Asianet Suvarna News Asianet Suvarna News

Dalit Mayor: ಚೆನ್ನೈನ ಮೊದಲ ದಲಿತ ಮೇಯರ್ ಆಗಿ ಪ್ರಿಯಾ ರಾಜನ್ ಅಧಿಕಾರ ಸ್ವೀಕಾರ

ಸಮಾಜದಲ್ಲಿ ಇಂದಿಗೂ ಹಲವೆಡೆ ದಲಿತ (Dalit)ರನ್ನು ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆ. ಹಲವು ಕ್ಷೇತ್ರಗಳಲ್ಲಿ ಅವರಿನ್ನೂ ಹಿನ್ನಡೆಯಿದ್ದಾರೆ. ಹೀಗಿರುವಾಗಲೇ ಚೆನ್ನೈ (Chennai)ನಲ್ಲಿ ಮೊದಲ ದಲಿತ ಮಹಿಳೆ ಮೇಯರ್ (Mayor) ಹುದ್ದೆ ಅಲಂಕರಿಸಿದ್ದಾರೆ. ಇವರು ನಗರದ ಅತ್ಯಂತ ಕಿರಿಯ ಮೇಯರ್ ಕೂಡಾ ಆಗಿದ್ದಾರೆ.

 

Priya Rajan Who Becomes Chennais First Dalit Woman Mayor
Author
Bengaluru, First Published Mar 4, 2022, 5:48 PM IST

ಸಮಾಜ ಎಷ್ಟೇ ಮುಂದುವರಿದರೂ ಮಹಿಳೆಯರು ಇನ್ನೂ ಹಲವು ಕ್ಷೇತ್ರಗಳಲ್ಲಿ ಹಿಂದುಳಿದಿದ್ದಾರೆ. ರಾಜಕೀಯ, ಉದ್ಯಮ ಹಲವಾರು ಕ್ಷೇತ್ರಗಳು ಇನ್ನೂ ಗ್ರಾಮೀಣ ಮಹಿಳೆಯರ ಪಾಲಿಗೆ ಮರೀಚಿಕೆಯಾಗಿಯೇ ಉಳಿದಿದೆ. ಅದರಲ್ಲೂ ರಾಜಕೀಯವೆಂಬುದು ಪುರುಷ ಪ್ರಾಬಲ್ಯದಲ್ಲೇ ನಡೆಯುತ್ತಿದೆ. ಹಾಗೆಯೇ ಸಮಾಜದಲ್ಲಿ ಮೇಲು-ಕೀಳು, ಜಾತಿ-ಧರ್ಮದ ಹೆಸರಿನಲ್ಲಿ ಬೇಧಭಾವಗಳು ಕಡಿಮೆಯಾಗಿಲ್ಲ. ಇದುವೇ ಹಲವು ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡಲು ಅಡ್ಡಿಯಾಗುತ್ತಿದೆ. ಈ ಮಧ್ಯೆ ಚೆನ್ನೈನಲ್ಲಿ ಮೊದಲ ದಲಿತ (Dalit) ಮೇಯರ್ ಅಧಿಕಾರ ಸ್ವೀಕರಿಸಿದ್ದಾರೆ. ಡಿಎಂಕೆ ಪಕ್ಷದ ಪ್ರಿಯಾ ರಾಜನ್ ಅವರು ಚೆನ್ನೈ ಕಾರ್ಪೋರೇಷನ್‌ನ ಮೇಯರ್ (Mayor) ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರು ನಗರದ ಅತ್ಯಂತ ಕಿರಿಯ ಮೇಯರ್ ಕೂಡಾ ಆಗಿದ್ದಾರೆ

ಪ್ರಿಯಾ ರಾಜನ್ ಯಾರು ಗೊತ್ತಾ ?
ಡಿಎಂಕೆ ಮಾಜಿ ಶಾಸಕ ಚೆಂಗೈ ಶಿವಂ ಅವರ ಮೊಮ್ಮಗಳು ಪ್ರಿಯಾ ರಾಜನ್ (Priya Rajan). ದೃಢವಾದ ರಾಜಕೀಯ ಹಿನ್ನೆಲೆ ಹೊಂದಿರುವ ಕುಟುಂಬದಿಂದ ಬಂದವರು. ಮಾಧ್ಯಮ ವರದಿಗಳ ಪ್ರಕಾರ, ಪ್ರಿಯಾ ಅವರ ತಂದೆ ಆರ್.ರಾಜನ್ ಅವರು ಡಿಎಂಕೆಗೆ ಪ್ರದೇಶ ಸಹ ಕಾರ್ಯದರ್ಶಿಯಾಗಿದ್ದಾರೆ. ಡಿಎಂಕೆ (DMK) ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. 28 ವರ್ಷದ ಪ್ರಿಯಾ ಹುಟ್ಟಿ ಬೆಳೆದದ್ದು ಚೆನ್ನೈನಲ್ಲಿ. ಕನ್ಯಕಾ ಪರಮೇಶ್ವರಿ ಮಹಿಳಾ ಕಲಾ ಕಾಲೇಜಿನಲ್ಲಿ ಎಂಕಾಂ ಪದವಿ ಪಡೆದಿದ್ದಾರೆ. 

ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ (M.K Stalin) ತಮ್ಮ ಪಾಲಿನ ಆದರ್ಶ ಎಂದು ಹೇಳುವ ಪ್ರಿಯಾ ರಾಜನ್, ಡಿಎಂಕೆ ಶಾಸಕ ಚೆಂಗೈ ಶಿವಂ ಅವರ ಸೋದರ ಸೊಸೆಯಾಗಿದ್ದಾರೆ. ವಿವಾಹಿತೆಯಾಗಿರುವ ಪ್ರಿಯಾಗೆ ನಾಲ್ಕು ವರ್ಷದ ಮಗಳಿದ್ದಾಳೆ.

 Dharwad: ದಲಿತರ ಮನೆಯಲ್ಲಿ ಭಾವೈಕ್ಯದ ದೀಪ ಹಚ್ಚಿದ ವಿದ್ಯಾರಣ್ಯ ಭಾರತೀ ಶ್ರೀ

ಚೆನ್ನೈ ನಗರದ ಮೂರನೇ ಮಹಿಳಾ ಮೇಯರ್ 
ಪ್ರಿಯಾ ಇತ್ತೀಚೆಗೆ ವಾರ್ಡ್ 74 ಮಂಗಳಪುರಂನ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದಾರೆ. ಕಾರ್ಪೋರೇಷನ್ ಆಯುಕ್ತ ಗಗನ್ ದೀಪ್ ಸಿಂಗ್ ಬೇಡಿ ನೂತನ ಮೇಯರ್ಗೆ ಪ್ರಮಾಣವಚನ ಬೋಧಿಸಿ ಮೇಯರ್ ಧರಿಸುವ ಸಾಂಪ್ರದಾಯಿಕ ಗೌನ್ನ್ನು ಅವರಿಗೆ ಹಸ್ತಾಂತರಿಸಿದರು. ಡಿಎಂಕೆ ಸಚಿವರಾದ ಪಿ.ಕೆ ಶೇಖರ್ ಮತ್ತು ಮಾ ಸುಬ್ರಮಣಿಯನ್ ಮೇಯರ್‌ಗೆ ಸಂಪ್ರದಾಯದಂತೆ ಗದೆ ಹಸ್ತಾಂತರಿಸಿದರು. 

ಚೆನ್ನೈ ಕಾರ್ಪೋರೇಷನ್‌ಗೆ ಮೇಯರ್ ಮತ್ತು ಅಧ್ಯಕ್ಷರ ಹುದ್ದೆಗೆ ಪರೋಕ್ಷ ಚುನಾವಣೆ ಶುಕ್ರವಾರ ನಡೆಯಿತು. 200 ವಾರ್ಡ್‌ಗಳಲ್ಲಿ ಡಿಎಂಕೆ 153 ಕೌನ್ಸಿಲರ್‌ಗಳನ್ನು ಹೊಂದಿದೆ. ಪ್ರಿಯಾ ರಾಜನ್ ನಗರದ ಮೂರನೇ ಮಹಿಳಾ ಮೇಯರ್ ಆಗಿದ್ದಾರೆ. ತಾರಾ ಚೆರಿಯನ್ ಮತ್ತು ಕಾಮಾಕ್ಷಿ ಜಯರಾಮನ್ ನಂತರ ಪ್ರಿಯಾ ಚೆನ್ನೈನ ಮೇಯರ್ ಆಗಿ ಸೇವೆ ಸಲ್ಲಿಸುತ್ತಿರುವ ಮೂರನೇ ಮಹಿಳೆಯಾಗಿದ್ದಾರೆ. 

Kannada Actor Chetan Case: ನಟ ಚೇತನ್ ಪ್ರತೀ ನಡವಳಿಕೆ ಮೇಲೆ ಹಲವು ಇಲಾಖೆಗಳ ಕಣ್ಣು

ಇತ್ತೀಚೆಗೆ ಮುಕ್ತಾಯಗೊಂಡ ತಮಿಳುನಾಡು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ (Election)ಯಲ್ಲಿ ಪ್ರಿಯಾ ಅವರ ಪಕ್ಷವು ಪ್ರಚಂಡ ಬಹುಮತದಿಂದ ಗೆದ್ದ ನಂತರ ವಾರ್ಡ್ 74 ರಿಂದ ಕೌನ್ಸಿಲರ್ ಆಗಿ ಆಯ್ಕೆಯಾದರು. ಪ್ರಿಯಾ ರಾಜನ್, ಉತ್ತರ ಚೆನ್ನೈನ ಮೊದಲ ಮೇಯರ್ ಆಗಿದ್ದಾರೆ, ಇದು ನಗರದ ಅಭಿವೃದ್ಧಿಯಾಗದ ಪ್ರದೇಶಗಳಲ್ಲಿ ಒಂದಾಗಿದೆ. ಚೆನ್ನೈನ ದಕ್ಷಿಣ ಅಥವಾ ಮಧ್ಯ ಭಾಗದವರು ಮಾತ್ರ ಈ ಸ್ಥಾನವನ್ನು ಹೊಂದಿದ್ದಾರೆ. ನಗರದ ರಸ್ತೆಗಳ ಅಭಿವೃದ್ಧಿಗೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡುವುದಾಗಿ ಪ್ರಿಯಾ ರಾಜನ್ ಹೇಳಿದ್ದಾರೆ. 

ಚೆನ್ನೈನಲ್ಲಿ ಸಿಟಿ ಕೌನ್ಸಿಲ್ ಚುನಾವಣೆಗೆ ಮುಂಚಿತವಾಗಿ, ರಾಜ್ಯ ಸರ್ಕಾರವು ಇತ್ತೀಚೆಗೆ ಪರಿಶಿಷ್ಟ ಜಾತಿಯ (SC) ಮಹಿಳೆಯರಿಗೆ ಸ್ಥಾನವನ್ನು ಮೀಸಲಿಡುವ ನಿರ್ಣಯವನ್ನು ಹೊರಡಿಸಿತು. ಡಿಎಂಕೆ ತನ್ನ ಸಾಮಾಜಿಕ ನ್ಯಾಯದ ಯೋಜನೆಯ ಭಾಗವಾಗಿ ಈ ಸ್ಥಾನಗಳನ್ನು ಅಂಚಿನಲ್ಲಿರುವ ಸಮುದಾಯಕ್ಕೆ ಮೀಸಲಿಟ್ಟ ನಂತರ ಚೆನ್ನೈ ಮತ್ತು ನಗರದ ಉಪನಗರಗಳಾದ ತಾಂಬರಂ ಮತ್ತು ಅವಡಿ ಮುನ್ಸಿಪಲ್ ಕಾರ್ಪೊರೇಷನ್‌ಗಳು ಎಸ್‌ಸಿ ಸಮುದಾಯದಿಂದ ಮೇಯರ್‌ಗಳನ್ನು ಹೊಂದಿರುತ್ತಾರೆ. ತಾಂಬರಂ ಮೇಯರ್ ಆಗಿ ಕೆ.ವಸಂತಕುಮಾರಿ, ಆವಡಿಯ ಮೊದಲ ಮೇಯರ್ ಜಿ.ಉದಯಕುಮಾರ್.

Latest Videos
Follow Us:
Download App:
  • android
  • ios