳಿಂದ ಚರ್ಮಕ್ಕೆ ಸಂಬಂಧಪಟ್ಟಂತಹ ಕಾಯಿಲೆಗಳನ್ನು ಅನುಭವಿಸಬೇಕಾಗಬಹುದು.

 ನಿಮಗೆ ಮಾತ್ರವಲ್ಲ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವ ಇತರ ವ್ಯಕ್ತಿಗೂ ಕೂಡ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಾಗಾದರೆ ಯಾವ ವಸ್ತುಗಳನ್ನು ಬಳಸಿದಾಗ ಯಾವ ರೀತಿಯ ಸಮಸ್ಯೆಗಳು (Problems) ಎದುರಾಗಬಹುದು ಎಂದು ತಿಳಿಯಿರಿ..

 ಕಣ್ಣಿಗೆ (Eye) ಸಂಬಂಧಪಟ್ಟ ಮೇಕಪ್ ವಸ್ತುಗಳ ಬಳಕೆ

 ಕಣ್ಣುಗಳು ನಮ್ಮ ದೇಹದಲ್ಲಿರುವ ಸೂಕ್ಷ್ಮ (Sensitive) ಇಂದ್ರಿಯಗಳಲ್ಲಿ ಒಂದು. ಇದು ಬಹಳ ಸೆನ್ಸಿಟಿವ್ ಅಂಗವಾಗಿದೆ. ಸ್ವಲ್ಪ ಹೆಚ್ಚುಕಡಿಮೆಯಾದರೂ ದೃಷ್ಟಿಗೆ ಸಂಬಂಧಿಸಿದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇದರ ಜೊತೆಗೆ ಕಣ್ಣುಗಳಲ್ಲಿ ವಿಧವಿಧವಾದ ಬ್ಯಾಕ್ಟೀರಿಯಗಳು ಕೂಡ ನೆಲೆಸಿರುತ್ತವೆ. ಅದರಲ್ಲಿಯೂ ಕನ್ನಡಕ ಅಥವಾ ಲೆನ್ಸ್ ಗಳನ್ನು ಬಳಸುವವರಲ್ಲಿ ಇಂತಹ ಸಮಸ್ಯೆ ಹೆಚ್ಚಾಗಿರುತ್ತದೆ. ಹೀಗಿರುವಾಗ ಒಬ್ಬರ ಐಲೈನರ್ ಗಳನ್ನು ಇನ್ನೊಬ್ಬರು ಬಳಕೆ ಮಾಡುವುದರಿಂದ ಒಬ್ಬರ ಕಣ್ಣಿನಲ್ಲಿರುವ ಬ್ಯಾಕ್ಟೀರಿಯಾವು (Bacteria) ಇನ್ನೊಬ್ಬರ ಕಣ್ಣಿಗೂ ಕೂಡ ಹರಡಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಟ್ರೈ ಮಾಡಿ Aroma Therapy, ಮನಸ್ಸಾಗುವುದು ಹ್ಯಾಪಿ ಹ್ಯಾಪಿ

 ತುಟಿಯ (Lips) ಮೇಕಪ್ ಐಟಮ್ಸ್

 ಲಿಪ್ಸ್ಟಿಕ್ ಗಳನ್ನು ಹಂಚಿಕೊಳ್ಳುವುದು ಒಳ್ಳೆಯ ಅಭ್ಯಾಸವಲ್ಲ. ಯಾಕೆಂದರೆ, ತುಟಿಯ ಮೂಲಕ ವೈರಾಣುಗಳು ಹೊಟ್ಟೆಗೆ ಸೇರಿಕೊಳ್ಳುವ ಅವಕಾಶ ಇರುತ್ತದೆ. ಅದಷ್ಟರ ಮಟ್ಟಿಗೆ ತುಟಿ ಹಾಗೂ ಮೂಗನ್ನು ವೈರಾಣುವಿನಿಂದ ದೂರ ಇರುವಂತೆ ನೋಡಿಕೊಳ್ಳಬೇಕು. ಹಾಗೂ ಶುದ್ಧವಾಗಿಟ್ಟುಕೊಳ್ಳಬೇಕು. ಒಬ್ಬರು ಬಳಸಿದ ಲಿಪ್ಸ್ಟಿಕ್ ಇನ್ನೊಬ್ಬರು ಬಳಕೆ ಮಾಡುವುದರಿಂದ ಅಥವಾ ತುಟಿಯ ಬೇರೆ ಯಾವುದೇ ರೀತಿಯ ವಸ್ತುಗಳನ್ನು ಬಳಕೆ ಮಾಡುವುದರಿಂದ ಬಾಯಿಯಲ್ಲಿರುವ ವೈರಾಣುಗಳು (Virus) ಹರಡಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇಂತಹ ಅಭ್ಯಾಸದಿಂದ ಅಷ್ಟರಮಟ್ಟಿಗೆ ದೂರವಿರಿ.

 ಮೊಡವೆಗಳ (Acne) ಅಪಾಯ

 ಮೇಕಪ್ ಐಟಂಗಳನ್ನು (Items) ಬಳಸುವಾಗ ಒಬ್ಬರಿಗೆ ಹೊಂದುವ ವಸ್ತುಗಳು ಇನ್ನೊಬ್ಬರ ಚರ್ಮಕ್ಕೂ ಹೊಂದಿಕೊಳ್ಳಬೇಕು ಎಂದೇನಿಲ್ಲ. ಹೀಗಿರುವಾಗ ಒಬ್ಬರು ಮುಖಕ್ಕೆ ಬಳಸುವ ಕ್ರೀಂಗಳನ್ನು ಇನ್ನೊಬ್ಬರು ಬಳಸಿದರೆ ಆಗ ಮುಖದಲ್ಲಿ ಮೊಡವೆಗಳು ಹೆಚ್ಚಾಗಬಹುದು ಇಲ್ಲವೇ ಚರ್ಮದ ಮೇಲೆ ಅಲರ್ಜಿ ಉಂಟಾಗಬಹುದು. ಇದರ ಜೊತೆಗೆ ಇನ್ನೊಬ್ಬರ ಮುಖದಲ್ಲಿರುವ ಬ್ಯಾಕ್ಟೀರಿಯಾವು ಫೇಸ್ ಕ್ರೀಂ ಬಳಕೆ ಮಾಡುವುದರ ಮೂಲಕ ಮತ್ತೊಬ್ಬರ ಮುಖದಲ್ಲಿ ಕೂಡ ಹರಡಿಕೊಳ್ಳಬಹುದು. ಜೊತೆಗೆ ಬೇರೆಯವರ ಮುಖದಲ್ಲಿರುವ ಇನ್ಫೆಕ್ಷನ್  (Infection) ನಿಮ್ಮ ಮುಖಕ್ಕೂ ಹರಡುವ ಸಾಧ್ಯತೆ ಇದೆ.

Makeup Tricks: ಸುಂದರವಾಗಿ ಕಾಣಿಸಲು ಇಲ್ಲಿವೆ ಸುಲಭ ವಿಧಾನ

 ಮೇಕಪ್ ಬ್ರಷ್ (Brush)

 ನಿಮಗೆ ನೋಡಲು ಮೇಲ್ನೋಟಕ್ಕೆ ಸ್ವಚ್ಛವಾಗಿ (Clean) ಇರುವಂತಹ ಕಾಣುವ ಬ್ರಷ್ ಗಳಲ್ಲಿ ಬ್ಯಾಕ್ಟೀರಿಯಾಗಳು ನೆಲೆಸಿರಬಹುದು. ಇದು ಬರೀ ಕಣ್ಣಿಗೆ ಕಾಣುವುದಿಲ್ಲ ಆದರೆ, ಇದರ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅದರಿಂದ ಇತರರ ಮೇಕಪ್ ಬ್ರಷ್ ಗಳನ್ನು ನೀವು ಬಳಕೆ ಮಾಡುವುದು ಹಾಗೂ ನಿಮ್ಮ ಬ್ರಷ್ ಗಳನ್ನು ಇತರರಿಗೆ ಕೊಡುವುದು ಎರಡನ್ನೂ ನೀವು ನಿಲ್ಲಿಸಿದರೆ ನಿಮ್ಮ ತ್ವಚೆ (Skin) ಸುರಕ್ಷಿತವಾಗಿರುತ್ತದೆ.

 ಹೀಗೆ ಇನ್ನೂ ಕೆಲವು ಮೇಕಪ್ ವಸ್ತುಗಳನ್ನು ಇನ್ನೊಬ್ಬರ ಜೊತೆಗೆ ಹಂಚಿಕೊಳ್ಳುತ್ತಿದ್ದೇವೆ ಎಂದಾದರೆ. ಹಿಂದೆ ಇದನ್ನು ನಿಲ್ಲಿಸುವುದು (Stop) ಒಳ್ಳೆಯದು. ಇಲ್ಲವಾದರೆ, ನಿಮಗೆ ಅರಿವಿಲ್ಲದೆ ವೈರಾಣುಗಳು ಹಾಗೂ ಬ್ಯಾಕ್ಟೀರಿಯಾಗಳು ಒಬ್ಬರಿಂದ ಇನ್ನೊಬ್ಬರಿಗೆ ಹರಡಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.

Latest Videos
Follow Us:
Download App:
  • android
  • ios