Asianet Suvarna News Asianet Suvarna News

Youngest MP of India: 25ನೇ ವಯಸ್ಸಿನಲ್ಲೇ ಸಂಸದೆಯಾದ ಸಂಜನಾ ಜಾತವ್, ಹಳೇ ಡಾನ್ಸ್‌ ವಿಡಿಯೋ ವೈರಲ್

ಲೋಕಸಭೆ ಚುನಾವಣೆ ಫಲಿತಾಂಶ (Lok Sabha Elections Result 2024) ನಿನ್ನೆಯಷ್ಟೇ ಹೊರಬಿದ್ದಿದ್ದು ಗೆದ್ದವರ ಸಂಭ್ರಮ ಮುಗಿಲುಮುಟ್ಟಿದೆ. ಇನ್ನೊಂದು ತಿಂಗಳು ಈ ಸಡಗರ ಎಲ್ಲೆಡೆ ಮನೆ ಮಾಡಿರುತ್ತದೆ. ಈ ಮಧ್ಯೆ ಮಹಿಳೆಯೊಬ್ಬರು ಸಾಧನೆ ಮಾಡಿದ್ದಾರೆ. ಅತಿ ಕಡಿಮೆ ವಯಸ್ಸಿನಲ್ಲೇ ಸಂಸದೆಯಾಗಿ ದಾಖಲೆ ಬರೆದಿದ್ದಾರೆ. 
 

Rajasthan Congress MP Sanjana Jatav Youngest MP Dance Video Viral Internet roo
Author
First Published Jun 5, 2024, 4:42 PM IST

2024ರ ಲೋಕಸಭಾ ಚುನಾವಣೆಯ ಫಲಿತಾಂಶ (India General Elections Results 2024) ಹೊರಬಿದ್ದಿದೆ. ಇದೀಗ ಸಾರ್ವಜನಿಕರ ಮನದಲ್ಲಿ ಏನಿತ್ತು ಎಂಬುದು ಬೆಳಕಿಗೆ ಬಂದಿದೆ. ಈ ನಡುವೆ ಎಲ್ಲೆಡೆ ಒಂದೊಂದು ಹೆಸರು ಚರ್ಚೆಯಾಗುತ್ತಿದ್ದು, ಈ ಹೆಸರು ಸಂಜನಾ ಜಾತವ್. ಸಂಜನಾ ಅವರು ಭರತ್‌ಪುರ ಕ್ಷೇತ್ರದಿಂದ ಕಾಂಗ್ರೆಸ್ (Indian Congress Party) ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಬಂದಿದ್ದಾರೆ. ಸಂಜನಾ ಜಾವತ್  ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರನ್ನು ಸೋಲಿಸಿದ್ದು ದೊಡ್ಡ ಸಾಧನೆ. 

ಚುನಾವಣೆ (Elections ) ಯಲ್ಲಿ ಸ್ಪರ್ಧಿಸಿ ಗೆದ್ದು ಬಂದ ಸಂಜನಾ (Sanjana) ಹೆಸರು ಸದ್ಯ ಎಲ್ಲರ ಬಾಯಲ್ಲಿ ಓಡಾಡ್ತಿದೆ. ಸಂಜನಾರ ಇನ್ನೊಂದು ವಿಶೇಷತೆ ಅಂದ್ರೆ ಅವರು ಅತ್ಯಂತ ಕಿರಿಯ ಸಂಸದೆಯಾಗಿದ್ದಾರೆ. 25ನೇ ವಯಸ್ಸಿನಲ್ಲೇ ಸಂಸದೆ (MP) ಯಾದ ಬಿರುದು ಸಂಜನಾರಿಗೆ ಸಿಕ್ಕಿದೆ. 

ಮತ್ತೊಮ್ಮೆ ಸೋತ ಗೀತಾ ಶಿವರಾಜ್ ಕುಮಾರ್, ದೊಡ್ಮನೆ ಸೊಸೆಗೆ ಒಲಿಯದ ಎಂಪಿ ಪಟ್ಟ!

ಒಂದ್ಕಡೆ ಸಂಜನಾ ಗೆಲುವಿನ ಚರ್ಚೆಯಾಗ್ತಿದ್ದರೆ ಇನ್ನೊಂದು ಕಡೆ ಅವರ ಡಾನ್ಸ್ ವಿಡಿಯೋ ಒಂದು ವೈರಲ್ (Dance Vial Video) ಆಗಿದೆ. ಈ ವಿಡಿಯೋದಲ್ಲಿ ಸಂಜನಾ ಸೀರೆಯುಟ್ಟು, ಸೆರಗನ್ನು ಮುಖಕ್ಕೆ ಹಾಕಿಕೊಂಡು ಡಾನ್ಸ್ ಮಾಡಿದ್ದಾರೆ. ಅವರ ಜೊತೆ ಕೆಲ ಮಹಿಳೆಯರು ಸ್ಟೆಪ್ ಹಾಕಿರೋದನ್ನು ನೀವು ನೋಡ್ಬಹುದು. ಹರ್ಯಾನ್ವಿ ಹಾಡಿಗೆ ಸಂಜನಾ ಡಾನ್ಸ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. 

ಹಂಸರಾಜ್ ಮೀನಾ ತಮ್ಮ ಎಕ್ಸ್ ಖಾತೆಯಲ್ಲಿ ಸಂಜನಾ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಭರತ್‌ಪುರ ಲೋಕಸಭಾ ಕ್ಷೇತ್ರದಲ್ಲಿ ಸಂಜನಾ ಜಾತವ್ ಕೇವಲ ಬಿಜೆಪಿಯನ್ನು ಸೋಲಿಸಿದ್ದು ಮಾತ್ರವಲ್ಲದೆ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರನ್ನು ಸೋಲಿಸಿದ್ದಾರೆ. ಇದು ಭಜರ್ ಲಾಲ್ ಶರ್ಮಾ ತವರು ಜಿಲ್ಲೆ ಎಂದು ಹಂಸರಾಜ್ ಮೀನಾ ಬರೆದಿದ್ದಾರೆ. ಕಿರೋರಿ ಲಾಲ್ ಜಿಯಂತೆ ಭಜನ್‌ಲಾಲ್ ಶರ್ಮಾ ಕೂಡ ರಾಜೀನಾಮೆ ನೀಡುತ್ತಾರಾ? ಅಲ್ಲಿಯವರೆಗೆ ಕಾಯುತ್ತ ಸಂಜನಾ ಅವರ ಡ್ಯಾನ್ಸ್ ವಿಡಿಯೋ ನೋಡಿ ಎಂದು ಶೀರ್ಷಿಕೆ ಹಾಕಿದ್ದಾರೆ. 

ಸಂಜನಾ ಅವರ ಈ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ ಬಂದಿದೆ. ಕಡಿಮೆ ವಯಸ್ಸಿನಲ್ಲೇ ಸಂಸದೆಯಾದ ಸಂಜನಾರಿಗೆ ಅನೇಕರು ಶುಭಹಾರೈಸಿದ್ದಾರೆ. ಎಕ್ಸ್ ಖಾತೆಯ ಪೋಸ್ಟನ್ನು ಈವರೆಗೆ 30 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. 

ಇಬ್ಬರು ಗರ್ಲ್ ಫ್ರೆಂಡ್ಸ್, ಒಬ್ಬ ಬಾಯ್ ಫ್ರೆಂಡ್ ಜೊತೆ ಈ ಮಹಿಳೆ ಫುಲ್ ಖುಷ್!

ಅದೃಷ್ಟದಿಂದ ಈ ಗೆಲುವು ಸಿಕ್ಕಿದೆ ಎಂದು ಸಂಜನಾ ಹೇಳಿದ್ದಾರೆ. ಸಂಜನಾ ಗೆಲುವನ್ನು ಕಾಂಗ್ರೆಸ್ ಸಂಭ್ರಮಿಸಿದೆ. ಬಿಜೆಪಿ ಅಭ್ಯರ್ಥಿಗೆ 527907 ಮತ ಬಿದ್ರೆ, ಸಂಜನಾರಿಗೆ 579890 ಮತ ಬಿದ್ದಿದೆ. ಅವರ ಕ್ಷೇತ್ರದಲ್ಲಿ ಒಟ್ಟು ಆರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆದ್ರೆ ಅವರೆಲ್ಲರನ್ನು ಹಿಂದಿಕ್ಕಿದ ಸಂಜನಾ, ಗೆಲುವು ಸಾಧಿಸಿದ್ದಾರೆ.

ಸಂಜನಾ ಜಾತವ್ ಯಾರು? : ಸಂಜನಾ ಜಾತವ್ ಅಲ್ವಾರ್ ಜಿಲ್ಲೆಯ ಕತುಮಾರ್ ತೆಹಸಿಲ್‌ನ ಸಮುಂಚಿ ಗ್ರಾಮದ ನಿವಾಸಿ. ಆದರೆ ಸಂಜನಾ ಜಾತವ್ ಅವರು ಪೆಹರ್ ಭರತ್ ಪುರ ಜಿಲ್ಲೆಯ ಭುಸಾವರ್ ನಲ್ಲಿ ನೆಲೆಸಿದ್ದಾರೆ. ಅವರ ಪತಿ ಕಪ್ತಾನ್ ಸಿಂಗ್ ರಾಜಸ್ಥಾನ ಪೊಲೀಸ್‌ ಇಲಾಖೆಯಲ್ಲಿ ಕಾನ್‌ಸ್ಟೆಬಲ್ ಆಗಿದ್ದಾರೆ.  ಸಂಜನಾ ಅಲ್ವಾರ್ ಜಿಲ್ಲಾ ಕೌನ್ಸಿಲ್ ಸದಸ್ಯರಾಗಿದ್ದರು. ಸಂಜನಾ ಎಲ್ ಎಲ್ ಬಿ ಓದಿದ್ದಾರೆ.  ಕೆಲವು ಸಮಯದಿಂದ ಸಂಜನಾ ಕಾಂಗ್ರೆಸ್‌ನಲ್ಲಿ ಸಕ್ರಿಯ ಕಾರ್ಯಕರ್ತೆಯಾಗಿದ್ದರು. ತಮ್ಮ ಕೆಲಸವನ್ನು ಅವರು ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಸಂಜನಾ, ಪ್ರಿಯಾಂಕಾ ಗಾಂಧಿಯವರ ಲಡ್ಕಿ ಹೂ..ಲಡ್ ಸಕ್ತಿ ಹೂ ಅಭಿಯಾನದಲ್ಲಿ ಸೇರಿದ್ದರು.

ಪ್ರಿಯಾಂಕಾ ಗಾಂಧಿಯವರ ಸಂಪರ್ಕಕ್ಕೆ ಬಂದ ನಂತರ ಅವರು ಕಾಂಗ್ರೆಸ್‌ನಲ್ಲಿ ಹೆಚ್ಚು ಗಮನ ಸೆಳೆಯಲು ಪ್ರಾರಂಭಿಸಿದ್ದರು. ಸಂಜನಾ ಜಾತವ್ ಅವರು ಕಥುಮಾರ್ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆ ಸಮಯದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಖೇಡಿ ಅವರ ಎದುರು ಕೇವಲ 409 ಮತಗಳಿಂದ ಸೋಲು ಕಂಡಿದ್ದರು. 

Latest Videos
Follow Us:
Download App:
  • android
  • ios