ಹೆಣ್ಣಿನ ಸೌಂದರ್ಯ ಹೆಚ್ಚಿಸುವ ಕೆಂಪು ಲಿಪ್‌ಸ್ಟಿಕ್ ಉತ್ತರ ಕೊರಿಯಾದಲ್ಲಿ ಬ್ಯಾನ್ ಮಾಡಿದ್ದೇಕೆ?

ಹುಡುಗಿಯರ ಮೇಕ್ಅಪ್‌ ಲಿಪ್‌ಸ್ಟಿಕ್ ಇಲ್ಲದೆ ಆರಂಭವೂ ಆಗಲ್ಲ, ಅಂತ್ಯವೂ ಆಗಲ್ಲ. ಡ್ರೆಸ್‌ಗೆ ತಕ್ಕಂತೆ ಲಿಪ್‌ಸ್ಟಿಕ್ ಹಚ್ಚಿಕೊಳ್ಳುವುದು ಸಾಮಾನ್ಯ. ಆದರೆ ಈ ದೇಶದಲ್ಲಿ ನಿಮ್ಮಿಷ್ಟದ ಬಣ್ಣದ ಲಿಪ್‌ಸ್ಟಿಕ್ ಹಾಕುವಂತಿಲ್ಲ. ಕೆಂಪು ಬಣ್ಣದ ಲಿಪ್‌ಸ್ಟಿಕ್ ದೇಶದಿಂದಲೇ ಬ್ಯಾನ್ ಮಾಡಲಾಗಿದೆ. 
 

North Korea Fashion restriction law Red Lipstick banned under Kim Jong Un rule ckm

ಹೆಣ್ಣಿನ ಸೌಂದರ್ಯದಲ್ಲಿ ಲಿಪ್‌ಸ್ಟಿಕ್ ಪಾತ್ರವೂ ಪ್ರಮುಖವಾಗಿದೆ. ತುಟಿಗಳ ಅಂಚಿನಲ್ಲಿನ ಕಿರು ನಗೆ, ಮಾದಕ ನೋಟ, ಗಾಂಭೀರ್ಯ, ಗೌರವ ಹೀಗೆ ಲಿಪ್‌ಸ್ಟಿಕ್ ಹೆಣ್ಣಿನ ಅಂದ ವೃದ್ಧಿಸುವ ಜೊತೆಗೆ ಆಕರ್ಷಕಣೆಯಲ್ಲೂ ಎತ್ತಿದ ಕೈ. ನೀವು ಯಾವ ಬಣ್ಣದ ಲಿಪ್‌ಸ್ಟಿಕ್ ಹಾಕಬೇಕು ಅನ್ನೋ ಆಯ್ಕೆ ನಿಮ್ಮದು. ನೀವು ಯಾವ ಡ್ರೆಸ್ ಹಾಕಬೇಕು, ಯಾವ ರೀತಿ ಮೇಕ್‌ಅಪ್ ಮಾಡಬೇಕು, ಹೇರ್ ಸ್ಟೈಲ್ ಹೇಗಿರಬೇಕು ಅನ್ನೋ ನಿರ್ಧಾರಗಗಳಿಗೆ ಯಾವುದೇ ನಿರ್ಬಂಧಗಳಿಲ್ಲ. ಆದರೆ ಉತ್ತರ ಕೊರಿಯಾದಲ್ಲಿ ಹಾಗಲ್ಲ. ಇಲ್ಲಿ ಕೆಂಪು ಬಣ್ಣದ ಲಿಪ್‌ಸ್ಟಿಕ್ ಬ್ಯಾನ್. ನಿಮಗೆ ಇಷ್ಟವಿದ್ದರೂ ಕೆಂಪು ಬಣ್ಣದ ಲಿಪ್‌ಸ್ಟಿಕ್ ಹಚ್ಚುವಂತಿಲ್ಲ. ಇಷ್ಟೇ ಅಲ್ಲ ಕೂದಲು ಹಾರಾಡಿಸ್ಕೊಂಡು ಹೋಗುವಂತಿಲ್ಲ. 

ಉತ್ತರ ಕೊರಿಯಾದಲ್ಲಿನ ನಿಯಮ,ಷರತ್ತುಗಳು ಊಹಿಸಲೂ ಅಸಾಧ್ಯ. ಕಾರಣ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆಡಳಿತದಲ್ಲಿ ಆತ ಹೇಳಿದ್ದೇ ರೂಲ್ಸ್, ಆತ ನಡದಿದ್ದೇ ದಾರಿ. ಉತ್ತರ ಕೊರಿಯಾದಲ್ಲಿ ನಿಮ್ಮಿಷ್ಟ ಬಂದಂತೆ ಮಾತನಾಡುವಂತಿಲ್ಲ, ಪೋಸ್ಟ್ ಹಾಕುವಂತಿಲ್ಲ. ಫ್ಯಾಶನ್, ಮೇಕ್ಅಪ್ ಎಲ್ಲದ್ದಕ್ಕೂ ರೂಲ್ಸ್. ಈ ಪೈಕಿ ಕೆಂಪು ಲಿಪ್‌ಸ್ಟಿಕ್ ಕೂಡ ಬ್ಯಾನ್. 

ಅಪ್ಪಿ ತಪ್ಪಿಯೂ ಲಿಪ್ ಸ್ಟಿಕ್ ಈ ರೀತಿ ಬಳಕೆ ಮಾಡಲೇಬೇಡಿ

ಕೆಂಪು ಬಣ್ಣ ವಿಮೋಚನೆ ಸಂಕೇತ, ಬಂಡವಾಳಶಾಹಿಯ ಸಂಕೇತ. ಕೆಂಪು ಬಣ್ಣದ ಲಿಪ್‌ಸ್ಟಿಕ್ ಹೆಣ್ಣಿನ ಮಾದಕತೆ ಹೆಚ್ಚಿಸಲಿದೆ, ಹೆಣ್ಣಿನ ಸೌಂದರ್ಯವನ್ನೂ ವದ್ಧಿಸಲಿದೆ. ಇದರಿಂದ ದೇಶ ನೈತಿಕ ಅಧಪತನಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಹೀಗಾಗಿ ಕೆಂಪು ಬಣ್ಣದ ಲಿಪ್‌ಸ್ಟಿಕ್ ಬ್ಯಾನ್ ಮಾಡಲಾಗಿದೆ. ಯಾರೂ ಕೂಡ ಉತ್ತರ ಕೊರಿಯಾದಲ್ಲಿ ಕೆಂಪು ಬಣ್ಣದ ಲಿಪ್‌ಸ್ಟಿಕ್ ಹಾಕುವಂತಿಲ್ಲ. ಅಪ್ಪಿ ತಪ್ಪಿ ಹಾಕಿದರೆ ಶಿಕ್ಷೆ ತಪ್ಪಿದ್ದಲ್ಲ. ಇವೆಲ್ಲಾ ಕಿಮ್ ಜಾಂಗ್ ಉನ್ ನಿಯಮಗಳು.

ಮೇಕ್‌ಅಪ್ ಕೂಡ ಬೇಕಾಬಿಟ್ಟ ಮಾಡುವಂತಿಲ್ಲ. ಇಷ್ಟ ಎಂದು ಡಾರ್ಕ್ ಮೇಕ್ಅಪ್, ಕಣ್ಣುಕುಕ್ಕುವ ಮೇಕ್‌ಅಪ್‌ಗೆ ಅವಕಾಶವಿಲ್ಲ. ಸಿಂಪಲ್ ಹಾಗೂ ಲೈಟ್ ಕಲರ್ ಮೇಕ್‌ಅಪ್ ಮಾತ್ರ ಮಾಡಬೇಕು. ಐಲೈನರ್, ಐಶ್ಯಾಡೋ ಸೇರಿದಂತೆ ಎಲ್ಲಾ ಮೇಕ್ಅಪ್ ಸಿಂಪಲ್ ಹಾಗೂ ಲೈಟ್ ಕಲರ್ ಆಗಿರಬೇಕು. 

ಲಿಪ್‌ಸ್ಟಿಕ್ ಯಾಕೆ? 18ರಲ್ಲೇ ಆಗಬೇಕು ಮದುವೆ; ಮುಸ್ಲಿಮ್ ಯುವತಿಯರಿಗೆ AIUDF ಮುಖ್ಯಸ್ಥರ ಸೂಚನೆ!

ಪ್ರತಿಯೊಂದು ರೋಲ್ಸ್ ಫಾಲೋ ಮಾಡಲೇಬೇಕು. ಈ ನಿಯಮ ಪಾಲನೆ ಮಾಡುವಂತೆ ಮಾಡಲು ಪೊಲೀಸ್ ಪಡೆಗಳು ಗಸ್ತು ತಿರುಗುತ್ತಲೇ ಇರುತ್ತದೆ. ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಘೋರ ಶಿಕ್ಷೆ ನೀಡಲಾಗುತ್ತದೆ. ಹೇರ್‌ಸ್ಟೈಲ್‌ಗೂ ಕೆಲ ನಿಮಯಗಳಿವೆ. ಉದ್ದ ಕೂದಲು ಬಿಡಲು, ಶಾರ್ಟ್ ಕೂದಲು ಹೇರ್‌ಸ್ಟೈಲ್ ಮಾಡಲು ಅವಕಾಶವಿದೆ. ಆದರೆ ಕೂದಲು ಹಾರಾಡಿಸ್ಕೊಂಡು ಹೋಗವಂತಿಲ್ಲ. ಕೂದಲಿಗೆ ಬಣ್ಣ ಹಾಕುವಂತಿಲ್ಲ. ಕೂದಲು ನಿಯಮ ಉಲ್ಲಂಘಿಸಿದರೂ ಶಿಕ್ಷೆ ಕಟ್ಟಿಟ್ಟ ಬುತ್ತಿ.

Latest Videos
Follow Us:
Download App:
  • android
  • ios