ಮಧ್ಯಪ್ರದೇಶದ ಭೋಪಾಲ್ ನಲ್ಲಿ ಇಡೀ ದೇಶವೇ ಬೆಚ್ಚಿ ಬೀಳುವಂತಹ ಘಟನೆ ನಡೆದಿದೆ. ಪೊಲೀಸನೊಬ್ಬ ನಡುರಾತ್ರಿ ರಸ್ತೆಯಲ್ಲಿದ್ದ ಮಹಿಳೆಗೆ ನೆರವು ನೀಡುವುದನ್ನು ಬಿಟ್ಟು ಆಕೆಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿರುವುದು “ಯಾರು ರಕ್ಷಕರು?’ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಯಾವುದೇ ರೀತಿಯ ಸಮಸ್ಯೆಯಾದರೆ ಸಾಮಾನ್ಯವಾಗಿ ಎಲ್ಲರೂ ನೆನಪಿಸಿಕೊಳ್ಳುವುದು ಪೊಲೀಸರನ್ನು. ಅದರಲ್ಲೂ ರಕ್ಷಣೆಯ ವಿಚಾರದಲ್ಲಿ ಮೊಟ್ಟಮೊದಲು ನೆನಪಿಗೆ ಬರುವ ಹೆಸರೇ ಪೊಲೀಸರದ್ದು. ಕಳ್ಳಕಾಕರಿಂದ ರಕ್ಷಣೆಯಾಗಿರಲಿ, ಮಹಿಳೆಯರ ರಕ್ಷಣೆ ವಿಚಾರದಲ್ಲಾಗಲೀ, ಪೊಲೀಸರೆಂದರೆ ಜನರ ರಕ್ಷಕರು ಎನ್ನುವ ಭಾವನೆಯೇ ಎಲ್ಲರಲ್ಲೂ ದಟ್ಟವಾಗಿದೆ. ಆದರೆ, ಕೆಲವೊಮ್ಮೆ ರಕ್ಷಕರೆನಿಸಿರುವ ಪೊಲೀಸರೇ ಭಕ್ಷಕರಾಗುತ್ತಾರೆ. ಮಧ್ಯಪ್ರದೇಶದ ಭೋಪಾಲದಲ್ಲಿ ಇಂಥದ್ದೇ ಒಂದು ಘಟನೆ ನಡೆದಿದ್ದು, ಈ ಕುರಿತ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗುತ್ತಿದೆ. ಅಲ್ಲದೆ, ದೇಶದ ಎಲ್ಲ ಭಾಗಗಳ ಪೊಲೀಸರು ತಲೆ ತಗ್ಗಿಸುವಂತೆ ಮಾಡಿದೆ. ಏಕೆಂದರೆ, ಪೊಲೀಸರು ತಮ್ಮದಾದ ಯಾವುದೇ ನೋವು, ಭಾವನೆಗಳಲ್ಲಿದ್ದರೂ ಅವರ ಪ್ರಾಥಮಿಕ ಕರ್ತವ್ಯ ನಾಗರಿಕರನ್ನು ಸುರಕ್ಷಿತವಾಗಿಡುವುದಾಗಿದೆ. ಇದೇ ಭಾವನೆ ಸಾಮಾನ್ಯವಾಗಿ ಎಲ್ಲ ಪೊಲೀಸರಲ್ಲೂ ಕಂಡುಬರುತ್ತದೆ. ಇದು ಎಲ್ಲ ಸಂದರ್ಭಗಳಲ್ಲೂ ಸತ್ಯವಾದ ಮಾತು. ಯಾರೋ ಒಬ್ಬ ನಾಗರಿಕ ಇರಲಿ ಅಥವಾ ಜನಸ್ತೋಮವೇ ನೆರೆದಿರಲಿ, ಅಲ್ಲಿ ಸುರಕ್ಷತೆಯೇ ಪ್ರಧಾನ ಅಂಶ. ಆದರೆ, ಮಹಿಳೆಯೊಬ್ಬಳು ಒಂಟಿಯಾಗಿ ಸಿಕ್ಕಳೆಂದು ಲೈಂಗಿಕತೆಗೆ ಪ್ರಚೋದನೆ ನೀಡುವುದು, ಲೈಂಗಿಕ ಕಿರುಕುಳ ನೀಡಲು ಯತ್ನಿಸುವುದು ನಾಚಿಕೆಯ ಸಂಗತಿ.
ಹೌದು, ಇಂಥದ್ದೊಂದು ಘಟನೆ ಮಧ್ಯಪ್ರದೇಶದ (Madhya Pradesh) ರಾಜಧಾನಿ ಭೋಪಾಲ್ (Bhopal) ನಲ್ಲಿ ನಡೆದಿದೆ. ಪೊಲೀಸನೊಬ್ಬ (Police) ರಾತ್ರಿ ಸಮಯದಲ್ಲಿ ರಸ್ತೆಯ ಪಕ್ಕ ಒಬ್ಬಳೇ ನಿಂತಿದ್ದ ಮಹಿಳೆಯ (Woman) ಬಳಿಗೆ ಹೋಗಿ ತನ್ನ ಬೈಕ್ ನಿಲ್ಲಿಸಿ ಲೈಂಗಿಕ (Sexual) ಕಿರುಕುಳ ನೀಡುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಅಷ್ಟೇ ಅಲ್ಲ, ಸೋಷಿಯಲ್ ಮೀಡಿಯಾದಲ್ಲಿ (Social Media) ಈ ವಿಡಿಯೋ ವೈರಲ್ ಆಗಿದೆ.
International Women's Day 2023 : ಮಹಿಳಾ ಪೊಲೀಸರಿಂದಲೇ ಇಡೀ ರಾತ್ರಿ ಕರ್ತವ್ಯ!
ಏನಿದೆ ವಿಡಿಯೋದಲ್ಲಿ?
ವಿಡಿಯೋದಲ್ಲಿ ಕಂಡುಬರುವುದಿಷ್ಟು. ಒಬ್ಬ ಮಹಿಳೆ ರಸ್ತೆಯ ಪಕ್ಕ (Road Side) ನಿಂತಿದ್ದಾಳೆ. ಪೊಲೀಸನೊಬ್ಬ ಬೈಕ್ ನಲ್ಲಿ ಆಕೆಯ ಬಳಿಗೆ ಹೋಗಿ ನಿಲ್ಲುತ್ತಾನೆ. ಬಹುಶಃ ವಿಚಾರಣೆ ಮಾಡಲು ಇರಬೇಕು ಎಂದು ಅನ್ನಿಸುವ ಹೊತ್ತಿಗೆ ಆತ ಆಕೆಯ ಮೇಲೆ ಕೈ ಹಾಕುತ್ತಾನೆ. ಅದಕ್ಕೂ ಮುನ್ನ ಆತ ಕೇಳುವ ಪ್ರಶ್ನೆಗೆ ಆಕೆ ಉತ್ತರಿಸಿಬೇಕು. ಬಳಿಕ, ಆತ ಬೈಕ್ (Bike) ಮೇಲೆ ಕುಳಿತುಕೊಂಡು ತನ್ನ ಮೇಲೆ ಕೈ ಹಾಕಲು ಯತ್ನ ಮಾಡಿದಾಗ ಆ ಮಹಿಳೆ ಅಲ್ಲಿಂದ ಮುಂದಕ್ಕೆ ಸಾಗುತ್ತಾಳೆ. ಆ ಪೊಲೀಸ್ ಬೈಕ್ ನಲ್ಲಿ ಆಕೆಯನ್ನು ಹಿಂಬಾಲಿಸಿದಾಗ, ಆಕೆ ಪಕ್ಕದ ಮುಖ್ಯ ರಸ್ತೆಗೆ ಓಡಿ ಹೋಗಿ ಅಲ್ಲಿಂದ ಮುಂದೆ ಹೋಗುತ್ತಾಳೆ. ಅಚ್ಚರಿ ಎಂದರೆ ಈ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವುದಲ್ಲ. ಯಾರೋ ಮೊಬೈಲ್ ಮೂಲಕ ವಿಡಿಯೋ ಮಾಡಿದ್ದಾರೆ.
Inspirational Story: ಮಗುವಿಗಾಗಿ ಇಂಥದ್ದೊಂದು ಕಾರ್ಯಕ್ಕೆ ಕೈ ಹಾಕಿದ ಸಾಧಕಿ
ಏನೇ ಆಗಲಿ, ಪೊಲೀಸನೊಬ್ಬನ ಈ ಕೃತ್ಯ ಇಡೀ ದೇಶದ ಪೊಲೀಸರ ನೈತಿಕತೆಯನ್ನು ಪ್ರಶ್ನಿಸುವಂತಿದೆ. ಇದೇ ಕಾರಣಕ್ಕೆ ಈಗ ರಾಜಕೀಯ ಕೆಸರೆರಚಾಟಗಳು ಸಹ ಆರಂಭವಾಗಿವೆ.
