ರಿಝು ಸುಝುಕಿ ಅನ್ನೋವಾಕೆ ಜಪಾನಿನ ಪೋರ್ನ್ ಸಿನಿಮಾಗಳ ಡೈರೆಕ್ಟರ್. ಈಕೆ ಹದಿನೇಳನೇ ವಯಸ್ಸಿಗೇ ಪೋರ್ನ್ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಾಳೆ. ಅವಳಿಗೆ ಈ ಇಂಡಸ್ಟ್ರಿ ಪರಿಚಯವಾದದ್ದೇ ಇಂಟೆರೆಸ್ಟಿಂಗ್ ಕಥೆ. ಆಗ ರಿಝು ಓದ್ತಾ ಕೆಲಸದ ಹುಡುಕಾಟದಲ್ಲಿದ್ದಳು. ಈಕೆಯ ಒಬ್ಬ ಗೆಳತಿ ಆದರೆ ಇವಳಿಗಿಂತ ಹಿರಿಯಳು ಅದಾಗಲೇ ಪೋರ್ನ್ ಇಂಡಸ್ಟ್ರಿಯಲ್ಲಿದ್ದಳು.

ಬಡತನವನ್ನೇ ಹಾಸಿ ಹೊದೆಯುವಂಥಾ ಸ್ಥಿತಿಯಲ್ಲಿದ್ದ ಆ ಹುಡುಗಿ ಸಡನ್ನಾಗಿ ಸಖತ್ ಸ್ಟೈಲಿಶ್ ಆಗಿದ್ದು ಬದಲಾದದ್ದು, ದಿನಕ್ಕೊಂದು ಬಗೆಯ ಉಡುಪಿನಲ್ಲಿ ಕಾಣಿಸಿಕೊಂಡು ಶ್ರೀಮಂತಿಕೆಯಿಂದ ಮೆರೆಯುತ್ತಿದ್ದದ್ದು ಕಂಡು ಈ ಚಿಕ್ಕ ಹುಡುಗಿ ರಿಝುಗೆ ಅಚ್ಚರಿ ಮೇಲೆ ಅಚ್ಚರಿ. 

#Feelfree: ಮದುವೆಯಾಗಿ ವರ್ಷವಾದರೂ ಆಕೆ ಬೆತ್ತಲಾಗಿಲ್ಲ

ಒಂದಿನ ತನ್ನ ಗೆಳತಿಯಲ್ಲಿ ಕೇಳ್ತಾಳೆ, ಇದ್ದಕ್ಕಿದ್ದ ಹಾಗೆ ಅದು ಹೇಗೆ ನೀನು ಶ್ರೀಮಂತೆಯಾದೆ, ಇಷ್ಟು ಹಣ ನಿನಗೆ ಎಲ್ಲಿಂದ ಬಂತು ಅಂತ. ಆ ಗೆಳತಿ ರಿಝುವಿಗೆ ಸುಳ್ಳು ಹೇಳಲಿಲ್ಲ. ಬದಲಿಗೆ ತಾನು ಪೋರ್ನ್ ಇಂಡಸ್ಟ್ರಿಗೆ ಬಂದದ್ದು, ಆ ಬಳಿಕ ತನ್ನ ಲೈಫ್ ಚೇಂಜ್ ಆಗ್ತಾ ಹೋಗಿದ್ದನ್ನೇ ವರ್ಣಿಸುತ್ತಾಳೆ. ಇದನ್ನು ಕೇಳಿ ರಿಝುವಿಗೂ ಪೋರ್ನ್ ಇಂಡಸ್ಟ್ರಿ ಬಗ್ಗೆ ಕುತೂಹಲ ಬೆಳೆಯುತ್ತೆ. ಗೆಳತಿಯ ಮಾರ್ಗದರ್ಶನದಲ್ಲಿ ಈಕೆ ಪೋರ್ನ್ ಸಿನಿಮಾ ಮಾಡುವವರನ್ನು ಭೇಟಿಯಾಗ್ತಾಳೆ. ಅಲ್ಲಿಂದ ಮೇಲೆ ಇವಳ ಲೈಫೂ ಚೇಂಜ್ ಆಗುತ್ತಾ ಹೋಗುತ್ತೆ. 

ರಿಝು ಮೊದಲಿಗೆ ಆಫೀಸ್ ನಲ್ಲಿ ರಿಸೆಪ್ಶನಿಸ್ಟ್, ಪಬ್ಲಿಕ್ ರಿಲೇಶನ್ ಆಫೀಸರ್ ಆಗಿ ಕೆಲಸ ಮಾಡ್ತಾಳೆ. ಆದರೆ ಆ ಇಡೀ ಆಫೀಸ್ ನಲ್ಲಿ ಅವಳೊಬ್ಬಳೇ ಕೆಲಸಗಾರ್ತಿ. ಕ್ರಮೇಣ ಇಡೀ ಆಫೀಸ್ ನ ಒವಾಬ್ದಾರಿ ಜೊತೆಗೆ ಪೋರ್ನ್ ಸಿನಿಮಾಗಳನ್ನು ನಿರ್ದೇಶಿಸುವ ಜವಾಬ್ದಾರಿಯೂ ಅವಳ ಹೆಗಲಿಗೇರುತ್ತೆ. 

ಪದೆ ಪದೇ ಲೈಂಗಿಕತೆ ಕನಸು ಬೀಳುತ್ತಿದೆಯೇ? ಇಲ್ಲಿದೆ ಕಾರಣಗಳು

ಬಹುಶಃ ಪೋರ್ನ್ ಇಂಡಸ್ಟ್ರಿಯಲ್ಲಿ ಹುಡುಗಿಯೊಬ್ಬಳು ಡೈರೆಕ್ಟರ್ ಆಗಿರೋದು ಎಲ್ಲಿರಿಗೂ ಶಾಕಿಂಗೇ. ಆದರೆ ರಿಝುಗೆ ಎಲ್ಲಾ ಕೆಲಸದ ಹಾಗೆ ಇದೂ ಒಂದು ಕೆಲಸ ಅಷ್ಟೇ. 

ಈಕೆ ಲೆಸ್ಬಿಯನ್

ಈ ನಿರ್ದೇಶಕಿ ತಾನು ಸಲಿಂಗಿ, ಲೆಸ್ಬಿಯನ್ ಅನ್ನೋದನ್ನು ಒಪ್ಪಿಕೊಳ್ಳುತ್ತಾಳೆ. ಹಾಗಂತ ಈಕೆ ನಿರ್ದೇಶಿಸಿರುವ ಚಿತ್ರಗಳೇನೂ ಸಲಿಂಗ ಕಾಮದ ಪೋರ್ನ್ ಸಿನಿಮಾಗಳಲ್ಲ. ಅವು ಗಂಡು ಹೆಣ್ಣಿನ ಕಾಮದ ಸಿನಿಮಾಗಳೇ. ಆದರೆ ಒಬ್ಬ ಪೋರ್ನ್ ಸ್ಟಾರ್ ನಿರ್ದೇಶಕನಿಗಿಂತೂ ನಿರ್ದೇಶಕಿ ಜೊತೆಗೆ ಕಂಫರ್ಟೇಬಲ್ ಆಗಿರುತ್ತಾಳೆ ಅನ್ನೋ ಸತ್ಯ ಈಕೆಗೆ ಗೊತ್ತಾಗಿದೆ. ಅವರ ಪೀರಿಯೆಡ್ಸ್ ಸಮಸ್ಯೆ, ಮತ್ತೇನಾದರೂ ಸಮಸ್ಯೆಗಳನ್ನು ಹುಡುಗಿಯಲ್ಲಿ ಮುಕ್ತವಾಗಿ ಹಂಚಿಕೊಳ್ಳಬಹುದು ಇತ್ಯಾದಿ ಅದಕ್ಕೆ ಕಾರಣಗಳು. 

ಸ್ಕ್ರೀನ್ ಮೇಲೆ ರಿಯಲ್ ಆಗಿರಬೇಕು

ಒಬ್ಬ ನೀಲಿಚಿತ್ರಗಳ ನಿರ್ದೇಶಕಿಯಾಗಿ ರಿಝು ಹೇಳೋದು, ನೀಲಿತಾರೆಯರು ಸ್ಕ್ರೀನ್ ಮೇಲೆ ರಿಯಲ್ ಆಗಿರಬೇಕು. ಅವಳು ಸಹಜವಾಗಿ ಕಾಮದ ದೃಶ್ಯಗಳಲ್ಲಿ ಅಭಿನಯಿಸಿದರೆ ಹೆಚ್ಚು ಜನರಿಗೆ ಇಷ್ಟವಾಗುತ್ತೆ. ಅವಳ ಸಹಜತೆಯನ್ನು ಹೈಲೈಟ್ ಮಾಡೋ ಚಾಕಚಕ್ಯತೆ ನಿರ್ದೇಶಕಿಗೂ ಇರಬೇಕು ಅಂತಾರೆ ಈ ನಿರ್ದೇಶಕಿ. 'ಯರಿಮನ್ ವೇಗನ್' ಅನ್ನೋ ನೀಲಿ ಚಿತ್ರ ಈಕೆಯ ನಿರ್ದೇಶನದ ಮೊದಲ ಚಿತ್ರ. ದೊಡ್ಡ ಟ್ರಕ್ ಗಳ ಹಿನ್ನೆಲೆಯಲ್ಲಿ ಹೆಣ್ಣೊಬ್ಬಳು ಗಂಡನ್ನು ಹುಡುಕಿ ಅವನ ಜೊತೆಗೆ ಸೆಕ್ಸ್ ಮಾಡೋದು ಇದರ ಹೈಲೈಟ್ ಅಂತಾಳೆ ಈ ನಿರ್ದೇಶಕಿ. ನೀಲಿಚಿತ್ರಗಳಿಗೆ ಸ್ಕ್ರಿಪ್ಟ್ ವರ್ಕ್ ಗಳೆಲ್ಲ ಇರೋದಿಲ್ಲ. ಹಾಗೆಂದು ಕ್ರಿಯೇಟಿವ್ ಕಾಂಸೆಪ್ಟ್ ಇರಲೇಬೇಕಾಗುತ್ತೆ ಅಂತಾಳಿವಳು. 

ಹುಡುಗ್ರೇ ಸೆಕ್ಸ್ ಸಿನಿಮಾ ನೋಡಿ

ಈ ನಿರ್ದೇಶಕಿಗೆ ಒಂದು ವಿಚಾರದಲ್ಲಿ ಬೇಜಾರಿದೆಯಂತೆ. ಅದೇನೆಂದರೆ ಯಂಗ್ ಅಡಲ್ಸ್ ಹಿಂದೆಲ್ಲ ಕದ್ದುಮುಚ್ಚಿ ಆದರೂ ನೀಲಿಚಿತ್ರ ನೋಡ್ತಿದ್ರು. ಆದರೆ ಈಗ ನೋಡಲ್ಲ ಚಿಕ್ಕ ವಯಸ್ಸಿನಲ್ಲೇ ಹುಡುಗ ಹುಡುಗಿಯರಿಗೆ ಸೆಕ್ಸ್ ಮೇಲೆ ಆಸಕ್ತಿ ಹೋಗ್ತಿದೆ. ಅವರು ಸೆಕ್ಸ್ ಬಯಕೆಯನ್ನು ಕೊನೆಯವರೆಗೂ ಬೆಳೆಸಿಕೊಂಡು, ವೃದ್ಧಿಸಿಕೊಂಡು ಹೋಗಬೇಕು. ಇಲ್ಲವಾದರೆ ಲೈಫ್ ಬೋರಿಂಗ್ ಆಗಿರುತ್ತೆ ಅನ್ನೋದು ಈ ನಿರ್ದೇಶಕಿಯ ಮಾತು.