ಪ್ರೆಗ್ನೆನ್ಸಿ ಅನ್ನೋದೆ ಒಂದು ಮ್ಯಾರಥಾನ್ ಎನ್ನುವವರ ಮಧ್ಯೆ ಇಲ್ಲೊಬ್ಬ ಮಹಿಳೆ ಮಗುವಿಗೆ ಜನ್ಮ ನೀಡುವ ಮುನ್ನಾದಿನ ಬರೀ 5 ನಿಮಿಷದಲ್ಲಿ 1 ಮೈಲು ಓಡಿದ್ದಾರೆ. 28 ವರ್ಷದ 9 ತಿಂಗಳ ಗರ್ಭಿಣಿ ಟೈಂ ನೋಡಿಕೊಂಡು ರೇಸ್ ಮುಗಿಸಿದ್ದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಕ್ಯಾಲಿಫೋರ್ನಿಯಾದ ಉಟಾಹ್‌ನಲ್ಲಿ ವಾಸಿಸುವ ಮಹಿಳೆ ಸದ್ಯ ಇಂಟರ್‌ನೆಟ್ ಚಾಂಪಿಯನ್ ಆಗಿದ್ದಾರೆ. ಗಂಡನ ಜೊತೆ ಓಟ ಸ್ಪರ್ಧೆ ಇಟ್ಟು, 5 ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ ಒಂದು ಮೈಲು ಓಡಿದ್ದಾಳೆ ಈಕೆ. ಈಕೆಯ ಗಂಡ ಪತ್ನಿಗೆ ಈ ಸ್ಥಿತಿಯಲ್ಲಿ ಓಡೋಕೆ ಸಾಧ್ಯವಿಲ್ಲ ಎಂದೇ ಅಂದುಕೊಂಡಿದ್ದ.

ಮಹಿಳೆಯರಿಂದ ಮಹಿಳೆಯರಿಗಾಗಿ: ಯೆಮನ್‌ನ ಈ ಕೆಫೆ ನೋಡಿ

ಓಟಗಾತಿ ಮೆಕೆನ್ನಾ ಮೈಲರ್ ಮೊದಲ ಬಾರಿ ಗರ್ಭ ಧರಿಸಿದ್ದರೂ ಫುಲ್ ಆಕ್ಟಿವ್ ಆಗಿದ್ದರು. ಆದ್ರೆ 9ನೇ ತಿಂಗಳಲ್ಲೂ ಹೀಗಿರಬಹುದೆಂದು ಆಕೆ ಅಂದುಕೊಂಡೇ ಇರಲಿಲ್ಲ. ಸ್ವಲ್ಪ ಬ್ರೇಕ್ ಕೊಟ್ಟು ವಿಶ್ರಾಂತಿ ತೆಗೆದುಕೊಳ್ಳೋ ಸಮಯ ಬರಬಹುದೆಂದೇ ಮೆಕೆನ್ನಾ ಅಂದುಕೊಂಡಿದ್ದರು. ಆದ್ರೆ ಅದು ಸುಳ್ಳಾಯ್ತು.

ಪತಿ ಕೊಟ್ಟ ಚಾಲೆಂಜ್ ಎಸೆಪ್ಟ್ ಮಾಡಿದ ಮೆಕೆನ್ನಾ ಓಡಿ 1000 ಡಾಲರ್ ಕೂಡಾ ಗೆದ್ದುಕೊಂಡಿದ್ದಾರೆ. ಅ.11ರಂದು ಮೆಕೆನ್ನಾ ಚಾಲೆಂಜ್ ಸ್ವೀಕರಿಸಿದ್ದರು. ಆಕೆಯ ಪತಿ ಇದರ ವಿಡಿಯೋ ಕೂಡಾ ಮಾಡಿದ್ದಾರೆ. ಇದೀಗ ವಿಡಿಯೋ ವೈರಲ್ ಆಗಿದೆ. ಓಟದ ನಂತರದ ಕೆಲವೇ ದಿನದಲ್ಲಿ ಮೆಕೆನ್ನಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಮಗುವಿಗೆ ಕೆನ್ನಿ ಲಾವ್ ಎಂದು ಹೆಸರಿಟ್ಟಿದ್ದಾರೆ.