ಬಾಹುಬಲ ತೋರಿಸಿದ ಮಹಿಳೆಯ ಗಂಡೆಂದು ಕರೆದು ಅವಮಾನಿಸಿದ ನೆಟ್ಟಿಗರು: ದಿಟ್ಟ ಉತ್ತರ ಕೊಟ್ಟ ಜಾಣೆ
ಮಹಿಳಾ ಫಿಟ್‌ನೆಸ್ ಕೋಚ್ ಒಬ್ಬರು ತಮ್ಮ ವೈಯಕ್ತಿಕ ಬೆಳವಣಿಗೆ ದೇಹದ ಫಿಟ್‌ನೆಸ್‌ನಲ್ಲಾದ ಬದಲಾವಣೆ ತೋರಿಸುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದಕ್ಕೆ ಜನ ಮಾತ್ರ ವ್ಯತಿರಿಕ್ತವಾಗಿ ಕೆಟ್ಟ ಕೆಟ್ಟದ್ದಾಗಿ ಕಾಮೆಂಟ್ ಮಾಡಿದ್ದಾರೆ.
ನವದೆಹಲಿ: ಇದು ಸಾಮಾಜಿಕ ಜಾಲತಾಣ ಯುಗ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಸಾಮಾನ್ಯವಾಗಿದೆ. ಅದರ ಜೊತೆಗೆ ಇತ್ತೀಚೆಗೆ ಏನಾದರೊಂದು ಕೆಲಸ ಮಾಡಿದಾಗ ಅದು ಒಳ್ಳೆಯದೇ ಇರಲಿ ಕೆಟ್ಟದೇ ಇರಲಿ ಅಕ್ಕಪಕ್ಕದ ಮನೆಯವರ ಟೀಕೆಗಳಿಗಿಂತ ಇಂಟರ್‌ನೆಟ್‌ನಲ್ಲಿಯೇ ಟೀಕಿಸುವವರ ಸಂಖ್ಯೆ ಭಾರಿ ಹೆಚ್ಚಳವಾಗಿದೆ. ಅದೇ ರೀತಿ ಈಗ ದೆಹಲಿಯ 23 ವರ್ಷದ ಮಹಿಳಾ ಫಿಟ್‌ನೆಸ್ ಕೋಚ್ ಒಬ್ಬರು ತಮ್ಮ ವೈಯಕ್ತಿಕ ಬೆಳವಣಿಗೆ ದೇಹದ ಫಿಟ್‌ನೆಸ್‌ನಲ್ಲಾದ ಬದಲಾವಣೆ ತೋರಿಸುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದಕ್ಕೆ ಜನ ಮಾತ್ರ ವ್ಯತಿರಿಕ್ತವಾಗಿ ಕೆಟ್ಟ ಕೆಟ್ಟದ್ದಾಗಿ ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಸುಮ್ಮನಿರದ ಫಿಟ್‌ನೆಸ್ ಕೋಚ್ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.
ಫಿಟ್‌ನೆಸ್ ಕೋಚ್ ಅಂಚಲ್ ಅನೇಜಾ ಅವರು ತಮ್ಮ ಮೊದಲು ಹಾಗೂ ನಂತರದ ಫೋಟೋಗಳನ್ನು ಹಾಕಿ ತಮ್ಮ ಫಿಟ್ನೆಸ್ ಜರ್ನಿ ಬಗ್ಗೆ ತೋರಿಸಿದ್ದರು. ಆದರೆ ಜನ ಆಕೆಯನ್ನು ಪ್ರೋತ್ಸಾಹಿಸುವ ಬದಲು ಟೀಕಿಸಲು ಶುರು ಮಾಡಿದ್ದಾರೆ. ಎದೆಯ ಫಿಟ್‌ನೆಸ್ ವಿಚಾರ ಬಂದಾಗ ನಾನು ಮೂರು ಮೂವ್‌ಮೆಂಟ್‌ಗಳಿಗೆ( ವ್ಯಾಯಾಮ) ಅಂಟಿಕೊಳ್ಳುತ್ತೇನೆ ಎಂದು ಅವರು ತಮ್ಮ ಫೋಟೋ ಶೇರ್ ಮಾಡಿ ಬರೆದಿದ್ದರು. ಆ ಫೋಟೋಗಳಲ್ಲಿ ಅವರು ತಮ್ಮ ಬಾಹುಗಳ ಸ್ನಾಯುಗಳ (ಮಸಲ್ಸ್) ಬಾಗಿಸುವ ಫೋಟೋವಿತ್ತು. ಆದರೆ ಜನ ಸುಮ್ಮನಿರಬೇಕಲ್ಲ, ಒಂದೇ ಸಮನೆ ಆಕೆಯನ್ನು ಟೀಕಿಸಲು ಶುರು ಮಾಡಿದ್ದಾರೆ. ಅಲ್ಲದೇ ಕೆಲವರು ಆಕೆಯನ್ನು ಗಂಡಸರಿಗೆ ಹೋಲಿಕೆ ಮಾಡಿದ್ದಾರೆ.
ಡಿಯರ್ ಲೇಡೀಸ್, ನಿಮ್ಮವನೊಂದಿಗೆ ಈ 3 ತಪ್ಪು ಎಂದಿಗೂ ಮಾಡ್ಬೇಡಿ!
ಮೂಲತಃ ದೆಹಲಿಯವರಾದ ಅನೇಜಾ ತಮ್ಮ ಪೋಷಕರ ಫಿಟ್‌ನೆಸ್ ಸಮರ್ಪಣೆಯಿಂದ ಸದಾ ಸ್ಪೂರ್ತಿ ಪಡೆದಿದ್ದು, ಮೊದಲಿಗೆ ಡೆಕಾಥ್ಲಾನ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ನಂತರ ತಮ್ಮದೇ ಫಿಟ್‌ನೆಸ್ ಕೋಚಿಂಗ್ ಸೆಂಟರ್ ತೆರೆದಿರುವ ಅವರು ಅಲ್ಲಿ ಗ್ರಾಹಕರಿಗೆ ಫಿಟ್ನೆಸ್ ತರಬೇತಿ ನೀಡುತ್ತಿದ್ದಾರೆ. ಆದರೆ ಜನರ ಟೀಕೆಗಳನ್ನು ಪಾಸಿಟಿವ್ ಆಗಿ ತೆಗೆದುಕೊಂಡ ಅವರು ಆ ಟ್ರೋಲರ್‌ಗಳಿಂದಾಗಿಯೇ 25ಕ್ಕೂ ಹೆಚ್ಚು ಹೊಸ ಗ್ರಾಹಕರು ನನ್ನನ್ನು ಸಂಪರ್ಕಿಸಿದ್ದು, ಅವರಲ್ಲಿ ನಾನು ಮೂರು ಜನರನ್ನು ಈಗಾಗಲೇ ನನ್ನ ಗ್ರಾಹಕರಾಗಿ ಬದಲಾಯಿಸಿದ್ದೇನೆ ಎಂದು ಅಂಚಲ್ ಅನೇಜಾ ಹೇಳಿದ್ದಾರೆ. ಇವರ ಮಾತುಗಳು ಸಾಮಾಜಿಕ ಜಾಲತಾಣ ಕಾರವಿಲ್ಲದೇ ಕೆಲ ಕಿಡಿಗೇಡಿಗಳಿಂದ ಟೀಕೆಗೆ ಒಳಗಾಗುವ ಅನೇಕರಿಗೆ ಸ್ಫೂರ್ತಿಯಾಗಿದೆ.
ಅಲ್ಲದೇ ನನ್ನ ನೀವು ಹೀಗೆ ದ್ವೇಷಿಸುತ್ತಲೇ ಇರಿ, ಇದು ನನ್ನನ್ನು ಮತ್ತಷ್ಟು ಫೇಮಸ್ ಮಾಡುತ್ತದೆ. ಆದರೆ ಕಠಿಣ ಪರಿಶ್ರಮವೇ ಯಶಸ್ಸಿನ ಕೀಲಿ ಕೈ ಎಂಬುದನ್ನು ಮರೆಯದಿರಿ, ನಿಮಗೇನಾದರು ಬೇಕು ಎಂದರೆ ಆ ಬಗ್ಗೆ ಪರಿಶ್ರಮ ಹಾಕಿ ಎಂದು ಅವರು ಬರೆದುಕೊಂಡಿದ್ದಾರೆ. ನಾನು ನನ್ನ ಮಸಲ್ಸ್ ತೋರಿಸಿದ್ದಕ್ಕೆ ನನ್ನ ಬಗ್ಗೆ ಅನೇಕರು ಟೀಕಿಸಲು ಶುರು ಮಾಡಿದರು. ಆದರೆ ಈ ದ್ವೇಷದಿಂದ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ, ಆದರೆ ಬೇಸರದ ವಿಚಾರವೆಂದರೆ, ನಾನು ಶೀರ್ಷಿಕೆಯಲ್ಲಿ ನೀಡಿದ ಮಾಹಿತಿ ಪೂರ್ಣ ವಿಚಾರದ ಬಗ್ಗೆ ಯಾರು ಗಮನ ಹರಿಸದೇ ಇರುವುದು ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲದೇ ಮಹಿಳೆಯೊಬ್ಬಳು ಮಸಲ್ ಸೃಷ್ಟಿಸಿಕೊಂಡಿರುವುದರಿಂದ ಕೆಲವು ಪುರುಷರ ಗತ್ತಿಗೆ ಧಕ್ಕೆಯಾಗಿದೆ ಎಂದು ಅವರು ಕಾಮೆಂಟ್ ಮಾಡಿದ್ದಾರೆ.
ಹೆಣ್ಣಿನ ಸೌಂದರ್ಯ ಹೆಚ್ಚಿಸುವ ಕೆಂಪು ಲಿಪ್‌ಸ್ಟಿಕ್ ಉತ್ತರ ಕೊರಿಯಾದಲ್ಲಿ ಬ್ಯಾನ್ ಮಾಡಿದ್ದೇಕೆ?