ಗರ್ಲ್ ಫ್ರೆಂಡ್ ಪಾದದ ಕೆಳಗೆ ನೋಟಿನ ಕಂತೆ, ಇಷ್ಟು ದುಡ್ಡು ನೋಡಿ ನೆಟ್ಟಿಗರು ದಂಗು!
ಈ ವ್ಯಕ್ತಿ ಬಳಿ ಹಣ ಎಲ್ಲಿಂದ ಬರುತ್ತೋ ಗೊತ್ತಿಲ್ಲ… ಕಂತೆ ಕಂತೆ ಹಣವನ್ನು ಗರ್ಲ್ ಫ್ರೆಂಡ್ ಕಾಲಿನಡಿ ಹಾಕ್ತಾನೆ. ಆತನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಣ ಇಲ್ಲದೆ ಹೋದೋರಿಗೆ ಹಣ ಮಾಡುವ ಚಿಂತೆ. ಶ್ರೀಮಂತರಿಗೆ ಅದನ್ನು ಹೇಗೆ ಖರ್ಚು ಮಾಡೋದು ಎನ್ನುವ ಚಿಂತೆ. ಹಣವುಗಳ್ಳವರು ಅನೇಕ ಕಡೆ ಹೂಡಿಕೆ ಮಾಡಿ ತೆರಿಗೆ ಉಳಿತಾಯ ಮಾಡುವ ಪ್ರಯತ್ನ ಮಾಡ್ತಾರೆ. ಮತ್ತೆ ಕೆಲವರು ಇಲ್ಲದವರಿಗೆ ಸಣ್ಣ ಪ್ರಮಾಣದಲ್ಲಿಯಾದ್ರೂ ದಾನ ಮಾಡ್ತಾರೆ. ಇನ್ನು ಕೆಲ ವಿಚಿತ್ರ ಜನರಿದ್ದಾರೆ, ತಮ್ಮ ಬಳಿ ಹಣವಿದೆ ಎಂಬುದನ್ನು ತೋರಿಸಿಕೊಳ್ಳಲು ನಾನಾ ಪ್ರಯತ್ನ ಮಾಡ್ತಾರೆ. ಐಷಾರಾಮಿ ವಸ್ತುಗಳ ಖರೀದಿ ಜೊತೆಗೆ ಹಣವನ್ನು ನೀರಿನಂತೆ ಖರ್ಚು ಮಾಡ್ತಾರೆ. ನೋಟುಗಳನ್ನು ಹೂವಿನಂತೆ ಹಾರ ಮಾಡಿ ಹಾಕಿಕೊಂಡ ಕೆಲವರನ್ನು ನೀವು ನೋಡಿರಬಹುದು. ಆದ್ರೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವ್ಯಕ್ತಿ ಒಂದು ಕೈ ಮುಂದಿದ್ದಾನೆ. ತನ್ನ ಗರ್ಲ್ ಫ್ರೆಂಡ್ ಗೆ ನೋಟಿನ ಹಾರ ಹಾಕಿಲ್ಲ ಇಲ್ಲವೇ ನೋಟಿನ ಮಳೆಗರೆದಿಲ್ಲ. ಆತನ ಸ್ಟೈಲ್ ಭಿನ್ನವಾಗಿದ್ದು, ನೋಡಿದ ಜನರು ಹುಬ್ಬೇರಿಸಿದ್ದಾರೆ. ಇಷ್ಟೊಂದು ಶ್ರೀಮಂತ ವ್ಯಕ್ತಿ ಹಣವನ್ನು ಹೀಗೆ ಬಳಕೆ ಮಾಡ್ತಿದ್ದಾನಾ ಎಂದು ಪ್ರಶ್ನೆ ಮಾಡಿದ್ದಾರೆ. ಅಷ್ಟಕ್ಕೂ ವೈರಲ್ ಆದ ಆ ವಿಡಿಯೋದಲ್ಲಿ ಏನಿದೆ ಎಂಬುದರ ವಿವರ ಇಲ್ಲಿದೆ.
mr.thank.you ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋ (Video) ದಲ್ಲಿ ಕಾಣಿಸಿಕೊಂಡ ವ್ಯಕ್ತಿ ಅತ್ಯಂತ ಶ್ರೀಮಂತ. ಸ್ವಂತ ಹೆಲಿಕಾಪ್ಟರ್ (Helicopter) ಹೊಂದಿರುವ ವ್ಯಕ್ತಿ, ಹೆಲೆಕಾಪ್ಟರ್ ನಿಂದ ತನ್ನ ಗೆಳತಿಯನ್ನು ಕೆಳಗೆ ಇಳಿಸ್ತಾನೆ. ಗೆಳತಿ ಕಾಲುಗಳು ಭೂಮಿಗೆ ತಾಗದಂತೆ ನೋಡಿಕೊಂಡಿರುವ ಈತ ನೋಟುಗಳನ್ನು ಆಕೆ ಕಾಲಿನ ಕೆಳಗೆ ಇಟ್ಟಿದ್ದಾನೆ. ನೀವು ನೋಟಿನ ಕಂತೆಗಳು ಅಲ್ಲಿ ಹರಡಿರುವುದನ್ನು ನೋಡ್ಬಹುದು. ಕೆಲ ನೋಟುಗಳನ್ನು ಇನ್ನೂ ಬಳಸಲಾಗಿಲ್ಲ. ಅದರ ಮೇಲೆ ಪಾಲಿಥಿನ್ ಕವರ್ ಹಾಗೆ ಇದೆ. . ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋವನ್ನು ಇದುವರೆಗೆ ಎರಡು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ವಿಡಿಯೋ ಅತ್ಯಂತ ವೇಗವಾಗಿ ವೈರಲ್ ಆಗ್ತಿದೆ.
ಈ ಹಣ ನಿಜವಾದದ್ದಾ? ಆತನ ಬಳಿ ಇಷ್ಟೊಂದು ಹಣ ಇದ್ಯಾ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಹಣವನ್ನು ಗೌರವಿಸಿ ಎಂದಿದ್ದಾರೆ. ಮತ್ತೊಬ್ಬರು, ಇಷ್ಟೊಂದು ಹಣ ನಿಮ್ಮ ಬಳಿ ಇದ್ದಿದ್ದೇ ಆದಲ್ಲಿ ನೀವು ಸಾಯುವ ಮುನ್ನ ಒಂದಿಷ್ಟು ಒಳ್ಳೆಯ ಕೆಲಸಗಳನ್ನು ಮಾಡಿ ಎಂದು ಸಲಹೆ ನೀಡಿದ್ದಾರೆ.
ಈ ರಾಶಿಯವರು ಚುಂಬಿಸುವುದರಲ್ಲಿ ನಿಸ್ಸೀಮರು.. ನೀವು ಪಟ್ಟಿಯಲ್ಲಿದ್ದೀರಾ?
ಮಿಸ್ಟರ್ ಥ್ಯಾಂಕ್ಯೂ ಯಾರು? : ಸಾಮಾಜಿಕ ಜಾಲತಾಣದಲ್ಲಿ ಮಿಸ್ಟರ್ ಥ್ಯಾಂಕ್ಯೂ ಪ್ರಸಿದ್ಧಿ ಪಡೆದಿದ್ದಾರೆ. ಮಿಸ್ಟರ್ ಥ್ಯಾಂಕ್ಯೂ ಇನ್ಸ್ಟಾ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಖಾತೆಗಳನ್ನು ಹೊಂದಿದ್ದು, ವಿಡಿಯೋಗಳನ್ನು ಹರಿಬಿಡ್ತಾರೆ. ಅವರ ಖಾತೆಯಲ್ಲಿ ನಾನಾ ವಿಡಿಯೋ ನೋಡ್ಬಹುದು. ಆದ್ರೆ ಬಹುತೇಕ ಎಲ್ಲ ವಿಡಿಯೋದಲ್ಲಿ ಹಣದ ಕಂತೆಗಳಿರುತ್ತವೆ. ಕೆಲವು ಕಡೆ ಮಿಸ್ಟರ್ ಥ್ಯಾಂಕ್ಯೂ ಹಣದ ಮೇಲೆ ಕುಳಿತಿದ್ದಾರೆ ಇಲ್ಲವೆ ಹಣದ ಮೇಲೆ ಮಲಗಿದ್ದಾರೆ. ಮತ್ತೆ ಕೆಲ ವಿಡಿಯೋದಲ್ಲಿ ಹಣ ಹಂಚೋದನ್ನು ನೀವು ನೋಡ್ಬಹುದು. ಕಾರಿನ ಮೇಲೆ ಬರುವ ಮಿಸ್ಟರ್ ಥ್ಯಾಂಕ್ಯೂ, ಹುಡುಗಿಯರಿರುವ ಜಾಗಕ್ಕೆ ಹೋಗಿ ನಿಲ್ತಾರೆ. ಅಲ್ಲಿ ನಾನು ಯಾರು ಗೊತ್ತಾ ಅಂತಾ ಪ್ರಶ್ನೆ ಮಾಡ್ತಾರೆ. ಅದಕ್ಕೆ ಅವರು ಉತ್ತರ ನೀಡಿದ ನಂತ್ರ ಇನ್ಸ್ಟಾಗ್ರಾಮ್ ನಲ್ಲಿ ನನ್ನನ್ನು ಫಾಲೋ ಮಾಡಿದ್ದೀರಾ ಎಂದು ಕೇಳ್ತಾರೆ. ಅವರು ಹೌದು ಎನ್ನುತ್ತಿದ್ದಂತೆ ಅವರಿಗೆ ಒಂದು ಕಟ್ ನೋಟನ್ನು ನೀಡಿ ಥ್ಯಾಂಕ್ಯೂ ಅಂತಾ ಹೋಗ್ತಾರೆ. ಮಿಸ್ಟರ್ ಥ್ಯಾಂಕ್ಯೂ ಬಳಿ ಇರೋದು ನಿಜವಾದ ಹಣವೇ ಎಂಬುದು ಗೊತ್ತಿಲ್ಲ. ಅನೇಕರು ಇದು ನಕಲಿ ಎಂದು ಕಮೆಂಟ್ ಮಾಡಿದ್ದಾರೆ.
ಪ್ರಗ್ನೆಂಟ್ ಆಗ್ತಾ ಇಲ್ವಾ? ಈ ಆರು ಕಾರಣಗಳನ್ನು ಕ್ರಾಸ್ ಚೆಕ್ ಮಾಡಿ..