ಹೊಸದಾಗಿ ಬೆಂಗಳೂರಿಗೆ ಕಾಲಿಟ್ಟ ಯುವತಿ ಬಿಚ್ಚಿಟ್ಟ ರಾತ್ರಿ 10.30ರ ಕತೆ, ಅಂದು ಏನಾಯ್ತು?
ಇಂಟರ್ನ್‌ಶಿಪ್‌ಗಾಗಿ ಬೆಂಗಳೂರಿಗೆ ಆಗಮಿಸಿದ ಯುವತಿ ರಾತ್ರಿ 10.30ರ ವೇಳೆ ಫೋನ್ ಸ್ವಿಚ್ ಆಫ್ ಆಗಿದೆ. ಹೋಗಬೇಕಾದ ದಾರಿ ಗೊತ್ತಿಲ್ಲ. ಯಾರೊಬ್ಬರು ಪರಿಚಯವಿಲ್ಲ, ಇತ್ತ ಫೋನ್ ಕೂಡ ಇಲ್ಲ. ಆದರೆ ಆ ರಾತ್ರಿ ಹೃದಯತುಂಬಿ ಬಂತು, ಇದು ಅಸಲಿ ಬೆಂಗಳೂರು ಎಂದು ಯುವತಿ ಹೇಳಿಕೊಂಡಿದ್ದಾಳೆ. ಅಷ್ಟಕ್ಕೂ ರಾತ್ರಿ 10.30ಕ್ಕೆ ಏನಾಯ್ತು?
ಬೆಂಗಳೂರು(ಜ.15) ಸಿಲಿಕಾನ್ ಸಿಟಿ ಬೆಂಗಳೂರಿಗೆ ಪ್ರತಿ ನಿತ್ಯ ಉದ್ಯೋಗ, ವಿದ್ಯಾಭ್ಯಾಸ, ತರಬೇತಿ ಸೇರಿದಂತೆ ಹಲವು ಕಾರಣಗಳಿಗೆ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಭಾರತದ ಪ್ರಮುಖ ನಗರಗಳಲ್ಲಿ ಬೆಂಗಳೂರು ಒಂದು. ಹೊರ ರಾಜ್ಯಗಳಿಂದ ಆಗಮಿಸುವ ಮಂದಿಗೆ ಕಾತುರದ ಜೊತೆಗೆ ಸಹಜವಾಗಿ ಆತಂಕವೂ ಇರುತ್ತದೆ. ಹೀಗೆ ಇಂಟರ್ನ್‌ಶಿಪ್‌ಗಾಗಿ ಯುವತಿ ಹೊರರಾಜ್ಯದಿಂದ ಬೆಂಗಳೂರಿಗೆ ಆಗಮಿಸಿದ್ದಾಳೆ. ಭಾಷೆ ಗೊತ್ತಿಲ್ಲ, ಸ್ಥಳದ ಬಗ್ಗೆಯೂ ಮಾಹಿತಿ ಇಲ್ಲ. ಆದರೆ ರಾತ್ರಿ 10.30ರ ವೇಳೆಗೆ ಯುವತಿಯ ಫೋನ್ ಸ್ವಿಚ್ ಆಫ್ ಆಗಿದೆ. ಬುಕ್ ಮಾಡಿದ ಯೂಲು ಬೈಕ್ ಸರ್ವೀಸ್ ಚಾರ್ಜ್ ಕೂಡ ಮುಗಿದಿದೆ. ದಾರಿ ಗೊತ್ತಿಲ್ಲ, ಯಾರೂ ಪರಿಚಯವಿಲ್ಲ. ಕತ್ತಲು ಆವರಿಸಿದೆ. ಆದರೆ ಭಯ ಆತಂಕದಿಂದಿದ್ದ ಯುವತಿಗೆ ಅಸಲಿ ಬೆಂಗಳೂರಿನ ಹೃದಯ ಶ್ರೀಮಂತಿಕೆ ಅರಿವಾಗಿದೆ. ಈ ಕುರಿತು ಯುವತಿ ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದಾಳೆ.
ಕೆಲ ಕ್ರೇಜಿ ಘಟನೆಗಳು ನಡೆದು ಹೋಯ್ತು ಎಂದು ಆಕೆ ತನಗಾದ ಬೆಂಗಳೂರಿನ ಅನುಭವವನ್ನು ಬಹಿರಂಗಡಿಸಿದ್ದಾಳೆ. ಕೆಲ ದಿನಗಳ ಹಿಂದೆ ನಾನು ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದೆ. ಇಂಟರ್ನ್‌ಶಿಪ್ ಕಾರಣ ಬೆಂಗಳೂರಿಗೆ ಆಗಮಿಸಿದ್ದೆ. ಸಂಜೆ ನಾನು ಹಾಗೂ ಗೆಳತಿ ಇಬ್ಬರು ಇಂದಿರಾನರಗದ ರೆಸ್ಟೋರೆಂಟ್‌ಗೆ ತೆರಲಿದ್ದೆವು. ಊಟ ಮುಗಿಸಿ ಗೆಳತಿ ಹಾಗೂ ನಾನು ಇಬ್ಬರು ಅಲ್ಲಿಂದ ಹೊರಟೆವು. ಗೆಳತಿ ಬೇರೆ ದಾರಿಯಾಗಿದ್ದರೆ, ನನ್ನದು ಹೆಚ್‌ಎಸ್‌ಆರ್ ಲೇಔಟ್. ಯೂಲು ಬೈಕ್ ಸರ್ವೀಸ್ ಬುಕ್ ಮಾಡಿದ್ದೆ. ಯುಲು ಬೈಕ್ ಮೂಲಕ ಹೆಚ್‌ಎಸ್‌ಆರ್ ಲೇಔಟ್ ತೆರಳುತ್ತಿದ್ದಂತೆ ಬೈಕ್ ಕೇವಲ 10 ರಿಂದ 13 ಕಿ.ಮೀ ಚಾರ್ಜ್ ಮಾತ್ರ ಬಾಕಿ ಉಳಿದಿತ್ತು. ಇತ್ತ ನನ್ನ ಫೋನ್‌ನಲ್ಲಿ 40 ಪರ್ಸೆಂಟ್ ಚಾರ್ಜ್ ಇತ್ತು.
ರಿಸೆಪ್ಷನಿಸ್ಟ್ ಆಗಿ ಬಂದಿದ್ದ ಹೆಣ್ಣು ಮಗಳು ಈಗ ಜಗತ್ತಿನ ಶ್ರೀಮಂತ ಕ್ರಿಕೆಟ್ ಸಂಸ್ಥೆಯ ಪಿಚ್ ಕ್ಯುರೇಟರ್!
ಮ್ಯಾಪ್ ಹಾಕಿ ಕೆಲವೇ ದೂರ ತೆರಳುತ್ತದ್ದಂತೆ ನನ್ನ ಫೋನ್ ಚಾರ್ಜ್ ಶೇಕಡಾ 30ಕ್ಕೆ ಇಳಿದಿತ್ತು. ಸಿಗ್ನಲ್ ರೆಡ್ ಬಿದ್ದಿತ್ತು. ಹೀಗಾಗಿ ಗ್ರೀನ್‌ಗಾಗಿ ಕಾಯುತ್ತಿದ್ದೆ. ಆದರೆ ಅಚಾನಕ್ಕಾಗಿ ಬ್ಯಾಟರಿ ಲೋ ಎಂದದು ಸ್ವಿಚ್ ಆಫ್ ಆಗಿತ್ತು. ಸಿಗ್ನಲ್‌ನಲ್ಲಿ ನಿಂತಿದ್ದ ನನಗೆ ಏನು ಮಾಡಬೇಕು ಅನ್ನೋದೇ ತೋಚದಾಯಿತು. ಕಾರಣ ಹೆಚ್ಎಸ್ಆರ್ ಲೇಔಟ್ ಸೇರಿಕೊಳ್ಳುವ ದಾರಿ ಗೊತ್ತಿಲ್ಲ. ಸಾಹಸ ಮಾಡಿ ಹೋಗಲು ಯುಲು ಬೈಕ್‌ನಲ್ಲೂ ಚಾರ್ಜ್ ಇಲ್ಲ. ನಗರವೂ ಹೊಸದು, ಭಾಷೆ ಗೊತ್ತಿಲ್ಲ. ಜೊತೆಗೆ ರಾತ್ರಿ 10.30ರ ಸಮಯ ಎಂದು ರೆಡ್ಡಿಟ್‌ನಲ್ಲಿ ಯುವತಿ ಹೇಳಿಕೊಂಡಿದ್ದಾಳೆ.
ಫೋನ್ ಸ್ವಿಚ್ ಆಫ್ ಆದ ಕೂಡಲೇ ನನ್ನ ಆತಂಕ ಹೆಚ್ಚಾಯಿತು. ಬೇರೆ ದಾರಿ ಇಲ್ಲದೆ ಪಕ್ಕದಲ್ಲಿ ಸ್ಕೂಟರ್‌ನಲ್ಲಿದ್ದ ವ್ಯಕ್ತಿಯಲ್ಲಿ ಹೆಚ್ಎಸ್ಆರ್ ಲೇಟೌಟ್ ತೆರಳುವುದು ಹೇಗೆ? ದಾರಿ ತಿಳಿಸುವಿರಾ ಎಂದು ಕೇಳಿದೆ. ಸ್ಕೂಟರ್‌ನಲ್ಲಿದ್ದ ಅಂಕಲ್ ಫ್ರೆಂಡ್ಲಿಯಾಗಿ ದಾರಿ ಹೇಳಿಕೊಟ್ಟರು. ಇದೇ ವೇಳೆ ಸ್ವಲ್ಪ ಧೈರ್ಯ ಮಾಡಿ ನನ್ನ ಪರಿಸ್ಥಿತಿ ವಿವರಿಸುವ ಪ್ರಯತ್ನ ಮಾಡಿದೆ. ತಕ್ಷಣ ಅಂಕಲ್ ಸ್ಕೂಟರ್‌ನಿಂದ ಚಾರ್ಜಿಂಗ್ ಕೇಬಲ್ ತೆಗೆದು ಫೋನ್ ಚಾರ್ಜ್ ಮಾಡಲು ಪ್ಲಗ್ ಮಾಡಿದರು. ಅಂಕಲ್ ಸ್ಕೂಟರ್‌ನಿಂದ ಫೋನ್ ಚಾರ್ಜ್ ಮಾಡುವ ಪ್ರಯತ್ನ ಕೈಗೂಡಲಿಲ್ಲ. ಕಾರಣ ನನ್ನ ಫೋನ್ ಏನೇ ಮಾಡಿದರೂ ಚಾರ್ಜ್ ಆಗಲಿಲ್ಲ. ಅಷ್ಟೊತ್ತಿಗೆ ಸಿಗ್ನಲ್ ಗ್ರೀನ್ ಬಿದ್ದಿತ್ತು. ನನ್ನ ಆತಂಕ ಮತ್ತಷ್ಟು ಹೆಚ್ಚಾಯಿತು.
Something crazyy happened yesterday
byu/Zealousideal_Clue284 inbangalore
ನಾನು ರಸ್ತೆಯ ಬದಿಗೆ ತೆರಲಿದೆ. ಅಂಕಲ್ ಅವರ ಸ್ಕೂಟರ್ ಮೂಲಕ ರಸ್ತೆಗೆ ಬದಿಗೆ ಬಂದು ನಿಲ್ಲಿಸಿದರು. ಫೋನ್ ಚಾರ್ಜ್ ಮಾಡುವ ಪ್ರಯತ್ನ ಮಾಡಿದರು. ಆದರೆ ಸಾಧ್ಯವಾಗಲಿಲ್ಲ. ಬಳಿಕ ಅಂಕಲ್ ಅಡಾಪ್ಟರ್ ಹಾಗೂ ಕೇಬಲ್ ನೀಡಿ ಮಗು ನೀನು ಪಕ್ಕದಲ್ಲೇ ಕೆಲ ಅಂಗಡಿಗಳಿವೆ. ಅಲ್ಲಿ ಚಾರ್ಜ್ ಮಾಡಿ. ನಿಮ್ಮ ಕಚೇರಿ ಕಡೆ ಬಂದಾಗ ಚಾರ್ಜರ್ ಪಡೆಯುತ್ತೇನೆ ಎಂದರು. ಕೆಲ ದೂರ ಮುಂದೆ ಸಾಗಿದ ನಾನು. ದೋಸೆ ಹೊಟೆಲ್‌ನಲ್ಲಿ ಫೋನ್ ಚಾರ್ಜ್ ಮಾಡಲೇ ಎಂದು ಕೇಳಿದ್ದೆ. ಸರಿ ಎಂದು ನನ್ನ ಫೋನ್ ಚಾರ್ಜಿಂಗ್ ಮಾಡಲು ಅನುವು ಮಾಡಿಕೊಟ್ಟರು. ದೋಸೆ ಅಂಗಡಿಯ ಮಾಲೀಕ , ಸಿಬ್ಬಂದಿಗಳು ನನಗೆ ಸಹಾಯ ಮಾಡಿದರು. ಫೋನ್ ಚಾರ್ಜ್ ಮಾಡಿ ಆನ್ ಮಾಡಿದ ಬಳಿಕ ಮ್ಯಾಪ್ ಹಾಕಿ ಪಿಜಿ ತಲುಪಿದೆ. ಎಲ್ಲರು ಅನಾಮಿಕರಾಗಿದ್ದರು. ಆದರೆ ಎಲ್ಲರೂ ನನಗೆ ಸಹಾಯ ಮಾಡಿದರು. ನಾನು ಸುರಕ್ಷಿತವಾಗಿ ಪಿಜಿ ತಲುಪಿದೆ. ಅಂಕಲ್ ಹಾಗೂ ದೋಸೆ ಅಂಗಡಿ ಮಾಲೀಕರಿಗೆ ಧನ್ಯವಾದ. ಆರಂಭಿಕ ದಿನದಲ್ಲೇ ಬೆಂಗಳೂರಿನಲ್ಲಿ ಉತ್ತಮ ಅನುಭವ ನನ್ನದಾಗಿದೆ ಎಂದು ಬೆಂಗಳೂರಿಗರ ಹೃದಯ ಶ್ರೀಮಂತಿಕೆಯನ್ನು ಯುವತಿ ಕೊಂಡಾಡಿದ್ದಾರೆ.
ಬೆಂಗಳೂರು ಟ್ರಾಫಿಕ್ ಜಾಮ್ ಶಾಕಿಂಗ್ ರಿಪೋರ್ಟ್; ವಿಶ್ವದಲ್ಲೇ 3ನೇ ಸ್ಥಾನ ಪಡೆ ಸಿಲಿಕಾನ್ ಸಿಟಿ!